೬ ನವೆಂಬರ್ ೨೦೨೬ · ಶುಕ್ರವಾರ
ತಾಜಾ
ಚಹಾ ಅಥವಾ ಕಾಫಿ ಕುಡಿಯುವ ಮುನ್ನ ನೀರು ಕುಡಿಯುವುದು ಯಾಕೆ ಅತ್ಯಗತ್ಯ? ಆರೋಗ್ಯ ರಹಸ್ಯ ಇಲ್ಲಿದೆ ಮನೆಮದ್ದಿನ ರತ್ನ ಕಪ್ಪು ಜೀರಿಗೆ: ಶೀತ-ಕೆಮ್ಮಿಗೆ ಚಿಕಿತ್ಸೆ ಜತೆಗೆ ಅತಿವೇಗವಾಗಿ ತೂಕ ಇಳಿಸುವ ಸರಳ ಉಪಾಯ! ಹಾಲನ್ನು ಬಿಸಿ ಮಾಡಿ ಕುಡಿಯೋದಲ್ಲ ಅಂತೆ! ತಣ್ಣನೆಯ ಹಾಲು ಕುಡಿದ್ರೆ ಸಿಗುವ ಅಚ್ಚರಿಯ ಆರೋಗ್ಯ ಪ್ರಯೋಜನಗಳಿವು ಆರೋಗ್ಯಕ್ಕೆ ಸಂಜೀವಿನಿ ಗಸಗಸೆ: ನಿತ್ಯದ ಅಡುಗೆಯಲ್ಲಿ ಈ ಪುಟ್ಟ ಬೀಜಗಳಿದ್ದರೆ ಹಲವು ಕಾಯಿಲೆಗಳು ಮಾಯ! ಮಕ್ಕಳಲ್ಲಿ ಥಲಸ್ಸೆಮಿಯಾ ಕಾಯಿಲೆ: ಪೋಷಕರು ನಿರ್ಲಕ್ಷಿಸಬಾರದ ಆರಂಭಿಕ ಲಕ್ಷಣಗಳು ಮತ್ತು ಮುನ್ನೆಚ್ಚರಿಕೆಗಳು ಎದೆಯ ಈ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ: ಹೃದಯಾಘಾತದ ಮುನ್ಸೂಚನೆ ಹಾಗೂ ಆರಂಭಿಕ ಎಚ್ಚರಿಕೆಗಳು! ಎದೆಯುರಿ ಸಮಸ್ಯೆಯಿಂದ ಸುಲಭವಾಗಿ ಮುಕ್ತಿ ಪಡೆಯಲು ಇಲ್ಲಿದೆ ಪರಿಣಾಮಕಾರಿ ನೈಸರ್ಗಿಕ ಮನೆಮದ್ದುಗಳು! ಅಧೋಮುಖ ಶ್ವಾನಾಸನದ ಅದ್ಭುತ ಆರೋಗ್ಯ ಪ್ರಯೋಜನಗಳು: ಪ್ರತಿದಿನ ಈ ಯೋಗಾಸನ ಮಾಡುವುದರಿಂದೇನು ಲಾಭ?
ದಿನದ ಸುದ್ದಿ

ಆರೋಗ್ಯಕ್ಕೆ ಸಂಜೀವಿನಿ ಗಸಗಸೆ: ನಿತ್ಯದ ಅಡುಗೆಯಲ್ಲಿ ಈ ಪುಟ್ಟ ಬೀಜಗಳಿದ್ದರೆ ಹಲವು ಕಾಯಿಲೆಗಳು ಮಾಯ!

ಗಸಗಸೆಯ ಆರೋಗ್ಯ ಪ್ರಯೋಜನಗಳು: ನಿದ್ರಾಹೀನತೆ ಹಾಗೂ ಮಲಬದ್ಧತೆಗೆ ರಾಮಬಾಣ!

