ಮೆಂತೆ ಸೊಪ್ಪು ಕಹಿ ಗುಣವನ್ನು ಹೊಂದಿದ್ದರೂ ಅದರಲ್ಲಿರುವ ಅನೇಕ ಔಷಧೀಯ ಗುಣಗಳು ಆರೋಗ್ಯವನ್ನು ಕಾಪಾಡುತ್ತದೆ. ನಿತ್ಯದ ಆಹಾರದಲ್ಲಿ ಬಳಕೆ ಮಾಡುವುದರಿಂದ ಅನೇಕ ಪ್ರಯೋಜನಗಳನ್ನು ಕಂಡುಕೊಳ್ಳಬಹುದು. ಮೆಂತೆ ಸೊಪ್ಪಿನಲ್ಲಿ ಅಧಿಕ ಪ್ರಮಾಣದಲ್ಲಿ ಕಬ್ಬಿಣಾಂಶ ಇರುವುದರಿಂದ ರಕ್ತ ಹೀನತೆಗೆ ಪ್ರಮುಖ ಔಷಧವನ್ನಾಗಿ ಉಪಯೋಗಿಸುತ್ತಾರೆ. ಇನ್ನು ಪೌಷ್ಟಿಕಾಂಶದ ಆಗರವಾಗಿರುವ ಮೆಂತೆ ಸೊಪ್ಪಿನಲ್ಲಿ ಹಲವಾರು ಆರೋಗ್ಯ ಪ್ರಯೋಜನಗಳು ಹೊಂದಿದೆ. ಉದಾಹರಣೆಗೆ ಹೊಟ್ಟೆ ನೋವು, ಅಜೀರ್ಣ, ಗ್ಯಾಸ್ ಹಾಗೂ ತ್ವಚೆಯ ಸಮಸ್ಯೆ ಸೇರಿದಂತೆ ಇನ್ನೂ ಅನೇಕ ತೊಂದರೆಗಳಿಗೆ ಮೆಂತೆ ಎಲೆಗಳಿಂದ ಮನೆಔಷಧಿ ತಯಾರಿಸಬಹುದು. ಅಂದಹಾಗೆ ಅನಾದಿ ಕಾಲದಿಂದಲೂ ನಮ್ಮ ಹಿರಿಯರು, ಪಂಡಿತರು ಮೆಂತ್ಯ ಎಲೆಗಳನ್ನು ಮಧುಮೇಹ, ಮಲಬದ್ಧತೆ ಮತ್ತು ಮೂತ್ರಪಿಂಡದ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಬಳಸುತ್ತಿದ್ದಾರೆ. ಹಾಗಾಗಿ ಈ ಲೇಖನದಲ್ಲಿ ತಾಜಾ ಮತ್ತು ಒಣಗಿದ ಮೆಂತ್ಯ ಎಲೆಗಳ ಪ್ರಯೋಜನಗಳನ್ನು ಸವಿವರವಾಗಿ ಕೊಡಲಾಗಿದೆ.
ಮೆಂತೆ ಸೊಪ್ಪು ಅದರಲ್ಲಿರುವ ಅನೇಕ ಔಷಧೀಯ ಅಂಶಗಳು ಆರೋಗ್ಯವನ್ನು ಕಾಪಾಡುತ್ತದೆ.
1)ತಾಯಿಯಲ್ಲಿ ಎದೆಹಾಲು ಉತ್ಪಾದನೆ:
ಎಳೆಯ ಮಗುವಿಗೆ ಎದೆಹಾಲು ಮಾತ್ರ ಆಹಾರದ ಮೂಲವಾಗಿರುವುದು. ಎದೆಹಾಲಿನಲ್ಲಿ ಇರುವಂತಹ ಪೋಷಕಾಂಶಗಳು ಬೇರೆಲ್ಲೂ ಸಿಗದು. ಮೆಂತ್ಯೆಯು ಬಾಣಂತಿಯರಲ್ಲಿ ಎದೆಹಾಲು ಹೆಚ್ಚು ಮಾಡುವ ಗುಣ ಹೊಂದಿದೆ. ಇದನ್ನು ತರಕಾರಿ ಅಥವಾ ಗಿಡಮೂಲಿಕೆ ಚಾದ ರೂಪದಲ್ಲಿ ಬಳಕೆ ಮಾಡಬಹುದು. ಇದರಿಂದ ಎದೆಹಾಲು ಉತ್ಪತ್ತಿ ವೃದ್ಧಿಸುವುದು. ಇದರ ಬಗ್ಗೆ ವೈದ್ಯರ ಸಲಹೆ ಪಡೆದುಕೊಂಡರೆ ಒಳ್ಳೆಯದು.
