೧೫ ನವೆಂಬರ್ ೨೦೨೬ · ಭಾನುವಾರ
ತಾಜಾ
ಊಟದ ನಂತರದ ನಡಿಗೆ: ಆರೋಗ್ಯಕ್ಕೆ ಸಂಜೀವಿನಿ ಒದಗಿಸುವ ಸರಳ ಅಭ್ಯಾಸ! ಮನೆಯ ಹಿರಿಯರ ಧೂಮಪಾನದ ಚಟ: ಮಕ್ಕಳ ಎರಾಳಕ್ಕೆ ಬರ್ತಿದೆ ‘ಥರ್ಡ್ ಹ್ಯಾಂಡ್ ಸ್ಮೋಕ್’ ಮಾರಕ ಅಪಾಯ! ಚಳಿಗಾಲದಲ್ಲಿ ಹೂಕೋಸು ಸೇವನೆ: ಆರೋಗ್ಯದ ಗಣಿ, ಈ ಅದ್ಭುತ ಪ್ರಯೋಜನಗಳು ನಿಮಗ ಗೊತ್ತೇ? ಎಚ್ಚರ: ನಿಮ್ಮ ಸ್ಮಾರ್ಟ್‌ಫೋನ್ ಸ್ಫೋಟಗೊಳ್ಳಲು ನೀವೇ ಮಾಡುತ್ತಿರುವ ಈ 4 ತಪ್ಪುಗಳೇ ಕಾರಣವೇ? ಉತ್ತಮ ನಿದ್ರೆ ಪಡೆಯಲು ಹೀಗೆ ಮಾಡಿ: ಇಂದಿನ ಒತ್ತಡದ ಬದುಕಿಗೆ ಇಲ್ಲಿದೆ ಸರಳ ಹಾಗೂ ಪರಿಣಾಮಕಾರಿ ಆರೋಗ್ಯ ಟಿಪ್ಸ್ ಕಲ್ಲಂಗಡಿ ಹಣ್ಣಿನ ಬೀಜದಲ್ಲಿದೆ ಆರೋಗ್ಯದ ಖಜಾನೆ: ಇನ್ನುಮುಂದೆ ಇವನ್ನು ಎಸೆಯಬೇಡಿ! ಪ್ಯಾಪಿಲ್ಲರಿ ಥೈರಾಯ್ಡ್ ಕ್ಯಾನ್ಸರ್: ಆರಂಭಿಕ ಲಕ್ಷಣಗಳು, ಕಾರಣಗಳು ಮತ್ತು ಚಿಕಿತ್ಸಾ ವಿಧಾನಗಳ ಸಂಪೂರ್ಣ ಮಾಹಿತಿ ಹೃದಯಕ್ಕೂ ಬೇಕು ಕಣ್ರೀ ಮಸಾಜ್: ಹೃದಯದ ಬ್ಲಾಕ್‌ ತೆರೆಯಲು ಪರ್ವತಾಸನ ಅತ್ಯುತ್ತಮ!
ದಿನದ ಸುದ್ದಿ

ಊಟದ ನಂತರದ ನಡಿಗೆ: ಆರೋಗ್ಯಕ್ಕೆ ಸಂಜೀವಿನಿ ಒದಗಿಸುವ ಸರಳ ಅಭ್ಯಾಸ!

post-meal-walking-benefits-kannada

ಆಹಾರ ಸೇವಿಸಿದ ತಕ್ಷಣ ಕಠಿಣ ವ್ಯಾಯಾಮ ಮಾಡುವುದು ಅಥವಾ ವೇಗವಾಗಿ ಓಡುವುದು ಜೀರ್ಣಕ್ರಿಯೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ಆರೋಗ್ಯ ತಜ್ಞರು ಎಚ್ಚರಿಸಿದ್ದಾರೆ. ಊಟದ ತಕ್ಷಣವೇ ಅತಿಯಾದ ದೈಹಿಕ ಶ್ರಮ ವಹಿಸುವುದರಿಂದ ರಕ್ತಸಂಚಾರವು ಜೀರ್ಣಾಂಗವ್ಯೂಹದ ಬದಲು ಕೈಕಾಲುಗಳ ಕಡೆಗೆ ಹರಿಯುತ್ತದೆ. ಇದು ಹೊಟ್ಟೆ ಉಬ್ಬರ, ಅಜೀರ್ಣ ಮತ್ತು ಗ್ಯಾಸ್ಟ್ರಿಕ್ ಸಮಸ್ಯೆಗೆ ಪ್ರಮುಖ ಕಾರಣವಾಗುತ್ತದೆ.

