ಮೊಳಕೆ ಕಟ್ಟಿದ ಕಾಳುಗಳ ಸೇವನೆಯಿಂದ ಸಿಗುವ ಲಾಭಗಳು

ArogyaVijaya Kannada
2 Min Read

ದಾವಣಗೆರೆ : ಮೊಳಕೆ  ಕಟ್ಟಿದ ಕಾಳುಗಳನ್ನು ಬೆಳಗಿನ ಸಮಯದಲ್ಲಿ ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡುವುದರಿಂದ ಇದರ ಪೂರ್ಣ ಪ್ರಮಾಣದ ಲಾಭಗಳನ್ನು ನಿಮ್ಮದಾಗಿಸಿಕೊಳ್ಳ ಬಹುದು.ನಿಮ್ಮ ಗ್ಯಾಸ್ಟ್ರಿಕ್ ಸಮಸ್ಯೆಯ ಪರಿಹಾರದಿಂದ ಹಿಡಿದು ಮಲಬದ್ಧತೆ ಸಮಸ್ಯೆ ನಿವಾರಣೆ, ರಕ್ತದ ಒತ್ತಡ ನಿರ್ವಹಣೆ, ದೇಹದ ತೂಕ ನಿರ್ವಹಣೆ ಹೀಗೆ ಹಲವಾರು ಪ್ರಯೋಜನಗಳನ್ನು ನೀವು ಇವುಗಳಿಂದ ಪಡೆದುಕೊಳ್ಳಬಹುದು.

