೫ ನವೆಂಬರ್ ೨೦೨೬ · ಗುರುವಾರ
ತಾಜಾ
ಮೆದುಳಿನ ಗಡ್ಡೆಯ ಆರಂಭಿಕ ಲಕ್ಷಣಗಳು: ತಲೆನೋವು, ವಾಂತಿ ಹಾಗೂ ದೃಷ್ಟಿ ದೋಷವನ್ನು ಎಂದಿಗೂ ನಿರ್ಲಕ್ಷಿಸಬೇಡಿ! ಮದ್ಯಪಾನ ಮಾಡದವರಲ್ಲೂ ಲಿವರ್ ಹಾನಿ ಹೆಚ್ಚಾಗಲು ಕಾರಣವೇನು? ಇಲ್ಲಿದೆ ಸಂಪೂರ್ಣ ಮಾಹಿತಿ ತೂಕ ಇಳಿಸಲು ಯೋಚಿಸುತ್ತಿದ್ದೀರಾ? ಆರೋಗ್ಯಕರ ಡಯಟ್‌ಗಾಗಿ ಈ 7 ಸರಳ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿ! ನಿಮ್ಮ ಮನೆಯ ಅಂಗಳದಲ್ಲಿದೆಯೇ ಅದ್ಭುತ ಔಷಧೀಯ ಗುಣವುಳ್ಳ ‘ತುಂಬೆ’ ಗಿಡ? ಇಲ್ಲಿದೆ ಇದರ ಅಚ್ಚರಿಯ ಪ್ರಯೋಜನಗಳು! ಅತಿಯಾಗಿ ಚಹಾ ಕುಡಿಯುವ ಅಭ್ಯಾಸವಿದೆಯೇ? ಹಾಗಾದರೆ ಈ ಗಂಭೀರ ಆರೋಗ್ಯ ಅಪಾಯಗಳು ಕಟ್ಟಿಟ್ಟಬುದ್ಧಿ! ಯಕೃತ್ತಿನ ಆರೋಗ್ಯದ ಕಡೆ ಇರಲಿ ಎಚ್ಚರ: ಲಿವರ್‌ ಹಾನಿಯಾದರೆ ದೇಹದಲ್ಲಿ ಗೋಚರಿಸುವ ಪ್ರಮುಖ ಆರಂಭಿಕ ಲಕ್ಷಣಗಳಿವು! ಆರೋಗ್ಯಕ್ಕೆ ತುಪ್ಪ ಒಳ್ಳೆಯದೇ? ಯಾವ ತುಪ್ಪ ಉತ್ತಮ ಮತ್ತು ಸೇವಿಸುವ ಸರಿಯಾದ ವಿಧಾನ ಇಲ್ಲಿದೆ ಮರುಭೂಮಿ ಕಪ್ಪೆಯ ವಿಷದಿಂದ ಖಿನ್ನತೆಗೆ ರಾಮಬಾಣ: ಹೊಸ ನಾಸಲ್ ಸ್ಪ್ರೇ ಸಂಶೋಧನೆ
ದಿನದ ಸುದ್ದಿ

ನಿಮ್ಮ ಮನೆಯ ಅಂಗಳದಲ್ಲಿದೆಯೇ ಅದ್ಭುತ ಔಷಧೀಯ ಗುಣವುಳ್ಳ ‘ತುಂಬೆ’ ಗಿಡ? ಇಲ್ಲಿದೆ ಇದರ ಅಚ್ಚರಿಯ ಪ್ರಯೋಜನಗಳು!

ತುಂಬೆ ಗಿಡದ ಔಷಧೀಯ ಉಪಯೋಗಗಳು ಮತ್ತು ಆರೋಗ್ಯ ಪ್ರಯೋಜನಗಳು - Thumbe Gida Benefits in Kannada.

