ಮಕ್ಕಳಿಗೆ ಆರೋಗ್ಯಕರ ಅಭ್ಯಾಸಗಳು ಹೇಗಿದ್ದರೆ ಉತ್ತಮ(What are the best healthy habits for children)
ಮಕ್ಕಳು ಆರೋಗ್ಯಕರವಾಗಿ ಬೆಳೆಯಬೇಕಾದರೆ ಕೆಲವೊಂದು ಅಭ್ಯಾಸಗಳು ಬಹಳ ಮುಖ್ಯ, ಹೆಚ್ಚು ನೀರು ಕುಡಿಯುವುದು, ಸರಿಯಾದ ಸಮಯಕ್ಕೆ ಸರಿಯಾದ ಆಹಾರ ಸೇವಿಸುವುದು,ಆಡುವುದು ಹಲವು ಅಭ್ಯಾಸಗಳು ಮಕ್ಕಳ ಆರೋಗ್ಯಕ್ಕೆ ಪೂರಕ.ಮಕ್ಕಳಿಗೆ ಬಾಲ್ಯದಲ್ಲಿಯೇ ಆರೋಗ್ಯಕರ ಆಹಾರ ಸೇವನೆಯ ಮಹತ್ವವನ್ನು ತಿಳಿಸಿಕೊಡಿ, ನೀವು ಕುಟುಂಬ ಅಥವಾ ಸ್ನೇಹಿತರೊಂದಿಗೆ ಇರಲಿ, ಯಾವಾಗಲೂ ಅವರ ಸಹವಾಸವನ್ನು ಆನಂದಿಸಿ. ಮಕ್ಕಳಿಗೆ ಕುಟುಂಬದೊಂದಿಗೆ ಹೆಚ್ಚಿನ ಸಮಯವನ್ನು ಕಳೆಯಲು ಪ್ರೋತ್ಸಾಹ ನೀಡಿ. ಹೆಚ್ಚಿನ ಮಕ್ಕಳು ಹಣ್ಣುಗಳು ಮತ್ತು ತರಕಾರಿಗಳನ್ನು ತಿನ್ನುವುದಿಲ್ಲ. ಪೋಷಕರು ಬಲವಂತ ಮಾಡಿಯಾದ್ರೂ ತಿನ್ನಿಸಬೇಕು.
ಮಕ್ಕಳು ಆರೋಗ್ಯವಾಗಿರಲು ಪೋಷಕರು ಸದಾ ಅವರನ್ನು ಕಾಯುತ್ತಾ ಇರುತ್ತಾರೆ. ಮಕ್ಕಳಲ್ಲಿ ಉತ್ತಮ ಆರೋಗ್ಯವು ಅವರ ಪೋಷಣೆ, ಎಲ್ಲಾ ರೀತಿಯಲ್ಲಿ ಮಕ್ಕಳನ್ನು ನೋಡಿಕೊಂಡ್ರೆ ಆರೋಗ್ಯವಾಗಿ ಇರುತ್ತಾರೆ. ಆಗ ಪೋಷಕರು (Parents) ಸಹ ನೆಮ್ಮದಿಯಿಂದ ಇರಬಹುದು.ಮಕ್ಕಳಿಗೆ ಏನಾದರೊಂದು ಸಣ್ಣ ಪುಟ್ಟ ಕೆಲಸ ನೀಡಿ. ಅದನ್ನು ಶ್ರದ್ಧೆಯಿಂದ ಮಾಡಲು ಕಲಿಸಿ. ಆರು ಮತ್ತು 12 ವರ್ಷದೊಳಗಿನ ಮಕ್ಕಳಿಗೆ 9-12 ಗಂಟೆಗಳ ರಾತ್ರಿ ನಿದ್ರೆಯ ಅಗತ್ಯವಿರುತ್ತದೆ. ಯಾವುದನ್ನು ನಂಬಬೇಕು, ಯಾವುದನ್ನೂ ನಂಬಬಾರದು, ಯಾವುದು ಕೆಟ್ಟದ್ದು, ಯಾವುದು ಒಳ್ಳೆಯದು ಎಂಬುದನ್ನು ಮಕ್ಕಳಿಗೆ ಬಾಲ್ಯದಲ್ಲೇ ತಿಳಿಸಿ ಕೊಡುವುದು ಉತ್ತಮವಾಗಿದೆ. ಮಕ್ಕಳಿಗೆ ಬಾಲ್ಯದಲ್ಲೇ ಸ್ವಚ್ಛತೆಯ ಪಥವನ್ನು ತಿಳಿಸಿಕೊಡಬೇಕು. ಅದಕ್ಕಾಗಿ ನೀವು ಸಮಯವನ್ನು ಮೀಸಲಿಡಬೇಕು. ಹೀಗಿದ್ದರೆ ಮಾತ್ರ ಮಕ್ಕಳು ಶುಚಿತ್ವದ ಬಗ್ಗೆ ತಿಳಿಯುತ್ತಾರೆ.
