ರಕ್ತವು ಹೆಪ್ಪುಗಟ್ಟುವಿಕೆಯಲ್ಲಿ ಪ್ಲೇಟ್‌ಲೆಟ್‌ಗಳು (Platelets) ಅತ್ಯಂತ ನಿರ್ಣಾಯಕ ಪಾತ್ರವಹಿಸುತ್ತವೆ. ಆರೋಗ್ಯವಂತ ಮನುಷ್ಯನ ದೇಹದಲ್ಲಿ ಪ್ಲೇಟ್‌ಲೆಟ್ ಮಟ್ಟವು 1.5 ಲಕ್ಷದಿಂದ 4.5 ಲಕ್ಷದವರೆಗೆ ಇರಬೇಕು. ಆದರೆ, ಕೆಲವು ಆರೋಗ್ಯ ಸಮಸ್ಯೆಗಳಿಂದಾಗಿ ಈ ಪ್ರಮಾಣವು 50 ಸಾವಿರಕ್ಕಿಂತ ಕಡಿಮೆ ಕುಸಿದರೆ, ಅದನ್ನು ವೈದ್ಯಕೀಯ ಭಾಷೆಯಲ್ಲಿ ‘ಥ್ರಾಂಬೋಸೈಟೋಪೀನಿಯಾ’ (Thrombocytopenia) ಎಂದು ಕರೆಯಲಾಗುತ್ತದೆ. ಇದು ದೇಹದಲ್ಲಿ ಆಂತರಿಕ ಹಾಗೂ ಬಾಹ್ಯ ರಕ್ತಸ್ರಾವದ (Bleeding Risk) ಗಂಭೀರ ಅಪಾಯವನ್ನು ಹೆಚ್ಚಿಸುತ್ತದೆ.
ಪ್ಲೇಟ್‌ಲೆಟ್ ಕೊರತೆಯ ಪ್ರಮುಖ ಲಕ್ಷಣಗಳು
-
ಚರ್ಮದ ಮೇಲಿನ ಬದಲಾವಣೆಗಳು: ಚರ್ಮದ ಮೇಲೆ ಯಾವುದೇ ಕಾರಣವಿಲ್ಲದೆ ಕೆಂಪು ಅಥವಾ ನೇರಳೆ ಬಣ್ಣದ ಸಣ್ಣ ಚುಕ್ಕೆಗಳು (Petechiae) ಮೂಡುವುದು.
-
ರಕ್ತಸ್ರಾವ: ಮೂಗಿನಿಂದ ರಕ್ತ ಬರುವುದು ಅಥವಾ ಹಲ್ಲಿನ ಒಸಡಿನಿಂದ ರಕ್ತಸ್ರಾವವಾಗುವುದು.
-
ಅತಿಯಾದ ಆಯಾಸ: ದೇಹದಲ್ಲಿ ಶಕ್ತಿ ಇಲ್ಲದಂತಾಗುವುದು, ನಿರಂತರ ಸುಸ್ತು ಮತ್ತು ಸುಲಭವಾಗಿ ಮೈಕೈ ನೀಲಿ ಗಟ್ಟಿಕೊಳ್ಳುವುದು.
ಮನೆಮದ್ದುಗಳ ಅತಿ ನಂಬಿಕೆ ಅಪಾಯಕಾರಿ!
ದೇಹದಲ್ಲಿ ಪ್ಲೇಟ್‌ಲೆಟ್ ಕೌಂಟ್ ಹೆಚ್ಚಿಸಲು ಪೌಷ್ಟಿಕ ಹಾಗೂ ಸಮತೋಲಿತ ಆಹಾರ ಸೇವನೆ ಅತಿ ಮುಖ್ಯ. ಆದರೆ, ಡೆಂಗ್ಯೂ ಅಥವಾ ಇತರೆ ಜ್ವರ ಬಂದಾಗ ಕೇವಲ ಪಪ್ಪಾಯಿ ಎಲೆಯ ರಸದಂತಹ ಮನೆಮದ್ದುಗಳನ್ನೇ ಸಂಪೂರ್ಣವಾಗಿ ನಂಬಿಕೊಂಡು ಕೂಡುವುದು ಬಹಳ ಅಪಾಯಕಾರಿ. ಪ್ಲೇಟ್‌ಲೆಟ್ ಮಟ್ಟ ತೀವ್ರವಾಗಿ ಕುಸಿದಾಗ ಕೂಡಲೇ ಅರ್ಹ ವೈದ್ಯರನ್ನು ಸಂಪರ್ಕಿಸಿ, ಸೂಕ್ತ ರಕ್ತ ಪರೀಕ್ಷೆ (CBC Test) ಮಾಡಿಸಿಕೊಳ್ಳುವುದು ಮತ್ತು ವೈದ್ಯರ ಸಲಹೆಯ ಮೇರೆಗೆ ಸರಿಯಾದ ಚಿಕಿತ್ಸೆ ಪಡೆಯುವುದು ಕಡ್ಡಾಯವಾಗಿದೆ.