೯ ನವೆಂಬರ್ ೨೦೨೬ · ಸೋಮವಾರ
ತಾಜಾ
ಬಿಸಾಡೋ ಕಿತ್ತಳೆ ಸಿಪ್ಪೆಯಿಂದಲೇ ಪಡೆಯಿರಿ ಚಿನ್ನದಂಥ ಕಾಂತಿ! ಮನೆಯಲ್ಲೇ ನೈಸರ್ಗಿಕ ಸೋಪ್ ತಯಾರಿಸುವ ವಿಧಾನ ಇಲ್ಲಿದೆ.. ಹೆಚ್ಚಾಗಿ ಕೋಪಗೊಳ್ಳುವುದರಿಂದ ಆರೋಗ್ಯದ ಮೇಲೆ ಏನು ಪರಿಣಾಮ? ನಿಯಂತ್ರಿಸಲು ಸರಳ ಮಾರ್ಗಗಳು ಹೃದಯಾಘಾತದ ನಂತರ ಅಪ್ಪಿತಪ್ಪಿಯೂ ಈ ಆಹಾರಗಳನ್ನು ತಿನ್ನಬೇಡಿ! ಇಲ್ಲಿದೆ ಜೀವ ಉಳಿಸುವ ಡಯಟ್ ಟಿಪ್ಸ್ ಬೆಳಗಿನ 10 ನಿಮಿಷದ ‘ಅನುಲೋಮ-ವಿಲೋಮ’ ಪ್ರಾಣಾಯಾಮ ನಿಮ್ಮ ದೇಹದಲ್ಲಿ ಎಂತಹ ಅದ್ಭುತ ಬದಲಾವಣೆ ತರಲಿದೆ ಗೊತ್ತಾ? ರಾತ್ರಿ ಊಟಕ್ಕೆ ಅನ್ನವೇ ಅಥವಾ ಚಪಾತಿಯೇ? ಆರೋಗ್ಯಕರ ಆಯ್ಕೆ ಯಾವುದು? ಕಣ್ಣಿನ ಆರೋಗ್ಯ ಮತ್ತು ಸೌಂದರ್ಯಕ್ಕೆ ತೆಂಗಿನ ಎಣ್ಣೆಯ ಅದ್ಭುತ ಪ್ರಯೋಜನಗಳು: ಇಲ್ಲಿದೆ ಸರಳ ಮನೆಮದ್ದು ಆರೋಗ್ಯಕ್ಕೆ ರಾಮಬಾಣ ಅಡುಗೆಯ ಪ್ರಮುಖ ಪದಾರ್ಥ ‘ಇಂಗು’: ಜೀರ್ಣಕ್ರಿಯೆ ಸಮಸ್ಯೆಗೆ ಇಲ್ಲಿದೆ ಸರಳ ಮನೆಮದ್ದು! ಎಸ್‌ಬಿಐ ‘ಅಮೃತ್ ವೃಷ್ಟಿ’ ಎಫ್‌ಡಿ ಯೋಜನೆ: ಸುರಕ್ಷಿತ ಹೂಡಿಕೆಗೆ ಅತ್ಯುತ್ತಮ ಅವಕಾಶ ಮತ್ತು ಬಡ್ಡಿ ಲಾಭದ ಸಂಪೂರ್ಣ ವಿವರ
ದಿನದ ಸುದ್ದಿ

ಆರೋಗ್ಯಕ್ಕೆ ರಾಮಬಾಣ ಅಡುಗೆಯ ಪ್ರಮುಖ ಪದಾರ್ಥ ‘ಇಂಗು’: ಜೀರ್ಣಕ್ರಿಯೆ ಸಮಸ್ಯೆಗೆ ಇಲ್ಲಿದೆ ಸರಳ ಮನೆಮದ್ದು!

Health benefits of Hing (asafoetida) for gas trouble and stomach pain relief in Kannada.

