ಇತ್ತೀಚಿನ ದಿನಗಳಲ್ಲಿ ಬದಲಾಗುತ್ತಿರುವ ಜೀವನಶೈಲಿ, ಕೆಲಸದೊತ್ತಡ ಮತ್ತು ಡಿಜಿಟಲ್ ಗ್ಯಾಜೆಟ್‌ಗಳ ಅಧಿಕ ಬಳಕೆಯಿಂದಾಗಿ ರಾತ್ರಿ ಸರಿಯಾಗಿ ನಿದ್ರೆ ಬಾರದಿರುವುದು (Insomnia) ಅನೇಕರನ್ನು ಕಾಡುತ್ತಿರುವ ಸಾಮಾನ್ಯ ಸಮಸ್ಯೆಯಾಗಿದೆ. ರಾತ್ರಿ ನಿದ್ರೆ ಕೆಟ್ಟರೆ ಅದು ಮರುದಿನದ ಹಗಲಿನ ಕೆಲಸದ ಮೇಲೆ, ಏಕಾಗ್ರತೆ ಹಾಗೂ ಒಟ್ಟಾರೆ ಆರೋಗ್ಯದ ಮೇಲೆ ನೇರವಾದ ಪರಿಣಾಮ ಬೀರುತ್ತದೆ.
ಆಳವಾದ ಹಾಗೂ ನೆಮ್ಮದಿಯ ನಿದ್ರೆ ನಿಮ್ಮದಾಗಲು ಆರೋಗ್ಯ ತಜ್ಞರು ಮತ್ತು ಆಯುರ್ವೇದ ತಜ್ಞರು ನೀಡಿರುವ ಕೆಲವು ಪ್ರಮುಖ ಮತ್ತು ಪರಿಣಾಮಕಾರಿ ಸಲಹೆಗಳು ಇಲ್ಲಿವೆ:
ಉತ್ತಮ ನಿದ್ರೆಗಾಗಿ ಅನುಸರಿಸಬೇಕಾದ ಪ್ರಮುಖ ಕ್ರಮಗಳು:
- ಬೆಚ್ಚಗಿನ ನೀರಿನ ಸ್ನಾನ: ಮಲಗುವ ಮುನ್ನ ಬೆಚ್ಚಗಿನ ನೀರಿನಿಂದ ಸ್ನಾನ ಮಾಡುವುದರಿಂದ ದೇಹದ ಸ್ನಾಯುಗಳು ಸಡಿಲಗೊಂಡು, ಮನಸ್ಸು ಹಗುAದಾಗುತ್ತದೆ. ಇದು ಸುಲಭವಾಗಿ ನಿದ್ರೆ ಆವರಿಸಲು ಸಹಾಯ ಮಾಡುತ್ತದೆ.
- ಪುಸ್ತಕ ಓದುವ ಹವ್ಯಾಸ: ಮೊಬೈಲ್ ಅಥವಾ ಟಿವಿ ಪರದುಯನ್ನು ನೋಡುವುದರ ಬದಲಿಗೆ ಹಗುರವಾದ ಪುಸ್ತಕಗಳನ್ನು ಓದುವ ಅಭ್ಯಾಸ ಮಾಡಿಕೊಳ್ಳಿ. ಇದು ಮೆದುಳಿನ ಮೇಲಿನ ಒತ್ತಡವನ್ನು ಕಡಿಮೆ ಮಾಡಿ ನಿದ್ರೆಗೆ ಜಾರಲು ಅನುವು ಮಾಡಿಕೊಡುತ್ತದೆ.
- ಧ್ಯಾನ ಮತ್ತು ವಿಶ್ರಾಂತಿ: ಮಲಗುವ ಮುಂಚೆ ಕೆಲ ನಿಮಿಷಗಳ ಕಾಲ ಪ್ರಾಣಾಯಾಮ ಅಥವಾ ಧ್ಯಾನ ಮಾಡುವುದರಿಂದ ಮನಸ್ಸಿನ ಆತಂಕ ಹಾಗೂ ಅತಿಯಾದ ಯೋಚನೆಗಳು ದೂರವಾಗಿ ಉತ್ತಮ ನಿದ್ರೆ ಬರುತ್ತದೆ.
- ಪಾದಗಳಿಗೆ ಎಣ್ಣೆ ಅಥವಾ ತುಪ್ಪ ಸವರಿ: ಆಯುರ್ವೇದದ ಪ್ರಕಾರ, ರಾತ್ರಿ ಮಲಗುವ ಮುನ್ನ ಕಾಲಿನ ಅಡಿಭಾಗಕ್ಕೆ (ಪಾದಗಳಿಗೆ) ಸ್ವಲ್ಪ ಎಣ್ಣೆ ಅಥವಾ ತುಪ್ಪವನ್ನು ಹಚ್ಚಿ ಮಸಾಜ್ ಮಾಡುವುದರಿಂದ ನರಗಳು ಶಾಂತಗೊಂಡು ಗಾಢ ನಿದ್ರೆ ದೊರೆಯುತ್ತದೆ.
- ಗ್ಯಾಜೆಟ್‌ಗಳಿಂದ ದೂರವಿರಿ: ಮಲಗುವ ಕನಿಷ್ಠ ಒಂದು ಗಂಟೆ ಮೊದಲು ಸ್ಮಾರ್ಟ್‌ಫೋನ್, ಟಿವಿ ಹಾಗೂ ಲ್ಯಾಪ್‌ಟಾಪ್‌ಗಳ ಬಳಕೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿ. ಇವುಗಳಿಂದ ಹೊರಡುವ ನೀಲಿ ಬೆಳಕು (Blue Light) ನಿದ್ರೆಗೆ ಸಹಕಾರಿಯಾದ ‘ಮೆಲಟೋನಿನ್’ ಹಾರ್ಮೋನ್ ಬಿಡುಗಡೆಗೆ ಅಡ್ಡಿಪಡಿಸುತ್ತದೆ.
- ಮಲಗುವ ಕೋಣೆಯಲ್ಲಿ ಕತ್ತಲು ಇರಲಿ: ಮಲಗುವ ಕೋಣೆಯಲ್ಲಿ ಪ್ರಕಾಶಮಾನವಾದ ದೀಪಗಳನ್ನು ಆಫ್ ಮಾಡಿ, ಆದಷ್ಟು ಕತ್ತಲು ಅಥವಾ ಮಂದವಾದ ಬೆಳಕು ಇರುವಂತೆ ನೋಡಿಕೊಳ್ಳಿ. ಇದು ನೈಸರ್ಗಿಕವಾಗಿ ಉತ್ತಮ ನಿದ್ರೆ ಬರುವಂತೆ ಮಾಡುತ್ತದೆ.