೪ ನವೆಂಬರ್ ೨೦೨೬ · ಬುಧವಾರ
ತಾಜಾ
ಅತಿಯಾಗಿ ಚಹಾ ಕುಡಿಯುವ ಅಭ್ಯಾಸವಿದೆಯೇ? ಹಾಗಾದರೆ ಈ ಗಂಭೀರ ಆರೋಗ್ಯ ಅಪಾಯಗಳು ಕಟ್ಟಿಟ್ಟಬುದ್ಧಿ! ಯಕೃತ್ತಿನ ಆರೋಗ್ಯದ ಕಡೆ ಇರಲಿ ಎಚ್ಚರ: ಲಿವರ್‌ ಹಾನಿಯಾದರೆ ದೇಹದಲ್ಲಿ ಗೋಚರಿಸುವ ಪ್ರಮುಖ ಆರಂಭಿಕ ಲಕ್ಷಣಗಳಿವು! ಆರೋಗ್ಯಕ್ಕೆ ತುಪ್ಪ ಒಳ್ಳೆಯದೇ? ಯಾವ ತುಪ್ಪ ಉತ್ತಮ ಮತ್ತು ಸೇವಿಸುವ ಸರಿಯಾದ ವಿಧಾನ ಇಲ್ಲಿದೆ ಮರುಭೂಮಿ ಕಪ್ಪೆಯ ವಿಷದಿಂದ ಖಿನ್ನತೆಗೆ ರಾಮಬಾಣ: ಹೊಸ ನಾಸಲ್ ಸ್ಪ್ರೇ ಸಂಶೋಧನೆ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಆಮ್ಲಾ ಜ್ಯೂಸ್ ಕುಡಿಯುವುದರ ಅದ್ಭುತ ಆರೋಗ್ಯ ಪ್ರಯೋಜನಗಳು! ಮಳೆಗಾಲದಲ್ಲಿ ತುಳಸಿ ಚಹಾ ಕುಡಿಯುವುದರ ಅದ್ಭುತ ಆರೋಗ್ಯ ಪ್ರಯೋಜನಗಳು: ಇಲ್ಲಿದೆ ಸಂಪೂರ್ಣ ಮಾಹಿತಿ ಕೂದಲಿಗೆ ಎಣ್ಣೆ ಹಚ್ಚುವ ಸರಿಯಾದ ವಿಧಾನ ಯಾವುದು ಗೊತ್ತಾ? ಈ ತಪ್ಪುಗಳನ್ನು ಎಂದಿಗೂ ಮಾಡಬೇಡಿ! ಆರೋಗ್ಯದ ಕಣಜ ಕಲ್ಲಂಗಡಿ ಹಣ್ಣು: ನಿತ್ಯ ಸೇವನೆಯಿಂದ ಸಿಗುವ ಅಚ್ಚರಿಯ ಪ್ರಯೋಜನಗಳಿವು!
ದಿನದ ಸುದ್ದಿ

ಅತಿಯಾಗಿ ಚಹಾ ಕುಡಿಯುವ ಅಭ್ಯಾಸವಿದೆಯೇ? ಹಾಗಾದರೆ ಈ ಗಂಭೀರ ಆರೋಗ್ಯ ಅಪಾಯಗಳು ಕಟ್ಟಿಟ್ಟಬುದ್ಧಿ!

ಅತಿಯಾಗಿ ಚಹಾ ಕುಡಿಯುವುದರಿಂದ ಹಾಗೂ ಖಾಲಿ ಹೊಟ್ಟೆಯಲ್ಲಿ ಟೀ ಸೇವಿಸುವುದರಿಂದ ಆರೋಗ್ಯದ ಮೇಲೆ ಉಂಟಾಗುವ ಅಡ್ಡಪರಿಣಾಮಗಳು

