ಆರೋಗ್ಯಕ್ಕೆ ಜೀರಿಗೆ ಚಹಾ

ArogyaVijaya Kannada
1 Min Read

ಆರೋಗ್ಯಕ್ಕೆ ಜೀರಿಗೆ ಚಹಾ…

ದಾವಣಗೆರೆ ಮೇ2.(ಆ. ವಿ)ಸಾಮಾನ್ಯವಾಗಿ ನಾವು ಬೆಳಗ್ಗೆ ಎದ್ದ ಕೂಡಲೇ ಟೀ/ಕಾಫಿಯನ್ನು ಕುಡಿಯಲು ಬಯಸುತ್ತೇವೆ. ಅದು ನಮ್ಮನ್ನು ದಿನವಿಡಿ ಚೈತನ್ಯವಾಗಿ ಇಡಲು ಸಹಾಯಮಾಡುತ್ತದೆ ಕೂಡಾ. ಇಂದು ಜೀರಿಗೆ ಚಹಾವನ್ನು ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡುವುದರಿಂದ ನಮಗೆ ಏನೆಲ್ಲಾ ಪ್ರಯೋಜನಗಳಿವೆ ಎಂಬ ವಿಚಾರವನ್ನು ತಿಳಿಯೋಣ.

ಜೀರಿಗೆ ಚಹಾ ರಕ್ತದೊತ್ತಡವನ್ನು ನಿಯಂತ್ರಿಸುವಲ್ಲಿ ಮತ್ತು ಹೃದಯ ಸಂಬಂಧಿ ಕಾಯಿಲೆಗಳಿಂದ ಉಂಟಾಗುವ ಅಪಾಯವನ್ನು ಕಡಿಮೆ ಮಾಡುವಲ್ಲಿ ನೆರವಾಗುತ್ತದೆ. ಅಲ್ಲದೇ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳಾದ ಗ್ಯಾಸ್ಟಿಕ್, ಅಸಿಡಿಟಿ ಮತ್ತು ಅಜೀರ್ಣದಿಂದ ಮುಕ್ತಿ ಪಡೆಯಲು ಸಹಕರಿಸುತ್ತದೆ. ಜೀರಿಗೆ ಚಹಾವು ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಅನ್ನು ತೆಗೆದು ಹಾಕಲು ಸಹಾಯಮಾಡುತ್ತದೆ. *ಮಧುಮೇಹ ರೋಗಿಗಳು ಬೆಳಗ್ಗೆ ಹಾಲಿನ ಚಹಾದ ಬದಲಿಗೆ ಜೀರಿಗೆ ಚಹಾವನ್ನು ಕುಡಿಯಲು ಪ್ರಾರಂಭಿಸಿದರೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ನೆರವಾಗುತ್ತದೆ.

Share this Article
Leave a comment

Leave a Reply

Your email address will not be published. Required fields are marked *