ಮಾವು ಹಣ್ಣುಗಳ ರಾಜ ಎಂದೇ ಪ್ರಖ್ಯಾತವಾಗಿದೆ. ಮಾವು ಸದಾಕಾಲ ದೊರೆಯುವ ಹಣ್ಣಲ್ಲ. ಬೇಸಿಗೆ ಕಾಲದಲ್ಲಿ ಪ್ರಾರಂಭವಾಗಿ ಮಳೆಗಾಲ ಆರಂಭವಾಗುವವರೆಗೂ ಲಭ್ಯವಿರುತ್ತದೆ. ಮಾವಿನ ಹಣ್ಣು ಕಿರಿಯರಿಂದ ಹಿಡಿದು ಮುದುಕರವರೆಗೂ ಅಚ್ಚುಮೆಚ್ಚಿನ ಹಣ್ಣಾಗಿದ್ದು ಕನ್ನಡ ಕವಿಗಳ ವರ್ಣನೆಯಲ್ಲೂ ಮುಖ್ಯ ಪಾತ್ರವಹಿಸಿದೆ.
ಸಂಸ್ಕøತದಲ್ಲಿ ಮಾವಿನ ಹಣ್ಣಿಗೆ “ಆಮಫಲ” ಎಂದು ಕರೆಯುತ್ತಾರೆ. ಮಾವಿನ ತವರು ಭಾರತ ಹಾಗೂ ಬರ್ಮಾ. ಹಣ್ಣು ಅತಿ ಮಧುರ, ಸುವಾಸನಾಯುಕ್ತ, ಇದರ ರಸ ಜಿಹ್ವಾಚಾಪಲ್ಯವನ್ನು ಸೆಳೆಯುತ್ತದೆ. ಈ ಹಣ್ಣಿನ ಸ್ವೀಕರಣೆ ಎಲ್ಲರಿಗೂ ಅಚ್ಚುಮೆಚ್ಚು.
ಮಾವಿನ ತಳಿಗಳು
- ರಸಪೂರಿ
- ಬಾದಾಮಿ
- ಮಲಗೋವಾ
- ತೋತಾಪುರಿ – ಮುಂತಾದ ಹಲವಾರು ಬಗೆಗಳಿವೆ.
ಮಾವಿನ ಹಣ್ಣಿನಿಂದ ದೊರೆಯುವ ಪೋಷಕಾಂಶಗಳು
100 ಗ್ರಾಂ ಮಾವಿನ ಹಣ್ಣಿನಲ್ಲಿ ದೊರೆಯುವ ಪೋಷಕಾಂಶಗಳು ಹೀಗಿವೆ
- ತೇವಾಂಶ- 81.0 ಗ್ರಾಂ
- ಸಸಾರಜನಕ-0.6 ಗ್ರಾಂ
- ಮೇದಸ್ಸು-0.4 ಗ್ರಾಂ
- ಖನಿಜಾಂಶ-0.4 ಗ್ರಂ
- ಕಾರ್ಬೋಹೈಡೇಟ್ಸ್– 16.9 ಗ್ರಾಂ
- ಕ್ಯಾಲ್ಸಿಯಂ- 14 ಮಿಲಿಗ್ರಾಂ
- ಫಾಸ್ಪರಸ್– 16 ಮಿಲಿಗ್ರಾಂ
- ಕಬ್ಬಿಣ-1.3 ಮಿಲಿಗ್ರಾಂ
ಮಾವಿನ ಹಣ್ಣಿನಲ್ಲಿರುವ ಔಷಧೀಯ ಗುಣಗಳು
- 1. ಹಿಮೋಗ್ಲೋಬಿನ್: ಮಾವಿನಹಣ್ಣಿನ ಸೇವನೆಯಿಂದ ರಕ್ತದಲ್ಲಿ ಹಿಮೋಗ್ಲೋಬಿನ್ ಅಂಶ ವೃದ್ಧಿಸುತ್ತದೆ.
- 2. ರಾತ್ರಿ ಕುರುಡು: ಮಾವಿನಹಣ್ಣಿನಲ್ಲಿ ಅಧಿಕ ಪ್ರಮಾಣದ ಜೀವಸತ್ವ ‘ಎ ಇರುವುದರಿಂದ ರಾತ್ರಿ ಕುರುಡಿನಿಂದ ಬಳಲುವವನಿಗೆ ಇದು ರಾಮಬಾಣವಾಗಿದೆ.