ಭಾರತೀಯ ಅಡುಗೆ ಮನೆಯಲ್ಲಿ ಇಂಗಿಗೆ ಅತ್ಯಂತ ಪ್ರಮುಖವಾದ ಸ್ಥಾನವಿದೆ. ಇದು ಕೇವಲ ಆಹಾರದ ರುಚಿ ಮತ್ತು ಪರಿಮಳವನ್ನು ಹೆಚ್ಚಿಸುವುದು ಮಾತ್ರವಲ್ಲ, ನಮ್ಮ ಆರೋಗ್ಯಕ್ಕೆ ಎಣೆಯಿಲ್ಲದ ಪ್ರಯೋಜನಗಳನ್ನು ತಂದುಕೊಡುತ್ತದೆ. ವಿಶೇಷವಾಗಿ ಹೊಟ್ಟೆಗೆ ಸಂಬಂಧಿಸಿದ ಹಲವು ತೊಂದರೆಗಳಿಗೆ ಇಂಗು ಒಂದು ನೈಸರ್ಗಿಕ ಔಷಧಿಯಂತೆ ಕೆಲಸ ಮಾಡುತ್ತದೆ. ಇಂದಿನ ಧಾವಂತದ ಜೀವನಶೈಲಿಯಲ್ಲಿ ಅಜೀರ್ಣ ಹಾಗೂ ಹೊಟ್ಟೆನೋವಿನ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಇಂಗಿನಿಂದ ತಯಾರಿಸುವ ಮನೆಮದ್ದುಗಳು ಅತ್ಯಂತ ಪರಿಣಾಮಕಾರಿಯಾಗಿ ನೆರವಾಗುತ್ತವೆ.

ಗ್ಯಾಸ್ಟ್ರಿಕ್ ಮತ್ತು ಹೊಟ್ಟೆ ಉಬ್ಬರಕ್ಕೆ ತಡೆ

ಪ್ರತಿದಿನ ನಾವು ಸೇವಿಸುವ ಬೇಳೆಕಾಳುಗಳು ಹಾಗೂ ಕೆಲವೊಂದು ಪದಾರ್ಥಗಳು ಕೆಲವರಲ್ಲಿ ಗ್ಯಾಸ್ಟ್ರಿಕ್ ಅಥವಾ ಹೊಟ್ಟೆ ಉಬ್ಬರಕ್ಕೆ ಕಾರಣವಾಗುತ್ತವೆ. ಇದನ್ನು ತಡೆಯಲು ಅಡುಗೆ ಮಾಡುವಾಗ ಚಿಟಿಕೆ ಇಂಗನ್ನು ಬಳಸುವುದು ಉತ್ತಮ. ಒಂದು ವೇಳೆ ನಿಮಗೆ ಅತಿಯಾದ ಹೊಟ್ಟೆಯುಬ್ಬರ ಅಥವಾ ಅಜೀರ್ಣದ ಸಮಸ್ಯೆ ಕಾಡಿದರೆ, ಒಂದು ಲೋಟ ಮಜ್ಜಿಗೆಗೆ ಚಿಟಿಕೆ ಉಪ್ಪು ಮತ್ತು ಒಂದು ಚಿಟಿಕೆ ಇಂಗu ಬೆರೆಸಿ ಚೆನ್ನಾಗಿ ಕರಗಿಸಿ ಕುಡಿಯಿರಿ. ಹೀಗೆ ಮಾಡುವುದರಿಂದ ಕೇವಲ ಅರ್ಧ ಗಂಟೆಯೊಳಗೆ ಹೊಟ್ಟೆ ನೋವು ಹಾಗೂ ಅಸ್ವಸ್ಥತೆಯಿಂದ ಶಮನ ಪಡೆದುಕೊಳ್ಳಬಹುದು.

ಮುಟ್ಟಿನ ಸಂದರ್ಭದಲ್ಲಿ ಕಾಡುವ ಹೊಟ್ಟೆ ನೋವಿಗೆ ರಾಮಬಾಣ

ಮಹಿಳೆಯರಿಗೆ ಮುಟ್ಟಿನ ದಿನಗಳಲ್ಲಿ (Period cramps) ಕಾಣಿಸಿಕೊಳ್ಳುವ ತೀವ್ರ ಹೊಟ್ಟೆ ನೋವು ಹಾಗೂ ಸೆಳೆತದಿಂದ ಮುಕ್ತಿ ಪಡೆಯಲು ಇಂಗು ಅತ್ಯುತ್ತಮ ಪರಿಹಾರ ನೀಡುತ್ತದೆ. ಈ ಸಮಸ್ಯೆಗೆ ಪರಿಹಾರವಾಗಿ ಸ್ವಲ್ಪ ಮೆಂತೆ ಪುಡಿಗೆ ಚಿಟಿಕೆ ಉಪ್ಪು, ಚಿಟಿಕೆ ಇಂಗು ಮತ್ತು ತಾಜಾ ಮಜ್ಜಿಗೆಯನ್ನು ಸೇರಿಸಿ ಸೇವಿಸಬೇಕು. ಇದು ದೇಹಕ್ಕೆ ತಂಪು ನೀಡುವುದರ ಜೊತೆಗೆ ಹೊಟ್ಟೆ ನೋವನ್ನು ನಿವಾರಿಸಲು ಸಹಾಯ ಮಾಡುತ್ತದೆ.

Leave a Reply

Your email address will not be published. Required fields are marked *