ಬೆಳಗ್ಗೆ ಕಣ್ಣುಬಿಟ್ಟ ಕೂಡಲೇ ಬಿಸಿಯಾದ ಒಂದು ಕಪ್ ಚಹಾ (Tea) ಕುಡಿಯುವ ಮೂಲಕ ದಿನವನ್ನು ಆರಂಭಿಸುವವರು ನಮ್ಮ ನಡುವೆ ಲಕ್ಷಾಂತರ ಜನರಿದ್ದಾರೆ. ಕೆಲವರಿಗಂತೂ ದಿನಕ್ಕೆ ಐದಾರು ಬಾರಿ ಟೀ ಕುಡಿಯದಿದ್ದರೆ ತಲೆಭಾರ ಅಥವಾ ಸುಸ್ತು ಕಾಡುತ್ತದೆ. ಆದರೆ, ನಿಮ್ಮ ಈ ಪ್ರಿಯವಾದ ಚಹಾ ಕುಡಿಯುವ ಅಭ್ಯಾಸವೇ ನಿಮ್ಮ ಆರೋಗ್ಯಕ್ಕೆ ಕಂಟಕವಾಗಬಹುದು ಎಂಬ ಸಂಗತಿ ನಿಮಗೆ ತಿಳಿದಿದೆಯೇ? ಹೌದು, ಅತಿಯಾಗಿ ಚಹಾ ಸೇವಿಸುವುದರಿಂದ ಮತ್ತು ಅದರಲ್ಲೂ ನಿರ್ದಿಷ್ಟವಾಗಿ ಖಾಲಿ ಹೊಟ್ಟೆಯಲ್ಲಿ ಟೀ ಕುಡಿಯುವುದರಿಂದ ದೇಹದ ಒಟ್ಟಾರೆ ಕಾರ್ಯವೈಖರಿಯ ಮೇಲೆ ತೀವ್ರವಾದ ದುಷ್ಪರಿಣಾಮ ಉಂಟಾಗುತ್ತದೆ ಎಂದು ಆರೋಗ್ಯ ತಜ್ಞರು ಎಚ್ಚರಿಸುತ್ತಾರೆ.

ಹಾಗಾದರೆ, ಅತಿಯಾದ ಚಹಾ ಸೇವನೆ ಹಾಗೂ ಖಾಲಿ ಹೊಟ್ಟೆಯಲ್ಲಿ ಟೀ ಕುಡಿಯುವುದರಿಂದ ಆರೋಗ್ಯದ ಮೇಲೆ ಉಂಟಾಗುವ ಗಂಭೀರ ಹಾನಿಗಳು ಯಾವುವು ಎಂಬುದರ ಸಂಪೂರ್ಣ ವಿವರ ಇಲ್ಲಿದೆ ನೋಡಿ.

ಹೃದಯದ ಆರೋಗ್ಯ ಹಾಗೂ ರಕ್ತದೊತ್ತಡದ ಮೇಲೆ ದುಷ್ಪರಿಣಾಮ

ಅತಿಯಾಗಿ ಟೀ ಕುಡಿಯುವ ಅಭ್ಯಾಸವು ನೇರವಾಗಿ ನಿಮ್ಮ ಹೃದಯದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಟೀಯಲ್ಲಿರುವ ಕೆಲವು ಅಂಶಗಳು ದೇಹದಲ್ಲಿ ರಕ್ತದೊತ್ತಡ (Blood Pressure) ಮತ್ತು ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು (Cholesterol) ಹೆಚ್ಚಿಸಲು ಕಾರಣವಾಗುತ್ತವೆ. ಇದು ದೀರ್ಘಕಾಲದಲ್ಲಿ ಹೃದಯ ಸಂಬಂಧಿ ಗಂಭೀರ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ.

ಜೀರ್ಣಾಂಗ ವ್ಯವಸ್ಥೆಯ ಸಮಸ್ಯೆ ಮತ್ತು ಆಮ್ಲೀಯತೆ (Acidity)

ದಿನವಿಡೀ ಪದೇಪದೇ ಟೀ ಕುಡಿಯುವುದರಿಂದ ಕರುಳಿನ ಆರೋಗ್ಯ ಹದಗೆಡುತ್ತದೆ. ಇದು ತೀವ್ರವಾದ ಅಜೀರ್ಣ, ಗ್ಯಾಸ್ಟ್ರಿಕ್ ಮತ್ತು ಹೊಟ್ಟೆಯಲ್ಲಿ ಆಮ್ಲೀಯತೆಯ (Acidity) ಸಮಸ್ಯೆಯನ್ನು ಉಂಟುಮಾಡುತ್ತದೆ. ಇದರಿಂದಾಗಿ ಎದೆಉರಿ ಮತ್ತು ಹೊಟ್ಟೆ ಉಬ್ಬರದಂತ ತೊಂದರೆಗಳು ಕಾಡಬಹುದು.

