ಇಂದಿನ ಒತ್ತಡದ ಬದುಕಿನಲ್ಲಿ ತಲೆನೋವು, ಆಯಾಸ ಮತ್ತು ಮೈಗ್ರೇನ್ ಸಾಮಾನ್ಯ ಸಮಸ್ಯೆಗಳಾಗಿಬಿಟ್ಟಿವೆ. ದಿನವಿಡೀ ಕಂಪ್ಯೂಟರ್ ಮುಂದೆ ಕುಳಿತು ಕೆಲಸ ಮಾಡುವುದು ಅಥವಾ ಮಾನಸಿಕ ಒತ್ತಡದಿಂದಾಗಿ ಹೀಗಾಗಬಹುದು ಎಂದು ಬಹುತೇಕರು ಇದನ್ನು ಸಾಮಾನ್ಯ ನೋವಿನ ಮಾತ್ರೆಗಳನ್ನು ತೆಗೆದುಕೊಂಡು ನಿರ್ಲಕ್ಷಿಸುತ್ತಾರೆ. ಆದರೆ, ವೈದ್ಯಕೀಯ ಲೋಕದ ಎಚ್ಚರಿಕೆಯ ಪ್ರಕಾರ, ಪದೇಪದೇ ಕಾಡುವ ಇಂತಹ ಕೆಲವು ಲಕ್ಷಣಗಳು ಮಾರಣಾಂತಿಕ ಮೆದುಳಿನ ಗಡ್ಡೆ (Brain Tumor) ಅಥವಾ ಕ್ಯಾನ್ಸರ್ನ ಮುನ್ಸೂಚನೆಯಾಗಿರಬಹುದು!
ಆರಂಭಿಕ ಹಂತದಲ್ಲಿ ಇದರ ಲಕ್ಷಣಗಳು ಸಾಮಾನ್ಯ ಕಾಯಿಲೆಗಳಂತೆ ಕಾಣಿಸಿಕೊಳ್ಳುವುದರಿಂದ ರೋಗಿಗಳು ಗಂಭೀರತೆಯನ್ನು ಗ್ರಹಿಸುವುದಿಲ್ಲ. ಆದರೆ ರೋಗವು ಉಲ್ಬಣಗೊಂಡ ಬಳಿಕ ಚಿಕಿತ್ಸೆ ನೀಡುವುದು ಸವಾಲಾಗಬಹುದು. ಹಾಗಾಗಿ, ಯಾವೆಲ್ಲಾ ಲಕ್ಷಣಗಳನ್ನು ನಿರ್ಲಕ್ಷಿಸಬಾರದು ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.
ಮೆದುಳಿನ ಗಡ್ಡೆಯ ಪ್ರಮುಖ ಎಚ್ಚರಿಕೆ ಲಕ್ಷಣಗಳು
ಮೆದುಳಿನ ಯಾವ ಭಾಗದಲ್ಲಿ ಗೆಡ್ಡೆ ಬೆಳೆಯುತ್ತದೆ ಎಂಬುದರ ಆಧಾರದ ಮೇಲೆ ರೋಗಲಕ್ಷಣಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತವೆ. ಆದಾಗ್ಯೂ, ನರಶಸ್ತ್ರಚಿಕಿತ್ಸಕರು (Neurosurgeons) ಗುರುತಿಸಿರುವ ಸಾಮಾನ್ಯ ಮತ್ತು ಪ್ರಮುಖ ಲಕ್ಷಣಗಳು ಇಲ್ಲಿವೆ:
-
ತೀವ್ರ ಹಾಗೂ ನಿರಂತರ ತಲೆನೋವು: ಸಾಮಾನ್ಯ ತಲೆನೋವು ವಿಶ್ರಾಂತಿ ತೆಗೆದುಕೊಂಡರೆ ಅಥವಾ ಮಾತ್ರೆ ಸೇವಿಸಿದರೆ ಕಡಿಮೆಯಾಗುತ್ತದೆ. ಆದರೆ ಮೆದುಳಿನ ಗಡ್ಡೆಯಿಂದ ಉಂಟಾಗುವ ತಲೆನೋವು ದಿನದಿಂದ ದಿನಕ್ಕೆ ತೀವ್ರವಾಗುತ್ತಾ ಹೋಗುತ್ತದೆ. ವಿಶೇಷವಾಗಿ ಬೆಳಿಗ್ಗೆ ಎದ್ದಾಗ ಈ ನೋವು ತುಂಬಾ ಹೆಚ್ಚಾಗಿರುತ್ತದೆ.
-
ದೃಷ್ಟಿ ದೃಷ್ಟಿ ದೋಷ (Vision Problems): ಯಾವುದೇ ಸ್ಪಷ್ಟ ಕಾರಣವಿಲ್ಲದೆ ಕಣ್ಣು ಮಸುಕಾಗುವುದು, ಒಂದೇ ವಸ್ತು ಎರಡಾಗಿ ಕಾಣಿಸುವುದು (Double Vision) ಅಥವಾ ಅಚಾನಕ್ಕಾಗಿ ದೃಷ್ಟಿ ಶಕ್ತಿ ನಷ್ಟವಾಗುವುದು ಮೆದುಳಿನ ನರಗಳ ಮೇಲೆ ಗೆಡ್ಡೆ ಬೀರುವ ಒತ್ತಡದ ಲಕ್ಷಣವಾಗಿದೆ.
