೧೮ ನವೆಂಬರ್ ೨೦೨೬ · ಬುಧವಾರ
ತಾಜಾ
ಮಧುಮೇಹ ಮತ್ತು ತೂಕ ಇಳಿಕೆಗೆ ಮಖಾನಾ ರಾಮಬಾಣ: ಆರೋಗ್ಯಕರ ಜೀವನಶೈಲಿಗೆ ಇಲ್ಲಿದೆ ಸರಳ ದಾರಿ ವೈದ್ಯರ ಸಲಹೆಯಿಲ್ಲದೆ ವಿಟಮಿನ್ ಮಾತ್ರೆಗಳನ್ನು ಸೇವಿಸುತ್ತಿದ್ದೀರಾ? ಆರೋಗ್ಯದ ಮೇಲಾಗುವ ಗಂಭೀರ ದುಷ್ಪರಿಣಾಮಗಳಿವು! ತಂಗಳನ್ನ ಸೇವನೆ: ಪೌಷ್ಟಿಕ ಆಹಾರವೇ ಅಥವಾ ಆರೋಗ್ಯಕ್ಕೆ ಹಾನಿಕಾರಕವೇ? ಸಂಪೂರ್ಣ ಮಾಹಿತಿ ಪೂಜೆಯ ಅಗರಬತ್ತಿ ಹೊಗೆ ಆರೋಗ್ಯಕ್ಕೆ ಹಾನಿಕಾರಕವೇ? NIH ಅಧ್ಯಯನದ ಬೆಚ್ಚಿಬೀಳಿಸುವ ವರದಿ! ದಿನಚರಿ ಹೇಗಿರಬೇಕು? ಬೆಳಗ್ಗೆ ಎದ್ದ ತಕ್ಷಣ ಈ ಅಭ್ಯಾಸಗಳು ನಿಮ್ಮನ್ನು ಇಡೀ ದಿನ ಫಿಟ್ ಆಗಿಡುತ್ತೆ! ಬಿಸಿ ಟೀ ಅಥವಾ ಕಾಫಿ ಕುಡಿದ ತಕ್ಷಣ ನೀರು ಕುಡಿಯುತ್ತೀರಾ? ಹಾಗಾದರೆ ಈ ಗಂಭೀರ ಆರೋಗ್ಯ ಸಮಸ್ಯೆ ಕಟ್ಟಿಟ್ಟ ಬುತ್ತಿ! ಹಾಲಿಗೆ ಸಕ್ಕರೆ ಬೆರೆಸಿ ಕುಡಿಯುವ ಅಭ್ಯಾಸವಿದೆಯೇ? ಆರೋಗ್ಯದ ಮೇಲೆ ಎಷ್ಟೆಲ್ಲಾ ದುಷ್ಪರಿಣಾಮಗಳಾಗುತ್ತೆ ಗೊತ್ತಾ? ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಕಂಗೆಟ್ಟಿದ್ದೀರಾ? ಹೊಟ್ಟೆಯುಬ್ಬರ ಹಾಗೂ ಅಸಿಡಿಟಿಗೆ ಈ ಸರಳ ಅಭ್ಯಾಸಗಳೇ ರಾಮಬಾಣ!
Home

ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಕಂಗೆಟ್ಟಿದ್ದೀರಾ? ಹೊಟ್ಟೆಯುಬ್ಬರ ಹಾಗೂ ಅಸಿಡಿಟಿಗೆ ಈ ಸರಳ ಅಭ್ಯಾಸಗಳೇ ರಾಮಬಾಣ!

gastric-problem-relief-tips-kannada

ಇಂದಿನ ಧಾವಂತದ ಜೀವನಶೈಲಿ ಮತ್ತು ಬದಲಾದ ಆಹಾರ ಪದ್ಧತಿಯಿಂದಾಗಿ ಗ್ಯಾಸ್ಟ್ರಿಕ್ ಅಥವಾ ಅಸಿಡಿಟಿ (Gastric Problem) ಸಮಸ್ಯೆಯು ಬಹುತೇಕ ಎಲ್ಲರಿಗೂ ಕಾಡುವ ಸಾಮಾನ್ಯ ಆರೋಗ್ಯ ಸಮಸ್ಯೆಯಾಗಿ ಮಾರ್ಪಟ್ಟಿದೆ. ತರಹೇವಾರಿ ಊಟೋಪಚಾರಗಳು, ಅನಿಯಮಿತ ಸಮಯ ಹಾಗೂ ಜೀರ್ಣಾಂಗ ವ್ಯವಸ್ಥೆಯ ದೌರ್ಬಲ್ಯದಿಂದ ಹೊಟ್ಟೆಯಲ್ಲಿ ಗ್ಯಾಸ್ ಉತ್ಪತ್ತಿಯಾಗಿ ತೀವ್ರ ತೊಂದರೆ ಉಂಟಾಗುತ್ತದೆ. ಈ ಸಮಸ್ಯೆಯಿಂದ ಶಾಶ್ವತವಾಗಿ ಮುಕ್ತಿ ಪಡೆಯಲು ಮತ್ತು ಹೊಟ್ಟೆಯನ್ನು ಆರೋಗ್ಯವಾಗಿಡಲು ಆರೋಗ್ಯ ತಜ್ಞರು ಕೆಲವು ಪ್ರಮುಖ ಜೀವನಶೈಲಿ ಬದಲಾವಣೆಗಳನ್ನು ಕಾಯ್ದುಕೊಳ್ಳಲು ಸಲಹೆ ನೀಡುತ್ತಾರೆ. ಆ ಸರಳ ಹಾಗೂ ಪರಿಣಾಮಕಾರಿ ಮಾರ್ಗಗಳು ಇಲ್ಲಿವೆ:

