ಒಂದು ಸೊಳ್ಳೆ ಕಾಯಿಲ್ (Mosquito coil ) ನಿಂದ ಹೊರಸೂಸುವ ಹೊಗೆಯ ಪ್ರಮಾಣವು ಹಲವಾರು ಸಿಗರೇಟ್‌ಗಳನ್ನು ಸೇದುವುದಕ್ಕೆ ಸಮನಾಗಿರುತ್ತದೆ ಎಂದು ಅನೇಕ ಆರೋಗ್ಯ ತಜ್ಞರು ಹೇಳುತ್ತಾರೆ.
ಈ ಕಾಯಿಲ್‌ನಲ್ಲಿ ಅನೇಕ ರಾಸಾಯನಿಕಗಳಿದ್ದು, ಸುಟ್ಟ ನಂತರ ಹೊಗೆಯ ಮೂಲಕ ನಮ್ಮ ಶ್ವಾಸಕೋಶವನ್ನು ತಲುಪುತ್ತದೆ. ಇದು ದೀರ್ಘಾವಧಿಯ ಪರಿಣಾಮಗಳನ್ನು ಬೀರುತ್ತದೆ. ಈ ಕಾರಣದಿಂದಾಗಿ, ಭವಿಷ್ಯದಲ್ಲಿ ಉಸಿರಾಟದ ತೊಂದರೆಗಳು ಉಂಟಾಗಬಹುದು. ಇದು ಅಸ್ತಮಾಗೂ ಕಾರಣವಾಗಬಹುದು. ಇದರ ಪರಿಣಾಮವು ವಿಷಕಾರಿಯಾಗಿದ್ದು ಅದು ನಮ್ಮ ಮೆದುಳಿಗೆ ಹಾನಿ ಮಾಡುತ್ತದೆ.
ಬೇಸಿಗೆ ಶುರುವಾಗಿದೆ. ಜೊತೆಯಲ್ಲೇ ಸೊಳ್ಳೆ ಕಾಟ ಸಹ. ಸೆಖೆಯ ಜೊತೆಗೆ ಸೊಳ್ಳೆಯ ಕಾಟ ರಾತ್ರಿಯಿಡೀ ಜಾಗರಣೆಯಿರುವಂತೆ ಮಾಡುತ್ತದೆ. ಹೀಗಾಗಿ ಬಹುತೇಕರು ಸೊಳ್ಳೆ ಬತ್ತಿ ಅಥವಾ ಲಿಕ್ವಿಡ್ ಉಪಯೋಗಿಸುತ್ತಾರೆ. ಆದರೆ ಸೊಳ್ಳೆ ಸುರುಳಿಗಳನ್ನು ಹಚ್ಚಿ ಇಡುವುದು ಕೇವಲ ನಿಮ್ಮ ಕೋಣೆಯಲ್ಲಿನ ಸೊಳ್ಳೆಗಳನ್ನು ಮಾತ್ರ ಕೊಲ್ಲುವುದಿಲ್ಲ. ಬದಲಿಗೆ, ದೀರ್ಘಾವಧಿಯಲ್ಲಿ, ಅದು ನಿಮ್ಮನ್ನು ಸಹ ಕೊಲ್ಲಬಹುದು. ಒಂದು ಸೊಳ್ಳೆ ಕಾಯಿಲ್ 100 ಸಿಗರೇಟ್‌ಗಳಷ್ಟು ಅಪಾಯಕಾರಿ . ಸೊಳ್ಳೆ ಕಾಯಿಲ್‌ನಲ್ಲಿ ಸೊಳ್ಳೆಯನ್ನು ಹಿಮ್ಮೆಟ್ಟಿಸಲು ಅಥವಾ ಅವು ನಿಮ್ಮನ್ನು ಕಚ್ಚುವ ಸಾಧ್ಯತೆಯನ್ನು ಕಡಿಮೆ ಮಾಡಲು ಅಲ್ಯೂಮಿನಿಯಂ, ಕ್ರೋಮಿಯಂ ಮತ್ತು ತವರ, ಕೀಟನಾಶಕಗಳು, ಕೀಟನಾಶಕ ಪೈರೆಥ್ರಿನ್ ಅಥವಾ ಆರೊಮ್ಯಾಟಿಕ್ ಪದಾರ್ಥಗಳನ್ನು ಸೇರಿಸಿರುತ್ತಾರೆ. ಇದು ಆರೋಗ್ಯಕ್ಕೆ ತುಂಬಾ ಮಾರಕವಾಗಿದೆ.