ನಮ್ಮ ಅಡುಗೆ ಮನೆಯಲ್ಲಿ ಬಳಸುವ ಪ್ರತಿ ಪದಾರ್ಥದ ಹಿಂದೆಯೂ ಒಂದಲ್ಲ ಒಂದು ಆರೋಗ್ಯದ ರಹಸ್ಯ ಅಡಗಿರುತ್ತದೆ. ಅಂಥವುಗಳಲ್ಲಿ ‘ಗಸಗಸೆ’ ಕೂಡ ಒಂದು. ಸಾಮಾನ್ಯವಾಗಿ ಸಿಹಿತಿಂಡಿಗಳು, ಪಾಯಸ ಹಾಗೂ ಮಸಾಲೆ ಪದಾರ್ಥಗಳಿಗೆ ರುಚಿ ಮತ್ತು ಪರಿಮಳ ನೀಡಲು ಬಳಸುವ ಈ ಪುಟ್ಟ ಬೀಜಗಳು (Poppy Seeds) ಕೇವಲ ನಾಲಿಗೆಯ ಚಪಚಪನೆ ತಣಿಸುವುದಕ್ಕಷ್ಟೇ ಅಲ್ಲದೆ, ದೇಹಕ್ಕೆ ನೂರಾರು ಆರೋಗ್ಯ ಪ್ರಯೋಜನಗಳನ್ನು ನೀಡುತ್ತವೆ. ಆಯುರ್ವೇದದಲ್ಲೂ ಗಸಗಸೆಗೆ ವಿಶೇಷ ಸ್ಥಾನವಿದ್ದು, ಇದು ಹಲವಾರು ದೈಹಿಕ ಸಮಸ್ಯೆಗಳಿಗೆ ರಾಮಬಾಣವಾಗಿ ಕೆಲಸ ಮಾಡುತ್ತದೆ.

ಗಸಗಸೆ ಸೇವನೆಯಿಂದ ಆರೋಗ್ಯಕ್ಕಾಗುವ ಪ್ರಮುಖ ಲಾಭಗಳು:

  • ಮೂತ್ರಪಿಂಡದ ಆರೋಗ್ಯ ಹಾಗೂ ಕಿಡ್ನಿ ಕಲ್ಲು ತಡೆಗಟ್ಟುವಿಕೆ: ಗಸಗಸೆಯಲ್ಲಿ ಆಕ್ಸಲೇಟ್ ಅಂಶವು ಕಡಿಮೆ ಪ್ರಮಾಣದಲ್ಲಿದ್ದು, ಇದು ಮೂತ್ರಪಿಂಡಗಳ (Kidney) ಕಾರ್ಯವೈಖರಿಯನ್ನು ಸುಧಾರಿಸುತ್ತದೆ. ಅಲ್ಲದೆ, ಕಿಡ್ನಿಯಲ್ಲಿ ಹಾನಿಕಾರಕ ಕಲ್ಲುಗಳು ರೂಪುಗೊಳ್ಳುವುದನ್ನು ತಡೆಯಲು ಇದು ಸಹಕಾರಿಯಾಗಿದೆ.

  • ಮಲಬದ್ಧತೆಗೆ ಶಾಶ್ವತ ಮುಕ್ತಿ: ಇಂದಿನ ಧಾವಂತದ ಜೀವನಶೈಲಿ ಮತ್ತು ತಪ್ಪು ಆಹಾರ ಪದ್ಧತಿಯಿಂದ ಅನೇಕರನ್ನು ಕಾಡುವ ಪ್ರಮುಖ ಸಮಸ್ಯೆ ಮಲಬದ್ಧತೆ. ಗಸಗಸೆಯಲ್ಲಿ ನಾರಿನಾಂಶ ಸಮೃದ್ಧವಾಗಿದ್ದು, ಇದು ಕರುಳಿನ ಚಲನೆಯನ್ನು ಸುಗಮಗೊಳಿಸುತ್ತದೆ ಮತ್ತು ಜೀರ್ಣಕ್ರಿಯೆಯನ್ನು ಉತ್ತಮಪಡಿಸುತ್ತದೆ.

