೬ ನವೆಂಬರ್ ೨೦೨೬ · ಶುಕ್ರವಾರ
ತಾಜಾ
ಚಹಾ ಅಥವಾ ಕಾಫಿ ಕುಡಿಯುವ ಮುನ್ನ ನೀರು ಕುಡಿಯುವುದು ಯಾಕೆ ಅತ್ಯಗತ್ಯ? ಆರೋಗ್ಯ ರಹಸ್ಯ ಇಲ್ಲಿದೆ ಮನೆಮದ್ದಿನ ರತ್ನ ಕಪ್ಪು ಜೀರಿಗೆ: ಶೀತ-ಕೆಮ್ಮಿಗೆ ಚಿಕಿತ್ಸೆ ಜತೆಗೆ ಅತಿವೇಗವಾಗಿ ತೂಕ ಇಳಿಸುವ ಸರಳ ಉಪಾಯ! ಹಾಲನ್ನು ಬಿಸಿ ಮಾಡಿ ಕುಡಿಯೋದಲ್ಲ ಅಂತೆ! ತಣ್ಣನೆಯ ಹಾಲು ಕುಡಿದ್ರೆ ಸಿಗುವ ಅಚ್ಚರಿಯ ಆರೋಗ್ಯ ಪ್ರಯೋಜನಗಳಿವು ಆರೋಗ್ಯಕ್ಕೆ ಸಂಜೀವಿನಿ ಗಸಗಸೆ: ನಿತ್ಯದ ಅಡುಗೆಯಲ್ಲಿ ಈ ಪುಟ್ಟ ಬೀಜಗಳಿದ್ದರೆ ಹಲವು ಕಾಯಿಲೆಗಳು ಮಾಯ! ಮಕ್ಕಳಲ್ಲಿ ಥಲಸ್ಸೆಮಿಯಾ ಕಾಯಿಲೆ: ಪೋಷಕರು ನಿರ್ಲಕ್ಷಿಸಬಾರದ ಆರಂಭಿಕ ಲಕ್ಷಣಗಳು ಮತ್ತು ಮುನ್ನೆಚ್ಚರಿಕೆಗಳು ಎದೆಯ ಈ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ: ಹೃದಯಾಘಾತದ ಮುನ್ಸೂಚನೆ ಹಾಗೂ ಆರಂಭಿಕ ಎಚ್ಚರಿಕೆಗಳು! ಎದೆಯುರಿ ಸಮಸ್ಯೆಯಿಂದ ಸುಲಭವಾಗಿ ಮುಕ್ತಿ ಪಡೆಯಲು ಇಲ್ಲಿದೆ ಪರಿಣಾಮಕಾರಿ ನೈಸರ್ಗಿಕ ಮನೆಮದ್ದುಗಳು! ಅಧೋಮುಖ ಶ್ವಾನಾಸನದ ಅದ್ಭುತ ಆರೋಗ್ಯ ಪ್ರಯೋಜನಗಳು: ಪ್ರತಿದಿನ ಈ ಯೋಗಾಸನ ಮಾಡುವುದರಿಂದೇನು ಲಾಭ?
ದಿನದ ಸುದ್ದಿ

ಅಧೋಮುಖ ಶ್ವಾನಾಸನದ ಅದ್ಭುತ ಆರೋಗ್ಯ ಪ್ರಯೋಜನಗಳು: ಪ್ರತಿದಿನ ಈ ಯೋಗಾಸನ ಮಾಡುವುದರಿಂದೇನು ಲಾಭ?

Woman performing Adho Mukha Svanasana or Downward-Facing Dog yoga pose for strength and stress relief in Kannada

