ಇತ್ತೀಚಿನ ದಿನಗಳಲ್ಲಿ ಬದಲಾಗುತ್ತಿರುವ ಜೀವನಶೈಲಿ ಮತ್ತು ತಪ್ಪು ಆಹಾರ ಪದ್ಧತಿಯಿಂದಾಗಿ ಯೂರಿಕ್ ಆ್ಯಸಿಡ್ ಸಮಸ್ಯೆ ಸಾಮಾನ್ಯವಾಗುತ್ತಿದೆ. ರಕ್ತದಲ್ಲಿ ಯೂರಿಕ್ ಆ್ಯಸಿಡ್ (Uric Acid) ಮಟ್ಟ ಹೆಚ್ಚಾಗುವುದನ್ನು ಕೇವಲ ಕೀಲುಗಳಲ್ಲಿ ಉಂಟಾಗುವ ಗೌಟ್ (Gout) ಅಥವಾ ಕಾಲು ನೋವಿಗೆ ಮಾತ್ರ ಸೀಮಿತಗೊಳಿಸಲು ನೋಡಲಾಗುತ್ತದೆ. ಆದರೆ ವೈದ್ಯಕೀಯ ಅಧ್ಯಯನಗಳ ಪ್ರಕಾರ, ಇದು ನೇರವಾಗಿ ನಿಮ್ಮ ಹೃದಯದ ಆರೋಗ್ಯದ ಮೇಲೂ ಗಂಭೀರ ದುಷ್ಪರಿಣಾಮ ಬೀರುತ್ತದೆ.
ಹೃದಯದ ಮೇಲೆ ಯೂರಿಕ್ ಆ್ಯಸಿಡ್ ಬೀರುವ ಪ್ರಭಾವವೇನು?
ರಕ್ತದಲ್ಲಿ ಯೂರಿಕ್ ಆಮ್ಲದ ಪ್ರಮಾಣ ಅತಿರೇಕವಾದಾಗ ಅದು ರಕ್ತನಾಳಗಳ ಮೇಲೆ ಒತ್ತಡವನ್ನುಂಟು ಮಾಡುತ್ತದೆ. ಇದರಿಂದ ಹೃದಯರಕ್ತನಾಳದ ಕಾಯಿಲೆಗಳು (Cardiovascular Diseases), ಅಧಿಕ ರಕ್ತದೊತ್ತಡ (High Blood Pressure), ಮಧುಮೇಹ ಮತ್ತು ಕೆಟ್ಟ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾಗುವ ಸಂಭವವಿರುತ್ತದೆ. ಕೀಲು ನೋವು ಅಥವಾ ಗೌಟ್ ಸಮಸ್ಯೆ ಕಾಣಿಸಿಕೊಂಡರೆ, ಅದು ದೇಹದಲ್ಲಿ ಇತರ ಗಂಭೀರ ಕಾಯಿಲೆಗಳ ಮುನ್ಸೂಚನೆಯೂ ಆಗಿರಬಹುದು.
ಈ ಸಮಸ್ಯೆಯಿಂದ ಪಾರಾಗಲು ಸರಳ ಮಾರ್ಗಗಳು:
-
ತೂಕ ನಿಯಂತ್ರಣ: ದೇಹದ ತೂಕವು ಅಧಿಕವಾಗಿದ್ದರೆ ಯೂರಿಕ್ ಆ್ಯಸಿಡ್ ಶೇಖರಣೆಗೊಳ್ಳುವ ವೇಗ ಹೆಚ್ಚಾಗುತ್ತದೆ. ಹೀಗಾಗಿ ತೂಕವನ್ನು ಹತೋಟಿಯಲ್ಲಿಡುವುದು ಅತ್ಯಗತ್ಯ.
-
ಸಮತೋಲಿತ ಆಹಾರ: ಪ್ಯೂರಿನ್ ಅಂಶ ಹೆಚ್ಚಿರುವ ಆಹಾರಗಳು ಮತ್ತು ಅತಿ ಎಣ್ಣೆಯ ಪದಾರ್ಥಗಳಿಂದ ದೂರವಿರಿ. ಹಣ್ಣು, ತರಕಾರಿಗಳು ಮತ್ತು ನಾರಿನಾಂಶವಿರುವ ಆಹಾರಗಳನ್ನು ಹೆಚ್ಚು ಬಳಸಿ.
-
ಸಾಕಷ್ಟು ನೀರು ಕುಡಿಯುವುದು: ದಿನವಿಡೀ ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯುವುದರಿಂದ ದೇಹದಲ್ಲಿರುವ ಹಾನಿಕಾರಕ ತ್ಯಾಜ್ಯಗಳು ಮೂತ್ರದ ಮೂಲಕ ಹೊರಹೋಗಲು ಸಹಾಯSವಾಗುತ್ತದೆ.
-
ವೈದ್ಯರ ಸಲಹೆ: ಯಾವುದೇ ಲಕ್ಷಣಗಳು ಕಂಡುಬಂದಲ್ಲಿ ನಿರ್ಲಕ್ಷಿಸದೆ, ಕಾಲಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ಮತ್ತು ವೈದ್ಯರ ಮಾರ್ಗದರ್ಶನದಂತೆ ಚಿಕಿತ್ಸೆ ಪಡೆಯುವುದು ಬುದ್ಧಿವಂತಿಕೆ.