2)ಉರಿಯೂತ ಕಡಿಮೆ ಮಾಡಲು:
ದೇಹದಲ್ಲಿ ಉರಿಯೂತವನ್ನು ಕಡಿಮೆ ಮಾಡುವ ಗುಣ ಹೊಂದಿರುವ ಮೆಂತ್ಯೆಯು ದೀರ್ಘಕಾಲಿನ ಕೆಮ್ಮು, ಬೊಕ್ಕೆ, ಬ್ರಾಂಕ್ರೈಟಿಸ್ ಮತ್ತು ಇತರ ಹಲವಾರು ಚರ್ಮದ ಸಮಸ್ಯೆ ನಿವಾರಣೆ ಮಾಡುವುದು. ಬೊಕ್ಕೆ, ದೇಹದ ನೋವು, ಕಿಡ್ನಿ ಸಮಸ್ಯೆ ಮತ್ತು ಊತವನ್ನು ಇದು ಕಡಿಮೆ ಮಾಡುವುದು.
3)ಹಿಮೋಗ್ಲೋಬಿನ್ ಪ್ರಮಾಣ ಹೆಚ್ಚಳ:
ಇದರಲ್ಲಿ ಅಧಿಕ ಪ್ರಮಾಣದಲ್ಲಿ ಕಬ್ಬಿಣಾಂಶ ಇರುವುದರಿಂದ ರಕ್ತ ಹೀನತೆಗೆ ಪ್ರಮುಖ ಔಷಧಿಯನ್ನಾಗಿ ಉಪಯೋಗಿಸುತ್ತಾರೆ. ರಕ್ತ ಹೀನತೆ ಇರುವವರು ಮೆಂತೆಯ ಆಹಾರ ಮತ್ತು ಇತರ ತರಕಾರಿಗಳ ಜೊತೆ ಸಲಾಡ್ ರೂಪದಲ್ಲಿ ಹಸಿ ಮೆಂತೆಯ ಸೊಪ್ಪನ್ನು ಸೇವಿಸಿದರೆ ಹಿಮೋಗ್ಲೋಬಿನ್ ಪ್ರಮಾಣ ಏರಿಕೆ ಆಗುವುದು.
4)ಮಲಬದ್ದತೆ ಸಮಸ್ಯೆ ನಿವಾರಣೆ:
ಮೆಂತೆ ಎಲೆಯು ದೇಹಕ್ಕೆ ಬೇಕಾಗುವ ನಾರಿನಂಶವನ್ನು ಅಧಿಕ ಪ್ರಮಾಣದಲ್ಲಿ ನೀಡುತ್ತದೆ. ಮಲಬದ್ಧತೆಯ ಸಮಸ್ಯೆಯನ್ನು ಪರಿಹಾರ ಗೊಳಿಸುವುದರ ಜೊತೆಗೆ ಕರುಳಿನ ಚಲನೆಯನ್ನು ಮೃದುಗೊಳಿಸುತ್ತದೆ.
5)ಪುರುಷರ ಲೈಂಗಿಕತೆ ಹೆಚ್ಚಿಸಲು:
ಮೆಂತ್ಯ ಸೊಪ್ಪು ಸೇವನೆಯಿಂದ ಪುರುಷರಲ್ಲಿ ಲೈಂಗಿಕ ಹಾರ್ಮೋನ್ ಗಳ ಉತ್ಪತ್ತಿ ಹೆಚ್ಚುತ್ತದೆ ಮತ್ತು ಲೈಂಗಿಕಾಸಕ್ತಿ ಹೆಚ್ಚಿಸುತ್ತದೆ ಎನ್ನಲಾಗಿದೆ.
6)ಹಾರ್ಮೋನ್ಗಳ ಮಟ್ಟವನ್ನು ನಿಯಂತ್ರಣ:
ಮೆಂತೆ ಎಲೆಯನ್ನು ರುಬ್ಬಿ, ಒಂದು ಗ್ಲಾಸ್ ರಸವನ್ನು ತಯಾರಿಸಿ ಕುಡಿದರೆ ಇನ್ಸುಲಿನ್ ಹಾರ್ಮೋನ್ಗಳ ಮಟ್ಟವನ್ನು ನಿಯಂತ್ರಿಸಬಹುದು. ಆರೋಗ್ಯ ಪೂರ್ಣ ಪಾನೀಯವಾದ ಇದರಲ್ಲಿ ಕಹಿ ಗುಣವು ಇರುವುದರಿಂದ ಮಧುಮೇಹಕ್ಕೂ ಹೆಚ್ಚು ಪರಿಣಾಮಕಾರಿ ಚಿಕಿತ್ಸೆ ನೀಡುವುದು
ಕೊಲೆಸ್ಟ್ರಾಲ್ ಉತ್ಪತ್ತಿ ಮಾಡುವುದನ್ನು ಮೆಂತ್ಯೆ ಎಲೆಗಳು ಸುಧಾರಣೆ ಮಾಡುವುದು. ಮಧುಮೇಹದಿಂದ ಬಳಲುತ್ತಿರುವವರಲ್ಲಿ ಇದು ಕೊಲೆಸ್ಟ್ರಾಲ್ ಕಡಿಮೆ ಮಾಡುವುದು.