-
ಪದೇಪದೇ ವಾಕರಿಕೆ ಮತ್ತು ವಾಂತಿ: ಯಾವುದೇ ಜೀರ್ಣಾಂಗ ಸಮಸ್ಯೆ ಅಥವಾ ಇನ್ಫೆಕ್ಷನ್ ಇಲ್ಲದಿದ್ದರೂ, ಬೆಳಗಿನ ವೇಳೆಯಲ್ಲಿ ವಿವರಿಸಲಾಗದ ವಾಕರಿಕೆ ಮತ್ತು ತಕ್ಕದಾದ ವಾಂತಿ ಕಾಣಿಸಿಕೊಳ್ಳುವುದು ಮೆದುಳಿನ ಒಳಗಿನ ಒತ್ತಡ (Intracranial Pressure) ಹೆಚ್ಚಾಗಿರುವುದರ ಸಂಕೇತವಾಗಿದೆ.
-
ದೇಹದ ಸಮತೋಲನ ಕಳೆದುಕೊಳ್ಳುವುದು: ನಡೆಯುವಾಗ ತೂಗಾಡುವುದು, ನೇರವಾಗಿ ನಿಲ್ಲಲು ಕಷ್ಟವಾಗುವುದು, ಕಾಲುಗಳು ಒಮ್ಮಮ್ಮೆ ತ್ರಾಣ ಕಳೆದುಕೊಳ್ಳುವುದು ಅಥವಾ ಸಮನ್ವಯತೆಯ ಕೊರತೆ ಉಂಟಾಗುವುದು.
-
ಮಾತಿನಲ್ಲಿ ವ್ಯತ್ಯಾಸ ಮತ್ತು ಗೊಂದಲ: ಮಾತನಾಡಲು ತೊದಲುವಿಕೆ, ಸರಿಯಾದ ಪದಗಳು ಬಾಯಿಗೆ ಬಾರದೆ ಇರುವುದು ಅಥವಾ ಇತರರು ಆಡುವುದನ್ನು ಅರ್ಥಮಾಡಿಕೊಳ್ಳಲು ಕಷ್ಟವಾಗುವುದು.
-
ನರಸಂಬಂಧಿ ಸೆಳೆತ (Seizures / Fits): ಹಿಂದೆಂದೂ ಅಪಸ್ಮಾರ ಅಥವಾ ಫಿಟ್ಸ್ ಸಮಸ್ಯೆಯಿಲ್ಲದವರಲ್ಲಿ ಅಚಾನಕ್ಕಾಗಿ ಸೆಳೆತ ಅಥವಾ ಪ್ರಜ್ಞೆ ತಪ್ಪುವಿಕೆ ಕಂಡುಬಂದರೆ ತಕ್ಷಣ ಎಚ್ಚೆತ್ತುಕೊಳ್ಳಬೇಕು.
ವೈದ್ಯರನ್ನು ಯಾವಾಗ ಸಂಪರ್ಕಿಸಬೇಕು?
ನಿಮಗಾಗಲಿ ಅಥವಾ ನಿಮ್ಮ ಹತ್ತಿರದವರಿಗಾಗಲಿ ಮೇಲಿನ ಲಕ್ಷಣಗಳು ದಿನಗಳೆದರೂ ಕಡಿಮೆÜಯಾಗದೆ ಪುನರಾವರ್ತನೆಯಾಗುತ್ತಿದ್ದರೆ, ಕೂಡಲೇ ನರವಿಜ್ಞಾನಿ (Neurologist) ಅಥವಾ ನರಶಸ್ತ್ರಚಿಕಿತ್ಸಕರನ್ನು ಭೇಟಿ ಮಾಡಿ. MRI ಅಥವಾ CT ಸ್ಕ್ಯಾನ್ಗಳಂತಹ ಸುಧಾರಿತ ವೈದ್ಯಕೀಯ ತಪಾಸಣೆಗಳ ಮೂಲಕ ಆರಂಭಿಕ ಹಂತದಲ್ಲೇ ಸಮಸ್ಯೆಯನ್ನು ಗುರುತಿಸಿ ಸೂಕ್ತ ಚಿಕಿತ್ಸೆ ಪಡೆದರೆ ಪ್ರಾಣಾಪಾಯದಿಂದ ಪಾರಾಗಬಹುದು.
ಆರೋಗ್ಯಕ್ಕೆ ಸಂಬಂಧಿಸಿದ ಇತ್ತೀಚಿನ ಹಾಗೂ ವಿಶ್ವಾಸಾರ್ಹ ಮಾಹಿತಿಳಿಗಾಗಿ ‘ಆರೋಗ್ಯ ವಿಜಯ’ (Arogya Vijaya) ಓದುವುದನ್ನು ಮುಂದುವರಿಸಿ.