ಸಾಮಾನ್ಯವಾಗಿ ನಮ್ಮ ಮನೆಯ ಸುತ್ತಮುತ್ತ ಅಥವಾ ಖಾಲಿ ಜಾಗಗಳಲ್ಲಿ ಕಳೆಗಿಡದಂತೆ ಬೆಳೆಯುವ ತುಂಬೆ ಗಿಡ (Leucas Aspera) ಕೇವಲ ಕಳೆಯಲ್ಲ, ಅದರಲ್ಲಿ ಅಡಗಿರುವ ಔಷಧೀಯ ಗುಣಗಳು ಮಾತ್ರ ಅಚ್ಚರಿ ಮೂಡಿಸುವಂತಿವೆ. ಗ್ರಾಮೀಣ ಭಾಗದಲ್ಲಿ ಇದನ್ನು ಸುಲಭವಾಗಿ ಕಾಣಬಹುದು. ಆಯುರ್ವೇದದಲ್ಲಿ ಈ ಸಸ್ಯಕ್ಕೆ ಅತ್ಯಂತ ಹಳೆಯ ಹಾಗೂ ಪ್ರಮುಖ ಸ್ಥಾನವಿದೆ. ಹಾಗಾದರೆ, ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ತುಂಬೆ ಗಿಡವು ಹೇಗೆಲ್ಲಾ ಸಹಾಯ ಮಾಡುತ್ತದೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

1. ಹೊಟ್ಟೆಯ ಜಂತು ಹುಳುಗಳಿಗೆ ರಾಮಬಾಣ

ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಹಲವರನ್ನು ಕಾಡುವ ಸಾಮಾನ್ಯ ಸಮಸ್ಯೆ ಅಂದರೆ ಅದು ಹೊಟ್ಟೆಯಲ್ಲಿ ಜಂತು ಹುಳುಗಳ ಬಾಧೆ. ಇದರಿಂದ ಹೊಟ್ಟೆ ನೋವು ಹಾಗೂ ಜೀರ್ಣಕ್ರಿಯೆ ದೋಷ ಉಂಟಾಗುತ್ತದೆ. ಇದಕ್ಕೆ ಪರಿಹಾರವಾಗಿ ತುಂಬೆ ಹೂವು ಹಾಗೂ ಇದರ ಎಲೆಯ ತಾಜಾ ರಸಕ್ಕೆ ಸ್ವಲ್ಪ ಶುದ್ಧ ಜೇನುತುಪ್ಪವನ್ನು ಬೆರೆಸಿ ಸೇವಿಸುವುದರಿಂದ ಹೊಟ್ಟೆಯಲ್ಲಿರುವ ಹುಳುಗಳು ಸಂಪೂರ್ಣವಾಗಿ ನಾಶವಾಗುತ್ತವೆ.

2. ಪದೇ ಪದೆ ಕಾಡುವ ಜ್ವರಕ್ಕೆ ಮುಕ್ತಿ

ಮಳೆಗಾಲ ಅಥವಾ ಹವಾಮಾನ ಬದಲಾದಾಗ ಕೆಲವರಿಗೆ ಪದೇ ಪದೆ ಜ್ವರ, ಶೀತದ ಸಮಸ್ಯೆ ಕಾಡುತ್ತದೆ. ಈ ಸಮಸ್ಯೆಯನ್ನು ನಿವಾರಿಸಲು ತುಂಬೆ ಎಲೆಯ ರಸದೊಂದಿಗೆ ಚಿಟಿಕೆಯಷ್ಟು ಕಾಳುಮೆಣಸಿನ ಪುಡಿಯನ್ನು ಬೆರೆಸಿ ಸೇವಿಸಬೇಕು. ಇದು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದರ ಜೊತೆಗೆ ಜ್ವರವನ್ನು ಕಡಿಮೆ ಮಾಡಲು ಉತ್ತಮವಾಗಿ ನೆರವಾಗುತ್ತದೆ.

