ಕಡಲೆಕಾಯಿ (ಶೇಂಗಾ ) ;ಬಡವರ ಬಾದಾಮಿ ಎಂದು ಕರೆಯಲ್ಪಡುವ ಕಡಲೆಕಾಯಿ (ಶೇಂಗಾ ) ಯಲ್ಲಿ ಅಡಗಿದೆ ಆರೋಗ್ಯ ದ ಗುಟ್ಟು . ಇದರಿಂದ ಆರೋಗ್ಯ ಕ್ಕೆ ಪ್ರೊಟೀನ್ ಗಳು ಎಷ್ಟೇಲ್ಲಾ ಪ್ರಯೋಜನಕಾರಿ ಎಂಬುದು ತಿಳಿದುಕೊಳ್ಳಿ,
ಬಡವರ ಬಾದಾಮಿ ಈ ಬೀಜ ಆರೋಗ್ಯ ಕ್ಕೆ ಎಷ್ಟು ಪ್ರಯೋಜನಕಾರಿ ಎಂಬುದು ಹೆಚ್ಚು ಜನರಿಗೆ ತಿಳಿದಿಲ್ಲ ಕಡಲೆಬೀಜವನ್ನು ದಿನನಿತ್ಯ ಅಡುಗೆಗೆ ಬಳಸುತ್ತಾರೆ ,ಆದರೆ ಕಡಲೆಕಾಯಿ ಬೀಜ ದಲ್ಲಿ ಎಷ್ಷೆಲ್ಲಾ ಪ್ರೋಟೀನ್ ಅಂಶಗಳು ಇರುತ್ತವೆ ಎಂಬುದು ನಿಮಗೆ ತಿಳಿದರೆ ನಿಜಕ್ಕೂ ನೀವು ಆಶ್ಚರ್ಯ ಪಡುತ್ತೀರ ಹೌದು ಕಡಲೆಕಾಯಿ ಬೀಜದಲ್ಲಿ ಸಾಕಷ್ಟು ವಿಟಮಿನ್ ಅಂಡ್ ಮಿನರಲ್ಸ್ ಗಳು ಅಡಗಿವೆ
ನಿಮ್ಮ ದೇಹದಲ್ಲಿ ಸುಸ್ತು ಕಡಿಮೆಯಾಗಲು ಶೇಂಗಾ ಎಷ್ಟು ಪ್ರಯೋಜನಕಾರಿಯಾಗಿದೆ ಗೊತ್ತಾ
ಚರ್ಮ ಕಳೆಗುಂದುತಿದೆಯಾ ? ಹಾಗಿದ್ದರೆ ನೀವು ಈಗಿನಿಂದಲೇ ಇದನ್ನು ತಿನ್ನಲು ಶುರು ಮಾಡಿದರೆ ಸುಸ್ತು ಮಾಯಾವಾಗಿ ,ಚರ್ಮ ಪಳಪಳ ಹೊಳೆಯುವುದು ಗ್ಯಾರಂಟಿ ,ವಿಟಮಿನ್ ಇ , ಮೆಗ್ನೀಸಿಯಂ ಹಾಗೂ ಜಿಂಕ್ ಅಂಶಗಳು ಇದರಲ್ಲಿ ಹೇರಳವಾಗಿರುವುದು .
ಕೊಬ್ಬಿನಾಂಶ ನಿಯಂತ್ರಣ ಮೂವತ್ತು ಗ್ರಾಂ ಕಡಲೆಕಾಯಿ ಯನ್ನು ಸೇವಿಸಿದರೆ ದೇಹಕ್ಕೆ ಎಂಟು ಗ್ರಾಂ ಪ್ರೋಟೀನ್ ದೊರೆಯುತ್ತದೆ .ಜೊತೆಗೆ ನಾರಿನಾಂಶ ಉತ್ತಮ ಮಟ್ಟದ ಕೊಬ್ಬು ಪೊಟ್ಯಾಸಿಯಂ ಕೂಡ ಇದೆ . ಒಲೇಕ್ ಆಸಿಡ್ ಕಡಲೆಕಾಯಿ ಯಲ್ಲಿ ಇರುವುದರಿಂದ ದೇಹದಲ್ಲಿ ಇರುವ ಕೊಲೆಸ್ಟರಾಲ್ ಅಂಶವನ್ನು ನಿಯಂತ್ರಿಸುತ್ತದೆ ಉರಿಯೂತವನ್ನು ತಡೆಗಟ್ಟತ್ತದೆ ಮತ್ತು ಚರ್ಮದ ಆರೋಗ್ಯ ವನ್ನು ಕಾಪಾಡಲು ವುದಲ್ಲದೆ ,ಆರೋಗ್ಯ ಇನ್ನಿತರ ಸಮಸ್ಯೆ ಗಳಿಗೆ ಕೂಡ ಕಡಲೆಕಾಯಿ ರಾಮಬಾಣವಾಗಿದೆ .
ಡಯಟ್ ಮಾಡಲು ಬೆಸ್ಟ್ ಪುಡ್ ಬೀಜದಲ್ಲಿರುವ ನಾರಿನಾಂಶ ಬೇಗ ಹಸಿವಾಗದಂತೆ ಮಾಡುತ್ತದೆ ,ಅದಲ್ಲದೆ ದೇಹದ ತೂಕವನ್ನು ಕಡಿಮೆ ಮಾಡಲು ಇದು ಸಹಕಾರಿ ಮಾಡುತ್ತದೆ , ಹೀಗಾಗಿ ಮಹಿಳೆಯರು ಡಯಟ್ ಮಾಡುವುದಕ್ಕೆ ಹೆಚ್ಚಾಗಿ ಸೇವಿಸುತ್ತಾರೆ . ಮೈಯಲ್ಲಿನ ಮೂಳೆಗಳನ್ನು ಸಹ ಬಲಪಡಿಸಲು ಮತ್ತು ನೀವು ಪಿಟ್ ಆಗಿ ಕಾಣಲು ಸಹಾಯ ಮಾಡುತ್ತದೆ ಈ ಕಡಲೆ ಬೀಜ ,
ಪಳಪಳ ಹೊಳೆಯಲಿದೆ ಚರ್ಮ ,ಮಕ್ಕಳಿಗೆ ಪ್ರಯೋಜನ , ಪುಟ್ಟ ಮಕ್ಕಳಿಗೆ ದೋಸೆ ಚಪಾತಿ ಮೇಲೆ ಪೀನಟ್ ಬಟರ್ ಅನ್ನು ಸವರಿ ಕೊಡುವುದರಿಂದ ಮಕ್ಕಳು ಖುಷಿಯಿಂದ ತಿನ್ನುತ್ತಾರೆ. ಪ್ರತಿದಿನ ಬೆಳೆಯುವ ಮಕ್ಕಳು ಹೆಚ್ಚು ಆಟವಾಡುತ್ತಾರೆ ಅವರಿಗೆ ಪ್ರೋಟೀನ್ ಯುಕ್ತ ಆಹಾರದ ಅವಶ್ಯಕತೆ ಇರುತ್ತದೆ .ದೇಹದ ಮಾಂಸಖಂಡಗಳ ಬೆಳವಣಿಗೆಗೆ ಕಡ್ಲೆಬೀಜ ಹಾಗೂ ಅದರಿಂದ ತಯಾರಿಸಿದ ತಿನಿಸುಗಳನ್ನು ತಿನಿಸುವುದು ತುಂಬಾ ಸಹಕಾರಿ ,ಮೆದುಳಿನ ಬೆಳವಣಿಗೆಯಿಂದ ಮಕ್ಕಳು ಹೆಚ್ಚು ಚುರುಕಾಗಿಯೂ ಕೂಡ ಇರುತ್ತಾರೆ . ಮುಖ್ಯವಾಗಿ ಮಕ್ಕಳಲ್ಲಿ ಬರುವ ಒಬೆಸಿಟಿ ನಿಯಂತ್ರಿಸಲು ಸಾಧ್ಯವಾಗುತ್ತದೆ .