ನ್ಯುಮೋನಿಯಾ ನಿಯಂತ್ರಣ ಹೋರಾಟದಲ್ಲಿ ಜಯಶಾಲಿಯಾಗೋಣ: ಡಾ.ಎನ್.ಕೆ.ಕಾಳಪ್ಪನವರ್ ವಿಶೇಷ ಲೇಖಕ

ದಾವಣಗೆರೆ : ನವೆಂಬರ್ 12, 2023ರ ದಿನವನ್ನು ವಿಶ್ವ ನ್ಯುಮೋನಿಯಾ ದಿನಾಚಾರಣೆಯನ್ನಾಗಿ ವಿಶ್ವದೆಲ್ಲೆಡೆ ಆಚರಿಸಲಾಗುತ್ತಿದೆತನ್ಮಿತ್ತ ಈ ಲೇಖನ.

ವಿಶೇಷ ಲೇಖನ: ಡಾ.ಎನ್.ಕೆ.ಕಾಳಪ್ಪನವರ್

ವಿಶ್ವದಾದ್ಯಂತ ನವೆಂಬರ್ 12,2023 ರರಂದು “ವಿಶ್ವ ನ್ಯುಮೋನಿಯಾ ದಿನವನ್ನುಆಚರಿಸಲಾಗುತ್ತದೆ. ಈ ದಿನವನ್ನು 2009 ರಂದು ಜಗತ್ತಿನಾದ್ಯಂತ ಮಾರಕ ಕಾಯಿಲೆಯಾದ ನ್ಯುಮೋನಿಯಾವನ್ನು ತಡಗಟ್ಟಲು ಹಾಗೂ ಕಾಯಿಲೆಯಿಂದ ಬಳಲುತ್ತಿರುವವರಿಗೆ ಸೂಕ್ತ ಚಿಕಿತ್ಸೆಯನ್ನು ನೀಡಲು ಜಾಗೃತಿ ಕಾರ್ಯಕ್ರಮವನ್ನಾಗಿ ಮಾಡಲಾಯಿತು.

ಭಾರತದೇಶವು ಶೇ. 44 ರಷ್ಟು ವಿಶ್ವದ 5 ವರ್ಷದ ಒಳಗಿನ ಮಕ್ಕಳ ಸಂಖ್ಯೆಯನ್ನು ಹೊಂದಿದೆ. ಸರ್ಕಾರ ಹಾಗು ಸರ್ಕಾರೇತರ ಸಂಘ ಸಂಸ್ಥೆಗಳಿಂದ ಹಾಗೂ ವೈದ್ಯಕೀಯ ರಂಗದಿಂದ ಸಾಕಷ್ಟು ಪ್ರಯತ್ನಗಳನ್ನು ಮಾಡಿದರೂ ನ್ಯುಮೋನಿಯಾ ಖಾಯಿಲೆಯು 5 ವರ್ಷ ಒಳಗಿನ ಮಕ್ಕಳಲ್ಲಿ ಸುಮಾರು35ರಿಂದ40 ಲಕ್ಷ ರೋಗಿಗಳು ಪ್ರತಿ ವರ್ಷ ವಿಶ್ವದೆಲ್ಲೆಡೆ ಕಾಯಿಲೆಯಿಂದ ಬಳಲುತ್ತಾರೆ ಮತ್ತುವಿಶ್ವದಾದ್ಯಂತ ಪ್ರತಿ 20 ಸೆಕೆಂಡಿಗೆ ಒಂದು ಮಗು ನ್ಯುಮೋನಿಯಾ ದಿಂದ ಸಾವನ್ನಪ್ಪುತ್ತದೆ.

ನಮ್ಮದೇಶದಿಂದಲೆ ಜಗತ್ತಿನ ಶೇ. 30 ರಷ್ಟು ಸಾವುಗಳು ನ್ಯುಮೋನಿಯಾ ದಿಂದಆಗುತ್ತಿವೆ.ನಮ್ಮದೇಶದಲ್ಲಿ ಸುಮಾರು 3 ರಿಂದ 4 ಲಕ್ಷ ಮಕ್ಕಳು ಸಾವನ್ನುಪ್ಪುತ್ತಾರೆ.ಭಾರತದಲ್ಲಿ ಪ್ರತಿ 1000 ಹುಟ್ಟುವ ಮಕ್ಕಳಲ್ಲಿ 33 ಮಕ್ಕಳು ನ್ಯುಮೋನಿಯಾ ದಿಂದ ಸಾವನ್ನಪ್ಪುತ್ತವೆ, ಈ ಸಾವು ಮಂದುವರೆದ ದೇಶಗಳಿಗಿಂತ 15 ಪಟ್ಟು ನಮ್ಮದೇಶದಲ್ಲಿ ಸಾವನ್ನಪ್ಪುತ್ತಿದ್ದಾರೆ.ಈ ಖಾಯಿಲೆ ಕುರಿತು ಕೇವಲ ವೈದ್ಯಕೀಯರಂಗದವರಿಗಲ್ಲದೆ ಜನ ಸಾಮಾನ್ಯರಿಗೂ ಈ ಖಾಯಿಲೆಯ ಸಮಗ್ರ ಮಾಹಿತಿಅವಶ್ಯವಿದ್ದುಅದರಿಂದ ಎಷ್ಟೋ ಪ್ರಮಾಣದಲ್ಲಿಖಾಯಿಲೆಯನ್ನುತಡೆಗಟ್ಟಬಹುದಾಗಿದೆ.

