೧೫ ನವೆಂಬರ್ ೨೦೨೬ · ಭಾನುವಾರ
ತಾಜಾ
ಊಟದ ನಂತರದ ನಡಿಗೆ: ಆರೋಗ್ಯಕ್ಕೆ ಸಂಜೀವಿನಿ ಒದಗಿಸುವ ಸರಳ ಅಭ್ಯಾಸ! ಮನೆಯ ಹಿರಿಯರ ಧೂಮಪಾನದ ಚಟ: ಮಕ್ಕಳ ಎರಾಳಕ್ಕೆ ಬರ್ತಿದೆ ‘ಥರ್ಡ್ ಹ್ಯಾಂಡ್ ಸ್ಮೋಕ್’ ಮಾರಕ ಅಪಾಯ! ಚಳಿಗಾಲದಲ್ಲಿ ಹೂಕೋಸು ಸೇವನೆ: ಆರೋಗ್ಯದ ಗಣಿ, ಈ ಅದ್ಭುತ ಪ್ರಯೋಜನಗಳು ನಿಮಗ ಗೊತ್ತೇ? ಎಚ್ಚರ: ನಿಮ್ಮ ಸ್ಮಾರ್ಟ್‌ಫೋನ್ ಸ್ಫೋಟಗೊಳ್ಳಲು ನೀವೇ ಮಾಡುತ್ತಿರುವ ಈ 4 ತಪ್ಪುಗಳೇ ಕಾರಣವೇ? ಉತ್ತಮ ನಿದ್ರೆ ಪಡೆಯಲು ಹೀಗೆ ಮಾಡಿ: ಇಂದಿನ ಒತ್ತಡದ ಬದುಕಿಗೆ ಇಲ್ಲಿದೆ ಸರಳ ಹಾಗೂ ಪರಿಣಾಮಕಾರಿ ಆರೋಗ್ಯ ಟಿಪ್ಸ್ ಕಲ್ಲಂಗಡಿ ಹಣ್ಣಿನ ಬೀಜದಲ್ಲಿದೆ ಆರೋಗ್ಯದ ಖಜಾನೆ: ಇನ್ನುಮುಂದೆ ಇವನ್ನು ಎಸೆಯಬೇಡಿ! ಪ್ಯಾಪಿಲ್ಲರಿ ಥೈರಾಯ್ಡ್ ಕ್ಯಾನ್ಸರ್: ಆರಂಭಿಕ ಲಕ್ಷಣಗಳು, ಕಾರಣಗಳು ಮತ್ತು ಚಿಕಿತ್ಸಾ ವಿಧಾನಗಳ ಸಂಪೂರ್ಣ ಮಾಹಿತಿ ಹೃದಯಕ್ಕೂ ಬೇಕು ಕಣ್ರೀ ಮಸಾಜ್: ಹೃದಯದ ಬ್ಲಾಕ್‌ ತೆರೆಯಲು ಪರ್ವತಾಸನ ಅತ್ಯುತ್ತಮ!
ದಿನದ ಸುದ್ದಿ

ಮನೆಯ ಹಿರಿಯರ ಧೂಮಪಾನದ ಚಟ: ಮಕ್ಕಳ ಎರಾಳಕ್ಕೆ ಬರ್ತಿದೆ ‘ಥರ್ಡ್ ಹ್ಯಾಂಡ್ ಸ್ಮೋಕ್’ ಮಾರಕ ಅಪಾಯ!

third-hand-smoke-children-health-risks

ಮನೆಯಲ್ಲಿ ಹಿರಿಯರು ಅಥವಾ ಪೋಷಕರು ಮಾಡುವ ಧೂಮಪಾನದ ಅಭ್ಯಾಸವು ಕೇವಲ ಅವರ ಆರೋಗ್ಯವಷ್ಟೇ ಅಲ್ಲದೆ, ಮುಗ್ಧ ಮಕ್ಕಳ ಆರೋಗ್ಯದ ಮೇಲೆ ಅತ್ಯಂತ ಗಂಭೀರ ಹಾಗೂ ಮಾರಕ ಪರಿಣಾಮ ಬೀರುತ್ತಿದೆ. ಸಾಮಾನ್ಯವಾಗಿ ಮನೆಯ ಹೊರಗೆ, ಅಂಗಳದಲ್ಲಿ ಅಥವಾ ಬಾಲ್ಕನಿಯಲ್ಲಿ ಸಿಗರೇಟ್ ಸೇದಿ ಬಂದರೆ ಮಕ್ಕಳು ಸುರಕ್ಷಿತವಾಗಿರುತ್ತಾರೆ ಎಂಬ ತಪ್ಪು ಕಲ್ಪನೆ ಬಹುತೇಕರಲ್ಲಿದೆ. ಆದರೆ ವೈಜ್ಞಾನಿಕವಾಗಿ ಇದು ಸಂಪೂರ್ಣ ಸುಳ್ಳು ಎಂದು ಸಾಬೀತಾಗಿದೆ.

​ಏನಿದು ‘ಥರ್ಡ್ ಹ್ಯಾಂಡ್ ಸ್ಮೋಕ್’ (Third-Hand Smoke)?