  • ನಿದ್ರಾಹೀನತೆಗೆ ಅತ್ಯುತ್ತಮ ಪರಿಹಾರ: ರಾತ್ರಿ ಸರಿಯಾಗಿ ನಿದ್ರೆ ಬಾರದಿರುವುದು ಅಥವಾ ಒತ್ತಡದಿಂದ ಬಳಲುತ್ತಿರುವವರಿಗೆ ಗಸಗಸೆ ದಿವ್ಯೌಷಧವಿದ್ದಂತೆ. ಆಹಾರದಲ್ಲಿ ಇದರ ಬಳಕೆಯಿಂದ ನರಗಳು ಶಾಂತಗೊಂಡು ಆರಾಮದಾಯಕ ಅನುಭವ ಉಂಟಾಗುತ್ತದೆ.

  • ಗಾಢವಾದ ಸುಖ ನಿದ್ರೆಗಾಗಿ ಮನೆಮದ್ದು: ರಾತ್ರಿ ಮಲಗುವ ಮುನ್ನ ಒಂದು ಲೋಕ ಬಿಸಿ ಹಾಲಿಗೆ ಸ್ವಲ್ಪ ಗಸಗಸೆ ಬೆರೆಸಿ ಕುಡಿಯುವುದರಿಂದ ಮೆದುಳು ಮತ್ತು ನರಮಂಡಲ ಸಡಿಲಗೊಂಡು, ಕ್ಷಣಮಾತ್ರದಲ್ಲಿ ಗಾಢವಾದ ಹಾಗೂ ಸುಖ ನಿದ್ದೆ ಆವರಿಸುತ್ತದೆ.

  • ಉಸಿರಾಟದ ತೊಂದರೆ ನಿವಾರಣೆ: ಗಸಗಸೆಯಲ್ಲಿ ಉರಿಯೂತ ನಿವಾರಕ (Anti-inflammatory) ಗುಣಗಳು ಹೇರಳವಾಗಿವೆ. ಇದು ಉಸಿರಾಟದ ನಾಳಗಳಲ್ಲಿ ಉಂಟಾಗುವ ತೊಂದರೆಗಳನ್ನು ಕಡಿಮೆ ಮಾಡಿ, ನೆಗಡಿ, ಕೆಮ್ಮು ಮತ್ತು ಶೀತದಂತಹ ಸಮಸ್ಯೆಗಳಿಂದ ಶಮನ ನೀಡುತ್ತದೆ.

  • ದೇಹದ ಅಧಿಕ ಉಷ್ಣತೆ ತಗ್ಗಿಸುತ್ತದೆ: ಬೇಸಿಗೆಯ ದಿನಗಳಲ್ಲಿ ಅಥವಾ ದೇಹದಲ್ಲಿ ಪಿತ್ತ ಹೆಚ್ಚಾದಾಗ ಉಂಟಾಗುವ ಅಧಿಕ ಉಷ್ಣತೆಯನ್ನು ನಿಯಂತ್ರಿಸಲು ಗಸಗಸೆ ಅತ್ಯಂತ ಪ್ರಯೋಜನಕಾರಿಯಾಗಿದೆ. ಇದು ದೇಹವನ್ನು ಒಳಗೊಂಡು ತಂಪಾಗಿರಿಸಲು ಸಹಾಯ ಮಾಡುತ್ತದೆ.

  • ಹೊಟ್ಟೆಯುರಿ ಮತ್ತು ಅಸಿಡಿಟಿಗೆ ಗುಡ್ ಬೈ: ಅಜೀರ್ಣ, ಗ್ಯಾಸ್ಟ್ರಿಕ್, ಹೊಟ್ಟೆಯ ಉರಿಯೂತ (Stomach Inflammation) ಹಾಗೂ ತೀವ್ರವಾದ ಆಮ್ಲೀಯತೆ (Acidity) ಸಮಸ್ಯೆಯಿಂದ ಬಳಲುತ್ತಿರುವವರು ಗಸಗಸೆಯನ್ನು ಬಳಸುವುದು ಆರೋಗ್ಯಕ್ಕೆ ಅತ್ಯಂತ ಉತ್ತಮ.

Leave a Reply

Your email address will not be published. Required fields are marked *