ದಿನಸಿ ಕೆಲಸದ ಒತ್ತಡ, ತಪ್ಪಿದ ಜೀವನಶೈಲಿ ಹಾಗೂ ಗಂಟೆಗಟ್ಟಲೆ ಒಂದೇ ಕಡೆ ಕುಳಿತು ಕೆಲಸ ಮಾಡುವುದರಿಂದ ದೇಹದಲ್ಲಿ ಆಯಾಸ, ಬೆನ್ನುನೋವು ಮತ್ತು ಒತ್ತಡ ಹೆಚ್ಚಾಗುವುದು ಸಾಮಾನ್ಯ. ಇಂದಿನ ಧಾವಂತದ ಬದುಕಿನಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳಲು ಯೋಗಾಸನಗಳು ಅತ್ಯಂತ ಪರಿಣಾಮಕಾರಿ ಮಾರ್ಗವಾಗಿವೆ. ಯೋಗದಲ್ಲಿ ಬರುವ ಪ್ರಮುಖ ಆಸನಗಳಲ್ಲಿ ‘ಅಧೋಮುಖ ಶ್ವಾನಾಸನ’ (Downward-Facing Dog Pose) ಕೂಡ ಒಂದು. ನಾಯಿಯು ಮುಖವನ್ನು ಕೆಳಗೆ ಮಾಡಿ ಮೈಯನ್ನು ಚಾಚುವ ಭಂಗಿಯನ್ನು ಹೋಲುವ ಕಾರಣ ಇದನ್ನು ಈ ಹೆಸರಿನಿಂದ ಕರೆಯಲಾಗುತ್ತದೆ. ಹಾಗಾದರೆ, ಈ ಆಸನವನ್ನು ಮಾಡುವುದರಿಂದ ನಮ್ಮ ದೇಹಕ್ಕೆ ಸಿಗುವ ಪ್ರಮುಖ ಪ್ರಯೋಜನಗಳೇನು? ಇಲ್ಲಿದೆ ಸಂಪೂರ್ಣ ಮಾಹಿತಿ.

ಅಧೋಮುಖ ಶ್ವಾನಾಸನ ಎಂದರೇನು?

ಸಂಸ್ಕೃತ ಭಾಷೆಯಲ್ಲಿ ‘ಅಧೋ’ ಎಂದರೆ ಕೆಳಮುಖ, ‘ಮುಖ’ ಎಂದರೆ ಮುಖ ಹಾಗೂ ‘ಶ್ವಾನ’ ಎಂದರೆ ನಾಯಿ ಎಂದರ್ಥ. ದೇಹವನ್ನು ‘ವಿ’ (V) ಆಕಾರದಲ್ಲಿ ಮೇಲಕ್ಕೆತ್ತಿ, ಕೈ ಹಾಗೂ ಕಾಲುಗಳ ಮೇಲೆ ಭಾರ ಹಾಕಿ ಮಾಡುವ ಈ ಆಸನವು ಇಡೀ ದೇಹಕ್ಕೆ ಚೈತನ್ಯ ನೀಡುತ್ತದೆ.

ಅಧೋಮುಖ ಶ್ವಾನಾಸನದ ಪ್ರಮುಖ ಆರೋಗ್ಯ ಲಾಭಗಳು:

  • ಹೊಟ್ಟೆಯ ಸ್ನಾಯುಗಳ ಬಲವರ್ಧನೆ: ಈ ಆಸನವನ್ನು ಮಾಡುವಾಗ ಹೊಟ್ಟೆಯ ಭಾಗದ ಸ್ನಾಯುಗಳ ಮೇಲೆ ಒತ್ತಡ ಬೀಳುವುದರಿಂದ, ಹೊಟ್ಟೆಯ ಸ್ನಾಯುಗಳು ದೃಢಗೊಳ್ಳಲು ಮತ್ತು ಕೊಬ್ಬು ಕರಗಲು ಇದು ಅತ್ಯುತ್ತಮ ಸಹಾಯ ಮಾಡುತ್ತದೆ.

  • ಮೈಕೈ ಸ್ನಾಯುಗಳ ಬಿಗಿ ಹಾಗೂ ಬಲ: ದೇಹದ ಮೇಲ್ಭಾಗ ಹಾಗೂ ಕೆಳಭಾಗದ ಎಲ್ಲಾ ಸ್ನಾಯುಗಳನ್ನು ಸಮರ್ಥವಾಗಿ ಹಿಗ್ಗಿಸಿ, ಅವುಗಳನ್ನು ಬಲಪಡಿಸಲು ಮತ್ತು ಆಕಾರದಲ್ಲಿಡಲು ಇದು ನೆರವಾಗುತ್ತದೆ.

