ಖಾಲಿ ಹೊಟ್ಟೆಯಲ್ಲಿ ಚಹಾ( tea) ಕುಡಿಯಬಾರದು ಏಕೆ ಇಲ್ಲಿದೆ ಮಾಹಿತಿ

ArogyaVijaya Kannada
2 Min Read

ದಾವಣಗೆರೆ :  ಬೆಳಗ್ಗೆ ಎದ್ದು ಬೆಡ್ ಕಾಫಿ(Coffee)ಕುಡಿಯುವುದು ಅಥವಾ ಚಹಾ(tea)ಕುಡಿಯುವುದು ಆರೋಗ್ಯಕ್ಕೆ ಅಷ್ಟು ಒಳ್ಳೆಯದಲ್ಲ, ಬೆಳಗ್ಗೆ ಎದ್ದು ಖಾಲಿ ಹೊಟ್ಟೆಯಲ್ಲಿ ನಾವು ಏನು ಸೇವಿಸುತ್ತೇವೆ ಅದು ನಮ್ಮ ಇಡೀ ದಿನದ ನಮ್ಮ ಆರೋಗ್ಯದ ಮೇಲೆ ಪ್ರಭಾವ ಬೀರುತ್ತದೆ.ಟೀಯಲ್ಲಿರುವ ಕೆಫಿನ್‌ನಿಂದ ಖಾಲಿ ಹೊಟ್ಟೆಯಲ್ಲಿ ಟೀ ಕುಡಿದರೆ, ಅತಿಯಾಗಿ ಟೀ ಕುಡಿದರೆ ತಲೆನೋವು(Headache) ಬರಬಹುದು.  ಕಾಫಿಗಿಂತ ಚಹಾ ಡೇಂಜರ್ ಎಂಬುದು ಅವರ ಮಾತು. ಅದರಲ್ಲಿ ಯಾವ ತರಹದ ಚಹಾ ಕುಡಿಯುತ್ತಿದ್ದೀರಿ ಎನ್ನುವುದು ಬಹಳ ಮುಖ್ಯವಾಗುತ್ತದೆ.