ಕೆಲವೊಂದು ಅಧ್ಯಯನಗಳ ಪ್ರಕಾರ ಇದು ಒಳ್ಳೆಯ ಕೊಲೆಸ್ಟ್ರಾಲ್ ಹೆಚ್ಚಿಸುವುದು ಮತ್ತು ಕೆಟ್ಟ ಕೊಲೆಸ್ಟ್ರಾಲ್ ತಗ್ಗಿಸುವುದು. ಟೈಪ್ 1 ಮತ್ತು ಟೈಪ್ 2 ಮಧುಮೇಹ ಹೊಂದಿರುವಂತಹ ಜನರಿಗೆ ಮೆಂತ್ಯೆ ಸೊಪ್ಪು ತುಂಬಾ ಲಾಭಕಾರಿ. ಇದು ಮಧುಮೇಹಿಗಳಲ್ಲದೆ ಇರುವ ಜನರಲ್ಲಿ ಕಾರ್ಬ್ಸ್ ಸೂಕ್ಷ್ಮತೆಯನ್ನು ಸುಧಾರಣೆ ಮಾಡುವುದು. ಮೆಂತ್ಯೆಯು ಇನ್ಸುಲಿನ್ ಚಟುವಟಿಕೆ ಸುಧಾರಣೆ ಮಾಡುವುದು. ಮೆಂತ್ಯೆಯಲ್ಲಿ ಇರುವ ನಾರಿನಾಂಶವು ಇದಕ್ಕೆ ಕಾರಣವಾಗಿದೆ.
ಎಳೆಯ ಮಗುವಿಗೆ ಎದೆಹಾಲು ಮಾತ್ರ ಆಹಾರದ ಮೂಲವಾಗಿರುವುದು. ಎದೆಹಾಲಿನಲ್ಲಿ ಇರುವಂತಹ ಪೋಷಕಾಂಶಗಳು ಬೇರೆಲ್ಲೂ ಸಿಗದು. ಮೆಂತ್ಯೆಯು ಬಾಣಂತಿಯರಲ್ಲಿ ಎದೆಹಾಲು ಹೆಚ್ಚು ಮಾಡುವ ಗುಣ ಹೊಂದಿದೆ. ಇದನ್ನು ತರಕಾರಿ ಅಥವಾ ಗಿಡಮೂಲಿಕೆ ಚಾದ ರೂಪದಲ್ಲಿ ಬಳಕೆ ಮಾಡಬಹುದು. ಇದರಿಂದ ಎದೆಹಾಲು ಉತ್ಪತ್ತಿ ವೃದ್ಧಿಸುವುದು. ಇದರ ಬಗ್ಗೆ ವೈದ್ಯರ ಸಲಹೆ ಪಡೆದುಕೊಂಡರೆ ಒಳ್ಳೆಯದು.
ನಿಯಮಿತವಾಗಿ ಮೆಂತ್ಯೆ ಕಾಳು ಮತ್ತು ಮೆಂತ್ಯೆ ಸೊಪ್ಪು ಸೇವನೆ ಮಾಡುತ್ತಲಿದ್ದರೆ ಇದು ಹೃದಯ ರೋಗಿಗಳಿಗೆ ತುಂಬಾ ಒಳ್ಳೆಯದು. ಇದು ಹೃದಯದ ಹಲವಾರು ಸಮಸ್ಯೆ ನಿವಾರಣೆ ಮಾಡುವುದು. ಕೊಲೆಸ್ಟ್ರಾಲ್ ನ್ನು ನಿಯಂತ್ರಿಸುವ ಗುಣವು ಹೃದಯದ ಆರೋಗ್ಯಕ್ಕೆ ತುಂಬಾ ಸಹಕಾರಿ ಆಗಿರುವುದು. ಇದು ಹೃದಯಾಘಾತ ಮತ್ತು ರಕ್ತ ಹೆಪ್ಪುಗಟ್ಟುವಿಕೆಯಿಂದ ಆಗಬಹುದಾದ ಪಾರ್ಶ್ವವಾಯು ತಡೆಯುವುದು.
ದೇಹದಲ್ಲಿ ಉರಿಯೂತವನ್ನು ಕಡಿಮೆ ಮಾಡುವ ಗುಣ ಹೊಂದಿರುವ ಮೆಂತ್ಯೆಯು ದೀರ್ಘಕಾಲಿನ ಕೆಮ್ಮು, ಬೊಕ್ಕೆ, ಬ್ರಾಂಕ್ರೈಟಿಸ್ ಮತ್ತು ಇತರ ಹಲವಾರು ಚರ್ಮದ ಸಮಸ್ಯೆ ನಿವಾರಣೆ ಮಾಡುವುದು. ಬೊಕ್ಕೆ, ದೇಹದ ನೋವು, ಕಿಡ್ನಿ ಸಮಸ್ಯೆ ಮತ್ತು ಊತವನ್ನು ಇದು ಕಡಿಮೆ ಮಾಡುವುದು.