ಮನುಷ್ಯನ ದೇಹದ ಮೇಲಿನ ಪ್ರತಿಯೊಂದು ಅಂಗಾಂಗ ಹಾಗೂ ಗುರುತುಗಳು ಅವರ ವ್ಯಕ್ತಿತ್ವ, ಸ್ವಭಾವ ಮತ್ತು ಭವಿಷ್ಯದ ಬಗ್ಗೆ ಬಹಳಷ್ಟನ್ನು ಹೇಳುತ್ತವೆ. ಅದರಲ್ಲೂ ವಿಶೇಷವಾಗಿ ಮುಖದ ಮೇಲೆ ಇರುವ ಮಚ್ಚೆಗಳು ಆ ವ್ಯಕ್ತಿಯ ಆಕರ್ಷಣೆ ಮತ್ತು ಅದೃಷ್ಟವನ್ನು ಸೂಚಿಸುತ್ತವೆ. ಸಾಮುದ್ರಿಕ ಶಾಸ್ತ್ರದ (Samudrika Shastra) ಪ್ರಕಾರ, ಮನುಷ್ಯನ ದೇಹದ ಮೇಲಿನ ಮಚ್ಚೆಗಳು ಅವರ ಜೀವನದ ರಹಸ್ಯಗಳನ್ನು ಬಿಚ್ಚಿಡುತ್ತವೆ. ಅದರಲ್ಲೂ ಮೂಗಿನ ಮೇಲೆ ಅಥವಾ ಮೂಗಿನ ತುದಿಯಲ್ಲಿ ಮಚ್ಚೆ ಇರುವವರ ಭವಿಷ್ಯ ಮತ್ತು ಗುಣಲಕ್ಷಣಗಳು ಹೇಗಿರುತ್ತವೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.
ಮೂಗಿನ ತುದಿಯಲ್ಲಿ ಮಚ್ಚೆ ಇದ್ದರೆ ಫಲವೇನು?
ಸಾಮುದ್ರಿಕ ಶಾಸ್ತ್ರದ ನಂಬಿಕೆಯ ಪ್ರಕಾರ, ಮೂಗಿನ ತುದಿಯಲ್ಲಿ ಮಚ್ಚೆ ಇರುವವರು ಅತ್ಯಂತ ಅದೃಷ್ಟವಂತರು ಹಾಗೂ ಆಕರ್ಷಕ ವ್ಯಕ್ತಿತ್ವವನ್ನು ಹೊಂದಿರುತ್ತಾರೆ. ಇವರು ಯಾವುದೇ ಕೆಲಸ ಕೈಗೆತ್ತಿಕೊಂಡರೂ ಅದರಲ್ಲಿ ಸುಲಭವಾಗಿ ಯಶಸ್ಸು ಸಾಧಿಸುತ್ತಾರೆ. ಅಷ್ಟೇ ಅಲ್ಲದೆ, ಜೀವನದಲ್ಲಿ ಅತ್ಯಂತ ವೇಗವಾಗಿ ಆರ್ಥಿಕ ಪ್ರಗತಿಯನ್ನು ಕಾಣುತ್ತಾರೆ. ಇವರ ಸ್ವಾಭಿಮಾನಿ ಗುಣವೇ ಇವರ ಯಶಸ್ಸಿಗೆ ಮುಖ್ಯ ಕಾರಣವಾಗಿರುತ್ತದೆ.
ಮೂಗಿನ ಬಲ ಅಥವಾ ಎಡಭಾಗದಲ್ಲಿ ಮಚ್ಚೆ ಇದ್ದರೆ ವ್ಯತ್ಯಾಸವೇನು?
ಮೂಗಿನ ನೇರ ಮಧ್ಯಭಾಗ ಅಥವಾ ತುದಿಯಷ್ಟೇ ಅಲ್ಲದೆ, ಮೂಗಿನ ಬಲ ಅಥವಾ ಎಡಭಾಗದಲ್ಲಿ ಮಚ್ಚೆ ಇರುವುದು ಕೂಡ ವ್ಯಕ್ತಿಯ ಸ್ವಭಾವ ಮತ್ತು ಜೀವನಶೈಲಿಯಲ್ಲಿ ಭಿನ್ನವಾದ ಅರ್ಥಗಳನ್ನು ನೀಡುತ್ತದೆ:
-
ಮೂಗಿನ ಬಲಭಾಗದಲ್ಲಿ ಮಚ್ಚೆ: ಸಾಮುದ್ರಿಕ ಶಾಸ್ತ್ರದ ಪ್ರಕಾರ ಯಾರ ಮೂಗಿನ ಬಲಭಾಗದಲ್ಲಿ ಮಚ್ಚೆ ಇರುತ್ತದೋ ಅವರಿಗೆ ಜೀವನದಲ್ಲಿ ಸಕಲ ಭೌತಿಕ ಸುಖ-ಸೌಲಭ್ಯಗಳು ಲಭಿಸುತ್ತವೆ. ಇವರು ಅತ್ಯಂತ ದೂರದೃಷ್ಟಿ, ತೀಕ್ಷ್ಣ ಬುದ್ಧಿವಂತಿಕೆ ಮತ್ತು ಗಟ್ಟD ನಿಲುವುಗಳನ್ನು ಹೊಂದಿರುತ್ತಾರೆ.
-
ಮೂಗಿನ ಎಡಭಾಗದಲ್ಲಿ ಮಚ್ಚೆ: ಮೂಗಿನ ಎಡಭಾಗದಲ್ಲಿ ಮಚ್ಚೆ ಇರುವವರು ಕಲಾತ್ಮಕ ಸ್ವಭಾವದವರಾಗಿರುತ್ತಾರೆ ಹಾಗೂ ವಿಭಿನ್ನ ಯೋಚನಾ ಲಹರಿಯನ್ನು ಹೊಂದಿರುತ್ತಾರೆ. ಇವರ ಜೀವನದಲ್ಲಿ ಏಳು-ಬೀಳುಗಳು ಇದ್ದರೂ ತಮ್ಮ ಪರಿಶ್ರಮದಿಂದಲೇ ಗುರಿ ಮುಟ್ಟುತ್ತಾರೆ.