ಮೆದುಳಿನ ಆರೋಗ್ಯ
ದೇಹದಲ್ಲಿ ನಡೆಯುವ ಪ್ರತಿಯೊಂದು ಕಾರ್ಯಚಟುವಿ ಟಿಕೆಗಳನ್ನು ನೇರವಾಗಿ ಅಥವಾ ಪರೋಕ್ಷವಾಗಿ ನಿಯಂ ತ್ರಣ ಸಾಧಿಸುವುದೇ ಇದಕ್ಕೆ ಕಾರಣ ಎಂದು ಹೇಳಬಹುದು!
ಹೀಗಾಗಿ ಮೆದುಳಿನ ಆರೋಗ್ಯವನ್ನು –ಕಾಪಾಡಿಕೊಳ್ಳಬೇಕು ಎಂದು ಮೆದುಳಿನ ಆರೋಗ್ಯಕ್ಕೆ ಅನುಕೂಲಕರ ವಾಗಿರುವ ಪ್ರಬಲ ಆಂಟಿ ಆಕ್ಸಿಡೆಂಟ್ ಹಾಗೂ ಒಮೆಗಾ ೩ ಫ್ಯಾಟಿ ಆಸಿಡ್ ಅಂಶಗಳು ಅಧಿಕ ಪ್ರಮಾಣ ದಲ್ಲಿ ಕಂಡು ಬರುವ ಆಹಾರ ಪದಾರ್ಥಗಳನ್ನು ಹೆಚ್ಚಾಗಿ ಸೇವನೆ ಮಾಡಬೇಕು.
ಇದರಿಂದ ಮೆದುಳು ಆರೋಗ್ಯಕರವಾಗಿ, ತನ್ನ ಕೆಲಸ ಕಾರ್ಯ ಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಲು ನೆರವಾಗುತ್ತದೆ. ಬನ್ನಿ ಇಂದಿನ ಲೇಖನದಲ್ಲಿ ಮೆದುಳಿನ ಆರೋಗ್ಯವನ್ನು ಹೆಚ್ಚಿಸುವ ಆಹಾರ ಪದಾರ್ಥಗಳು
ಮೆದುಳಿನ ಕಾರ್ಯವನ್ನು ಹೆಚ್ಚಿಸಲು ಇಲ್ಲಿದೆ ಸಲಹೆಗಳು
ಹೂಕೋಸು, ಎಲೆಕೋಸು ಜಾತಿಗೆ ಸೇರಿದ ಬ್ರೊಕೋಲಿ ಅಥವಾ ಕೋಸುಗಡ್ಡೆ ತರಕಾರಿಯಲ್ಲಿ ವಿಟಮಿನ್ ಎ, ವಿಟಮಿನ್ ಸಿ ಹಾಗೂ ವಿಟಮಿನ್ ಇ ಹಾಗೂ ಅನೇಕ ಬಗೆಯ ಆರೋಗ್ಯಕ್ಕೆ ಉಪಯುಕ್ತವಾದ ಆಂಟಿ ಆಕ್ಸಿ ಡೆಂಟ್ ಅಂಶಗಳ ಪ್ರಮಾಣವು ಈ ತರಕಾರಿಯಲ್ಲಿ ಹೇರಳವಾಗಿ ಕಂಡುಬರುತ್ತದೆ.
ಇವೆಲ್ಲವೂ ಕೂಡ ಮೆದುಳಿನ ಅರಿವಿನ ಸಾಮರ್ಥ್ಯವನ್ನು ಹೆಚ್ಚು ಮಾಡುವುದು ಮಾತ್ರವಲ್ಲದೆ, ಹಾನಿಗೊಳಗಾದ ಮೆದುಳಿನ ಜೀವಕೋಶಗಳು ಮತ್ತೆ ಸಹಜ ಸ್ಥಿತಿಗೆ ಮರಳು ತ್ತವೆ, ಹಾಗೂ ಮೆದುಳಿನ ಜೀವಕೋಶಗಳು ಅಭಿವೃದ್ಧಿ ಕಾಣುತ್ತವೆ ಎಂದು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ.
ಬ್ರೊಕೋಲಿ ಸೇವಿಸಿದರೆ ಮಧುಮೇಹವನ್ನು ಈಸಿಯಾಗಿ ಕಂಟ್ರೋಲ್ ಮಾಡಬಹುದು ದೇಹದ ಪ್ರಮುಖ ಅಂಗಾಂಗಳಲ್ಲಿ ಒಂದಾದ ಮೆದುಳು ಸಮರ್ಪಕವಾಗಿ ಕಾರ್ಯನಿರ್ವಹಿಸಬೇಕೆಂದರೆ ಪೌಷ್ಟಿಕ ಸತ್ವಗಳು ಒಳಗೊಂಡಿರುವ ಆಹಾರಗಳನ್ನು ಸೇವಿಸುವ ಮೂಲಕ ಪಡೆಯಬಹುದು.