​ಹಾಗಾದರೆ ಊಟದ ನಂತರದ ಸರಿಯಾದ ಅಭ್ಯಾಸ ಹೇಗಿರಬೇಕು? ಈ ಕುರಿತು ಪ್ರಮುಖ ಆರೋಗ್ಯ ಮಾಹಿತಿಗಳು ಇಲ್ಲಿವೆ:

​1. ಸರಿಯಾದ ಸಮಯ ಮತ್ತು ವಿಶ್ರಾಂತಿ

​ಆಹಾರ ಸೇವಿಸಿದ ಬಳಿಕ ನೇರವಾಗಿ ಓಡುವುದು ಅಥವಾ ಮಲಗುವುದನ್ನು ಮಾಡಬಾರದು. ಊಟ ಮುಗಿದ ನಂತರ ಕನಿಷ್ಠ 10 ರಿಂದ 15 ನಿಮಿಷಗಳ ಕಾಲ ಹಗುರವಾಗಿ ವಿಶ್ರಾಂತಿ ಪಡೆಯುವುದು ಅತ್ಯಂತು ಸೂಕ್ತ. ನಂತರ ನಿಧಾನವಾದ ಹಾಗೂ ಹಗುರವಾದ ನಡಿಗೆಯನ್ನು (Light Walk) ರೂಢಿಸಿಕೊಳ್ಳಬೇಕು.

​2. ಜೀರ್ಣಕ್ರಿಯೆ ಸರಾಗ

​ಊಟದ ನಂತರದ ಲಘು ನಡಿಗೆಯು ಜೀರ್ಣಾಂಗ ವ್ಯವಸ್ಥೆಯನ್ನು ಉತ್ತೇಜಿಸುತ್ತದೆ. ಇದು ಹೊಟ್ಟೆಯಲ್ಲಿ ಗ್ಯಾಸ್, ಅಸಿಡಿಟಿ ಮತ್ತು ಹುಳಿತೇಗಿನಂತಹ ತೊಂದರೆಗಳನ್ನು ತಡೆಯುವುದರೊಂದಿಗೆ ಜೀರ್ಣಕ್ರಿಯೆಯನ್ನು ಚುರುಕುಗೊಳಿಸುತ್ತದೆ.

​3. ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣ

​ಮಧುಮೇಹ ರೋಗಿಗಳಿಗೆ ಊಟದ ನಂತರದ ನಡಿಗೆಯು ಅತ್ಯಂತ ಪ್ರಯೋಜನಕಾರಿಯಾಗಿದೆ. ಇದು ರಕ್ತದಲ್ಲಿ ಗ್ಲೂಕೋಸ್ ಮಟ್ಟ ಹಠಾತ್ ಏರಿಕೆಯಾಗುವುದನ್ನು ತಡೆಗಟ್ಟಿ, ಸಕ್ಕರೆ ಪ್ರಮಾಣವನ್ನು ಸಮತೋಲನದಲ್ಲಿಡಲು ಸಹಾಯ ಮಾಡುತ್ತದೆ.

​ತಜ್ಞರ ಸಲಹೆ

​ಆರೋಗ್ಯಕರ ಜೀವನಶೈಲಿಗಾಗಿ ಪ್ರತಿದಿನದ ಊಟದ ಬಳಿಕ ಕೇವಲ 10 ರಿಂದ 15 ನಿಮಿಷಗಳ ಕಾಲ ನಿಧಾನವಾಗಿ ನಡೆದಾಡುವ ಅಭ್ಯಾಸವನ್ನು ಮಾಡಿಕೊಳ್ಳಿ. ಇದು ದೈಹಿಕ ಫಿಟ್‌ನೆಸ್ ಜತೆಗೆ ಒಟ್ಟಾರೆ ಆರೋಗ್ಯವನ್ನು ಕಾಪಾಡುತ್ತದೆ.

Leave a Reply

Your email address will not be published. Required fields are marked *