  • ಸುಗಮ ರಕ್ತಸಂಚಾರ: ಈ ಭಂಗಿಯಲ್ಲಿ ತಲೆಯು ಹೃದಯದ ಕೆಳಭಾಗಕ್ಕೆ ಬರುವುದರಿಂದ, ಮೆದುಳಿಗೆ ರಕ್ತ ಮತ್ತು ಆಮ್ಲಜನಕದ ಸರಬರಾಜು ಸರಾಗವಾಗಿಗುತ್ತದೆ. ಇದರಿಂದ ಮುಖದ ಕಾಂತಿ ಹೆಚ್ಚುವುದಲ್ಲದೆ, ದೇಹದ ನರಮಂಡಲ ಚುರುಕಾಗುತ್ತದೆ.

  • ಕೈ ಮತ್ತು ಕಾಲುಗಳ ಮಾಂಸಖಂಡಗಳಿಗೆ ಶಕ್ತಿ: ನಮ್ಮ ಇಡೀ ದೇಹದ ಭಾರವನ್ನು ಕೈಗಳು ಮತ್ತು ಕಾಲುಗಳು ಹೊತ್ತುಕೊಳ್ಳುವುದರಿಂದ ಮುಂಗೈ, ತೋಳುಗಳು, ಮೀನಖಂಡ ಹಾಗೂ ಪಾದಗಳ ಮಾಂಸಖಂಡಗಳು ಬಲಗೊಳ್ಳುತ್ತವೆ.

  • ಮಾನಸಿಕ ಒತ್ತಡ ಹಾಗೂ ಆತಂಕ ನಿವಾರಣೆ: ಈ ಆಸನವು ನರಮಂಡಲವನ್ನು ಶಾಂತಗೊಳಿಸುತ್ತದೆ. ಕುತ್ತಿಗೆ ಮತ್ತು ಬೆನ್ನುಮೂಳೆಯ ಮೇಲಿನ ಒತ್ತಡವನ್ನು ಕಡಿಮೆ ಮಾಡಿ, ಮನಸ್ಸಿಗೆ ಆರಾಮ ನೀಡುವುದರ ಮೂಲಕ ಆತಂಕ ಹಾಗೂ ಖಿನ್ನತೆಯನ್ನು ದೂರ ಮಾಡುತ್ತದೆ.

ಯಾರು ಈ ಆಸನ ಮಾಡುವಾಗ ಎಚ್ಚರಿಕೆ ವಹಿಸಬೇಕು? (ಮುನ್ನೆಚ್ಚರಿಕೆಗಳು)

ಎಲ್ಲಾ ಯೋಗಾಸನಗಳು ಎಲ್ಲರಿಗೂ ಒಂದೇ ರೀತಿಯ ಪ್ರಯೋಜನ ನೀಡಬೇಕು ಎಂದಿಲ್ಲ. ಕೆಲವು ಆರೋಗ್ಯ ಸಮಸ್ಯೆ ಇರುವವರು ಈ ಆಸನವನ್ನು ಅಭ್ಯಾಸ ಮಾಡುವ ಮುನ್ನ ವೈದ್ಯರು ಅಥವಾ ನುರಿತ ಯೋಗ ತಜ್ಞರ ಸಲಹೆ ಪಡೆಯುವುದು ಕಡ್ಡಾಯ:

  • ಕಾರ್ಪೊರಲ್ ಟನಲ್ ಸಿಂಡ್ರೋಮ್ (Carpal Tunnel Syndrome) ಸಮಸ್ಯೆ ಇರುವವರು.

  • ಅಧಿಕ ರಕ್ತದೊತ್ತಡ (High Blood Pressure) ಕಾಯಿಲೆಯಿಂದ ಬಳಲುತ್ತಿರುವವರು.

  • ಅತಿಸಾರ ಭೇದಿ (Diarrhea) ಸಮಸ್ಯೆ ಇರುವ ಸಂದರ್ಭದಲ್ಲಿ.

  • ಗರ್ಭಿಣಿಯರು ಈ ಆಸನವನ್ನು ಮಾಡುವ ಮುನ್ನ ವೈದ್ಯರ ಮಾರ್ಗದರ್ಶನ ಪಡೆಯುವುದು ಒಳ್ಳೆಯದು.

Leave a Reply

Your email address will not be published. Required fields are marked *