ದೇಹದ ಒಟ್ಟಾರೆ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಮತೋಲಿತ ಆಹಾರವನ್ನು ಸೇವನೆ ಮಾಡುವುದು ತುಂಬಾ ಮುಖ್ಯ. ಇದಕ್ಕಾಗಿ ಹೆಚ್ಚಿನ ಪ್ರಮಾಣದಲ್ಲಿ ಹಣ್ಣುಗಳು, ತರಕಾರಿಗಳನ್ನು ಸೇವನೆ ಮಾಡಬೇಕೆಂದು ಸಲಹೆ ನೀಡಲಾಗುತ್ತದೆ. ಹಣ್ಣುಗಳು ಹಾಗೂ ತರಕಾರಿಗಳಂತೆ ಹಲವು ಬಗೆಯ ಧಾನ್ಯಗಳು ನಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ.   ಅದರಲ್ಲೂ ಮೊಳಕೆಕಟ್ಟಿದ ಕಾಳುಗಳ ಸೇವನೆ ತುಂಬಾ ಒಳ್ಳೆಯದು. ಏಕೆಂದರೆ ಇದರಲ್ಲಿ  ವಿಟಮಿನ್ “ಸಿ”, “ಎ” ಮತ್ತು ವಿಟಮಿನ್ ಕೆ, ಫೋಲೇಟ್, ಒಮೆಗಾ-3 ಇತ್ಯಾದಿ ಪೋಷಕಾಂಶಗಳು ಹೇರಳವಾಗಿದ್ದು, ಇವು ದೇಹಕ್ಕೆ ಶಕ್ತಿಯನ್ನು ನೀಡುವುದರ ಜೊತಗೆ ಅನೇಕ ಪೋಷಕಾಂಶಗಳ ಕೊರತೆಯನ್ನು ನೀಗಿಸುತ್ತದೆ. ಮೊಳಕೆ ಕಟ್ಟಿದ ಕಾಳುಗಳನ್ನು ಹಸಿಯಾಗಿ ತಿನ್ನುವ ಬದಲು ಬೇಯಿಸಿ ತಿಂದರೆ ಉತ್ತಮ. ಹೀಗೆ ಮಾಡುವುದರಿಂದ ಮೊಳಕೆ ಕಟ್ಟಿದ ಕಾಳುಗಳಲ್ಲಿನ ಬ್ಯಾಕ್ಟೀರಿಯಾಗಳು ಸಾಯುತ್ತವೆ. ಖಾಲಿ ಹೊಟ್ಟೆಯಲ್ಲಿ ಮೊಳಕೆ ಕಟ್ಟಿದ ಕಾಳುಗಳನ್ನು ಸೇವನೆ ಮಾಡುವುದು ಜೀರ್ಣಾಂಗ ವ್ಯವಸ್ಥೆಗೆ ತುಂಬಾ ಪ್ರಯೋಜನಕಾರಿಯಾಗಿದೆ. ಇದರಲ್ಲಿ ಹೆಚ್ಚಿನ ಪ್ರಮಾಣದ ಕಿಣ್ವಗಳಿದ್ದು, ಇದು ಚಯಾಪಚಯ ಕ್ರಿಯೆಯನ್ನು ಸುಧಾರಿಸುತ್ತದೆ.
ನೀವು ತೂಕವನ್ನು ಇಳಿಸಿಕೊಳ್ಳಲು ಬಯಸಿದರೆ ಮೊಳಕೆಕಟ್ಟಿದ ಕಾಳುಗಳನ್ನು ಸೇವನೆ ಮಾಡಬಹುದು. ಮೊಳಕೆಕಾಳುಗಳಲ್ಲಿ ಹೆಚ್ಚಿನ ಪ್ರಮಾಣದ ನಾರಿನಂಶವಿದೆ. ಇದು ನಿಮ್ಮ ಹೊಟ್ಟೆಯನ್ನು ದೀರ್ಘಕಾಲ ತುಂಬಿರಲು ಸಹಾಯ ಮಾಡುತ್ತದೆ. ಅಲ್ಲದೆ ಇದರಲ್ಲಿರುವ ಕ್ಯಾಲೋರಿ ಪ್ರಮಾಣವೂ ಕಡಿಮೆ. ಆದ್ದರಿಂದ ತೂಕ ಇಳಿಸಿಕೊಳ್ಳಲು ಪ್ರಯತ್ನಿಸುವ ಜನರಿಗೆ ಇದು ಉತ್ತಮ ಆಯ್ಕೆಯಾಗಿದೆ.
ಮೊಳಕೆ ಕಾಳುಗಳ ಸೇವನೆಯಿಂದ ಕಣ್ಣುಗಳನ್ನು ಆರೋಗ್ಯಕರವಾಗಿರಿಸಿಕೊಳ್ಳಬಹುದು. ಈ ಕಾಳುಗಳಲ್ಲಿ ಉತ್ತಮ ಪ್ರಮಾಣದ ವಿಟಮಿನ್ ಎ ಇದೆ. ಇದು ದೃಷ್ಟಿಯನ್ನು ಸುಧಾರಿಸುತ್ತದೆ.
 ಮೊಳಕೆ ಕಟ್ಟಿದ ಕಾಳು ತಲೆಹೊಟ್ಟು ಮತ್ತು ಕೂದಲು ಅಕಾಲಿಕವಾಗಿ ಬಿಳಿಯಾಗುವ ಸಮಸ್ಯೆಯನ್ನು ತಡೆಯಲು ಸಹಾಯಕವಾಗಿದೆ. ಅಲ್ಲದೆ ಇದರಲ್ಲಿ ಹಲವಾರು ಪೌಷ್ಟಿಕಾಂಶ ಗುಣಗಳಿದ್ದು, ಇವೆಲ್ಲವು ಕೂದಲಿನ ಬೆಳವಣಿಗೆಗೆ ಬಹಳ ಸಹಕಾರಿಯಾಗಿದೆ.
ನಾನ್‌ವೆಜ್ ತಿನ್ನುವವರಿಗೆ ಮೊಟ್ಟೆ ಮತ್ತು ಮಾಂಸಗಳಲ್ಲಿ ತಮ್ಮ ಆರೋಗ್ಯಕ್ಕೆ ಬೇಗುವ ಎಲ್ಲಾ ರೀತಿಯ ಪ್ರೋಟೀನ್ ಹಾಗೂ ಪೌಷ್ಠಿಕ ಸತ್ವವನ್ನು ಸಿಗುತ್ತಾ ಹೋಗುತ್ತವೆ.. ಆದರೆ ನಾನ್ ವೆಜ್ ತಿನ್ನದೇ ಇರುವ ಸಸ್ಯಾಹಾರಿ ಗಳಿಗೆ ಈ ಭಾಗ್ಯವಿಲ್ಲ ಎನ್ನುವ ಕೊರಗು ಬೇಡ! ಯಾಕೆಂದರೆ ತಮ್ಮ ದಿನ-ನಿತ್ಯದ ಆಹಾರ ಪದ್ಧತಿಗಳಲ್ಲಿ ಮೊಳಕೆ ಕಟ್ಟಿದ ಕಾಳುಗಳನ್ನು ಹಾಗೂ ಕೆಲವೊಂದು ಬಗೆಯ ಹಸಿರೆಲೆ ತರಕಾರಿಗಳನ್ನು ಸೇವಿಸುತ್ತಾ ಹೋಗುವು ದರಿಂದ ಆರೋಗ್ಯಕ್ಕೆ ಬೇಕಾಗುವ ಎಲ್ಲಾ ಬಗೆ ಯ ಪೌಷ್ಟಿಕ ಸತ್ವಗಳು ಸಿಕ್ಕಂತೆ ಆಗುತ್ತದೆ.
Share this Article
Leave a comment

Leave a Reply

Your email address will not be published. Required fields are marked *