ಖಾಲಿ ಹೊಟ್ಟೆಯಲ್ಲಿ ಚಹಾ ಕುಡಿಯುವುದರ ಅಡ್ಡಪರಿಣಾಮಗಳು

  • ವಾಂತಿ ಮತ್ತು ವಾಕರಿಕೆ: ಬೆಳಗ್ಗೆ ಏನೂ ತಿನ್ನದೆ ನೇರವಾಗಿ ಖಾಲಿ ಹೊಟ್ಟೆಯಲ್ಲಿ ಚಹಾ ಕುಡಿಯುವುದರಿಂದ ಜೀರ್ಣಾಂಗದ ಒಳಪದರಕ್ಕೆ ತೊಂದರೆಯಾಗಿ ಕೆಲವರಲ್ಲಿ ತಕ್ಷಣವೇ ವಾಂತಿ ಅಥವಾ ವಾಕರಿಕೆಯ ಅನುಂಟಾಗುತ್ತದೆ.

  • ದಣಿವು ಮತ್ತು ಕಿರಿಕಿರಿ: ಹಲವರು ಹುರುಪು ಬರಲಿ ಎಂದು ಖಾಲಿ ಹೊಟ್ಟೆಯಲ್ಲಿ ಟೀ ಕುಡಿಯುತ್ತಾರೆ. ಆದರೆ ಇದು ತದ್ವಿರುದ್ಧವಾಗಿ ದಿನವಿಡೀ ಅತಿಯಾದ ದಣಿವು, ಮಾನಸಿಕ ಒತ್ತಡ ಹಾಗೂ ಕಿರಿಕಿರಿಯನ್ನು ಉಂಟುಮಾಡುತ್ತದೆ.

  • ನಿದ್ರಾಹೀನತೆ: ಟೀಯಲ್ಲಿರುವ ಕೆಫೀನ್ ಅಂಶವು ಮೆದುಳಿನ ನರಗಳ ಮೇಲೆ ಪ್ರಭಾವ ಬೀರುವುದರಿಂದ ರಾತ್ರಿ ಸರಿಯಾಗಿ ನಿದ್ರೆ ಬಾರದೆ ನಿದ್ರಾಹೀನತೆ (Insomnia) ಸಮಸ್ಯೆ ಕಾಡುತ್ತದೆ.

  • ಕ್ಯಾನ್ಸರ್ ಅಪಾಯ: ಆರೋಗ್ಯ ತಜ್ಞರ ಎಚ್ಚರಿಕೆಯ ಪ್ರಕಾರ, ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ತಪ್ಪಿಲ್ಲದೆ ಚಹಾ ಕುಡಿಯುವ ರೂಢಿ ಇಟ್ಟುಕೊಂಡರೆ ಮುಂದೆ ಗಂಭೀರ ಸ್ವರೂಪದ ಪ್ರಾಸ್ಟೇಟ್ ಕ್ಯಾನ್ಸರ್ (Prostate Cancer) ಬರುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ಅಧ್ಯಯನಗಳು ತಿಳಿಸುತ್ತವೆ.

ಆರೋಗ್ಯಕರ ಸಲಹೆ:

ಚಹಾ ಕುಡಿಯುವುದನ್ನು ಸಂಪೂರ್ಣವಾಗಿ ಬಿಡಬೇಕಾಗಿಲ್ಲ, ಆದರೆ ಅದನ್ನು ಮಿತವಾಗಿ ಬಳಸುವುದು ಒಳ್ಳೆಯದು. ಅದರಲ್ಲೂ ವಿಶೇಷವಾಗಿ ಬೆಳಗ್ಗೆ ಎದ್ದ ಕೂಡಲೇ ಖಾಲಿ ಹೊಟ್ಟೆಗೆ ಟೀ ಕುಡಿಯುವ ಬದಲು ಒಂದು ಲೋಟ ಉಗುರುಬೆಚ್ಚಗಿನ ನೀರನ್ನು ಕುಡಿಯುವ ಅಭ್ಯಾಸ ಮಾಡಿಕೊಳ್ಳಿ. ಇದು ನಿಮ್ಮ ಜೀರ್ಣಕ್ರಿಯೆಯನ್ನು ಸುಧಾರಿಸುವುದಲ್ಲದೆ ಆರೋಗ್ಯವನ್ನು ಕಾಪಾಡುತ್ತದೆ.

Leave a Reply

Your email address will not be published. Required fields are marked *