೩ ನವೆಂಬರ್ ೨೦೨೬ · ಮಂಗಳವಾರ
ತಾಜಾ
ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಹಸಿ ಬೆಳ್ಳುಳ್ಳಿ ಸೇವಿಸಿದರೆ ಎಷ್ಟೆಲ್ಲಾ ಲಾಭಗಳಿವೆ ಗೊತ್ತಾ? ಇಲ್ಲಿದೆ ಆರೋಗ್ಯ ರಹಸ್ಯ! ಅಲೋವೆರಾ ಜಾದೂ: ತ್ವಚೆಯ ಕಾಂತಿಯಿಂದ ಹಿಡಿದು ತಲೆನೋವಿಗೆ ಇಲ್ಲಿದೆ ದಿವ್ಯೌಷಧಿ! ಅಸಿಡಿಟಿ ಹಾಗೂ ಎದೆಯುರಿಯಿಂದ ರೋಸಿಹೋಗಿದ್ದೀರಾ? ಇಲ್ಲಿದೆ ಕಿಚನ್‌ನಲ್ಲೇ ಸಿಗುವ ರಾಮಬಾಣ ಮನೆಮದ್ದು! ದೇಹದ ತೂಕ ಇಳಿಸಲು ಹಾಗೂ ರೋಗನಿರೋಧಕ ಶಕ್ತಿಗೆ ‘ಸೂರ್ಯ ಮುದ್ರೆ’ಯ ಅದ್ಭುತ ಪ್ರಯೋಜನಗಳು! ಹಲ್ಲುನೋವಿನಿಂದ ಸುಲಭವಾಗಿ ಮುಕ್ತಿ ಪಡೆಯಲು ಇಲ್ಲಿದೆ ಸರಳ ಮನೆಮದ್ದುಗಳು! ಬೆಳಿಗ್ಗೆಯಿಂದ ರಾತ್ರಿವರೆಗೆ ಕಾಫಿ ಕುಡಿಯಲು ಸರಿಯಾದ ಸಮಯ ಯಾವುದು? ತಜ್ಞರ ಅಚ್ಚರಿಯ ಸಲಹೆಗಳು ಶುಂಠಿ ಸೇವನೆಯ ಅತಿ ದೊಡ್ಡ ಆರೋಗ್ಯ ರಹಸ್ಯಗಳು: ಪ್ರತಿದಿನ ಒಂದು ತುಂಡು ತಿನ್ನುವುದರಿಂದ ಎಷ್ಟೆಲ್ಲಾ ಲಾಭಗಳಿವೆ ಗೊತ್ತಾ? ಬೇಸಿಗೆಯಲ್ಲಿ ಆರೋಗ್ಯ ಕಾಪಾಡಲು ಈ 4 ತರಕಾರಿಗಳು ಅತ್ಯಗತ್ಯ: ಇಂದೇ ನಿಮ್ಮ ಡಯಟ್‌ನಲ್ಲಿರಲಿ!
ದಿನದ ಸುದ್ದಿ

ದೇಹದ ತೂಕ ಇಳಿಸಲು ಹಾಗೂ ರೋಗನಿರೋಧಕ ಶಕ್ತಿಗೆ ‘ಸೂರ್ಯ ಮುದ್ರೆ’ಯ ಅದ್ಭುತ ಪ್ರಯೋಜನಗಳು!

Woman performing Surya Mudra for weight loss and digestion benefits in Kannada

ಆಧುನಿಕ ಧಾವಂತದ ಜೀವನಶೈಲಿಯಲ್ಲಿ ಕಳಪೆ ಆಹಾರಪದ್ಧತಿ ಹಾಗೂ ವ್ಯಾಯಾಮದ ಕೊರತೆಯಿಂದಾಗಿ ಅನೇಕ ಆರೋಗ್ಯ ಸಮಸ್ಯೆಗಳು ನಮ್ಮನ್ನು ಕಾಡುತ್ತವೆ. ಇವುಗಳಲ್ಲಿ ಅಧಿಕ ತೂಕ, ಜೀರ್ಣಕ್ರಿಯೆ ದೋಷ ಹಾಗೂ ಶೀತ-ಕೆಮ್ಮಿನಂತಹ ಕಫ ಸಂಬಂಧಿತ ಕಾಯಿಲೆಗಳು ಪ್ರಮುಖವಾದವು. ಇಂತಹ ಸಮಸ್ಯೆಗಳಿಗೆ ಯಾವುದೇ ಔಷಧವಿಲ್ಲದೆ, ಕೇವಲ ಬೆರಳುಗಳ ಸನ್ನೆ ಅಥವಾ ಯೋಗ ಮುದ್ರೆಗಳ ಮೂಲಕ ಪರಿಹಾರ ಕಂಡುಕೊಳ್ಳಬಹುದು. ಅಂತಹ ಪ್ರಮುಖ ಯೋಗ ಭಂಗಿಗಳಲ್ಲಿ ‘ಸೂರ್ಯ ಮುದ್ರೆ’ (Surya Mudra) ಕೂಡ ಒಂದಾಗಿದೆ. ಈ ಮುದ್ರೆಯನ್ನು ನಿಯಮಿತವಾಗಿ ಅಭ್ಯಾಸ ಮಾಡುವುದರಿಂದ ದೇಹದ ಆಂತರಿಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

ಸೂರ್ಯ ಮುದ್ರೆ ಎಂದರೇನು ಮತ್ತು ಮಾಡುವುದು ಹೇಗೆ?

