ದಾವಣಗೆರೆ : ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ತಂಬಾಕು ಉತ್ಪನ್ನ ಮಾರಾಟ ಮಾಡುವಂತಹವರು ಕಡ್ಡಾಯವಾಗಿ ಪರವಾನಗಿ ಪಡೆಯ ಬೇಕಾಗುತ್ತದೆ ಎಂದು ಜಿಲ್ಲಾ ಸರ್ವೇಕ್ಷಣಾ ಧಿಕಾರಿ ಡಾ.ಜಿ.ಡಿ. ರಾಘವನ್ ತಿಳಿಸಿದರು. ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಆ. 21 ರಿಂದ ಸೆ. 21 ರ ಒಳಗೆ ಪರವಾನಗಿ ಪಡೆಯಬೇಕು. ಒಂದೊಮ್ಮೆ ಪಡೆಯದಿದ್ದಲ್ಲಿ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳುತ್ತದೆ ಎಂದು ಎಚ್ಚರಿಸಿದರು.
ತಂಬಾಕು ಉತ್ಪನ್ನಗಳ ದುಷ್ಪರಿಣಾಮದ ಪರಿಣಾಮವಾಗಿ ದೇಶದಲ್ಲಿ ದಿನಕ್ಕೆ 1350 ಜನರು ಸಾವನ್ನಪ್ಪುತ್ತಿದ್ದಾರೆ. ವಿಶ್ವದಲ್ಲಿ 13.50 ಲಕ್ಷದಷ್ಟು ಜನರು ಸಾಯುತ್ತಿದ್ದಾರೆ.
ತಂಬಾಕು ಉತ್ಪನ್ನಗಳ ಬಳಕೆಯಿಂದ ಜನರು ಅನೇಕ ರೋಗಗಳಿಗೆ ತುತ್ತಾಗುವುದು ಮತ್ತು ಸಾವನ್ನಪ್ಪುವುದ ತಡೆಗಟ್ಟಲು ನಿಟ್ಟಿನಲ್ಲಿ ಪರವಾನಗಿ ಕಡ್ಡಾಯ ಮಾಡಲಾಗುತ್ತಿದೆ ಎಂದು ತಿಳಿಸಿದರು.
ದೇಶಾದ್ಯಂತ ಐದು ಮಹಾನಗರ ಪಾಲಿಕೆ ಯಲ್ಲಿ ಪರವಾನಗಿ ಕಡ್ಡಾಯ ಮಾಡ ಲಾಗುತ್ತಿದೆ. ಅದರಲ್ಲಿ ದಾವಣಗೆರೆ ಮಹಾ ನಗರಪಾಲಿಕೆಯಲ್ಲಿ ಪೈಲಟ್ ಯೋಜನೆ ಜಾರಿಗೆ ತರಲಾಗಿದೆ. ಮುಂದಿನ ದಿನಗಳಲ್ಲಿ ಎಲ್ಲ ಕಡೆ ಪರವಾನಗಿ ವಿಸ್ತರಿಸುವ ಉದ್ದೇಶ ಇದೆ ಎಂದು ತಿಳಿಸಿದರು.
ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವಂತದ್ದನ್ನು ನಿಯಂತ್ರಿಸುವ ಉದ್ದೇಶದಿಂದ ಪರವಾನಗಿ ಕಡ್ಡಾಯ ಮಾಡುವ ಜೊತೆಗೆ ಕೋಟ್ಪಾ ಕಾಯ್ದೆ ಪಾಲನೆ ಮಾಡಬೇಕಾಗುತ್ತದೆ ಎಂದು ತಿಳಿಸಿದರು.
ಮಹಾನಗರ ಪಾಲಿಕೆ ಸಮುದಾಯ ಆರೋಗ್ಯಾಧಿಕಾರಿ ಡಾ. ಸುಧೀಂದ್ರ, ರಮೇಶ್ ಪಾಟೀಲ್, ಸೋನು, ಕೆ.ಪಿ. ದೇವರಾಜ್ ಇತರರು ಇದ್ದರು.
ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ತಂಬಾಕು ವ್ಯಾಪಾರ ಮಾಡಲು ಪರವಾನಿಗೆ ಕಡ್ಡಾಯ
Leave a comment