೫ ನವೆಂಬರ್ ೨೦೨೬ · ಗುರುವಾರ
ತಾಜಾ
ಮೆದುಳಿನ ಗಡ್ಡೆಯ ಆರಂಭಿಕ ಲಕ್ಷಣಗಳು: ತಲೆನೋವು, ವಾಂತಿ ಹಾಗೂ ದೃಷ್ಟಿ ದೋಷವನ್ನು ಎಂದಿಗೂ ನಿರ್ಲಕ್ಷಿಸಬೇಡಿ! ಮದ್ಯಪಾನ ಮಾಡದವರಲ್ಲೂ ಲಿವರ್ ಹಾನಿ ಹೆಚ್ಚಾಗಲು ಕಾರಣವೇನು? ಇಲ್ಲಿದೆ ಸಂಪೂರ್ಣ ಮಾಹಿತಿ ತೂಕ ಇಳಿಸಲು ಯೋಚಿಸುತ್ತಿದ್ದೀರಾ? ಆರೋಗ್ಯಕರ ಡಯಟ್‌ಗಾಗಿ ಈ 7 ಸರಳ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿ! ನಿಮ್ಮ ಮನೆಯ ಅಂಗಳದಲ್ಲಿದೆಯೇ ಅದ್ಭುತ ಔಷಧೀಯ ಗುಣವುಳ್ಳ ‘ತುಂಬೆ’ ಗಿಡ? ಇಲ್ಲಿದೆ ಇದರ ಅಚ್ಚರಿಯ ಪ್ರಯೋಜನಗಳು! ಅತಿಯಾಗಿ ಚಹಾ ಕುಡಿಯುವ ಅಭ್ಯಾಸವಿದೆಯೇ? ಹಾಗಾದರೆ ಈ ಗಂಭೀರ ಆರೋಗ್ಯ ಅಪಾಯಗಳು ಕಟ್ಟಿಟ್ಟಬುದ್ಧಿ! ಯಕೃತ್ತಿನ ಆರೋಗ್ಯದ ಕಡೆ ಇರಲಿ ಎಚ್ಚರ: ಲಿವರ್‌ ಹಾನಿಯಾದರೆ ದೇಹದಲ್ಲಿ ಗೋಚರಿಸುವ ಪ್ರಮುಖ ಆರಂಭಿಕ ಲಕ್ಷಣಗಳಿವು! ಆರೋಗ್ಯಕ್ಕೆ ತುಪ್ಪ ಒಳ್ಳೆಯದೇ? ಯಾವ ತುಪ್ಪ ಉತ್ತಮ ಮತ್ತು ಸೇವಿಸುವ ಸರಿಯಾದ ವಿಧಾನ ಇಲ್ಲಿದೆ ಮರುಭೂಮಿ ಕಪ್ಪೆಯ ವಿಷದಿಂದ ಖಿನ್ನತೆಗೆ ರಾಮಬಾಣ: ಹೊಸ ನಾಸಲ್ ಸ್ಪ್ರೇ ಸಂಶೋಧನೆ
ದಿನದ ಸುದ್ದಿ

ತೂಕ ಇಳಿಸಲು ಯೋಚಿಸುತ್ತಿದ್ದೀರಾ? ಆರೋಗ್ಯಕರ ಡಯಟ್‌ಗಾಗಿ ಈ 7 ಸರಳ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿ!

ತೂಕ ಇಳಿಸಲು ಆರೋಗ್ಯಕರ ಆಹಾರ ಮತ್ತು ಡಯಟ್ ಸಲಹೆಗಳು

ಇತ್ತೀಚಿನ ದಿನಗಳಲ್ಲಿ ಬದಲಾದ ಜೀವನಶೈಲಿ ಮತ್ತು ತಪ್ಪು ಆಹಾರ ಪದ್ಧತಿಯಿಂದಾಗಿ ಅಧಿಕ ತೂಕ ಹಾಗೂ ಬೊಜ್ಜಿನ ಸಮಸ್ಯೆ ಎಲ್ಲೆಡೆ ಹೆಚ್ಚಾಗುತ್ತಿದೆ. ತೂಕ ಇಳಿಸಿಕೊಳ್ಳಲು (Weight Loss) ಕೆಲವರು ಹಸಿವಿನಿಂದ ಇರುತ್ತಾರೆ ಅಥವಾ ಅಶಾಸ್ತ್ರೀಯ ಡಯಟ್ ಪದ್ಧತಿಗಳನ್ನು ಅನುಸರಿಸಿ ಆರೋಗ್ಯ ಹಾಳುಮಾಡಿಕೊಳ್ಳುತ್ತಾರೆ. ಆದರೆ, ಯಾವುದೇ ಅಡ್ಡಪರಿಣಾಮಗಳಿಲ್ಲದೆ ಆರೋಗ್ಯಕರವಾಗಿ ತೂಕ ಕರಗಿಸಲು ಕೆಲವು ಸರಳ ಹಾಗೂ ಪ್ರಮುಖ ನಿಯಮಗಳನ್ನು ಅಳವಡಿಸಿಕೊಳ್ಳುವುದು ಅತ್ಯಗತ್ಯ.

