ಇಂದಿನ ಯಾಂತ್ರಿಕ ಹಾಗೂ ಒತ್ತಡದ ಜೀವನಶೈಲಿಯಲ್ಲಿ ಮನುಷ್ಯನ ಆಯುಷ್ಯ ಮತ್ತು ಆರೋಗ್ಯವು ಹಲವು ಸವಾಲುಗಳನ್ನು ಎದುರಿಸುತ್ತಿದೆ. ಆದರೆ, ನಮ್ಮ ದೈನಂದಿನ ಜೀವನಶೈಲಿ ಮತ್ತು ಅಭ್ಯಾಸಗಳಲ್ಲಿ ಸಣ್ಣ ಬದಲಾವಣೆಗಳನ್ನು ಮಾಡಿಕೊಳ್ಳುವುದರಿಂದ ಅಕಾಲಿಕ ಮರಣದ ಅಪಾಯವನ್ನು ಗಣನೀಯವಾಗಿ ತಗ್ಗಿಸಬಹುದು ಎಂದು ವಿಜ್ಞಾನಿಗಳ ಹೊಸ ಅಧ್ಯಯನದಿಂದ ಬಹಿರಂಗವಾಗಿದೆ.
ಹೌದು, ಆರೋಗ್ಯಕರ ಹವ್ಯಾಸಗಳನ್ನು ಅಳವಡಿಸಿಕೊಳ್ಳುವುದರಿಂದ ಸಾವಿನಂಚಿನಿಂದ ದೂರವಿರಬಹುದು ಎಂಬುದನ್ನು ವೈಜ್ಞಾನಿಕ ಸಂಶೋಧನೆಗಳು ಸಾಬೀತುಪಡಿಸಿವೆ. ಯಾವ ಯಾವ ಅಭ್ಯಾಸಗಳು ನಮ್ಮ ಜೀವಿತಾವಧಿಯನ್ನು ಹೆಚ್ಚಿಸುತ್ತವೆ ಮತ್ತು ಸಾವಿನ ಅಪಾಯವನ್ನು ಎಷ್ಟು ಪ್ರತಿಶತದಷ್ಟು ಕಡಿಮೆ ಮಾಡುತ್ತವೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.
ಸಾವಿನ ಅಪಾಯವನ್ನು ಕಡಿಮೆ ಮಾಡುವ ಪ್ರಮುಖ 6 ಆರೋಗ್ಯಕರ ಅಭ್ಯಾಸಗಳು:
-
ದೈಹಿಕ ವ್ಯಾಯಾಮ (Physical Exercise): ಪ್ರತಿನಿತ್ಯ ನಿಯಮಿತವಾಗಿ ವ್ಯಾಯಾಮ ಮಾಡುವುದರಿಂದ ಶೇಕಡಾ 46% ರಷ್ಟು ಸಾವಿನ ಅಪಾಯವನ್ನು ಕಡಿಮೆ ಮಾಡಬಹುದು. ಇದು ದೇಹವನ್ನು ಸಕ್ರಿಯವಾಗಿರಿಸುವುದರ ಜೊತೆಗೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
-
ಧೂಮಪಾನ ತ್ಯಜಿಸುವುದು (No Smoking): ಧೂಮಪಾನ ಅಥವಾ ತಂಬಾಕು ಸೇವನೆಯಿಂದ ದೂರವಿರುವುದರಿಂದ ಶೇಕಡಾ 30% ರಷ್ಟು ಅಕಾಲಿಕ ಮರಣದ ಗಂಡುತರದಿಂದ ಪಾರಾಗಬಹುದು.
-
ಸಸ್ಯಾಹಾರಿ ಆಹಾರ ಪದ್ಧತಿ (Plant-based Diet): ಪೌಷ್ಟಿಕಾಂಶಯುಕ್ತ ಸಸ್ಯಾಹಾರಿ ಆಹಾರಗಳನ್ನು ಸೇವಿಸುವುದರಿಂದ ಶೇಕಡಾ 21% ರಷ್ಟು ಆರೋಗ್ಯ ಸುಧಾರಿಸುತ್ತದೆ ಮತ್ತು ಜೀವಿತಾವಧಿ ವೃದ್ಧಿಸುತ್ತದೆ.
-
ಮದ್ಯಪಾನ ನಿಲ್ಲಿಸುವುದು (No Alcohol): ಮದ್ಯಪಾನದ ಚಟವನ್ನು ಸಂಪೂರ್ಣವಾಗಿ ಬಿಡುವುದರಿಂದ ಶೇಕಡಾ 19% ರಷ್ಟು ಸಾವಿನ ಅಪಾಯದಿಂದ ಸುರಕ್ಷಿತವಾಗಿರಬಹುದು.
-
ಉತ್ತಮ ನಿದ್ರೆ (7-9 Hours Sleep): ಪ್ರತಿದಿನ ರಾತ್ರಿ 7 ರಿಂದ 9 ಗಂಟೆಗಳ ಕಾಲ ಗಾಢವಾದ ನೆಮ್ಮದಿಯ ನಿದ್ರೆ ಮಾಡುವುದರಿಂದ ಶೇಕಡಾ 18% ರಷ್ಟು ಆರೋಗ್ಯ ಸಮಸ್ಯೆಗಳನ್ನು ದೂರವಿಡಬಹುದು.
-
ಸಕಾರಾತ್ಮಕ ಸಾಮಾಜಿಕ ಸಂಬಂಧಗಳು (Positive Social Connections): ಸಮಾಜದೊಂದಿಗೆ ಉತ್ತಮ ಬಾಂಧವ್ಯ ಮತ್ತು ಸಕಾರಾತ್ಮಕ ಒಡನಾಟವು ಮಾನಸಿಕ ಒತ್ತಡವನ್ನು ಕಡಿಮೆ ಮಾಡಿ, ಶೇಕಡಾ 5% ರಷ್ಟು ಆಯುಷ್ಯವನ್ನು ಕಾಪಾಡಲು ನೆರವಾಗುತ್ತದೆ.
ಎಲ್ಲವನ್ನೂ ಅನುಸರಿಸಿದರೆ ಎಷ್ಟು ಲಾಭ?
ವಿಜ್ಞಾನಿಗಳ ವರದಿಯ ಪ್ರಕಾರ, ಮೇಲಿನ ಎಲ್ಲಾ ಆರೋಗ್ಯಕರ ಅಭ್ಯಾಸಗಳನ್ನು ನಿಮ್ಮ ದೈನಂದಿನ ಜೀವನದಲ್ಲಿ ಕಟ್ಟುನಿಟ್ಟಾಗಿ ಅಳವಡಿಸಿಕೊಂಡರೆ, ಒಟ್ಟಾರೆಯಾಗಿ ಶೇಕಡಾ 73% ರಷ್ಟು ಸಾವಿನ ಅಪಾಯದಿಂದ ದೂರವಿರಬಹುದು ಹಾಗೂ ದೀರ್ಘಕಾಲ ಆರೋಗ್ಯಯುತ ಜೀವನವನ್ನು ನಡೆಸಬಹುದು!