೧೭ ನವೆಂಬರ್ ೨೦೨೬ · ಮಂಗಳವಾರ
ತಾಜಾ
ಬಿಸಿ ಟೀ ಅಥವಾ ಕಾಫಿ ಕುಡಿದ ತಕ್ಷಣ ನೀರು ಕುಡಿಯುತ್ತೀರಾ? ಹಾಗಾದರೆ ಈ ಗಂಭೀರ ಆರೋಗ್ಯ ಸಮಸ್ಯೆ ಕಟ್ಟಿಟ್ಟ ಬುತ್ತಿ! ಹಾಲಿಗೆ ಸಕ್ಕರೆ ಬೆರೆಸಿ ಕುಡಿಯುವ ಅಭ್ಯಾಸವಿದೆಯೇ? ಆರೋಗ್ಯದ ಮೇಲೆ ಎಷ್ಟೆಲ್ಲಾ ದುಷ್ಪರಿಣಾಮಗಳಾಗುತ್ತೆ ಗೊತ್ತಾ? ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಕಂಗೆಟ್ಟಿದ್ದೀರಾ? ಹೊಟ್ಟೆಯುಬ್ಬರ ಹಾಗೂ ಅಸಿಡಿಟಿಗೆ ಈ ಸರಳ ಅಭ್ಯಾಸಗಳೇ ರಾಮಬಾಣ! ಆರೋಗ್ಯದ ಖಜಾನೆ ಬಾಳೆಹಣ್ಣು: ದಿನಕ್ಕೊಂದು ತಿನ್ನುವುದರಿಂದ ಸಿಗುವ ಅಚ್ಚರಿಯ ಪ್ರಯೋಜನಗಳಿವು! ಊಟದ ನಂತರದ ನಡಿಗೆ: ಆರೋಗ್ಯಕ್ಕೆ ಸಂಜೀವಿನಿ ಒದಗಿಸುವ ಸರಳ ಅಭ್ಯಾಸ! ಮನೆಯ ಹಿರಿಯರ ಧೂಮಪಾನದ ಚಟ: ಮಕ್ಕಳ ಎರಾಳಕ್ಕೆ ಬರ್ತಿದೆ ‘ಥರ್ಡ್ ಹ್ಯಾಂಡ್ ಸ್ಮೋಕ್’ ಮಾರಕ ಅಪಾಯ! ಚಳಿಗಾಲದಲ್ಲಿ ಹೂಕೋಸು ಸೇವನೆ: ಆರೋಗ್ಯದ ಗಣಿ, ಈ ಅದ್ಭುತ ಪ್ರಯೋಜನಗಳು ನಿಮಗ ಗೊತ್ತೇ? ಎಚ್ಚರ: ನಿಮ್ಮ ಸ್ಮಾರ್ಟ್‌ಫೋನ್ ಸ್ಫೋಟಗೊಳ್ಳಲು ನೀವೇ ಮಾಡುತ್ತಿರುವ ಈ 4 ತಪ್ಪುಗಳೇ ಕಾರಣವೇ?
ದಿನದ ಸುದ್ದಿ

ಬಿಸಿ ಟೀ ಅಥವಾ ಕಾಫಿ ಕುಡಿದ ತಕ್ಷಣ ನೀರು ಕುಡಿಯುತ್ತೀರಾ? ಹಾಗಾದರೆ ಈ ಗಂಭೀರ ಆರೋಗ್ಯ ಸಮಸ್ಯೆ ಕಟ್ಟಿಟ್ಟ ಬುತ್ತಿ!

drinking-water-after-hot-tea-side-effects-kannada

ದಿನದ ಪ್ರಾರಂಭವು ಒಂದು ಕಪ್ ಬಿಸಿ ಬಿಸಿ ಚಹಾ ಅಥವಾ ಕಾಫಿಯೊಂದಿಗೆ ಆರಂಭವಾಗುವವರ ಸಂಖ್ಯೆಯೇ ದೊಡ್ಡದಿದೆ. ಹಲವರಿಗೆ ಕೆಲಸದ ಮಧ್ಯೆಯೂ ಸುಸ್ತು ಕರಗಲು ಟೀ ಬೇಕೇಬೇಕು. ಆದರೆ, ಚಹಾ ಅಥವಾ ಕಾಫಿ ಕುಡಿದ ತಕ್ಷಣವೇ ನೀರು ಕುಡಿಯುವ ಕೆಟ್ಟ ಅಭ್ಯಾಸ ನಿಮ್ಮಲಿದ್ದರೆ, ಕೂಡಲೇ ಎಚ್ಚೆತ್ತುಕೊಳ್ಳುವುದು ಒಳ್ಳೆಯದು. ಆರೋಗ್ಯ ತಜ್ಞರ ಪ್ರಕಾರ, ಬಿಸಿ ಪಾನೀಯದ ಬೆನ್ನಲ್ಲೇ ನೀರು ಕುಡಿಯುವುದರಿಂದ ದೇಹದ ಆಂತರಿಕ ಅಂಗಗಳ ಮೇಲೆ ತೀವ್ರವಾದ ದುಷ್ಪರಿಣಾಮ ಉಂಟಾಗುತ್ತದೆ.