ಮನುಷ್ಯನ ದೇಹದಲ್ಲಿ ಅತ್ಯಂತ ಮುಖ್ಯವಾದ ಅಂಗಗಳಲ್ಲಿ ಮೆದುಳು ಕೂಡ ಒಂದು ಎಂದು ನಿಸ್ಸಂದೇಹವಾಗಿ ಹೇಳಬಹುದು. ದಿನದ ೨೪ ಗಂಟೆಗಳ ಕಾಲವೂ ನಿರಂತರವಾಗಿ ಕಾರ್ಯ ನಿರ್ವಹಿಸುವ ದೇಹದೊಳಗಿನ ಅಂಗಾಂಗಳ ಪಟ್ಟಿಗೆ, ಮೆದುಳು ಕೂಡ ಸೇರುತ್ತದೆ. ಮೆದುಳಿನ ಬಗ್ಗೆ ಒಂದೇ ಮಾತಿನಲ್ಲಿ ಹೇಳುವುದಾದರೆ, ಮಾನವನ ದೇಹವನ್ನು ನಡೆಸುವ ಹಾಗೂ ನಿಯಂತ್ರಿಸುವ ಕಂಪ್ಯೂಟರ್ ಸಿಸ್ಟಮ್ ಇದ್ದ ಹಾಗೆ!
ಇಲ್ಲಿ ಏನಾದರೂ ಹೆಚ್ಚು ಕಡಿಮೆ ಆದರೆ, ಮನುಷ್ಯನ ದೇಹದ ಎಲ್ಲಾ ಅಂಗಾಂಗಳ ವ್ಯವಸ್ಥೆಯೂ ಕೂಡ ತಪ್ಪಿ ಹೋಗುವುದು! ದೇಹದಲ್ಲಿ ನಡೆಯುವ ಪ್ರತಿಯೊಂದು ಕಾರ್ಯಚಟುವಟಿಕೆ ಗಳನ್ನು ನೇರವಾಗಿ ಅಥವಾ ಪರೋಕ್ಷವಾಗಿ ನಿಯಂತ್ರಣ ಸಾಧಿಸುವುದೇ ಇದಕ್ಕೆ ಕಾರಣ ಎಂದು ಹೇಳಬಹುದು.
ದಿನಕ್ಕೊಂದು ಬೇಯಿಸಿದ ಮೊಟ್ಟೆ ಸೇವಿಸಿ
ಮೊಟ್ಟೆಯ ಬಗ್ಗೆ ನಮಗೆಲ್ಲಾ ಗೊತ್ತೇ ಇದೆ. ಇದರಲ್ಲಿ ಕಂಡು ಬರುವ ಪ್ರೋಟೀನ್, ಕ್ಯಾಲ್ಸಿಯಂ ಹಾಗೂ ವಿವಿಧ ಬಗೆಯ ವಿಟ ಮಿನ್ಸ್ ಅಂಶಗಳು ಹಾಗೂ ಪೌಷ್ಟಿಕ ಸತ್ವ ಗಳು ಆರೋಗ್ಯವನ್ನು ಅತ್ಯುತ್ತಮವಾಗಿ ಕಾಪಾಡುವಲ್ಲಿ ಯಶಸ್ವಿಯಾಗಿವೆ.
ಪ್ರಮುಖವಾಗಿ ಮೊಟ್ಟೆಯಲ್ಲಿ ಪ್ರೋಟೀನ್ ಅಂಶ ಯಥೇ ಚ್ಛವಾಗಿ ಕಂಡು ಬರುವುದರಿಂದ ಮೆದುಳಿನ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ಹೀಗಾಗಿ ಪ್ರತಿದಿನ ಒಂದೊAದು ಬೇಯಿಸಿದ ಮೊಟ್ಟೆ ಸೇವನೆ ಮಾಡುವ ಅಭ್ಯಾಸ ಮಾಡಿ ಕೊಂಡರೆ ಒಳ್ಳೆಯದು.
ಹಸಿರೆಲೆ ತರಕಾರಿಗಳನ್ನು ಆಹಾರಕ್ರಮದಲ್ಲಿ ಸೇರಿಸಿ..
ವೈದ್ಯರು ಹೇಳುವ ಹಾಗೆ, ನಮ್ಮ ದೈನಂದಿನ ಆಹಾರ ಪದ್ಧತಿ ಯಲ್ಲಿ ಹಸಿರೆ ಸೊಪ್ಪು–ತರಕಾರಿಗಳನ್ನು ಸೇರಿಸಿ ಕೊಳ್ಳುವುದರಿಂದ, ಆರೋಗ್ಯಕ್ಕೆ ಬೇಕಾಗುವ ಅನಿವಾ ರ್ಯ ಪೌಷ್ಟಿಕ ಸತ್ವಗಳು ಸಿಗಲಿದೆ.
