ಮಕ್ಕಳ ಆರೋಗ್ಯ ಕೆಡಿಸುವ ಪಿಜ್ಜಾ, ಬರ್ಗರ್ ಹಾಗೂ ನೂಡಲ್ಸ್ (Pizza, burgers and noodles that are bad for children’s health)
ಪಿಜ್ಜಾ, ಬರ್ಗರ್, ಚಿಪ್ಸ್‌ನಂತಹ ಜಂಕ್‌ಫುಡ್‌ಗಳ ಸಮಸ್ಯೆ ಎಂದರೆ ಅವು ಮಗುವಿನ ದೈಹಿಕ ಮತ್ತು ಮಾನಸಿಕ ಬೆಳವಣಿಗೆಯನ್ನು ಬೆಂಬಲಿಸುವ ಪ್ರಮುಖ ಜೀವಸತ್ವಗಳು, ಖನಿಜಗಳು, ಫೈಬರ್ ಮತ್ತು ಇತರ ಅಗತ್ಯ ಪೋಷಕಾಂಶಗಳನ್ನು ಹೊಂದಿರುವುದಿಲ್ಲ. ಇವು ಆರೋಗ್ಯವನ್ನು ಇನ್ನಷ್ಟು ಹಾಳು ಮಾಡುವ ಅಂಶಗಳನ್ನು ಹೊಂದಿರಬಹುದು. ವಾರದಲ್ಲಿ ಹಲವಾರು ಬಾರಿ ಜಂಕ್ ಫುಡ್ ತಿನ್ನುವುದರಿಂದ ಪೌಷ್ಟಿಕಾಂಶದ ಕೊರತೆಗೆ ಕಾರಣವಾಗಬಹುದು. ಅಲ್ಲದೆ ಇದು ಮಕ್ಕಳಲ್ಲಿ ದೀರ್ಘಕಾಲದ ಕಾಯಿಲೆಗಳ ಅಪಾಯವನ್ನೂ ಹೆಚ್ಚಿಸಬಹುದು. ಮಕ್ಕಳ ಆರೋಗ್ಯದಲ್ಲಿ ಪೌಷ್ಟಿಕಾಂಶವು ನಿರ್ಣಾಯಕ ಪಾತ್ರ ವಹಿಸುತ್ತದೆ. ಈ ವಿಷಯ ಪೋಷಕರಿಗೆ ಅರಿವಿದ್ದರೂ ಕೂಡ ಮಕ್ಕಳ ಸಮಗ್ರ ಕ್ಷೇಮವನ್ನು ಉತ್ತೇಜಿಸುವ ಆಹಾರವನ್ನು ನೀಡುವಲ್ಲಿ ಪೋಷಕರು ಸೋಲುತ್ತಾರೆ. ಮಕ್ಕಳಿಗೆ ಆರೋಗ್ಯಕ್ಕೆ ಹಿತ ಎನ್ನಿಸುವ ಆಹಾರಕ್ಕಿಂತ ಬಾಯಿಗೆ ರುಚಿ ಎನ್ನಿಸುವ ಆಹಾರ ಸೇವಿಸಲು ಹೆಚ್ಚು ಇಷ್ಟಪಡುತ್ತಾರೆ. ಬಾಯಿಗೆ ರುಚಿ ಎನ್ನಿಸುವ ಕಾರಣಕ್ಕೆ ಜಂಕ್ ಫುಡ್ ಮಕ್ಕಳನ್ನು ಹೆಚ್ಚು ಆಕರ್ಷಿಸುತ್ತವೆ. ಈ ಆಹಾರಗಳಲ್ಲಿನ ಅತಿಯಾದ ಸಕ್ಕರೆ, ಉಪ್ಪು ಹಾಗೂ ಕೊಬ್ಬಿನಾಂಶವು ಡೊಪಮೈನ್ ಬಿಡುಗಡೆಯನ್ನು ಉತ್ತೇಜಿಸುತ್ತದೆ. ಇದು ಅಂತಹ ತಿನಿಸುಗಳಿಗೆ ಮಕ್ಕಳು ಹೆಚ್ಚು ಹಂಬಲಿಸುವಂತೆ ಮಾಡುತ್ತದೆ. ಅಲ್ಲದೆ, ದಾಲ್, ಅನ್ನ, ರೊಟ್ಟಿ ಸಬ್ಬಿ, ಹಣ್ಣುಗಳಂತಜ ಸಾಂಪ್ರದಾಯಿಕ ತಿನಿಸುಗಳು ಮಕ್ಕಳ ಬಾಯಿಗೆ ರುಚಿ ಎನ್ನಿಸುವುದಿಲ್ಲ.