​ಬಿಸಿ ಟೀ-ಕಾಫಿ ಬಳಿಕ ನೀರು ಕುಡಿದರೆ ಉಂಟಾಗುವ ಪ್ರಮುಖ ಅಪಾಯಗಳು:

  • ​ಹಲ್ಲಿನ ದಂತಕವಚಕ್ಕೆ ಹಾನಿ: ಬಿಸಿ ಬಿಸಿ ಚಹಾ ಸೇವಿಸಿದ ತಕ್ಷಣವೇ ತಣ್ಣನೆಯ ನೀರನ್ನು ಕುಡಿಯುವುದರಿಂದ ಬಾಯಿಯ ಉಷ್ಣತೆಯಲ್ಲಿ ಹಠತ್ ವ್ಯತ್ಯಾಸವಾಗುತ್ತದೆ. ಇದು ಹಲ್ಲಿನ ನರಗಳನ್ನು ದುರ್ಬಲಗೊಳಿಸುವುದಲ್ಲದೆ, ಹಲ್ಲಿನ ರಕ್ಷಣಾ ಕವಚವಾದ ‘ಎನಾಮಲ್’ (Enamel) ಅನ್ನು ಸಡಿಲಗೊಳಿಸಿ ಹಲ್ಲುಗಳು ಬೇಗನೆ ಹಾಳಾಗಲು ಕಾರಣವಾಗುತ್ತದೆ.
  • ​ಅಲ್ಸರ್ ಮತ್ತು ಅಸಿಡಿಟಿ ಸಮಸ್ಯೆ: ಬಿಸಿ ಪಾನೀಯದ ತಕ್ಷಣ ನೀರು ಸೇರುವುದಿರಿಂದ ಜೀರ್ಣಾಂಗ ವ್ಯವಸ್ಥೆಯ ಮೇಲಿನ ಒತ್ತಡ ಹೆಚ್ಚಾಗುತ್ತದೆ. ಇದು ಹೊಟ್ಟೆಯಲ್ಲಿ ಆಮ್ಲೀಯತೆಯ (Acidity) ಮಟ್ಟವನ್ನು ಹೆಚ್ಚಿಸಿ, ಮುಂದೆ ಗ್ಯಾಸ್ಟ್ರಿಕ್ ಹಾಗೂ ಹೊಟ್ಟೆಯಲ್ಲಿ ಹುಣ್ಣು (Stomach Ulcer) ಉಂಟಾಗಲು ದಾರಿ ಮಾಡಿಕೊಡುತ್ತದೆ.
  • ​ಮೂಗಿನಿಂದ ರಕ್ತಸ್ರಾವ (Nose Bleeding): ಶೀತ ಮತ್ತು ಉಷ್ಣತೆಯ ವಿಪರೀತ ವ್ಯತ್ಯಾಸವನ್ನು ನಮ್ಮ ದೇಹವು ಒಂದೇ ಸಮನೆ ಸ್ವೀಕರಿಸಲಾರದು. ಬಿಸಿಯಾದ ಟೀ ಕುಡಿದ ತಕ್ಷಣ ತಣ್ಣೀರು ಕುಡಿಯುವುದರಿಂದ ಉಷ್ಣಾಂಶದ ಸಮತೋಲನ ತಪ್ಪಿ, ಕೆಲವರಲ್ಲಿ ಮೂಗಿನಿಂದ ರಕ್ತಸ್ರಾವವಾಗುವ ಸಾಧ್ಯತೆಯೂ ಇರುತ್ತದೆ.
  • ​ಗಂಟಲು ನೋವು ಮತ್ತು ಶೀತ: ಬಿಸಿ ಮತ್ತು ತಣ್ಣನೆಯದ್ರವಗಳ ತೀವ್ರ ಸಂಯೋಜನೆಯು ಗಂಟಲಿನ ಲೋಳೆಪೊರೆಯ ಮೇಲೆ ಪರಿಣಾಮ ಬೀರುತ್ತದೆ. ಇದು ಗಂಟಲು ನೋವು, ಕೆಮ್ಮು, ಕಫ ಹಾಗೂ ಶೀತದ ಸಮಸ್ಯೆಗೆ ಆಹ್ವಾನ ನೀಡುತ್ತದೆ.

​ಆರೋಗ್ಯ ತಜ್ಞರ ಸಲಹೆ ಏನು?

​ನೀವು ಟೀ ಅಥವಾ ಕಾಫಿ ಕುಡಿಯಲೇಬೇಕೆಂದಿದ್ದರೆ, ಬಿಸಿ ಪಾನೀಯ ಸೇವನೆಗೂ ಮುನ್ನ ಅಥವಾ ಟೀ ಕುಡಿದು ಕನಿಷ್ಠ 20 ರಿಂದ 30 ನಿಮಿಷಗಳ ಬಳಿಕ ಮಾತ್ರ ನೀರನ್ನು ಕುಡಿಯುವ ಅಭ್ಯಾಸ ಮಾಡಿಕೊಳ್ಳಿ. ಇದು ಆರೋಗ್ಯವನ್ನು ಕಾಪಾಡಲು ಅತ್ಯಂತ ಸುರಕ್ಷಿತ ಮಾರ್ಗವಾಗಿದೆ.

Leave a Reply

Your email address will not be published. Required fields are marked *