ಪ್ರಮುಖವಾಗಿ ಹಸಿಯಾಗಿ ತಿನ್ನಬಹುದಾದ ಸೊಪ್ಪು ಹಾಗೂ ತರಕಾರಿಗಳನ್ನು ಪ್ರತಿದಿನ ಸಾಲಾಡ್ ರೀತಿಯಲ್ಲಿ ಮಾಡಿಕೊಂಡು ಸೇವನೆ ಮಾಡುವುದರಿಂದ, ಆರೋಗ್ಯ ವೃದ್ಧಿಯಾಗುವುದು ಮಾತ್ರವಲ್ಲದೆ, ವಿಶೇಷವಾಗಿ ಮೆದು ಳಿನ ಆರೋಗ್ಯಕ್ಕೂ ಅಗತ್ಯವಾಗಿವೆ.
ನೀರಿನಲ್ಲಿ ನೆನೆಹಾಕಿದ ಬಾದಾಮಿ ಬೀಜಗಳನ್ನು ಸೇವಿಸಿ
ಪ್ರತಿ ದಿನಾ ಮೂರು ನಾಲ್ಕು ಬಾದಾಮಿ ಬೀಜಗಳನ್ನು ನೀರಿನಲ್ಲಿ ನೆನೆಹಾಕಿ ತಿನ್ನುವುದರಿಂದ ಮೆದುಳಿನ ಸಾಮ ರ್ಥ್ಯ ಹೆಚ್ಚಾಗುತ್ತದೆ ಎಂದು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ.
ಇದಕ್ಕೆ ಪ್ರಮುಖ ಕಾರಣ ಬಾದಾಮಿ ಬೀಜಗಳಲ್ಲಿ ಕಂಡು ಬರುವ ವಿಟಮಿನ್ ಇ ಅಂಶ ಮೆದುಳಿನ ಆರೋಗ್ಯವನ್ನು ಹೆಚ್ಚಿಸುವ ಜೊತೆಗೆ ಸ್ಮರಣಾ ಹಾಗೂ ಚಿಂತನಾ ಸಾಮ ರ್ಥ್ಯಗಳನ್ನು ಹೆಚ್ಚಿಸುತ್ತದೆ ಜೊತೆಗೆ ಮರೆಗುಳಿತನವನ್ನು ಇಲ್ಲವಾಗಿಸುತ್ತದೆ.
ಈ ಮೂರು ಕಾಯಿಲೆ ಇದ್ದವರು, ದಿನಾ ನೆನೆಸಿಟ್ಟ ಬಾದಾಮಿ ಬೀಜಗಳನ್ನು ತಿನ್ನಲೇಬೇಕು!
ಮೀನು ಸೇವನೆ
ಮೀನಿನಲ್ಲಿ ಒಮೆಗಾ ೩ ಫ್ಯಾಟಿ ಆಸಿಡ್ ಅಂಶಗಳನ್ನು ಹೆಚ್ಚಾಗಿ ಕಂಡು ಬರುವುದರಿಂದ, ಮೆದುಳಿನ ಆರೋಗ್ಯವನ್ನು ಕಾಪಾಡು ವುದರ ಜೊತೆಗೆ ಮೆದುಳಿನ ಜೀವಕೋಶಗಳನ್ನು ಆರೋಗ್ಯಕರವಾಗಿ ಕಾಪಾಡುತ್ತದೆ. ಹೀಗಾಗಿ ನಾನ್ ವೆಜ್ ಸೇವನೆ ಮಾಡುವವರು, ಮಿತವಾಗಿ ಮೀನು ಸೇವನೆ ಮಾಡಿದರೆ ಒಳ್ಳೆಯದು.
ಡಾರ್ಕ್ ಚಾಕಲೇಟ್
ಡಾರ್ಕ್ ಚಾಕಲೇಟ್ನಲ್ಲಿ ಆಂಟಿಆಕ್ಸಿಡೆಂಟ್ ಅಂಶಗಳ ಪ್ರಮಾಣಗಳು ಯಥೇಚ್ಛವಾಗಿ ಕಂಡು ಬರುವುದರಿಂದ, ಮೆದುಳಿನ ಜೀವಕೋಶಗಳಿಗೆ ಹಾನಿಯಾಗದಂತೆ ಕಾಪಾಡುತ್ತದೆ ಎಂದು ಹೇಳಲಾಗುತ್ತದೆ.
ಅದೇ ರೀತಿ ಮೆದುಳಿನ ಬುದ್ಧಿ ಶಕ್ತಿಯನ್ನು ಹಾಗೂ ಕಾರ್ಯ ಚಟುವಟಿಕೆಯನ್ನು ಹೆಚ್ಚಿಸುವ ಗುಣಲಕ್ಷಣಗಳು, ಡಾರ್ಕ್ ಚಾಕಲೇಟ್ನಲ್ಲಿ ಕಂಡುಬರುತ್ತದೆ ಎಂದು ಹೇಳಲಾಗುತ್ತದೆ.ಮಕ್ಕಳಾಗದ ದಂಪತಿಗಳು, ಡಾರ್ಕ್ ಚಾಕಲೇಟ್ ತಿಂದ್ರೆ ಮಕ್ಕಳಾಗುತ್ತದೆಯಂತೆ!