೨೮ ಅಕ್ಟೋಬರ್ ೨೦೨೬ · ಬುಧವಾರ
ತಾಜಾ
ಅವಲಕ್ಕಿ: ದಿನಕ್ಕೊಂದು ಪ್ಲೇಟ್ ತಿಂದರೆ ಎಷ್ಟೆಲ್ಲಾ ಲಾಭ ಗೊತ್ತಾ? ತೂಕ ಇಳಿಕೆಯಿಂದ ಹೃದಯದ ಆರೋಗ್ಯದವರೆಗೆ ಇಲ್ಲಿದೆ ಮಾಹಿತಿ! ಆರೋಗ್ಯ ವರದಿ: ರಾತ್ರಿಯಿಡೀ ನೆನೆಸಿದ ಅಂಜೂರವನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತಿಂದರೆ ಏನಾಗುತ್ತದೆ ಗೊತ್ತಾ? ರಾತ್ರಿ ಮಲಗುವ ಮುನ್ನ ಮೊಬೈಲ್ ಬಳಸುವ ಅಭ್ಯಾಸ ನಿಮಗೂ ಇದೆಯೇ? ಎಚ್ಚರ, ತಜ್ಞರು ನೀಡಿದ್ದಾರೆ ಬಿಗ್ ವಾರ್ನಿಂಗ್! ವಿಪರೀತ ತಲೆನೋವಿನಿಂದ ಬಳಲುತ್ತಿದ್ದೀರಾ? ಮಾತ್ರೆ ಇಲ್ಲದೆ ಕ್ಷಣಾರ್ಧದಲ್ಲಿ ರಿಲೀಫ್ ಪಡೆಯಲು ಈ 5 ಸಿಂಪಲ್ ಟಿಪ್ಸ್ ಫಾಲೋ ಮಾಡಿ! ಆರೋಗ್ಯ ವೃದ್ಧಿಗೆ ಅರಿಶಿನವೇ ದಿವ್ಯೌಷಧ: ಶೀತ, ಕೆಮ್ಮು, ಮಧುಮೇಹ ನಿಯಂತ್ರಣಕ್ಕೆ ಇಲ್ಲಿದೆ ಅತ್ಯುತ್ತಮ ಮನೆಮದ್ದು ನಮ್ಮ ಬದುಕು, ನಮ್ಮ ಸಂತೋಷ — ಉಳಿದದ್ದೆಲ್ಲ ತಾತ್ಕಾಲಿಕ ಕಿಡ್ನಿ ಸ್ಟೋನ್ ಸಮಸ್ಯೆಯಿಂದ ಪಾರಾಗಲು ಈ ಆಹಾರಗಳಿಂದ ದೂರವಿರಿ: ಇಲ್ಲಿದೆ ತಜ್ಞರ ಸುಲಭ ಪರಿಹಾರ ಶಿಮುಲ್ ಕೇಂದ್ರಕ್ಕೆ ಸಚಿವ ಕೆ.ಎಸ್.ಬಸವಂತಪ್ಪ ಭೇಟಿ: ಹಾಲಿನ ಗುಣಮಟ್ಟಕ್ಕೆ ಆದ್ಯತೆ ನೀಡಲು ಸೂಚನೆ
ದಿನದ ಸುದ್ದಿ

ವಿಪರೀತ ತಲೆನೋವಿನಿಂದ ಬಳಲುತ್ತಿದ್ದೀರಾ? ಮಾತ್ರೆ ಇಲ್ಲದೆ ಕ್ಷಣಾರ್ಧದಲ್ಲಿ ರಿಲೀಫ್ ಪಡೆಯಲು ಈ 5 ಸಿಂಪಲ್ ಟಿಪ್ಸ್ ಫಾಲೋ ಮಾಡಿ!

ತಲೆನೋವಿನಿಂದ ತಕ್ಷಣ ಮುಕ್ತಿ ಪಡೆಯಲು ಬೆರಳು ಮತ್ತು ಅಂಗೈಗೆ ಮಾಡುವ ಅಕ್ಯುಪ್ರೆಶರ್ ಮಸಾಜ್ ವಿಧಾನ (Acupressure massage for headache relief).

ಇತ್ತೀಚಿನ ದಿನಗಳಲ್ಲಿ ಒತ್ತಡದ ಜೀವನಶೈಲಿ ಹಾಗೂ ಸ್ಕ್ರೀನ್ ಟೈಮ್ ಹೆಚ್ಚಾದ ಕಾರಣ ತಲೆನೋವು ಸರ್ವೇಸಾಮಾನ್ಯವಾಗಿದೆ. ತಲೆನೋವು ಬಂದ ತಕ್ಷಣ ಪೇನ್ ಕಿಲ್ಲರ್ (Painkiller) ಮೊರೆ ಹೋಗುವ ಅಭ್ಯಾಸ ನಿಮಗಿದ್ದರೆ, ಅದನ್ನು ಇಂದೇ ಬಿಡಿ. ಬದಲಾಗಿ, ನಮ್ಮ ದೇಹದಲ್ಲಿರುವ ಕೆಲವು ಪ್ರಮುಖ ಬಿಂದುಗಳನ್ನು ಮಸಾಜ್ ಮಾಡುವ ಮೂಲಕ ನೈಸರ್ಗಿಕವಾಗಿ ರಿಲೀಫ್ ಪಡೆಯಬಹುದು.

