ಸಕ್ಕರೆ ಕಾಯಿಲೆ(Diabetes) ; ಇರುವವರಿಗೆ ನಿಂಬೆಹಣ್ಣಿನಿಂದ ಪ್ರಯೋಜನ ಜಾಸ್ತಿ ಎಂದು ತಿಳಿದುಬಂದಿದೆ. ಆದರೆ ಬಹುತೇಕ ಜನರಿಗೆ ಇದರ ಅರಿವೇ ಇಲ್ಲ. ಒಂದು ವೇಳೆ ನೀವು ಕೂಡ ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದರೆ ನಿಮ್ಮ ಆಹಾರ ಪದ್ಧತಿಯಲ್ಲಿ ನಿಂಬೆ ಹಣ್ಣನ್ನು ಸೇರಿಸಿಕೊಳ್ಳಿ. ಇದು ಬಹು ಆಯಾಮಗಳಲ್ಲಿ ನಿಮಗೆ ಪ್ರಯೋಜನಕಾರಿಯಾಗಿದೆ. ಏಕೆಂದರೆ ಇದರಲ್ಲಿ ವಿಟಮಿನ್ ‘ಸಿ’ ಇದೆ ಎನ್ನುವ ಕಾರಣಕ್ಕೆ. ಇದರಿಂದ ನಮ್ಮ ದೇಹದ ರೋಗನಿರೋಧಕ ಶಕ್ತಿ ಬಲಗೊಳ್ಳುತ್ತದೆ ಎನ್ನುವ ಮಾತಿದೆ. ಆದರೆ ನಿಂಬೆಹಣ್ಣಿನಲ್ಲಿ ಕೇವಲ ಇಷ್ಟು ಮಾತ್ರವಲ್ಲ ಬೇರೆ ಬೇರೆ ಬಗೆಯ ಆರೋಗ್ಯಕರ ಅಂಶಗಳು ಸಹ ಅಡಗಿರುತ್ತವೆ. ನಿಂಬೆಹಣ್ಣಿನಲ್ಲಿ ಹುಳಿಯ ಅಂಶ ಅಡಗಿದೆ ಜೊತೆಗೆ ವಿಟಮಿನ್ ಸಿ ಮತ್ತು ಆಂಟಿ ಆಕ್ಸಿಡೆಂಟ್ ಅಂಶಗಳ ಪ್ರಭಾವ ಕೂಡ ಇದೆ. ಜೊತೆಗೆ ಬೇರೆ ಬಗೆಯ ಪೌಷ್ಟಿಕಾಂಶಗಳು ಸಹ ನಿಂಬೆ ಹಣ್ಣಿನಲ್ಲಿ ಸಿಗುತ್ತವೆ ಎಂದು ಹೇಳುತ್ತಾರೆ. ಇವೆಲ್ಲವೂ ಸಹ ಸಕ್ಕರೆ ಕಾಯಿಲೆ ಇರುವವರಿಗೆ ಹೆಚ್ಚು ಅನುಕೂಲಕ ರವಾಗಿರುತ್ತವೆ. ಆಂಟಿ ಆಕ್ಸಿಡೆಂಟ್ ಮತ್ತು ಆಂಟಿ ಇಂಫ್ಲಾಮೇಟರಿ ಗುಣಲಕ್ಷಣ ಗಳನ್ನು ಸಹ ನಾವು ನಿಂಬೆಹಣ್ಣಿ ನಿಂದ ನಿರೀಕ್ಷೆ ಮಾಡಬಹುದು. ನೈಸರ್ಗಿಕವಾದ ರಾಸಾಯನಿಕ ಅಂಶಗಳು ಇರುವುದರಿಂದ ಸಕ್ಕರೆ ಕಾಯಿಲೆಯನ್ನು ಇದು ತಕ್ಕಮಟ್ಟಿಗೆ ನಿಯಂತ್ರಣಕ್ಕೆ ತರುತ್ತದೆ. ಬ್ಯಾಕ್ಟೀರಿಯಾದಿಂದ ಉಂಟಾಗುವ ಉದರ ಸಂಬಂಧಿ ರೋಗಗಳಿಗೆ ನಿಂಬೆ ಹಣ್ಣು ರಾಮಭಾಣ. ನಿಂಬೆಹಣ್ಣು ಕಿಡ್ನಿಯಲ್ಲಿನ ಕಲ್ಲು ಕರಗಿಸಲು ಸಹಾಯ ಮಾಡುತ್ತದೆ. ನಿಂಬೆಹಣ್ಣಿನಲ್ಲಿರುವ ಪೊಟ್ಯಾಶಿಯಂ ಮಿದುಳಿನ ನರಕೋಶಗಳ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ಇನ್ನು ಚರ್ಮ ಸಮಸ್ಯೆಗಳಿಗೂ ಕೂಡ ನಿಂಬೆಹಣ್ಣನ್ನು ಮನೆ ಮದ್ದಾಗಿ ಉಪಯೋಗಿಸಬಹುದು. ಮುಖದ ಮೇಲೆ ಉಂಟಾಗುವ ಮೊಡವೆಗಳನ್ನು ಹೋಗಲಾಡಿಸಲು ನಿಂಬೆ ಹಣ್ಣು ಸಹಾಯ ಮಾಡುತ್ತದೆ. ನಿಂಬೆ ಹಣ್ಣಿಗೆ ಒಂದು ಹನಿ ಜೇನುತುಪ್ಪ ಬೆರೆಸಿ, ಮುಖಕ್ಕೆ ಹಚ್ಚಿ 15 ನಿಮಿಷಗಳ ನಂತರ ತೊಳೆದರೆ ಮುಖದ ಮೇಲಿನ ಕಪ್ಪು ಕಲೆಗಳು ಮಾಯವಾಗುತ್ತದೆ. ಹಾಗೂ ಚರ್ಮ ಕಾಂತಿಯುತವಾಗಿರುತ್ತದೆ. ಡೆಡ್ ಸ್ಕಿನ್ ತೆಗೆಯಲು ನಿಂಬೆ ಹಣ್ಣು ಉತ್ತಮ ಔಷಧ.
ನಿಂಬೆಹಣ್ಣು ದೇಹದಲ್ಲಿನ ಅನುಪಯುಕ್ತ ಅಂಶಗಳನ್ನು ಹೊರ ಹಾಕಲು ಹೆಚ್ಚು ಪ್ರಯೋಜನಕಾರಿ. ಅತಿಯಾದ ಉಷ್ಣಾಂಶದಿಂದ ಮೂಗಿನಲ್ಲಿ ಉಟಾಗುವ ರಕ್ತ ಸ್ರಾವವನ್ನು ತಡೆಯಲು ನಿಂಬೆ ಹಣ್ಣು ಸಹಕಾರಿ.
ದೇವರ ಪೂಜೆಗೆ, ಅಡುಗೆ ತಯಾರಿಕೆಗೆ, ವಾಮಾಚಾರಕ್ಕೆ, ಶುಭ ಕಾರ್ಯಗಳಿಗೆ, ಅಶುಭ ಕಾರ್ಯಗಳಿಗೆ ಬಹುತೇಕ ಎಲ್ಲಾ ಕೆಲಸಗಳಿಗೂ ನಿಂಬೆ ಹಣ್ಣು ಬೇಕೇ ಬೇಕು. ನಿಂಬೆಹಣ್ಣಿನ ಉಪಯೋಗ ಕೇವಲ ಅಡುಗೆ ಮಾಡಲಿಕ್ಕೆ, ಇಲ್ಲವೇ ಮಾಟ ಮಂತ್ರ ಮಾಡಲಿಕ್ಕೆ ಮಾತ್ರ ಸೀಮಿತವಲ್ಲ. ಆರೋಗ್ಯ ವೃದ್ಧಿಯಲ್ಲಿ ನಿಂಬೆ ಹಣ್ಣು ಅತಿ ಪ್ರಮುಖ ಪಾತ್ರ ವಹಿಸುತ್ತದೆ.