ಡಯಟ್ ಮಾಡುವವರು ಮತ್ತು ಫಿಟ್‌ನೆಸ್ ಕಾಪಾಡಿಕೊಳ್ಳಲು ಬಯಸುವವರು ದಿನನಿತ್ಯದ ಜೀವನದಲ್ಲಿ ಗಮನಿಸಬೇಕಾದ ಪ್ರಮುಖ 7 ಅಂಶಗಳ ವಿವರ ಇಲ್ಲಿದೆ:

1. ಸರಿಯಾದ ಸಮಯಕ್ಕೆ ಆಹಾರ ಸೇವನೆ ಅಭ್ಯಾಸ ಮಾಡಿಕೊಳ್ಳಿ

ಅನಿಯಮಿತವಾಗಿ ಊಟ ಮಾಡುವುದರಿಂದ ಜೀರ್ಣಾಂಗ ವ್ಯವಸ್ಥೆಯ ಕಾರ್ಯಕ್ಷಮತೆ ಕುಂಟಿತಗೊಳ್ಳುತ್ತದೆ. ಪ್ರತಿದಿನ ಸರಿಯಾದ ಸಮಯಕ್ಕೆ ಉಪಹಾರ, ಮಧ್ಯಾಹ್ನದ ಊಟ ಮತ್ತು ರಾತ್ರಿ ಭೋಜನವನ್ನು ಮಾಡುವುದರಿಂದ ಚಯಾಪಚಯ ಕ್ರಿಯೆ (Metabolism) ಉತ್ತಮವಾಗಿ ನಡೆದು ದೇಹದಲ್ಲಿ ಅನಗತ್ಯ ಕೊಬ್ಬು ಸಂಗ್ರಹವಾಗುವುದನ್ನು ತಡೆಯಬಹುದು.

2. ಸಕ್ಕರೆ ಮತ್ತು ಸಿಹಿ ಪದಾರ್ಥಗಳಿಂದ ದೂರವಿರಿ

ತೂಕ ಇಳಿಕೆಯ ಹಾದಿಯಲ್ಲಿರುವವರು ಸಕ್ಕರೆ ಸೇವನೆಗೆ ಸಂಪೂರ್ಣ ತಿಲಾಂಂಜಲಿ ಇಡುವುದು ಒಳ್ಳೆಯದು. ಟೀ, ಕಾಫಿ ಅಥವಾ ಕೃತಕ ಪಾನೀಯಗಳಲ್ಲಿ ಬಳಸುವ ಅಧಿಕ ಸಕ್ಕರೆಯು ದೇಹದಲ್ಲಿ ಕ್ಯಾಲೋರಿಗಳನ್ನು ಹೆಚ್ಚಿಸುವುದಲ್ಲದೆ, ಬೊಜ್ಜು ಹೆಚ್ಚಾಗಲು ಪ್ರಮುಖ ಕಾರಣವಾಗುತ್ತದೆ. ಇದರ ಬದಲಿಗೆ ನೈಸರ್ಗಿಕ ಸಿಹಿಯನ್ನು ಆಯ್ದುಕೊಳ್ಳಿ.

3. ಕಡಿಮೆ ಕ್ಯಾಲೋರಿ ಹಾಗೂ ಪೌಷ್ಟಿಕ ಆಹಾರಗಳಿಗೆ ಒತ್ತು ನೀಡಿ

ನಿಮ್ಮ ನಿತ್ಯದ ಪ್ಲೇಟ್‌ನಲ್ಲಿ ಹೆಚ್ಚಿನ ಕ್ಯಾಲೋರಿ ಇರುವ ಜಂಕ್ ಫುಡ್‌ಗಳ ಬದಲು, ಕಡಿಮೆ ಕ್ಯಾಲೋರಿಗಳನ್ನು ಹೊಂದಿರುವ ಹಣ್ಣುಗಳು, ತರಕಾರಿಗಳು ಮತ್ತು ಸೊಪ್ಪುಗಳನ್ನು ಸೇರಿಸಿ. ಇದು ಹೊಟ್ಟೆ ತುಂಬಿದ ಅನುಭವ ನೀಡುವುದರೊಂದಿಗೆ ದೇಹಕ್ಕೆ ಅಗತ್ಯವಾದ ಶಕ್ತಿಯನ್ನು ಒದಗಿಸುತ್ತದೆ.

