ನುಗ್ಗೆಕಾಯಿ ಸಧೃಡ ಆರೋಗ್ಯಕ್ಕೆ ಎಷ್ಟು ಉಪಯುಕ್ತ

ArogyaVijaya Kannada
1 Min Read

ದಾವಣಗೆರೆನುಗ್ಗೆಕಾಯಿ ಈ ತರಕಾಯಿಯ ಹೂಗಳು ಹಾಗೂ ಎಲೆಗಳು ಮತ್ತು  ಹಣ್ಳು ಗಳು ತುಂಬಾ ಪ್ರಯೋಜನಕಾರಿ ಇದನ್ನು ನಿರಂತರವಾಗಿ ಸೇವಿಸುವುದರಿಂದ ವ್ಯಕ್ತಿಯು ಯಾವಾಗಲೂ ಆರೋಗ್ಯ ವಾಗಿರುತ್ತಾನೆ .
ನುಗ್ಗೆಕಾಯಿ ಮರ ಬೇರಿನಿಂದ ಕಾಯಿವರೆಗೆ ಬಹಳ ಪ್ರಯೋಜನ ಕಾರಿಯಾಗಿದೆ .ಆಂಟಿ ಪಂಗಲ್ ಆಂಟಿ ವೈರಲ್ ,ಆಂಟಿ ಡಿಪ್ರೆಸೆಂಟ್ ಮತ್ತು ಆಂಟಿ ಇನ್ ಫ್ಲಮೇಟರಿ ಗುಣಗಳು ಇದರಲ್ಲಿವೆ .ಇದಲ್ಲದೆ ಪೊಟ್ಯಾಸಿಯಮ್‌ ,ಮೆಗ್ನೀಸಿಯಂ ,ರಂಜಕ, ಕಬ್ಬಿಣ ,ತಾಮ್ರ ಮತ್ತು ಸತುವುಗಳಂತಹ ಅನೇಕ ಪೋಷಕಾಂಶಗಳು ಸಹ ಒಳಗೊಂಡಿದೆ. ಇದು ನಮ್ಮ ದೇಹವನ್ನು ಸಧೃಡವಾಗಿಡಲು ಸಹಾಯ ಮಾಡುತ್ತದೆ . ಫ್ಲೇವನಾಯ್ಡ್ ಗಳು ,ಸಪೋನಿನ್ಗಳು , ಟ್ಯಾನಿನ್ ಗಳು ಮತ್ತು ಫೈಟೋ ಸ್ಟೆರಾಲ್ ಗಳಂತಹ ಸಂಯುಕ್ತ ಗಳು ನುಗ್ಗೆಕಾಯಿ ಕಾಯಿಯಲ್ಲಿ ಅಡಗಿವೆ , ಇದು ಕೊಲೆಸ್ಟರಾಲ್ ಅನ್ನು ಕಡಿಮೆ ಮಾಡಲು ಮತ್ತು ಗಾಯವನ್ನು ತ್ವರಿತವಾಗಿ ಗುಣಪಡಿಸಲು ಸಹಾಯ ಮಾಡುತ್ತದೆ .
ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ, ನುಗ್ಗೆಕಾಯಿ ವಿಟಮಿನ್ ಸಿ,ಎ ಮತ್ತು ಆಂಟಿ ಆಕ್ಸಿಡೆಂಟ್ ಗಳನ್ನು ಹೊಂದಿದ್ದು ನಿರೋಧಕ ಶಕ್ತಿಯನ್ನು ಬಲಪಡಿಸಲು ಸಹಾಯ ಮಾಡುತ್ತದೆ ..
ಉತ್ಕರ್ಷಣ ನಿರೋಧಕ ರಕ್ಷಣೆ ಯನ್ನು ನೀಡುತ್ತದೆ . ನುಗ್ಗೆಕಾಯಿ ಪ್ರೀ ರಾಡಿಕಲ್ ಗಳಿಂದ ಯಂಟಾಗುವ ಹಾನಿಯಿಂದ ದೇಹವನ್ನು ರಕ್ಷಿಸುತ್ತದೆ . ಪ್ರೀ ರಾಡಿಕಲ್ ಗಳು ಜೀವಕೋಶಗಳನ್ನು ಹಾನಿಗೊಳಿಸಬಹುದು . ಉರಿಯೂತವನ್ನು ಕಡಿಮೆ ಮಾಡುತ್ತದೆ , ಅದು ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ .
ರಕ್ತದಲ್ಲಿ ನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ , ಮಧುಮೇಹ ರೋಗಿಗಳಿಗೆ ಇದು ಅತ್ಯಂತ ಪ್ರಯೋಜನ ಕಾರಿಯಾಗಿದೆ.
ಹೃದಯ ದ ಆರೋಗ್ಯ ವನ್ನು ಸುಧಾರಿಸುತ್ತದೆ , ಇದು ಹೃದ್ರೋಗ ,ಪಾರ್ಶ್ವವಾಯು ಮತ್ತು ಇತರ ಹೃದಯ ಸಂಬಂಧಿ ಸಮಸ್ಯೆ ಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ , ಸ್ತನ ಕ್ಯಾನ್ಸರ್, ಕೊಲೆಸ್ಟ್ರಾಲ್ ಕ್ಯಾನ್ಸರ್ ಮತ್ತು ಪ್ರಾಸ್ಟೇಟ್ ಕ್ಯಾನ್ಸರ್ ನಂತಹ ಅನೇಕ ರೀತಿಯ ಅಪಾಯ ವನ್ನು ಕಡಿಮೆ ಮಾಡಲು ಇದು ಉತ್ತಮ  ಸಹಕಾರಿ ಆಗಿದೆ .

Share this Article
Leave a comment

Leave a Reply

Your email address will not be published. Required fields are marked *