ಇಂದಿನ ಒತ್ತಡದ ಹಾಗೂ ಬದಲಾದ ಜೀವನಶೈಲಿಯಲ್ಲಿ ಹೃದಯಾಘಾತದ (Heart Attack) ಪ್ರಕರಣಗಳು ಗಣನೀಯವಾಗಿ ಹೆಚ್ಚಾಗುತ್ತಿವೆ. ಎದೆನೋವು ಅಥವಾ ತೀವ್ರ ಅಸ್ವಸ್ಥತೆಯಿಂದ ಯಾರಾದರೂ ಹಠಾತ್ತನೆ ಕುಸಿದುಬಿದ್ದರೆ, ಆ ಕ್ಷಣದಲ್ಲಿ ನಾವು ತೋರುವ ಜಾಣ್ಮೆಯು ಆ ವ್ಯಕ್ತಿಯ ಜೀವ ಉಳಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ. ವೈದ್ಯಕೀಯ ನೆರವು ಸಿಗುವವರೆಗಿನ ಆ ಕೆಲವು ನಿಮಿಷಗಳು ಅತ್ಯಂತ ಅಮೂಲ್ಯವಾಗಿದ್ದು, ಆ ಸಂದರ್ಭದಲ್ಲಿ ತುರ್ತಾಗಿ ಮಾಡಬೇಕಾದ ಪ್ರಮುಖ ಪ್ರಥಮ ಚಿಕಿತ್ಸೆಗಳ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.
ಎದೆನೋವಿನ ತುರ್ತು ಪರಿಸ್ಥಿತಿಯಲ್ಲಿ ಆಸ್ಪಿರಿನ್ ಮಾತ್ರೆಗಳ ಪಾತ್ರವೇನು?
ಯಾರಾದರೂ ತೀವ್ರವಾದ ಎದೆನೋವಿನಿಂದ ಬಳಲುತ್ತಿದ್ದರೆ ಅಥವಾ ಕುಸಿದುಬಿದ್ದರೆ, ವಿಳಂಬ ಮಾಡದೆ ಕೂಡಲೇ ಆಸ್ಪಿರಿನ್ (Aspirin) ಮಾತ್ರೆಗಳನ್ನು ನೀಡುವುದು ಅತ್ಯಂತ ಪರಿಣಾಮಕಾರಿ ಪ್ರಥಮ ಚಿಕಿತ್ಸೆಯಾಗಿದೆ.
-
ಮಾತ್ರೆಯ ಅಳತೆ: ವೈದ್ಯಕೀಯ ತುರ್ತು ಸಂದರ್ಭದಲ್ಲಿ 375 mg ಯ 2 ಆಸ್ಪಿರಿನ್ ಮಾತ್ರೆಗಳನ್ನು ಅಥವಾ 75 mg ಯ 4 ಮಾತ್ರೆಗಳನ್ನು ತಕ್ಷಣವೇ ಅಗಿಯಲು (Chew) ನೀಡಬೇಕು.
-
ಇದು ಹೇಗೆ ಕೆಲಸ ಮಾಡುತ್ತದೆ? ಮಾತ್ರೆಗಳನ್ನು ನುಂಗುವುದಕ್ಕಿಂತ ಚೆನ್ನಾಗಿ ಅಗಿದಾಗ, ಅವು ಲಾಲಾರಸದ (Saliva) ಜೊತೆ ಬೆರೆತು ಅತ್ಯಂತ ಶೀಘ್ರವಾಗಿ ರಕ್ತನಾಳಗಳನ್ನು ಸೇರಿಕೊಳ್ಳುತ್ತವೆ. ಇದು ರಕ್ತ ಹೆಪ್ಪುಗಟ್ಟುವುದನ್ನು (Blood Clotting) ತಡೆಯುತ್ತದೆ ಮತ್ತು ರಕ್ತನಾಳಗಳಲ್ಲಿ ರಕ್ತದ ಹರಿವು ಸುಗಮವಾಗುವಂತೆ ಮಾಡಿ ಹಾರ್ಟ್ ಅಟಾಕ್ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ತಡೆಯಲು ಅಥವಾ ಹದಗೊಳಿಸಲು ನೆರವಾಗುತ್ತದೆ.
