ಗಟ್ಟಿಮುಟ್ಟಾದ ಮೂಳೆಗಾಗಿ ಈ ಬೀಜಗಳನ್ನು ತಿನ್ನಿ : ದಾವಣಗೆರೆ (ಆ.ವಿ) ಮೇ.29 : ದೇಹದ ಮೂಳೆಗಳು ಸದಾ ಆರೋಗ್ಯದಿಂದಿರಬೇಕು ಎಂದರೆ ನಾವು ಸೇವಿಸುವ ಆಹಾರಪದ್ಧತಿಯಲ್ಲಿ ಕ್ಯಾಲ್ಸಿಯಂ, ಮೆಗ್ನೀಸಿಯಮ್, ವಿಟಮಿನ್ ಡಿ ಮುಂತಾದ ಪೌಷ್ಟಿಕ ಸತ್ವಗಳು ಒಳಗೊಂಡಿರುವ ಆಹಾರಗಳನ್ನು ಸೇವನೆ ಮಾಡುವ ಅಭ್ಯಾಸ ಮಾಡಿಕೊಳ್ಳಬೇಕು. ಹೆಲ್ತ್ಲೈನ್ ಪ್ರಕಾರ, ಮೂಳೆಗಳ ಆರೋಗ್ಯಕ್ಕೆ ಕ್ಯಾಲ್ಸಿಯಂ ಅಂಶ ಹೆಚ್ಚಿರುವ ಆಹಾರಪದಾರ್ಥಗಳ ಸೇವನೆ ಮಾಡುವುದು ತುಂಬಾನೇ ಅವಶ್ಯಕ ಎಂದು ತಿಳಿಸಿದೆ.
ಈ ನಿಟ್ಟಿನಲ್ಲಿ ನೋಡುವುದಾದರೆ, ಮೂಳೆಗಳು ಸ್ಟ್ರಾಂಗ್ ಆಗಿರಬೇಕು ಎಂದರೆ ಕೆಲವೊಂದು ನೈಸರ್ಗಿಕವಾಗಿ ಸಿಗುವ ಬೀಜಗಳನ್ನು ನಮ್ಮ ಆಹಾರಪದ್ಧತಿಯಲ್ಲಿ ಸೇರಿಸಿಕೊಳ್ಳಬೇಕು ಸಾಮಾನ್ಯವಾಗಿ ವಯಸ್ಸಾದ ಮೇಲೆ ಕಂಡು ಬರುವ ಮೂಳೆಗಳ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳು, ಇಂದಿನ ದಿನಗಳಲ್ಲಿ ಸಣ್ಣ ವಯಸ್ಸಿನ ವರಲ್ಲಿಯೇ ಹೆಚ್ಚಾಗಿ ಕಾಣಿಸಿ ಕೊಳ್ಳುತ್ತಿದೆ.
ಇದಕ್ಕೆ ಪ್ರಮುಖ ಕಾರಣ ಬದಲಾಗುತ್ತಿರುವ ಜೀವನಶೈಲಿ ಹಾಗೂ ನಾವು ಸೇವನೆ ಮಾಡುತ್ತಿರುವ ಅನಾರೋಗ್ಯಕಾರಿ ಆಹಾರ ಪದ್ಧತಿ ಎಂದು ನೇರವಾಗಿ ಹೇಳಬಹುದು! ಅಲ್ಲದೆ ದೇಹಕ್ಕೆ ಸಿಗಬೇಕಾದ ಕ್ಯಾಲ್ಸಿಯಂ ಹಾಗೂ ವಿಟಮಿನ್ ಡಿ ಪೋಷಕಾಂಶಗಳಲ್ಲಿ ಕೊರತೆ ಕಾಣಿಸಿಕೊಂಡರೂ ಕೂಡ ಮೂಳೆಗಳಿಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ.
*ಎಳ್ಳು* : ಕ್ಯಾಲ್ಸಿಯಂ, ಮೆಗ್ನೀಸಿಯಮ್, ವಿಟಮಿನ್ ಡಿ ಹೆಚ್ಚಾಗಿ ಹೆಚ್ಚಿರುವ ಆಹಾರಪದಾರ್ಥಗಳನ್ನು ಅಥವಾ ಪಾನೀಯಗಳನ್ನು ಸೇವನೆ ಮಾಡುವುದರಿಂದ, ಮೂಳೆಗಳ ಆರೋಗ್ಯಕ್ಕೆ ಬಹಳ ಒಳ್ಳೆಯದು ಎನ್ನುವುದು ವೈದ್ಯರ ಮಾತು.
ಈ ನಿಟ್ಟಿನಲ್ಲಿ ನೋಡುವುದಾದರ ಎಳ್ಳಿನ ಬೀಜಗಳು ತುಂಬಾನೇ ನೆರವಾಗುತ್ತದೆ ಎನ್ನುತ್ತಾರೆ ತಜ್ಞರು! ಸರಿಸುಮಾರು ಕಾಲು ಕಪ್ ಎಳ್ಳಿನ ಬೀಜಗಳಲ್ಲಿ, ಏನಿಲ್ಲಾ ಅಂದರೂ ಕೂಡ 350 ಮಿಲಿಗ್ರಾಂ ನಷ್ಟು ಕ್ಯಾಲ್ಸಿಯಂ ಕಂಡು ಬರುತ್ತದೆಯಂತೆ!