ನೀವು ದಿನಕ್ಕೆ ಒಂದು ಪುಟವನ್ನು ಓದಿದರೂ ಸಹ ಅದನ್ನು ಮಗುವಿಗೆ ತಿಳಿಸಿ. ಆದರೆ ಒಂದು ದಿನವನ್ನೂ ಓದದೆ ಬಿಟ್ಟರೆ, ಅದು ಅರ್ಥಹೀನವಾಗುತ್ತದೆ ಎಂದು ಮಗುವಿಗೆ ಅರ್ಥ ಮಾಡಿಸಿ. ಮಕ್ಕಳಿಗಾಗಿ ಸಣ್ಣ ಸಣ್ಣ ಪುಸ್ತಕಗಳನ್ನು ಮನೆಗೆ ತನ್ನಿ, ಅದನ್ನು ಮಕ್ಕಳಿಗೆ ಓದಲು ನೀಡಿ, ಇದರಿಂದ ಮಕ್ಕಳಿಗೆ ಬಾಲ್ಯದಲ್ಲೇ ಪುಸ್ತಕದ ಒಲವು ಮೂಡುತ್ತದೆ. ಮಕ್ಕಳೊಂದಿಗೆ ಸಮಯ ಕಳೆಯಲು ಹೆತ್ತವರಿಗೆ ಸಮಯವಿಲ್ಲ. ಹೀಗಾಗಿ ತಂದೆ-ತಾಯಿ ಮತ್ತು ಮಕ್ಕಳ ನಡುವಿನ ಅಂತರ ಕೂಡಾ ಹಲವು ರೀತಿಯಲ್ಲಿ ಹೆಚ್ಚುತ್ತಿದೆ. ಕೆಲಸ ಮಾಡುವ ಪೋಷಕರಿಗೆ ಈ ಸಮಸ್ಯೆ ಹೆಚ್ಚು. ಮಕ್ಕಳ ಮಾತುಗಳಿಗೆ ಸಮಯ ಕೊಡದೆ, ಅವರನ್ನು ಹಾಗೆಯೇ ಬಿಡುವುದು ತಪ್ಪು. ಮಗುವಿನ ಆಸೆಯನ್ನು ಪೋಷಕರು ಸುಲಭವಾಗಿ ತಿರಸ್ಕರಿಸಬಾರದು. ಮೊದಲು ಮಕ್ಕಳು ಹೇಳುವುದನ್ನು ಆಲಿಸಿ. ಅದರ ನಂತರ ನಿಮಗೆ ಸಾಧ್ಯವಾದಷ್ಟು ಅವರನ್ನು ತೃಪ್ತಿಪಡಿಸಲು ಪ್ರಯತ್ನಿಸಿ. ಮಕ್ಕಳೆದುರು ಪೋಷಕರು ಜಗಳವಾಡಬಾರದು. ಇದು ಮಕ್ಕಳ ಮನಸಿನ ಮೇಲೆ ಪ್ರಭಾವ ಬೀರುತ್ತದೆ.