​ಸಿಗರೇಟ್ ಹೊಗೆಯಿಂದ ಹೊರಬರುವ ಅತ್ಯಂತ ಹಾನಿಕಾರಕ ಹಾಗೂ ವಿಷಕಾರಿ ರಾಸಾಯನಿಕ ಅಂಶಗಳು ಧೂಮಪಾನ ಮಾಡಿದ ಬಳಿಕವೂ ಗಾಳಿಯಲ್ಲಿ ಹಾಗೇ ಉಳಿದುಕೊಳ್ಳುತ್ತವೆ. ಅಷ್ಟೇ ಅಲ್ಲದೆ, ಆ ವಿಷಕಾರಿ ಕಣಗಳು ಧೂಮಪಾನ ಮಾಡುವವರ ಬಟ್ಟೆಗಳು, ಮನೆಯ ಸೋಫಾ, ಪರದೆಗಳು, ಹಾಸಿಗೆ ಹಾಗೂ ಗೋಡೆಗಳಿಗೆ ದೀರ್ಘಕಾಲದವರೆಗೆ ಅಂಟಿಕೊಳ್ಳುತ್ತವೆ. ಇದಕ್ಕೆ ‘ಥರ್ಡ್ ಹ್ಯಾಂಡ್ ಸ್ಮೋಕ್’ ಎನ್ನಲಾಗುತ್ತದೆ. ಮಕ್ಕಳು ಈ ವಸ್ತುಗಳನ್ನು ಮುಟ್ಟುವುದು ಮತ್ತು ಆ ಮೂಲಕ ಆ ವಿಷಕಾರಿ ರಾಸಾಯನಿಕಗಳು ಅವರ ದೇಹ ಸೇರುವುದು ಮಕ್ಕಳ ಆರೋಗ್ಯಕ್ಕೆ ದೊಡ್ಡ ಕುತ್ತು ತಂದೊಡ್ಡುತ್ತದೆ.

​ಮಕ್ಕಳ ಆರೋಗ್ಯದ ಮೇಲೆ ಬೀರುವ ದುಷ್ಪಣಾಮಗಳು:

  • ​ಶ್ವಾಸಕೋಶದ ತೊಂದರೆಗಳು: ಈ ಮಾರಕ ರಾಸಾಯನಿಕಗಳ ಪ್ರಭಾವದಿಂದ ಮಕ್ಕಳಿಗೆ ಪದೇಪದೇ ನೆಗಡಿ, ಗಂಟಲು ಹಾಗೂ ಎದೆಗೆ ಸಂಬಂಧಿಸಿದ ಸೋಂಕುಗಳು ಕಾಡುತ್ತವೆ.
  • ​ಆಸ್ತಮಾ ಉಲ್ಬಣ: ಮನೆಯಲ್ಲಿ ಯಾರಾದರೂ ಧೂಮಪಾನ ಮಾಡುತ್ತಿದ್ದರೆ, ಈಗಾಗಲೇ ಆಸ್ತಮಾ ಸಮಸ್ಯೆ ಇರುವ ಮಕ್ಕಳಲ್ಲಿ ರೋಗ ಲಕ್ಷಣಗಳು ಮತ್ತಷ್ಟು ಉಲ್ಬಣಗೊಂಡು ಉಸಿರಾಟದ ತೀವ್ರ ತೊಂದರೆ ಉಂಟಾಗುತ್ತದೆ.
  • ​ದೀರ್ಘಕಾಲದ ಕೆಮ್ಮು: ಸತತವಾಗಿ ಕಾಡುವ ಕೆಮ್ಮು ಮತ್ತು ಅಲರ್ಜಿಯಿಂದ ಮಕ್ಕಳು ಬಳಲಬೇಕಾಗುತ್ತದೆ.

​ಪರಿಹಾರವೇನು?

​ಮನೆಯಲ್ಲಿ ಗಾಳಿಯನ್ನು ಶುದ್ಧೀಕರಿಸುವ ಉಪಕರಣಗಳನ್ನು (Air Purifiers) ಬಳಸುವುದು ಅಥವಾ ಏರ್ ಫ್ರೆಶ್ನರ್ ಸಿಂಪಡಿಸುವುದರಿಂದ ಈ ರಾಸಾಯನಿಕಗಳನ್ನು ಸಂಪೂರ್ಣವಾಗಿ ತೊಡೆದುಹಾಕಲು ಸಾಧ್ಯವಿಲ್ಲ. ಮಕ್ಕಳ ಆರೋಗ್ಯವನ್ನು ಕಾಪಾಡಲು ಒಂದೇ ಒಂದು ಪರಿಹಾರವೆಂದರೆ— ಮನೆಯನ್ನು ಸಂಪೂರ್ಣವಾಗಿ ಹೊಗೆ ಮುಕ್ತ (Smoke-Free Home) ವಲಯವನ್ನಾಗಿ ಮಾಡುವುದು. ಹಿರಿಯರು ತಮ್ಮ ಆರೋಗ್ಯ ಹಾಗೂ ಮಕ್ಕಳ ಉಜ್ಜ್ವಲ ಭವಿಷ್ಯಕ್ಕಾಗಿ ಧೂಮಪಾನದ ಚಟವನ್ನು ಸಂಪೂರ್ಣವಾಗಿ ಬಿಡುವುದು ಅತ್ಯಗತ್ಯ.

Leave a Reply

Your email address will not be published. Required fields are marked *