4. ಕೆಬ್ಬು ಮತ್ತು ಕಾರ್ಬೋಹೈಡ್ರೇಟ್ಸ್ ಯುಕ್ತ ಆಹಾರ ಮಿತಿಮೀರದಿರಲಿ

ಎಣ್ಣೆಯಲ್ಲಿ ಕರಿದ ತಿಂಡಿಗಳು, ಫಾಸ್ಟ್ ಫುಡ್ ಮತ್ತು ಅತಿ ಹೆಚ್ಚು ಕಾರ್ಬೋಹೈಡ್ರೇಟ್ ಇರುವ ಪದಾರ್ಥಗಳು ದೇಹದಲ್ಲಿ ಕೊಬ್ಬಿನಾಂಶವನ್ನು (Fat) ದ್ವಿಗುಣಗೊಳಿಸುತ್ತವೆ. ಇಂತಹ ಆಹಾರಗಳನ್ನು ಸಂಪೂರ್ಣವಾಗಿ ಅಥವಾ ಸಾಧ್ಯವಾದಷ್ಟು ಮಟ್ಟಿಗೆ ಕಡಿಮೆ ಮಾಡುವುದು ಫಿಟ್‌ನೆಸ್ ಗುರಿ ತಲುಪಲು ಬಹಳ ಮುಖ್ಯ.

5. ಪ್ರೋಟೀನ್ ಮತ್ತು ಫೈಬರ್ ಭರಿತ ಆಹಾರಗಳೇ ಶ್ರೇಷ್ಠ

ಡಯಟ್ ಮಾಡುವಾಗ ಪ್ರೋಟೀನ್ (Protein) ಮತ್ತು ನಾರಿನಾಂಶ (Fiber) ಇರುವ ಆಹಾರಗಳು ಅತ್ಯಂತು ಅವಶ್ಯಕ. ಇದು ಪದೇ ಪದೇ ಹಸಿವಾಗದಂತೆ ತಡೆಯುತ್ತದೆ, ಸ್ನಾಯುಗಳ ಬಲವರ್ಧನೆಗೆ ಸಹಾಯ ಮಾಡುತ್ತದೆ ಮತ್ತು ಜೀರ್ಣಕ್ರಿಯೆಯನ್ನು ಸರಾಗಗೊಳಿಸುತ್ತದೆ.

6. ಪ್ರತಿದಿನ ತಪ್ಪದೆ ವ್ಯಾಯಾಮ ಅಥವಾ ಯೋಗ ಮಾಡಿ

ಕೇವಲ ಆಹಾರ ನಿಯಂತ್ರಣದಿಂದ ಮಾತ್ರವಲ್ಲದೆ, ದೈಹಿಕ ಚಟುವಟಿಕೆಗಳು ಕೂಡ ತೂಕ ಇಳಿಕೆಯಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಪ್ರತಿದಿನ ಕನಿಷ್ಠ 30 ನಿಮಿಷಗಳ ಕಾಲ ವಾಕಿಂಗ್, ಜಾಗಿಂಗ್, ಜಿಮ್ ಅಥವಾ ಯೋಗಾಸನಗಳನ್ನು ಅಭ್ಯಾಸ ಮಾಡುವುದರಿಂದ ದೇಹದ ಕ್ಯಾಲೋರಿಗಳು ವೇಗವಾಗಿ ದಹಿಸುತ್ತವೆ.

7. ನಿತ್ಯ ಕನಿಷ್ಠ 8 ಗಂಟೆಗಳ ಗಾಢ ನಿದ್ರೆ ಅತ್ಯಾವಶ್ಯಕ

ದೇಹದ ಸ್ವಾಸ್ಥ್ಯಕ್ಕೆ ನಿದ್ರೆ ಎಷ್ಟು ಮುಖ್ಯವೋ, ತೂಕ ಇಳಿಕೆಗೂ ಇದು ಅಷ್ಟೇ ಪ್ರಾಮುಖ್ಯ. ಪ್ರತಿದಿನ ರಾತ್ರಿ ಕನಿಷ್ಠ 7 ರಿಂದ 8 ಗಂಟೆಗಳ ಕಾಲ ಗುಣಮಟ್ಟದ ನಿದ್ರೆ ಮಾಡುವುದರಿಂದ ಹಾರ್ಮೋನ್ ಸಮತೋಲನ ಕಾಪಾಡಿಕೊಳ್ಳಬಹುದು ಮತ್ತು ದೇಹಕ್ಕೆ ಅಗತ್ಯ ವಿಶ್ರಾಂತಿ ದೊರೆಯುತ್ತದೆ.

ಆರೋಗ್ಯ ಸಲಹೆ: ಯಾವುದೇ ಕಠಿಣ ಡಯಟ್ ಮಾಡುವ ಮುನ್ನ ನಿಮ್ಮ ದೇಹದ ಪ್ರಕೃತಿಗೆ ತಕ್ಕಂತೆ ಸ್ಥಳೀಯ ವೈದ್ಯರು ಅಥವಾ ನುರಿತ ಆಹಾರ ತಜ್ಞರ (Dietitian) ಸಲಹೆ ಪಡೆಯುವುದು ಯಾವಾಗಲೂ ಉತ್ತಮ.

Leave a Reply

Your email address will not be published. Required fields are marked *