3. ಸೊಳ್ಳೆ ಹಾಗೂ ಕೀಟಗಳ ಕಾಟಕ್ಕೆ ನೈಸರ್ಗಿಕ ಪರಿಹಾರ

ಮನೆಯಲ್ಲಿ ಅಥವಾ ಸುತ್ತಮುತ್ತ ಸೊಳ್ಳೆಗಳ ಹಾವಳಿ ಹೆಚ್ಚಿದ್ದರೆ ರಾತ್ರಿಯ ವೇಳೆ ನೈರ್ಮಲ್ಯ ಕಾಪಾಡಿಕೊಳ್ಳುವುದು ಕಷ್ಟವಾಗುತ್ತದೆ. ಇದಕ್ಕೆ ರಾಸಾಯನಿಕಯುಕ್ತ ಮಸ್ಕಿಟೋ ರಿಪೆಲ್ಲೆಂಟ್‌ಗಳ ಬದಲು ಒಣಗಿಸಿದ ತುಂಬೆ ಗಿಡದ ಎಲೆಗಳನ್ನು ಬಳಸಿ ಹೊಗೆ ಹಾಕಬಹುದು. ಇದರ ನೈಸರ್ಗಿಕ ಸುವಾಸನೆಯು ಸೊಳ್ಳೆ ಹಾಗೂ ಇತರೆ ಕೀಟಗಳನ್ನು ಮನೆಯಿಂದ ದೂರವಿಡುತ್ತದೆ.

4. ಕೀಟಗಳ ಬಾಧೆಯಿಂದ ಮುಕ್ತಿ ಪಡೆಯಲು ಮನೆ ಅಂಗಳದಲ್ಲೇ ಬೆಳೆಸಿ

ನಿಮ್ಮ ಮನೆ ಅಂಗಳದಲ್ಲಿ ಅಥವಾ ತೋಟದಲ್ಲಿ ತುಂಬೆ ಗಿಡವನ್ನು ಬೆಳೆಸುವುದರಿಂದ ಇದು ನೈಸರ್ಗಿಕ ಕೀಟನಾಶಕದಂತೆ ಕೆಲಸ ಮಾಡುತ್ತದೆ. ಇದರ ಪ್ರಖರ ವಾಸನೆ ಹಾಗೂ ಸಸ್ಯಜನ್ಯ ಗುಣಗಳಿಂದಾಗಿ ಹಾನಿಕಾರಕ ಕೀಟಗಳು ಮತ್ತು ನೊಣಗಳು ಮನೆಯ ಆವರಣಕ್ಕೆ ಸುಳಿಯದಂತೆ ತಡೆಯಬಹುದು.

5. ಚರ್ಮದ ತುರಿಕೆ ಮತ್ತು ಅಲರ್ಜಿಗೆ ರಾಮಬಾಣ

ಚರ್ಮದ ಅಲರ್ಜಿ, ಷುರುಷುರಿ ಅಥವಾ ತುರಿಕೆಯಿಂದ ಬಳಲುತ್ತಿರುವವರು ಮಾರುಕಟ್ಟೆಯ ಕ್ರೀಮ್‌ಗಳ ಬದಲು ಹಸಿ ತುಂಬೆ ಎಲೆಗಳನ್ನು ಚೆನ್ನಾಗಿ ಅರೆದು ಪೇಸ್ಟ್ ತಯಾರಿಸಿಕೊಳ್ಳಬೇಕು. ಈ ಲೇಪನವನ್ನು ತುರಿಕೆ ಅಥವಾ ಅಲರ್ಜಿ ಇರುವ ಜಾಗಕ್ಕೆ ಹಚ್ಚಿದರೆ ಕೆಲವೇ ದಿನಗಳಲ್ಲಿ ಉತ್ತಮ ಉಪಶಮನ ಸಿಗುತ್ತದೆ.

ಗಮನಿಸಿ: ಯಾವುದೇ ಮನೆಮದ್ದುಗಳನ್ನು ಬಳಸುವ ಮುನ್ನ ನಿಮ್ಮ ದೇಹದ ಪ್ರಕೃತಿಗೆ ಇದು ಹೊಂದಿಕೊಳ್ಳುತ್ತದೆಯೇ ಎಂಬುದನ್ನು ಪರಿಶೀಲಿಸಿ ಅಥವಾ ಆಯುರ್ವೇದ ವೈದ್ಯರ ಸಲಹೆ ಪಡೆಯುವುದು ಉತ್ತಮ.

Leave a Reply

Your email address will not be published. Required fields are marked *