ನ್ಯುಮೋನಿಯಾ ಎಂದರೇನು ?

ನ್ಯುಮೋನಿಯಾ ಎಂದರೆ ಪುಪ್ಪಸಗಳು, ರೋಗಾಣುಗಳಿಂದ ಬಳಲಿ ಕಫಗಟ್ಟುವಿಕೆ ಹಾಗೂ ಉಸಿರಾಟದಲ್ಲಿ ತೀರ್ವತೆಯನ್ನುಂಟು ಮಾಡುವ ಖಾಯಿಲೆಗೆ ನ್ಯುಮೋನಿಯಾ ಎಂದು ಕರೆಯುವರು. ಈ ಖಾಯಿಲೆಯು 5 ವರ್ಷದ ಒಳಗಿನ ಮಕ್ಕಳಲ್ಲಿ ಹೆಚ್ಚಿನ ತೀರ್ವತೆಯನ್ನು ಹೊಂದಿದ್ದು ಲಕ್ಷಾಂತರ ಮಕ್ಕಳ ಸಾವಿಗೆ ಕಾರಣವಾಗಿದೆ.

ನ್ಯುಮೋನಿಯಾ ರೋಗದ ಲಕ್ಷಣಗಳು

ವರ್ಷದ ಒಳಗಿನ ಮಕ್ಕಳಲ್ಲಿ
  • ಹಾಲು ಕುಡಿಯಲು ನಿರಾಕರಿಸುವುದು
  • ಜ್ವರ ಕೆಮ್ಮು, ಹೆಚ್ಚು ಅಳುವುದು
  • ಮಂದವಾಗಿರುವುದು
  • ಮೈ ಬಣ್ಣದಲ್ಲಿ ಬದಲಾವಣೆ
  • ವೇಗವಾಗಿ ಉಸಿರಾಡುವುದು
  • ಪಕ್ಕೆ ಸೆಳೆತ
  • ಎಚ್ಚರ ತಪ್ಪವುದು.
    ಮಗು ನೀಲಿ ಬಣ್ಣಕ್ಕೆತಿರುಗುವುದು.
ವರ್ಷದ ಮೇಲಿನ ಮಕ್ಕಳಲ್ಲಿ
  • ಜ್ವರ,ಕೆಮ್ಮು,ಉಸಿರಾಟದಲ್ಲಿ ಏರಿಳಿತ
    ಉಬ್ಬಸ, ಪಕ್ಕೆ ಸೆಳೆಯುವುದು
  • ಉಸಿರಾಡುವಾಗ ಶಬ್ದ ಬರುವುದು
  • ನೀಲಿ ಬಣ್ಣಕ್ಕೆತಿರುಗುವುದು ಮೂರ್ಛೆರೋಗ (ಫಿಟ್ಸ) ಬರುವುದು.

ಯಾವ ಮಕ್ಕಳಲ್ಲಿ ಈ ಖಾಯಿಲೆ ಸಹಜವಾಗಿ ಕಾಣುವುದು

  • ದಿನ ತುಂಬದೇ ಹುಟ್ಟಿದ ಮಕ್ಕಳು ( ಫ್ರೀಮ್ಯಾಜುರ)
  • ಎದೆ ಹಾಲು ಉಣಿಸದಿರುವುದು
  • ಪೌಷ್ಥಿಕಾಂಶದ ಕೊರತೆ
  • ಹೃದಯ ಖಾಯಿಲೆ
  • ಸೀಳು ತುಟಿ ಹಾಗು ಸೀಳು ಅಂಗಳ
  • ಚುಚ್ಚು ಮದ್ದು ಹಾಕಿಸದೆ ಇರುವುದು
  • ಬಾಟಲಿ ಅಥವಾ ಪೌಡರ
  • ಹಾಲು ಕುಡಿಯದ ಮಕ್ಕಳು
  • ಬುದ್ದಿ ಮಂದ ಮಕ್ಕಳು
    ವಾಯು ಮಾಲಿನ್ಯವಿರುವ ಸ್ಥಳ
  • ಒಳಾಂಗಣ ವಾಯುಮಾಲಿನ್ಯ

