೩೧ ಅಕ್ಟೋಬರ್ ೨೦೨೬ · ಶನಿವಾರ
ತಾಜಾ
ಸುಮ್ಮನೆ ಕುಳಿತಾಗ ಕಾಲು ಅಲ್ಲಾಡಿಸುವ ಅಭ್ಯಾಸ: ಇದು ಕೇವಲ ಹವ್ಯಾಸವೇ ಅಥವಾ ಗಂಭೀರ ಆರೋಗ್ಯ ಸಮಸ್ಯೆಯೇ? ರಾತ್ರಿ ಈ ಹಣ್ಣುಗಳನ್ನು ಸೇವಿಸುವ ಮುನ್ನ ಎಚ್ಚರ! ಆರೋಗ್ಯದ ಮೇಲಾಗುವ ಗಂಭೀರ ಪರಿಣಾಮಗಳಿವು ಬೆಳಗ್ಗೆ ಬಿಸಿ ನೀರು ಕುಡಿಯುವ ಅಭ್ಯಾಸವಿದೆಯೇ? ಹಾಗಾದರೆ ಈ ಪ್ರಮುಖ ಮುನ್ನೆಚ್ಚರಿಕೆಗಳು ನಿಮಗಾಗಿ! ಪುರುಷರಿಗೂ ಬರಬಹುದು ಸ್ತನ ಕ್ಯಾನ್ಸರ್: ಈ ಆರಂಭಿಕ ಲಕ್ಷಣಗಳನ್ನು ಎಂದಿಗೂ ನಿರ್ಲಕ್ಷಿಸಬೇಡಿ! Daily Guava Benefits: ನಿತ್ಯ ಪೇರಳೆ ಹಣ್ಣು ತಿನ್ನುವುದರಿಂದ ಎಷ್ಟೆಲ್ಲಾ ಲಾಭಗಳಿವೆ ಗೊತ್ತಾ? ಈ ಆರೋಗ್ಯ ರಹಸ್ಯ ತಿಳಿಯಿರಿ ಜೇನುತುಪ್ಪ ಅತಿಯಾಗಿ ತಿನ್ನುತ್ತಿದ್ದೀರಾ? ಹಾಗಿದ್ರೆ ಈ ಮಾರಕ ಆರೋಗ್ಯ ಅಪಾಯಗಳು ಕಟ್ಟಿಟ್ಟಬುದ್ಧಿ! ಎರಡು ತಿಂಗಳ ಕಂದಮ್ಮನ ಹೊಟ್ಟೆಯಲ್ಲಿ ಭ್ರೂಣ ಪತ್ತೆ: ಬಳ್ಳಾರಿ ಬಿಎಂಸಿಆರ್‌ಸಿ ವೈದ್ಯರಿಂದ ಅಪರೂಪದ ಶಸ್ತ್ರಚಿಕಿತ್ಸೆ ಯಶಸ್ವಿ ಮಗಳು ಅಗಲಿದರೂ ಜೀವ ಉಳಿಸಿದ ಪೋಷಕರು: ಕೋಲಾರದ ಶ್ವೇತಾ ಸಾವಿನಲ್ಲೂ ಸಾರ್ಥಕತೆ!
ದಿನದ ಸುದ್ದಿ

ಪುರುಷರಿಗೂ ಬರಬಹುದು ಸ್ತನ ಕ್ಯಾನ್ಸರ್: ಈ ಆರಂಭಿಕ ಲಕ್ಷಣಗಳನ್ನು ಎಂದಿಗೂ ನಿರ್ಲಕ್ಷಿಸಬೇಡಿ!

Male breast cancer awareness image showing symptoms like chest lumps in men in Kannada.

ಸಾಮಾನ್ಯವಾಗಿ ಸ್ತನ ಕ್ಯಾನ್ಸರ್ ಎಂದರೆ ಅದು ಕೇವಲ ಮಹಿಳೆಯರಿಗೆ ಮಾತ್ರ ಬರುವ ಕಾಯಿಲೆ ಎಂಬ ತಪ್ಪು ಕಲ್ಪನೆ ಹೆಚ್ಚಿನವರಲ್ಲಿದೆ. ಆದರೆ, ಈ ಆಲೋಚನೆ ಸಂಪೂರ್ಣ ಸುಳ್ಳು ಎಂದು ಆರೋಗ್ಯ ತಜ್ಞರು ಸ್ಪಷ್ಟಪಡಿಸಿದ್ದಾರೆ. ಪುರುಷರು ಕೂಡ ಸ್ತನ ಕ್ಯಾನ್ಸರ್‌ನಿಂದ ಮುಕ್ತರಲ್ಲ ಎನ್ನುವುದು ಹಲವರಿಗೆ ತಿಳಿದಿಲ್ಲ.