ಹೀಗಾಗಿ ಈ ಪುಟ್ಟ ಬೀಜಗಳ ಸಂಪೂರ್ಣ ಪ್ರಯೋಜನಗಳನ್ನು ಪಡೆದುಕೊಳ್ಳಲು ತಮ್ಮ ದೈನಂದಿನ ಆಹಾರಪದ್ಧತಿಯಲ್ಲಿ ಸೇರಿಸಿ ಕೊಂಡರೆ ಒಳ್ಳೆಯದು. ಬೇಕಿದ್ದರೆ ಇದರ ಲಡ್ಡು ಮಾಡಿ ಸೇವನೆ ಮಾಡಬಹುದು ಇಲ್ಲಾಂದ್ರೆ ಎಳ್ಳಿನ ಜ್ಯೂಸ್ ಮಾಡಿ ಕುಡಿಯುವ ಅಭ್ಯಾಸ ಮಾಡಿಕೊಂಡರೂ ಕೂಡ, ಮೂಳೆಗಳಿಗೆ ಸಿಗಬೇಕಾದ ಎಲ್ಲಾ ಪೋಷಕಾಂಶಗಳು ಸಿಕ್ಕಂತೆ ಆಗುತ್ತದೆ.
*ಅಗಸೆ ಬೀಜಗಳು* ;ಅಗಸೆ ಬೀಜಗಳು ಕ್ಯಾಲ್ಸಿಯಂ ಮತ್ತು ಒಮೆಗಾ-3 ಕೊಬ್ಬಿನಾಮ್ಲಗಳಂತಹ ಪೋಷಕಾಂಶಗಳಿಂದ ಸಮೃದ್ಧವಾಗಿವೆ, ಇವು ಮೂಳೆ ಸಾಂದ್ರತೆಯನ್ನು ಬಲಪಡಿಸುವಲ್ಲಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ. ಇದರ ಸಂಪೂರ್ಣ ಲಾಭಪಡೆಯಲು ಅಗಸೆ ಬೀಜಗಳ ಪುಡಿಯನ್ನು ದಿನನಿತ್ಯದ ಆಹಾರಕ್ರಮದಲ್ಲಿ ಬಳಸಿಕೊಳ್ಳಬಹುದು. ಆದರೆ ಒಂದು ವಿಚಾರ ನೆನಪಿರಲಿ ಈ ಅಗಸೆ ಬೀಜಗಳಲ್ಲಿ ಉಷ್ಣತೆ ಅಂಶ ಹೆಚ್ಚಿನ ಪ್ರಮಾಣದಲ್ಲಿ ಕಂಡು ಬರುವುದರಿಂದ, ಸಣ್ಣ ಟೀ ಚಮಚದಷ್ಟು ಮಾತ್ರ ಸೇವಿಸಿ ಅದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಸೇವನೆ ಮಾಡಲು ಹೋಗಬೇಡಿ .
*ಸೂರ್ಯಕಾಂತಿ ಬೀಜಗಳು: ದುರ್ಬಲ ಮೂಳೆಗಳ ಸಮಸ್ಯೆಯನ್ನು ದೂರಮಾಡಲು, ಮಿತವಾಗಿ ಸೂರ್ಯಕಾಂತಿ ಬೀಜಗಳನ್ನು ಸೇವನೆ ಮಾಡುವ ಅಭ್ಯಾಸ ಮಾಡಿ ಕೊಂಡರೆ ಒಳ್ಳೆಯದು. ಪ್ರಮುಖವಾಗಿ ಈ ಪುಟ್ಟ ಬೀಜಗಳಲ್ಲಿ ಮ್ಯಾಂಗ ನೀಸ್, ಕ್ಯಾಲ್ಸಿಯಂ, ಒಮೆಗಾ-3 ಕೊಬ್ಬಿನಾಮ್ಲಗಳಂತಹ ಅನೇಕ ಬಗೆಯ ಪೋಷಕಾಂಶಗಳು ಕಂಡು ಬರುವುದರಿಂದ, ಇವು ಮೂಳೆಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ. *ಗಸಗಸೆ ಬೀಜಗಳು* ಮೂಳೆಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಈ ಬೀಜಗಳಲ್ಲಿ ಕಂಡು ಬರುವ ಮ್ಯಾಂಗನೀಸ್, ಕಬ್ಬಿಣಾಂಶ, ಕ್ಯಾಲ್ಸಿಯಂ, ಮೆಗ್ನೀಸಿಯಮ್ನಂತಹ ಅನೇಕ ಪೋಷಕಾಂಶಗಳು, ಮೂಳೆಗಳಿಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳನ್ನು ದೂರ ಮಾಡಲು ನೆರವಿಗೆ ಬರುತ್ತದೆ.
ಗಟ್ಟಿಮುಟ್ಟಾದ ಮೂಳೆಗಾಗಿ ಈ ಬೀಜಗಳನ್ನು ತಿನ್ನಿ :

Leave a comment