ತಲೆನೋವಿನಿಂದ ತಕ್ಷಣ ಮುಕ್ತಿ ಪಡೆಯಲು ನೀವು ಮನೆಯಲ್ಲೇ ಮಾಡಬಹುದಾದ ಕೆಲವು ಸುಲಭ ಹಾಗೂ ಪರಿಣಾಮಕಾರಿ ಅಕ್ಯುಪ್ರೆಶರ್ (Acupressure) ಟ್ರಿಕ್ಸ್‌ಗಳ ಬಗ್ಗೆ ‘ಆರೋಗ್ಯ ವಿಜಯ’ (Arogyavijaya) ಇಲ್ಲಿ ವಿವರಿಸಿದೆ.

ತಲೆನೋವು ನಿವಾರಣೆಗೆ 5 ಪರಿಣಾಮಕಾರಿ ಮಸಾಜ್ ಟ್ರಿಕ್ಸ್‌

  • ಸೈನಸ್ ತಲೆನೋವಿಗೆ ಉಗುರಿನ ಮಸಾಜ್: ನಿಮಗೆ ಸೈನಸ್ ಸಮಸ್ಯೆಯಿಂದ ತಲೆ ಭಾರವಾಗಿ ನೋವು ಕಾಡುತ್ತಿದ್ದರೆ, ನಿಮ್ಮ ಬೆರಳುಗಳ ಉಗುರಿನ ಸುತ್ತಲಿನ ಪ್ರದೇಶವನ್ನು ನಿಧಾನವಾಗಿ ಮಸಾಜ್ ಮಾಡಿ. ಇದು ಸೈನಸ್ ಮಾರ್ಗಗಳನ್ನು ಸಡಿಲಗೊಳಿಸಿ ರಿಲೀಫ್ ನೀಡುತ್ತದೆ.

  • ಬೆರಳ ತುದಿಯ ಮಸಾಜ್: ನಿಮ್ಮ ಹೆಬ್ಬೆರಳನ್ನು ಹೊರತುಪಡಿಸಿ, ಉಳಿದೆಲ್ಲಾ (ನಾಲ್ಕು) ಬೆರಳುಗಳ ತುದಿಯನ್ನು ಮೃದುವಾಗಿ ಒತ್ತಿ ಮಸಾಜ್ ಮಾಡಿ. ನರಗಳ ತುದಿಗಳು ಇಲ್ಲಿರುವುದರಿಂದ ಮೆದುಳಿನ ನರಗಳು ಶಾಂತಗೊಳ್ಳುತ್ತವೆ.

  • ಹೆಬ್ಬೆರಳು ಮತ್ತು ತೋರ್‌ಬೆರಳಿನ ನಡುವಿನ ಜಾಗ: ಇದು ಅತ್ಯಂತ ಪ್ರಭಾವಶಾಲಿ ಪಾಯಿಂಟ್. ತೋರ್‌ಬೆರಳು ಮತ್ತು ಹೆಬ್ಬೆರಳಿನ ನಡುವಿನ ‘V’ ಆಕಾರದ ಮಾಂಸಲ ಜಾಗದಲ್ಲಿ ಸ್ವಲ್ಪ ಗಟ್ಟಿಯಾಗಿ ಒತ್ತಿ ಮಸಾಜ್ ಮಾಡಿದರೆ ತಲೆನೋವು ಮತ್ತು ಮಾನಸಿಕ ಒತ್ತಡ ಬೇಗನೆ ಕಡಿಮೆಯಾಗುತ್ತದೆ.

  • ಅಂಗೈ ಮಸಾಜ್‌ನಿಂದ ರಿಲ್ಯಾಕ್ಸೇಶನ್: ಕೆಲಸದ ಟೆನ್ಷನ್‌ನಿಂದ ತಲೆನೋವು ಬಂದಿದ್ದರೆ, ನಿಮ್ಮ ಅಂಗೈಯ ಮಧ್ಯಭಾಗವನ್ನು ಹೆಬ್ಬೆರಳಿನಿಂದ ವೃತ್ತಾಕಾರವಾಗಿ ಮಸಾಜ್ ಮಾಡಿ. ಇದು ದೇಹದ ಆಯಾಸವನ್ನು ದೂರ ಮಾಡುತ್ತದೆ.

  • ನೋವಿರುವ ಜಾಗದಲ್ಲಿ ಒತ್ತಡ: ತಲೆಯ ಯಾವ ಭಾಗದಲ್ಲಿ ಹೆಚ್ಚು ನೋವು ಇದೆಯೋ, ಆ ನಿರ್ದಿಷ್ಟ ಜಾಗದಲ್ಲಿ ಸುಮಾರು ಎರಡು ನಿಮಿಷಗಳ ಕಾಲ ಬೆರಳುಗಳಿಂದ ಮೃದುವಾಗಿ ಒತ್ತಡ ಹಾಕಿ.

ವಿಶೇಷ ಸೂಚನೆ: ಈ ಮಸಾಜ್ ಮಾಡುವಾಗ ನೀವು ಇರುವ ಕೋಣೆ ಸಂಪೂರ್ಣವಾಗಿ ನಿಶ್ಯಬ್ದವಾಗಿರಲಿ. ಕೋಣೆಯ ಲೈಟ್ಸ್ ಆಫ್ ಮಾಡಿ, ಕತ್ತಲಿನಲ್ಲಿ ಕಣ್ಣುಮುಚ್ಚಿ ಕುಳಿತು ಈ ಟಿಪ್ಸ್ ಅನುಸರಿಸಿದರೆ ಮಾತ್ರ ಸಂಪೂರ್ಣ ಮತ್ತು ತ್ವರಿತ ಪರಿಹಾರ ಸಿಗುತ್ತದೆ.

Leave a Reply

Your email address will not be published. Required fields are marked *