- 3. ರೋಗಗಳನ್ನು ನಿರೋಧಿಸಬಲ್ಲ ಶಕ್ತಿ: ಮಾವಿನಕಾಯಿಯ ಸೇವನೆಯಿಂದ ಕಾಲರಾ, ಆಮಶಂಕೆ ಮುಂತಾದ ರೋಗಗಳನ್ನು ನಿರೋಧಿಸಬಲ್ಲ ಶಕ್ತಿ ಅಧಿಕವಾಗಿದೆ.
- 4. ವೀರ್ಯವೃದ್ಧಿ: ಮಾವಿನಹಣ್ಣನ್ನು ಕ್ರಮಬದ್ಧವಾಗಿ ಸೇವಿಸುವುದರಿಂದ ವೀರ್ಯ ವೃದ್ಧಿಯಾಗುತ್ತದೆ. ದೇಹದ ಚರ್ಮದ ಬಣ್ಣ ಉತ್ತಮಗೊಳ್ಳುತ್ತದೆ.
- 5. ಆರೋಗ್ಯ ವೃದ್ಧಿ: ಊಟವಾದ ನಂತರ ಒಂದೊಂದು ಮಾವಿನಹಣ್ಣನ್ನು
(ದೊರೆಯುವ ಕಾಲದಲ್ಲಿ) ಸೇವಿಸುತ್ತಾ ಬಂದರೆ ಆರೋಗ್ಯ
ವೃದ್ಧಿಸುತ್ತದೆ ಹಾಗೂ ಕಣ್ಣಿನ ರೋಗಗಳು ನಿವಾರಣೆಯಾಗುತ್ತದೆ. - 6. ಹೃದಯದ ತೊಂದರೆ: ಮಾವಿನಹಣ್ಣನ್ನು ಹಿತವಾಗಿಯೂ, ಮಿತವಾಗಿಯೂ ಸೇವಿಸುವುದರಿಂದ ಹೃದಯದ ತೊಂದರೆಗಳನ್ನು ತಡೆಗಟ್ಟಬಹುದು. ಅಲ್ಲದೆ ವಾಯು ಸಂಬಂಧಿತ ರೋಗಗಳು ಶಮನಗೊಳ್ಳುವುದು.
- 7. ಜ್ಞಾಪಕ ಶಕ್ತಿ ವೃದ್ಧಿ: ಮಾವಿನಹಣ್ಣಿನ ರಸಕ್ಕೆ ಹಾಲು ಮತ್ತು 2-3 ಚಮಚದಷ್ಟು ಜೇನುತುಪ್ಪ ಬೆರಸಿ ಪ್ರತಿನಿತ್ಯ ಸೇವಿಸುತ್ತಿದ್ದರೆ ಜ್ಞಾಪಕ ಶಕ್ತಿಯು ವೃದ್ಧಿಸುತ್ತದೆ.
- 8. ಗಾಯಗಳು: ಯಾವುದಾದರೂ ಆಯುಧಗಳಿಂದ ಗಾಯಗಳಾದರೆ ಒಣಗಿದ ಮಾವಿನ ಎಲೆಗಳನ್ನು ಸುಟ್ಟು ಬೂದಿ ಮಾಡಿ ಗಾಯಗಳ ಮೇಲೆ ಒತ್ತಿ ಹಿಡಿದರೆ ಕೂಡಲೇ ರಕ್ತಸ್ರಾವವು ನಿಯಂತ್ರಣಗೊಳ್ಳುವುದು
ಹಾಗೂ ಗಾಯ ಶೀಘ್ರದಲ್ಲೇ ಗುಣವಾಗುವುದು. - 9. ನರ ದೌರ್ಬಲ್ಯ: ನರ ದೌರ್ಬಲ್ಯ ಉಂಟಾದಾಗ ಸಾಧಾರಣ ಮಾವಿನಕಾಯಿಯನ್ನು ತಿನ್ನುವುದರಿಂದ ನರ ದೌರ್ಬಲ್ಯ
ನಿವಾರಣೆಯಾಗುವುದಲ್ಲದೆ ಜ್ಞಾಪಕ ಶಕ್ತಿ ಹೆಚ್ಚುತ್ತದೆ. - 10. ಅತಿಸಾರ ಭೇದಿ: ಮಾವಿನ ಚಿಗುರಿನಿಂದ ಕಷಾಯ ತಯಾರಿಸಿ ದಿನಕ್ಕೆ 2 ಬಾರಿ ಕುಡಿಯುವುದರಿಂದ ಅತಿಸಾರ ಭೇದಿ ನಿಯಂತ್ರಣಗೊಳ್ಳುವುದು.