ಕೋಲ್ಕತ್ತಾದ ಖ್ಯಾತ ನಾರಾಯಣ ಆರ್.ಎನ್. ಟ್ಯಾಗೋರ್ ಆಸ್ಪತ್ರೆಯ ಸ್ತನ ಕ್ಯಾನ್ಸರ್ ತಜ್ಞೆ ಡಾ. ಪ್ರಗತಿ ಸಿಂಘಾಲ್ ಅವರ ಪ್ರಕಾರ, ಪುರುಷರ ದೇಹದಲ್ಲೂ ಸಹ ಅಲ್ಪ ಪ್ರಮಾಣದ ಸ್ತನ ಅಂಗಾಂಶಗಳು (Breast Tissues) ಇರುತ್ತವೆ. ಹಾರ್ಮೋನುಗಳಲ್ಲಿನ ವ್ಯತ್ಯಾಸ ಅಥವಾ ಇನ್ ಇತರೆ ಕಾರಣಗಳಿಂದ ಈ ಅಂಗಾಂಶಗಳಲ್ಲಿ ಜೀವಕೋಶಗಳ ಅಸಹಜ ಬೆಳವಣಿಗೆಯಾಗಿ ಪುರುಷರಲ್ಲೂ ಕ್ಯಾನ್ಸರ್ ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಅವರು ಎಚ್ಚರಿಸಿದ್ದಾರೆ.

ಯಾವ ಲಕ್ಷಣಗಳನ್ನು ನಿರ್ಲಕ್ಷಿಸಬಾರದು? ಪುರುಷರು ತಮ್ಮ ಎದೆಯ ಭಾಗದಲ್ಲಿ ಉಂಟಾಗುವ ಸಣ್ಣಪುಟ್ಟ ಬದಲಾವಣೆಗಳನ್ನು ಕಡೆಗಣಿಸಬಾರದು.

  • ಎದೆಯ ಭಾಗದಲ್ಲಿ ಗಡ್ಡೆಗಳು ಕಂಡುಬರುವುದು.

  • ಮೊಲೆತೊಟ್ಟಿನಲ್ಲಿ (Nipple) ಅಸಾಮಾನ್ಯ ಬದಲಾವಣೆಗಳು ಅಥವಾ ಒಳಮುಖವಾಗಿ ತಿರುಗುವುದು.

  • ಮೊಲೆತೊಟ್ಟಿನ ಸುತ್ತಲಿನ ಚರ್ಮದಲ್ಲಿ ಕಿರಿಕಿರಿ, ಕೆಂಪಾಗುವುದು ಅಥವಾ ರ್ರ್ಯಾಷೆಸ್ ಉಂಟಾಗುವುದು. ಈ ರೀತಿಯ ಯಾವುದೇ ಲಕ್ಷಣಗಳು ಕಂಡುಬಂದರೂ ತಕ್ಷಣವೇ ವೈದ್ಯರನ್ನು ಸಂಪರ್ಕಿಸುವುದು ಅತ್ಯಗತ್ಯ.

ಅರಿವಿನ ಕೊರತೆ ಮತ್ತು ಮುಜುಗರವೇ ದೊಡ್ಡ ಶತ್ರು:

ಸಮಾಜದಲ್ಲಿ ಪುರುಷರಿಗೆ ಸ್ತನ ಕ್ಯಾನ್ಸರ್ ಬರುತ್ತದೆ ಎಂಬ ಅರಿವಿನ ಕೊರತೆ ಬಹಳಷ್ಟಿದೆ. ಇದರೊಂದಿಗೆ ಅನಗತ್ಯ ಮುಜುಗರದ ಭಾವನೆಯಿಂದಾಗಿ ಅನೇಕ ಪುರುಷರು ಆರಂಭಿಕ ಹಂತದ ರೋಗಲಕ್ಷಣಗಳನ್ನು ಮುಚ್ಚಿಡುತ್ತಾರೆ. ಇದರಿಂದಾಗಿ ರೋಗ ಪತ್ತೆ ವಿಳಂಬವಾಗಿ, ರೋಗವು ಉಲ್ಬಣಗೊಳ್ಳುವ ಅಪಾಯವಿರುತ್ತದೆ.

ಕ್ಯಾನ್ಸರ್ ಎನ್ನುವುದು ಯಾವುದೇ ಲಿಂಗಭೇದವಿಲ್ಲದೆ ಯಾರಿಗೆ ಬೇಕಾದರೂ ಬರಬಹುದು. ಆರಂಭಿಕ ಹಂತದಲ್ಲೇ ಇದನ್ನು ಪತ್ತೆ ಹಚ್ಚಿ, ತ್ವರಿತವಾಗಿ ವೈದ್ಯಕೀಯ ಚಿಕಿತ್ಸೆ ಪಡೆದುಕೊಂಡರೆ ಪ್ರಾಣಾಪಾಯದಿಂದ ಸಂಪೂರ್ಣವಾಗಿ ಸುರಕ್ಷಿತವಾಗಿರಬಹುದು ಹಾಗೂ ಕ್ಯಾನ್ಸರ್ ಅನ್ನು ಯಶಸ್ವಿಯಾಗಿ ಮೆಟ್ಟಿನಿಲ್ಲಬಹುದು.

Leave a Reply

Your email address will not be published. Required fields are marked *