ಸೊಳ್ಳೆ ಕಾಯಿಲ್ ಬಳಕೆಯ ಅಡ್ಡಪರಿಣಾಮಗಳು :ಅಸ್ತಮಾ ಮತ್ತು ದೀರ್ಘಕಾಲದ ಪ್ರತಿರೋಧಕ ಶ್ವಾಸಕೋಶದ (Lungs) ಕಾಯಿಲೆ (COPD) ಯಿಂದ ಬಳಲುತ್ತಿರುವವರು ಜಾಗರೂಕರಾಗಿರಬೇಕು. ಸೊಳ್ಳೆ ಸುರುಳಿಗಳನ್ನು ಸುಡುವುದರಿಂದ ಆಸ್ತಮಾ ದಾಳಿ, ಉಸಿರಾಟದ ತೊಂದರೆಗಳು ಮತ್ತು ಕೆಮ್ಮು (Cough) ಕೂಡ ಉಂಟಾಗುತ್ತದೆ.
ಸೊಳ್ಳೆ ಸುರುಳಿಗಳು ಕಾರ್ಸಿನೋಜೆನ್‌ಗಳನ್ನು ಒಳಗೊಂಡಿರುತ್ತವೆ. ಇದು ಶ್ವಾಸಕೋಶದ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ. ಸುರುಳಿಗಳಲ್ಲಿರುವ ವಸ್ತುಗಳು ತಲೆನೋವನ್ನು
ಉಂಟುಮಾಡಬಹುದು. ಸೊಳ್ಳೆ ಕಾಯಿಲ್ ಇನ್ಹೇಲ್ ಮಾಡಲು ಸುರಕ್ಷಿತವಲ್ಲದ ರಾಸಾಯನಿಕಗಳನ್ನು ಹೊಂದಿರುತ್ತವೆ. ಕೆಲವರು ಸೊಳ್ಳೆಗಳನ್ನು ತಪ್ಪಿಸಲು ದೇಹಕ್ಕೆ ಕ್ರೀಂ ಹಚ್ಚುತ್ತಾರೆ.ಆದರೆ ಇದು ಚರ್ಮದ ಮೇಲೆ ಅಡ್ಡ ಪರಿಣಾಮಗಳನ್ನು ಬೀರುತ್ತದೆ. ಸೊಳ್ಳೆಗಳನ್ನು ಹೋಗಲಾಡಿಸಲು ಹಚ್ಚುವ ಈ ಕ್ರೀಂ ತ್ವಚೆಯ ಮೇಲೂ ಉತ್ತಮ ಪರಿಣಾಮ ಬೀರುತ್ತದೆ.ಹೀಗಾಗಿ, ಸುರುಳಿಯನ್ನು ಬಳಸುವುದು ಒಳ್ಳೆಯದಲ್ಲ.
ಇನ್ನು ರಾತ್ರಿ ಹೊತ್ತಿನಲ್ಲಿ ಫ್ಯಾನ್ ಕೂಡಾ ಇಲ್ಲದಿದ್ದರೆ ಕಿವಿಯ ಬಳಿ ಗುಂಯ್ ಎನ್ನುತ್ತಾ, ನಮ್ಮ ದೇಹದ ರಕ್ತಗಳನ್ನು ಹೀರುತ್ತಾ ಕಾಟ ಕೊಡುವ ಸೊಳ್ಳೆಗಳಿಂದ ಪಾರಾಗಲು ನಾವು ಏನೆಲ್ಲಾ ಕಸರತ್ತು ಮಾಡುತ್ತೇವೆ ಅಲ್ವಾ? ಸೊಳ್ಳೆಗಳಿಂದ ಕಚ್ಚಿಸಿಕೊಂಡು ಡೆಂಗ್ಯು, ಚಿಕನ್‌ಗುನ್ಯಗಳಂತಹ ರೋಗಗಳನ್ನುಬರಿಸಿಕೊಳ್ಳುವುದಕ್ಕಿಂತ ಸೊಳ್ಳೆ ಬತ್ತಿ ಬಳಸೋದು ಉತ್ತಮ ಎಂದು ಅದನ್ನು ಬಳಸುತ್ತೇವೆ.
ಅದರ ಬದಲು ಸೊಳ್ಳೆಗಳನ್ನು ತಡೆಯಲು ಸೊಳ್ಳೆ ಪರದೆ ಬಳಸುವುದು ಉತ್ತಮ. ಇದು ಮಾತ್ರವಲ್ಲದೆ, ಸೊಳ್ಳೆಗಳು ಉತ್ಪತ್ತಿಯಾಗುವ ಸ್ಥಳಗಳಲ್ಲಿ ಕೊಳಕು ನೀರು ಸಂಗ್ರಹಗೊಳ್ಳದಂತೆ ನೋಡಿಕೊಳ್ಳಬೇಕು.ಪೂರ್ಣ ತೋಳಿನ ಬಟ್ಟೆಗಳನ್ನು ಧರಿಸುವುದು ಅಥವಾ ಸೊಳ್ಳೆ ನಿವಾರಕಗಳಂತಹ ಕೆಲವು ಸುರಕ್ಷಿತ ಸೊಳ್ಳೆ ತಡೆಗಟ್ಟುವ ಕ್ರಮಗಳನ್ನು ಅಳವಡಿಸಿಕೊಳ್ಳುವುದು ಅಗತ್ಯವಾಗಿದೆ.