ಸೂರ್ಯ ಮುದ್ರೆಯು ಶರೀರದಲ್ಲಿ ಅಗ್ನಿ ತತ್ವವನ್ನು (ಉಷ್ಣಾಂಶ) ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

  • ಮಾಡುವ ವಿಧಾನ: ನಿಮ್ಮ ಎರಡೂ ಕೈಗಳ ಉಂಗುರದ ಬೆರಳನ್ನು (Ring Finger) ಮಡಚಿ, ಅದರ ತುದಿಯನ್ನು ಹೆಬ್ಬೆರಳಿನ ಮೂಲದ ಬುಡಕ್ಕೆ ತಾಗಿಸಿ. ನಂತರ ಹೆಬ್ಬೆರಳನ್ನು ಉಂಗುರದ ಬೆರಳಿನ ಮೇಲಿಟ್ಟು ಲಘುವಾಗಿ ಒತ್ತಿ ಹಿಡಿಯಬೇಕು. ಉಳಿದ ಮೂರು ಬೆರಳುಗಳನ್ನು ನೇರವಾಗಿ ಅಥವಾ ಸಡಿಲವಾಗಿವಿರಿಸಿ.

ಸೂರ್ಯ ಮುದ್ರೆಯ ಪ್ರಮುಖ ಆರೋಗ್ಯ ಪ್ರಯೋಜನಗಳು

  • ದೇಹದ ಕೊಬ್ಬು ಮತ್ತು ತೂಕ ಇಳಿಕೆ: ಈ ಮುದ್ರೆಯಲ್ಲಿ ಧ್ಯಾನ ಅಥವಾ ಅಭ್ಯಾಸ ಮಾಡುವುದರಿಂದ ದೇಹದ ಉಷ್ಣತೆ ಗಣನೀಯವಾಗಿ ಹೆಚ್ಚಾಗುತ್ತದೆ. ಇದು ಚಯಾಪಚಯ ಕ್ರಿಯೆಯನ್ನು (Metabolism) ಚುರುಕುಗೊಳಿಸಿ, ಶರೀರದಲ್ಲಿರುವ ಅಧಿಕ ಕೊಬ್ಬನ್ನು ಕರಗಿಸಲು ಮತ್ತು ದೇಹದ ತೂಕವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ.

  • ಕಫ ವಿಕಾರಗಳಿಗೆ ರಾಮಬಾಣ: ಶೀತ, ಕೆಮ್ಮು, ದಮ್ಮು (ಆಸ್ತಮಾ) ಹಾಗೂ ಮೂಗಿಗೆ ಸಂಬಂಧಿಸಿದ ಅಲರ್ಜಿ ಅಥವಾ ತೊಂದರೆಗಳಿಂದ ಬಳಲುತ್ತಿರುವವರಿಗೆ ಈ ಮುದ್ರೆಯು ಅತ್ಯಂತ ಪ್ರಯೋಜನಕಾರಿಯಾಗಿದೆ. ಇದು ದೇಹದಲ್ಲಿನ ಕಫ ದೋಷವನ್ನು ಸಮತೋಲನಗೊಳಿಸುತ್ತದೆ.

  • ಜೀರ್ಣಕ್ರಿಯೆ ಉತ್ತಮ: ಈ ಮುದ್ರೆಯ ನಿಯಮಿತ ಅಭ್ಯಾಸದಿಂದ ಜೀರ್ಣಾಂಗ ವ್ಯವಸ್ಥೆಯು ಚುರುಕುಗೊಂಡು ಜೀರ್ಣಕ್ರಿಯೆ ತುಂಬಾನೇ ಉತ್ತಮವಾಗುತ್ತದೆ. ಅಜೀರ್ಣ ಮತ್ತು ಮಲಬದ್ಧತೆಯಂತಹ ಸಮಸ್ಯೆಗಳು ದೂರವಾಗುತ್ತವೆ.

  • ಮಾನಸಿಕ ಒತ್ತಡ ಹಾಗೂ ಆತಂಕ ನಿವಾರಣೆ: ಶರೀರ ಮತ್ತು ಮನಸ್ಸಿನ ಮೇಲೆ ಸಕಾರಾತ್ಮಕ ಪ್ರಭಾವ ಬೀರುವ ಸೂರ್ಯ ಮುದ್ರೆ, ಅನಗತ್ಯ ಆತಂಕ ಹಾಗೂ ಮಾನಸಿಕ ಒತ್ತಡವನ್ನು ಕಡಿಮೆ ಮಾಡಿ ಮನಸ್ಸಿಗೆ ಶಾಂತಿ ಹಾಗೂ ಸ್ಥಿರತೆಯನ್ನು ಒದಗಿಸುತ್ತದೆ.

Leave a Reply

Your email address will not be published. Required fields are marked *