ಚಿಕ್ಕ ಮಕ್ಕಳ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಯಲ್ಲಿ ಪೋಷಕರು ನೀಡುವ ಆಹಾರದ ಪಾತ್ರ ಬಹಳ ದೊಡ್ಡದು. ಇಂದಿನ ಆಧುನಿಕ ಜೀವನಶೈಲಿಯಲ್ಲಿ ಅನೇಕರು ಮಕ್ಕಳ ಆಹಾರದಿಂದ ಸಾಂಪ್ರದಾಯಿಕ ಪದಾರ್ಥಗಳನ್ನು ದೂರವಿಡುತ್ತಿದ್ದಾರೆ. ಆದರೆ ನಮ್ಮ ಹಿರಿಯರು ಶಿಶುಗಳ ಬೆಳವಣಿಗೆಗೆ ದೇಸಿ ತುಪ್ಪವನ್ನು (Pure Ghee) ತಪ್ಪದೆ ಬಳಸುತ್ತಿದ್ದರು. ಮಗುವಿನ ದೈನಂದಿನ ಆಹಾರ ಕ್ರಮದಲ್ಲಿ ತುಪ್ಪವನ್ನು ಸೇರಿಸುವುದರಿಂದ ಹಲವಾರು ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು.
ಮಕ್ಕಳ ಆಹಾರದಲ್ಲಿ ತುಪ್ಪವಿರುವುದರ ಪ್ರಮುಖ ಪ್ರಯೋಜನಗಳು:
-
ರೋಗನಿರೋಧಕ ಶಕ್ತಿ ವೃದ್ಧಿ: ತುಪ್ಪದಲ್ಲಿ ನೈಸರ್ಗಿಕವಾಗಿ ಕಂಡುಬರುವ ಬ್ಯುಟರಿಕ್ ಆಮ್ಲವು (Butyric Acid) ಮಕ್ಕಳಲ್ಲಿ ರೋಗನಿರೋಧಕ ಶಕ್ತಿಯನ್ನು (Immunity) ಬಲಪಡಿಸಲು ಅತ್ಯಂತ ಸಹಕಾರಿಯಾಗಿದೆ. ಇದು ಮಗುವನ್ನು ಪದೇ ಪದೇ ಕಾಡುವ ಸೋಂಕುಗಳಿಂದ ರಕ್ಷಿಸುತ್ತದೆ.
-
ವಿಟಮಿನ್ಗಳ ಸಮೃದ್ಧ ಖಜಾನೆ: ತುಪ್ಪದಲ್ಲಿ ವಿಟಮಿನ್ ಎ ಮತ್ತು ವಿಟಮಿನ್ ಸಿ ಅಂಶಗಳು ಸಮೃದ್ಧವಾಗಿವೆ. ಇದು ಮಗುವಿನ ಚರ್ಮದ ಆರೋಗ್ಯಕ್ಕೆ ಹಾಗೂ ಕಣ್ಣಿನ ದೃಷ್ಟಿ ಚುರುಕಾಗಲು ಸಹಾಯ ಮಾಡುತ್ತದೆ.
-
ಮೆದುಳಿನ ಚುರುಕುತನಕ್ಕೆ ಒಳಿತು: ಇದರಲ್ಲಿರುವ ಆರೋಗ್ಯಕರ ಕೊಬ್ಬಿನಾಂಶಗಳು (Healthy Fats) ಮಗುವಿನ ಮೆದುಳಿನ ಜೀವಕೋಶಗಳ ಅಭಿವೃದ್ಧಿಗೆ ಮತ್ತು ನರಮಂಡಲದ ಕಾರ್ಯವೈಖರಿಗೆ ಅತ್ಯುತ್ತಮ ಪೋಷಣೆಯನ್ನು ನೀಡುತ್ತವೆ.
-
ಮೂಳೆಗಳ ಬಲವರ್ಧನೆ: ಬೆಳೆಯುವ ಹರಯದ ಮಕ್ಕಳ ಮೂಳೆಗಳು ಗಟ್ಟಿಯಾಗಲು ಕ್ಯಾಲ್ಸಿಯಂ ಜತೆಗೆ ಉತ್ತಮ ಕೊಬ್ಬಿನ ಅಗತ್ಯವಿರುತ್ತದೆ. ತುಪ್ಪವು ಮೂಳೆಗಳನ್ನು ಬಲಪಡಿಸುವಲ್ಲಿ ಪ್ರಮುಖ ಪಾತ್ರ ವವಹಿಸುತ್ತದೆ.
ಮಕ್ಕಳಿಗೆ ತುಪ್ಪವನ್ನು ನೀಡುವುದು ಹೇಗೆ?
-
ಬಿಸಿ ನೀರಿನೊಂದಿಗೆ: ಒಂದು ಲೋಟ ಉಗುರುಬೆಚ್ಚಗಿನ ನೀರಿಗೆ 1 ಚಮಚ ಶುದ್ಧ ತುಪ್ಪವನ್ನು ಬೆರೆಸಿ ಮಗುವಿಗೆ ನೀಡುವುದು ಜೀರ್ಣಾಂಗ ವ್ಯವಸ್ಥೆಗೆ ಒಳ್ಳೆಯದು.
-
ಹಾಲಿನೊಂದಿಗೆ ಮಿಶ್ರಣ: ಉಗುರುಬೆಚ್ಚಗಿನ ಹಾಲಿನೊಂದಿಗೆ ಸ್ವಲ್ಪ ಪ್ರಮಾಣದ ತುಪ್ಪವನ್ನು ಬೆರೆಸಿ ಕುಡಿಯಲು ಕೊಡಬಹುದು. ಇದು ರಾತ್ರಿ ಉತ್ತಮ ನಿದ್ರೆ ಬರಲು ಹಾಗೂ ಜೀರ್ಣಶಕ್ತಿ ಸುಧಾರಿಸಲು ಸಹಾಯ ಮಾಡುತ್ತದೆ.
ವಿಶೇಷ ಸೂಚನೆ: ಯಾವುದೇ ಹೊಸ ಆಹಾರ ಪದಾರ್ಥವನ್ನು ಮಗುವಿನ ಆಹಾರ ಕ್ರಮಕ್ಕೆ ಸೇರಿಸುವ ಮೊದಲು ಮಕ್ಕಳ ತಜ್ಞರ (Pediatrician) ಅಥವಾ ವೈದ್ಯರ ಸಲಹೆ ಪಡೆಯುವುದು ಯಾವಾಗಲೂ ಉತ್ತಮ.