- 11. ಆಯಾಸ ನಿವಾರಣೆ: ಮಾವಿನಕಾಯಿಯ ಜೊತೆ ಸ್ವಲ್ಪ ಅಡುಗೆ ಉಪ್ಪನ್ನು ಬೆರಸಿ ಸೇವಿಸುವುದರಿಂದ ಅತಿಯಾದ ಆಯಾಸ ಹಾಗೂ ಬಾಯಾರಿಕೆ ಕಡಿಮೆಯಾಗುತ್ತದೆ.
- 12. ಮೂಲವ್ಯಾಧಿ: ಹುಣಸೆ ಚಿಗುರಿನೊಂದಿಗೆ ಎಳೆ ಮಾವಿನಕಾಯಿಯನ್ನು ಬೇಯಿಸಿಕೊಂಡು ಸೇವಿಸುವುದರಿಂದ, ಉಷ್ಣ ಕಡಿಮೆಯಾಗುತ್ತದೆ, ಮಲ ದ್ವಾರದಲ್ಲಿ ನೋವು ಕಡಿಮೆಯಾಗುತ್ತದೆ. ಮೂಲವ್ಯಾಧಿ ನಿವಾರಣೆಯಾಗುತ್ತದೆ.
- 13. ಕೆಮ್ಮು: ಮಾವಿನ ಚಿಗುರನ್ನು ಚೆನ್ನಾಗಿ ಕಚ್ಚಿ ಅಗಿಯುವುದರಿಂದ ಕೆಮ್ಮು, ಶಮನಗೊಳ್ಳುವುದು, ವಸಡುಗಳಿಂದ ರಕ್ತಸ್ರಾವವಾಗುತ್ತಿದ್ದರೆ ನಿಲ್ಲುವುದು, ಹಲ್ಲುನೋವು ಕಡಿಮೆಯಾಗುವುದು.
14. ಜಂತು ಹುಳುಗಳು: ಮಾವಿನ ಓಟೆಯಲ್ಲಿರುವ ಬೀಜವನ್ನು ಚೆನ್ನಾಗಿ ಅರೆದು ಮಜ್ಜಿಗೆಯೊಂದಿ ದಿನಕ್ಕೆ 2-3 ಬಾರಿ ಸೇವಿಸುತ್ತಿದ್ದರೆ – ಜಂತು ಹುಳುಗಳು ನಾಶವಾಗುತ್ತವೆ, ಆಮಶಂಕೆ ನಿವಾರಣೆಯಾಗುತ್ತದೆ, ಮೂಲವ್ಯಾಧಿ ನಿವಾರಣೆಯಾಗುತ್ತದೆ. - 15. ಋತುಸ್ರಾವ: ಮಾವಿನಕಾಯಿಯ ಸಿಪ್ಪೆ ಹುರಿದು ಪ್ರತಿನಿತ್ಯ ಅಲ್ಪಅದೇ ಪ್ರಮಾಣದಲ್ಲಿ – ಸೇವಿಸುವುದರಿಂದ ಅತಿಯಾಗಿ ಋತುಸ್ರಾವ ಆಗ ಆಗುವುದಿಲ್ಲ.
ಮಾವಿನ ಹಣ್ಣಿನಿಂದ ಹಲವು ಆರೋಗ್ಯಕರ ಉಪಯೋಗಗಳಿವೆ. ಆದರೆ ನಾವು ಅದನ್ನು ಅರಿತು ಸರಿಯಾಗಿ ಬಳಕೆ ಮಾಡದರೆ ಹೆಚ್ಚು ಅನುಕೂಲಗಳು ಸಿಗಲು ಸಾಧ್ಯ. ಈ ಮಾಹಿತಿ ನಿಮಗೆ ಇಷ್ಟವಾದರೆ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ.
Health Tips, Mango Fruit benefits,