ಚಹಾದಲ್ಲಿ ಕೇವಲ ಕೆಫೆನ್ ಮಾತ್ರವಲ್ಲದೆ, Theophylline ಎಂಬ ಅಂಶ ಕೂಡ ಇರುತ್ತದೆ. ಇದು ನೀವು ಸೇವಿಸಿದ ಆಹಾರವನ್ನು ಕರುಳಿನ ಭಾಗದಲ್ಲಿ ಮಲವಾಗಿ ಬದಲಾಗಲು ಬಿಡುವುದಿಲ್ಲ. ಹೀಗಾಗಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಚಹಾ ಕುಡಿಯುವ ಬಹಳಷ್ಟು ಜನರಿಗೆ ಮಲಬದ್ಧತೆ ಸಮಸ್ಯೆ ಕಂಡುಬರುವುದು ಸಾಮಾನ್ಯವಾಗಿರುತ್ತದೆ. ಬೆಳಗಿನ ಉಪಾಹಾರದೊಂದಿಗೆ ಒಂದು ಕಪ್ ಚಹಾ ಸೇವಿಸುವುದು ನಿಮ್ಮ ಆರೋಗ್ಯಕ್ಕೆ ಒಳ್ಳೆಯದು ಎಂದು ನೀವು ಕೇಳಿರಬಹುದು. ಆದಾಗ್ಯೂ, ಖಾಲಿ ಹೊಟ್ಟೆಯಲ್ಲಿ ಚಹಾವನ್ನು ಕುಡಿಯುವುದರಿಂದ ಕೆಲವು ಅಡ್ಡಪರಿಣಾಮಗಳಿವೆ ಎಂದು ನೀವು ತಿಳಿದುಕೊಳ್ಳಬೇಕು.ಟೀ ಕುಡಿಯೋದಾದ್ರೆ ಆಹಾರದ ಜೊತೆಗೇ ಕುಡಿಯಿರಿ, ಖಾಲಿ ಹೊಟ್ಟೆಯಲ್ಲಿ ಟೀ ಕುಡಿಯಬೇಡಿ ಎಂದು ವೖದ್ಯರು ಹೇಳುತ್ತಾರೆ. ಬೆಳಗ್ಗೆ ಎದ್ದ ಹಾಗೆ ಟೀ ಕುಡಿಯೋದರಿಂದ ಆ ಕ್ಷಣಕ್ಕೆ ನಿದ್ದೆ ಮೂಡಿನಿಂದ ಹೊರಬಂದ ಅನುಭವವಾಗಬಹುದು. ಆದರೆ ದೇಹಕ್ಕೆ ಇದರಿಂದ ಹಾನಿಯಿದೆ.ಬೆಳಗ್ಗೆ ಎದ್ದ ಹಾಗೆ ಎಕ್ಸರ್‌ಸೈಸ್‌(Exercise) ಮಾಡ್ತೀರಿ. ಆಮೇಲೆ ಒಂದು ಲೋಟ ಟೀ ಕುಡಿಯೋಣ ಅಂತ ಹೊರಡ್ತೀರಿ. ಆದರೆ ವ್ಯಾಯಾಮದ ಬಳಿಕ ಹೊಟ್ಟೆ ಹಸಿದುಕೊಂಡಿರುತ್ತೆ. ಈ ಹೊತ್ತಿಗೆ ಟೀ ಕುಡಿಯೋದು ಒಳ್ಳೆಯದಲ್ವೇ ಅಲ್ಲ. ಜೊತೆಗೆ ಖಾಲಿ ಹೊಟ್ಟೆಗೆ ಟೀ ಬಿದ್ದಾಗ ದೇಹದ ಉಷ್ಣತೆಯಲ್ಲಿ ಕೊಂಚ ಏರು ಪೇರಾಗೋದು ಸೂಕ್ಷ್ಮವಾಗಿ ಗಮನಿಸಿದರೆ ನಿಮ್ಮ ಗಮನಕ್ಕೂ ಬರುತ್ತದೆ.

ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಚಹಾವನ್ನು ಸೇವಿಸುವ ಮತ್ತೊಂದು ಅಡ್ಡ ಪರಿಣಾಮವೆಂದರೆ ನಿಮ್ಮ ಜೀರ್ಣಾಂಗ ವ್ಯವಸ್ಥೆಯಲ್ಲಿ ಆಗುವ ಅವ್ಯವಸ್ಥೆ. ಹೊಟ್ಟೆ ಉಬ್ಬರಿಸಿದಂತಾಗುವುದು, ಹೊಟ್ಟೆಯೊಳಗೆ ಗ್ಯಾಸ್ ತುಂಬಿಕೊಂಡ ಫೀಲ್(Feel) ಆಗಬಹುದು. ಇನ್ನೊಂದು ಮುಖ್ಯವಾದ ವಿಷಯ ಎಂದರೆ ಆಹಾರವನ್ನು ತಿನ್ನುವ ಮೊದಲು ಬಿಸಿ ಟೀಯನ್ನು ಸೇವಿಸಿದಾಗ, ಅದು ನಿಮ್ಮ ಹೊಟ್ಟೆಯನ್ನು ಹಿಗ್ಗಿಸುತ್ತದೆ. ಈ ಪ್ರಕ್ರಿಯೆಯು ನಿಮ್ಮ ಜೀರ್ಣಾಂಗ ವ್ಯವಸ್ಥೆಯೊಳಗೆ ಒತ್ತಡವನ್ನು ಹೆಚ್ಚಿಸುತ್ತದೆ. ನೀವು ಆರೋಗ್ಯವಾಗಿರಲು ಬಯಸಿದರೆ, ನಿಮ್ಮ ದಿನವನ್ನು ಪ್ರಾರಂಭಿಸುವ ಮೊದಲು ಖಾಲಿ ಹೊಟ್ಟೆಯ ಚಹಾವನ್ನು ತಪ್ಪಿಸುವುದು ಮುಖ್ಯ.

 

Share this Article
Leave a comment

Leave a Reply

Your email address will not be published. Required fields are marked *