ಜಂಕ್‌ಫುಡ್‌ನ ಈ ದುಷ್ಪರಿಣಾಮಗಳನ್ನು ಎದುರಿಸಲು, ಹೆಚ್ಚಿನ ನಾರಿನಾಂಶ ಇರುವ ಸಿರಿಧಾನ್ಯ, ಬೇಳೆಕಾಳುಗಳು, ಸೋಯಾ, ಡೇರಿ ಉತ್ಪನ್ನಗಳು, ಹಣ್ಣು-ತರಕಾರಿಗಳು, ಮಾಂಸ, ಮೀನು, ಮೊಟ್ಟೆ, ಒಣಹಣ್ಣು-ಬೀಜ ಇಂತಹ ಅಗತ್ಯ ಸಮತೋಲಿತ ಆಹಾರ ನೀಡುವುದು ಅವಶ್ಯ. ಚಿಪ್ಸ್ ತಿನ್ನಲು ಚೆನ್ನಾಗಿರುತ್ತದೆ. ಒಮ್ಮೆ ತಿಂದರೆ ತಿಂತಾನೇ ಇರಬೇಕು ಅನ್ನಿಸುತ್ತದೆ. ಆದರೆ ಇದರಲ್ಲಿ ಕ್ಯಾನ್ಸರ್‌ಗೆ ಸಂಬಂಧಿಸಿದ ಅಕ್ರಿಲಾಮೈಡ್‌ನಂತಹ ಹಾನಿಕಾರಣ ಪದಾರ್ಥ ಇರುತ್ತದೆ. ಇದರ ಅತಿಯಾದ ಸೇವನೆಯು ಹೃದಯದ ಸಮಸ್ಯೆ ಅಧಿಕ ರಕ್ತದೊತ್ತಡ ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.
ಎಣ್ಣೆಯಲ್ಲಿ ಕರಿಯುವ ಈ ಖಾದ್ಯಗಳು ಮಕ್ಕಳಿಗೆ ಅಚ್ಚುಮೆಚ್ಚು. ಆದರೆ ಇವು ಖಂಡಿತ ಆರೋಗ್ಯಕ್ಕೆ ಉತ್ತಮವಲ್ಲ. ಇದರಲ್ಲಿ ದೇಹದ ಮೇಲೆ ಪ್ರತಿಕೂಲ ಪರಿಣಾಮ ಉಂಟು ಮಾಡುವ ಅಂಶಗಳಿದ್ದು, ಆರೋಗ್ಯ ಸಮಸ್ಯೆಯನ್ನು ಉಂಟು ಮಾಡುತ್ತದೆ. ಮಿಠಾಯಿಗಳು, ಚಾಕೊಲೇಟ್‌ಗಳು ಮತ್ತು ಇತರ ಸಕ್ಕರೆ ಪದಾರ್ಥಗಳು ಕ್ಯಾಲೊರಿ ಅಂಶ ಇರುವುದಿಲ್ಲ.
ಎಣ್ಣೆಯಲ್ಲಿ ಕರಿಯುವ ಈ ಖಾದ್ಯಗಳು ಮಕ್ಕಳಿಗೆ ಅಚ್ಚುಮೆಚ್ಚು. ಆದರೆ ಇವು ಖಂಡಿತ ಆರೋಗ್ಯಕ್ಕೆ ಉತ್ತಮವಲ್ಲ. ಇದರಲ್ಲಿ ದೇಹದ ಮೇಲೆ ಪ್ರತಿಕೂಲ ಪರಿಣಾಮ ಉಂಟು ಮಾಡುವ ಅಂಶಗಳಿದ್ದು, ಆರೋಗ್ಯ ಸಮಸ್ಯೆಯನ್ನು ಉಂಟು ಮಾಡುತ್ತದೆ.