ಸಿಪಿಆರ್ (CPR) ಕ್ರಿಯೆ ಎಂದರೇನು? ಇದನ್ನು ಯಾವಾಗ ಆರಂಭಿಸಬೇಕು?
ಎದೆನೋವಿನಿಂದ ಕುಸಿದುಬಿದ್ದ ರೋಗಿಯು ಪ್ರಜ್ಞೆ ತಪ್ಪಿದ್ದರೆ ಅಥವಾ ಉಸಿರಾಟ ನಿಂತಿರುವಂತೆ ಕಂಡುಬಂದರೆ, ಆ ಕ್ಷಣವೇ ಸಿಪಿಆರ್ (Cardiopulmonary Resuscitation – CPR) ಪ್ರಕ್ರಿಯೆಯನ್ನು ಆರಂಭಿಸಬೇಕು.
-
ರೋಗಿಯ ಎದೆಯ ಮಧ್ಯಭಾಗಕ್ಕೆ ಕೈಗಳನ್ನು ಬಳಸಿ ನಿಯಮಿತವಾಗಿ ಒತ್ತಡವನ್ನು ನೀಡುವುದರಿಂದ ಹೃದಯಕ್ಕೆ ರಕ್ತ ಸಂಚಾರ ಮುಂದುವರಿಯುವಂತೆ ಮಾಡಬಹುದು.
-
ಇದು ವೈದ್ಯಕೀಯ ತಂಡ ಬರುವವರೆಗೂ ಮೆದುಳು ಹಾಗೂ ಇAದ್ರೀಯಗಳಿಗೆ ಆಮ್ಲಜನಕದ ಸರಬರಾಜು ಕಲ್ಪಿಸಲು ಸಹಾಯ ಮಾಡುತ್ತದೆ.
ತಕ್ಷಣ ಮಾಡಬೇಕಾದ ಪ್ರಮುಖ ಕೆಲಸಗಳು:
-
ಆಂಬ್ಯುಲೆನ್ಸ್ಗೆ ಕರೆ ಮಾಡಿ: ರೋಗಿಯನ್ನು ಕೂಡಲೇ ಹತ್ತಿರದ ಆಸ್ಪತ್ರೆಗೆ ಸಾಗಿಸಲು ತುರ್ತು ವಾಹನಕ್ಕೆ (Ambulance) ಕರೆ ಮಾಡಿ.
-
ಸಿಪಿಆರ್ ಮುಂದುವರಿಸಿ: ಆಂಬ್ಯುಲೆನ್ಸ್ ಬರುವವರೆಗೆ ಅಥವಾ ಆಸ್ಪತ್ರೆಗೆ ತಲುಪುವ ದಾರಿಯಲ್ಲಿಯೂ ಸಿಪಿಆರ್ ಕ್ರಿಯೆಯನ್ನು ನಿಲ್ಲಿಸದೆ ಮುಂದುವರಿಸುವುದು ರೋಗಿಯ ಬದುಕುಳಿಯುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ.
ಆರೋಗ್ಯಕ್ಕೆ ಸಂಬಂಧಿಸಿದ ಇಂತಹ ಹತ್ತು ಹಲವು ಉಪಯುಕ್ತ ಹಾಗೂ ಜೀವ ಉಳಿಸುವ ಮಾಹಿತಿಗಳಿಗಾಗಿ ‘ಆರೋಗ್ಯ ವಿಜಯ’ (Arogya Vijaya) ವೆಬ್ಸೈಟ್ನೊಂದಿಗೆ ಸದಾ ಸಂಪರ್ಕದಲ್ಲಿರಿ.