ನ್ಯುಮೋನಿಯಾ ಖಾಯಿಲೆಯಿಂದ ಆಗಬಹುದಾದ ಆತಂಕಗಳು

  • ಮಗುವು ಉಸಿರಾಟದ ತೊಂದರೆಯಾಗಿ ಬೇಗನೆ ಸುಸ್ತಾಗುವುದು
  • ಮಗುವು ಕೆಮ್ಮು ಹಾಗು ಜ್ವರದಿಂದ ಬಳಲುವುದು
  • ಖಾಯಿಲೆಯ ತೀವ್ರತೆಯಿಂದ ಮಗುವಿನ ಪುಪ್ಪಸದಲ್ಲಿತೀರ್ವವಾಗುತ್ತದೆ.
  • ಪುಪ್ಪಸಗಳು ಒಡೆದು ಎದೆಯಲ್ಲಿ ಗಾಳಿ ತುಂಬುವುದು
  • ತೀವ್ರ ಉಸಿರಾಟದ ತೊಂದರೆಯಿಂದ ಎಚ್ಚರತಪ್ಪುವುದು
  • ದೇಹದ ಅಂಗಾಂಗಳ ವೈಫಲತೆಯುಂಟಾಗುವುದು

ನ್ಯುಮೋನಿಯಾ ಖಾಯಿಲೆಗೆ ತಪಾಸಣೆ ಹಾಗೂ ಚಿಕಿತ್ಸೆ

  1. ಮುಖ್ಯವಾಗಿ ವೈದ್ಯರತಪಾಸಣೆ ಮತ್ತು ಸಲಹೆ
  2. ರಕ್ತ ಪರೀಕ್ಷೆ
  3. ಕ್ಷಕಿರಣ ಹಾಗೂ ಸಿಟಿ/ ಎಂಆರ.ವಿ ಪರೀಕ್ಷೆ
  4. ಅಲ್ಟ್ರಾಸೌಂಡ ಪರೀಕ್ಷೆ

ನ್ಯುಮೋನಿಯಾ ಚಿಕಿತ್ಸೆ ರೂಪಗಳು

  • ಮುಖ್ಯವಾಗಿ ಜ್ವರಕ್ಕ್ರೆ ಮಾತ್ರೆ
  • ಉಸಿರಾಟದ ತೊಂದರೆ ಇದ್ದಲ್ಲಿಆಮ್ಲಜನಕದ ಚಿಕಿತ್ಸೆ
  • ಆಂಟಿಬಯಾಟಿಕ್ಸ ( ಪ್ರತಿ ಜೀವಕಗಳು)
  • ಮಗುವಿಗೆ ಹೆಚ್ಚು ನೀರಿನಂಶ
  • ಖಾಯಿಲೆ ಹೆಚ್ಚಿಗೆಇದ್ದಲ್ಲಿಆಸ್ಪತ್ರೆಗೆ ದಾಖಲಾಗುವುದು
  • ಕೃತಕ ಉಸಿರಾಟ ಮುಂತಾದ ಚಿಕಿತ್ತೆ ಬೇಕಾಗುತ್ತದೆ.

ಚಿಕಿತ್ಸೆಯನ್ನುತಡೆಗಟ್ಟುವಿಕೆ

ಮೊದಲೆಯದಾಗಿ ಸ್ವಚ್ಚವಾಗಿ ಕೈ ತೊಳೇಯುವುದು ಹಾಗೂ ರೋಗಿಗಳನ್ನು ಬೇರ್ಪಡಿಸುವುದು ಮುಖ್ಯವಾಗಿ ಕೆಳಕಂಡ ಚುಚ್ಚುಮದ್ದುಗಳನ್ನು ತಪ್ಪದೆ ತಾಯಂದಿರುತಮ್ಮ ಮಗುವಿಗೆ ಹಾಕಿಸಬೇಕು. ಉದಾಹರಣೆಗೆ ಬಿ.ಸಿ.ಜಿ., ಡಿ..ಪಿ.ಟಿ., ಹಿಬ್ಬ್ ಲಸಿಕೆ.ನ್ಯುಮೋನಿಯಾ (ನಿಮೊಕಾಕಲ್) ಲಸಿಕೆ
ಮೀಸಲ್ ( ಧಡಾರ ) ಲಸಿಕೆ. ಇದರಿಂದ ಸುಮಾರು3 ಲಕ್ಷ ಮಕ್ಕಳಲ್ಲಾಗುವ ಸಾವು ನೋವುಗಳನ್ನು ತಡೆಗಟ್ಟಬಹುದು.

-ಡಾ.ಎನ್.ಕೆ.ಕಾಳಪ್ಪನವರ್,

ರಾಷ್ಟ್ರೀಯ ಮಕ್ಕಳ ಶ್ವಾಸಕೋಶ ತಜ್ಞರ ಅಸೋಸಿಯೇಷನ್ ಅಧ್ಯಕ್ಷರು

English Summary: pneumonia disease dr n.k kalappanavar suggestions

Share this Article
Leave a comment

Leave a Reply

Your email address will not be published. Required fields are marked *