  1. ಸ್ವಲ್ಪ ಪ್ರಮಾಣದಲ್ಲಿ ಆಗಾಗ ಊಟ ಮಾಡಿ: ಒಮ್ಮೇಲೆ ಹೊಟ್ಟೆತುಂಬಾ ತಿನ್ನುವ ಬದಲು, ದಿನಕ್ಕೆ 5 ಬಾರಿ ಹಂತ ಹಂತವಾಗಿ ಸ್ವಲ್ಪ ಸ್ವಲ್ಪ ಆಹಾರ ಸೇವಿಸುವುದು ಜೀರ್ಣಾಂಗದ ಮೇಲಿನೊತ್ತಡವನ್ನು ಕಡಿಮೆ ಮಾಡುತ್ತದೆ. ಇದು ಗ್ಯಾಸ್ಟ್ರಿಕ್ ಬಾರದಂತೆ ತಡೆಯಲು ಅತ್ಯುತ್ತಮ ಉಪಾಯವಾಗಿದೆ.

  2. ಜೀರ್ಣಕ್ರಿಯೆಗೆ ಕಷ್ಟವಾದ ಆಹಾರ ದೂರವಿಡಿ: ಅತಿಯಾದ ಎಣ್ಣೆ ಪದಾರ್ಥಗಳು, ಮಸಾಲೆ ಭರಿತ ಹಾಗೂ ಜೀರ್ಣವಾಗಲು ಬಹಳ ಸಮಯ ತೆಗೆದುಕೊಳ್ಳುವ ಭಾರವಾದ ಆಹಾರ ಪದಾರ್ಥಗಳಿಂದ ದೂರವಿರುವುದು ಉತ್ತಮ.

  3. ಧೂಮಪಾನ ಮತ್ತು ಆಲ್ಕೊಹಾಲ್ ತ್ಯಜಿಸಿ: ಧೂಮಪಾನ ಹಾಗೂ ಮದ್ಯಪಾನದ ಚಟವು ಹೊಟ್ಟೆಯ ಒಳಪದರವನ್ನು ಹಾನಿಗೊಳಿಸಿ ಆಮ್ಲೀಯತೆ (Acidity) ಹೆಚ್ಚಾಗಲು ಪ್ರಮುಖ ಕಾರಣವಾಗುತ್ತದೆ. ಇವುಗಳಿಂದ ಆದಷ್ಟು ಬೇಗ ಮುಕ್ತರಾಗಿ.

  4. ದಿನಚರಿಯಲ್ಲಿ ವ್ಯಾಯಾಮವಿರಲಿ: ಬೆಳಗ್ಗಿನ ಸಮಯದಲ್ಲಿ ತಪ್ಪದೆ ವ್ಯಾಯಾಮ, ಯೋಗ ಅಥವಾ ಹಗುರವಾದ ವಾಕಿಂಗ್ ಮಾಡುವುದರಿಂದ ದೇಹದ ಚಯಾಪಚಯ ಕ್ರಿಯೆ (Metabolism) ಚುರುಕುಗೊಂಡು ಜೀರ್ಣಶಕ್ತಿ ವೃದ್ಧಿಯಾಗುತ್ತದೆ.

  5. ಉತ್ತಮ ನಿದ್ರೆ ಅತ್ಯಾವಶ್ಯಕ: ಪ್ರತಿ ದಿನ ರಾತ್ರಿ ಕನಿಷ್ಠ 7 ರಿಂದ 8 ಗಂಟೆಗಳ ಕಾಲ ಆಳವಾದ ಮತ್ತು ನೆಮ್ಮದಿಯ ನಿದ್ರೆ ಮಾಡುವುದು ಹಾರ್ಮೋನುಗಳ ಸಮತೋಲನ ಕಾಪಾಡಲು ಹಾಗೂ ಹೊಟ್ಟೆಯ ಆರೋಗ್ಯಕ್ಕೆ ಅನಿವಾರ್ಯ.

  6. ಊಟದ ತಕ್ಷಣ ಮಲಗಬೇಡಿ: ರಾತ್ರಿ ಅಥವಾ ಮಧ್ಯಾಹ್ನದ ಊಟ ಮುಗಿಸಿದ ತಕ್ಷಣ ಮಲಗುವ ಅಭ್ಯಾಸವಿದ್ದರೆ ಇಂದೇ ಬಿಡಿ. ಊಟಕ್ಕೂ ಮಲಗುವುದಕ್ಕೂ ಕನಿಷ್ಠ 2 ರಿಂದ 3 ಗಂಟೆಗಳ ಅಂತರವಿರಲಿ.

  7. ಮಲವಿಸರ್ಜನೆ ಸರಾಗವಾಗಿರಲಿ: ಪ್ರತಿದಿನ ಕೃಮಬದ್ಧವಾಗಿ ಮಲವಿಸರ್ಜನೆಗೊಂಡು ಹೊಟ್ಟೆ ಸ್ವಚ್ಛವಾಗುವುದು ಜೀರ್ಣಾಂಗ ವ್ಯವಸ್ಥೆಯ ಆರೋಗ್ಯಕ್ಕೆ ಮುಕುಟಪ್ರಾಯವಿದ್ದಂತೆ. ಇದು ಗ್ಯಾಸ್ಟ್ರಿಕ್ ಸಮಸ್ಯೆಯನ್ನು ಬುಡ ಸಮೇತ ತಡೆಯುತ್ತದೆ.

Leave a Reply

Your email address will not be published. Required fields are marked *