- ದಾವಣಗೆರೆ: (ಆ.ವಿ) ಮಕ್ಕಳಲ್ಲಿ ಸಕ್ಕರೆ ಸೇವನೆ ಪ್ರಮಾಣ ಹೆಚ್ಚಳ : ಶಾಲೆಗಳಲ್ಲಿ ಶುಗರ್ ಬೋರ್ಡ್ ಸ್ಥಾಪಿಸಲು ಸಿಬಿಎಸ್ಇ ಸೂಚನೆ :ಮಕ್ಕಳ ಸಕ್ಕರೆ ಸೇವನೆಯನ್ನು ಮೇಲ್ವಿಚಾರಣೆ ಮಾಡಲು ಮತ್ತು ಕಡಿಮೆ ಮಾಡಲು ಶುಗರ್ ಬೋರ್ಡ್ ಸ್ಥಾಪಿಸಲು ಸಿಬಿಎಸ್ಇ ಸಂಯೋಜಿತ ಶಾಲೆಗಳಿಗೆ ನಿರ್ದೇಶನ ನೀಡಿದೆ . ಕಳೆದ ದಶಕಗಳಲ್ಲಿ ಮಕ್ಕಳಲ್ಲಿ ಟೈಪ್ 2 ಮದುಮೇಹದಲ್ಲಿ ಗಮನಾರ್ಹ ಹೆಚ್ಚಳ ಕಂಡು ಬಂದಿದೆ ಎಂದು ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ ಮಂಡಳಿ ಗಮನಿಸಿದ್ದು ಮಕ್ಕಳು ಸಕ್ಕರೆ ಅಂಶ ಹೆಚ್ಚಿರುವ ತಿನಿಸು ,ಪಾನೀಯಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸುತ್ತಿರುವುದರಿಂದ ಈ ಕ್ರಮಕ್ಕೆ ಸಿಬಿಎಸ್ಇ ಮುಂದಾಗಿದೆ . ಹೆಚ್ಚಾಗಿ ಶಾಲಾ ಪರಿಸರದಲ್ಲಿ ಸಕ್ಕರೆ ತಿಂಡಿಗಳು ಪಾನೀಯಗಳು ಮತ್ತು ಸಂಸ್ಕರಿಸದ ಆಹಾರಗಳ ಸುಲಭ ಲಭ್ಯತೆಯಿಂದಾಗಿ ಮಕ್ಕಳು ಸುಲಭವಾಗಿ ಖರೀದಿಸಿ ಸೇವಿಸುತ್ತಾರೆ . ಸಕ್ಕರೆಯ ಅತಿಯಾದ ಸೇವನೆಯು ಮಧುಮೇಹವನ್ನು ಹೆಚ್ಚಿಸುವುದಲ್ಲದೆ ಬೊಜ್ಜು ಮತ್ತು ಹಲ್ಲಿನ ಸಮಸ್ಯೆಗಳು ಮತ್ತು ಇತರ ಆರೋಗ್ಯ ಸಮಸ್ಯೆ ಗಳಿಗೆ ಕಾರಣವಾಗುತ್ತವೆ . 4 ರಿಂದ 10 ವರ್ಷ ವಯಸ್ಸಿನ ಮಕ್ಕಳಿಗೆ ದೈನಂದಿನ ಕ್ಯಾಲೋರಿ ಸೇವನೆಯಲ್ಲಿ ಸಕ್ಕರೆ ಶೇಕಡಾ 13 ರಷ್ಟು ಮತ್ತು 11 ರಿಂದ 18 ವರ್ಷ ವಯಸ್ಸಿನವರಿಗೆ ಶೇಕಡಾ 15 ರಷ್ಟಿದೆ ಎಂದು ಅದ್ಯಯನ ಗಳು ಸೂಚಿಸುತ್ತವೆ . ಇದು ವಿದ್ಯಾರ್ಥಿಗಳಿಗೆ ಮಾಹಿತಿ ಯುಕ್ತ ಆಹಾರ ಆಯ್ಕೆಗಳ ಬಗ್ಗೆ ಮಾಹಿತಿ ಶಿಕ್ಷಣ ನೀಡುತ್ತದೆ . ವಿದ್ಯಾರ್ಥಿ ಗಳಲ್ಲಿನ ದೀರ್ಘಕಾಲಿನ ಆರೋಗ್ಯ ಪ್ರಯೋಜನಗಳನ್ನು ಉತ್ತೇಜಿಸುತ್ತದೆ ಎಂದು ಸಿಬಿಎಸ್ಇ ತಿಳಿಸಿದೆ .ಈ ನಿಟ್ಟಿನಲ್ಲಿ ಜಾಗ್ರತಿ ಸೆಮಿನಾರ್ ಗಳು ಮತ್ತು ಕಾರ್ಯಗಾರಗಳನ್ನು ಆಯೋಜಿಸಲು ಶಾಲೆಗಳಿಗೆ ಸೂಚಿಸಿದೆ .
ಮಕ್ಕಳಲ್ಲಿ ಸಕ್ಕರೆ ಸೇವನೆ ಪ್ರಮಾಣ ಹೆಚ್ಚಳ

Leave a comment