ದಾವಣಗೆರೆ : (NOV -10) : * ಅಣಬೂರಿನಲ್ಲಿಂದು ಪ್ರೀತಿ ಆರೈಕೆ ಆರೋಗ್ಯ ಶಿಬಿರ* ಪ್ರೀತಿ ಆರೈಕೆ ಟ್ರಸ್ಟ್ ಮತ್ತು ಆರೈಕೆ ಆಸ್ಪತ್ರೆಯ ಸಂಯುಕ್ತಾಶ್ರದಲ್ಲಿ ದಾವಣಗೆರೆ ಜಿಲ್ಲಾದ್ಯಂತ ನಡೆಯುತ್ತಿರುವ ಪ್ರೀತಿ ಆರೈಕೆ ಆರೋಗ್ಯ ಉಚಿತ ಶಿಬಿರವು ಜಗಳೂರು ತಾಲೂಕಿನ ಅಣಬೂರಿನಲ್ಲಿ ಇಂದು (ಶುಕ್ರವಾರ) ನಡೆಯಲಿದೆ. ಶಿಬಿರವನ್ನು ಜಗಳೂರು ಶಾಸಕ ಬಿ. ದೇವೇಂದ್ರಪ್ಪ ಅವರು ಉದ್ಘಾಟಿಸಲಿದ್ದು, ಗ್ರಾಪಂ ಅಧ್ಯಕ್ಷ ಸಿದ್ಧಪ್ಪ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಅಣಬೂರಿನ ಶ್ರೀ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ಮುಂಜಾನೆ 9 ಗಂಟೆಗೆ ಶಿಬಿರ ಆರಂಭವಾಗಲಿದೆ.
ದಾವಣಗೆರೆ ಜಿಲ್ಲಾದ್ಯಂತ ಈಗಾಗಲೇ 33ಕ್ಕೂ ಹೆಚ್ಚಿನ ಆರೋಗ್ಯ ತಪಾಸಣೆ ಶಿಬಿರಗಳನ್ನು ಯಶಸ್ವಿಯಾಗಿ ನೆರವೇರಿಸಿದ್ದೇವೆ. ಈ ಯಶಸ್ಸಿಗೆ ದಾವಣಗೆರೆ ಜಿಲ್ಲೆಯ ಸಮಸ್ತ ನಾಗರೀಕರ ಪಾತ್ರವಿದೆ ಹಾಗೂ ಊರಿನ ಮತ್ತು ಸುತ್ತ ಮುತ್ತಲಿನ ಗ್ರಾಮಸ್ಥರು ಉಪಯೋಗ ಪಡೆದುಕೊಳ್ಳಬೇಕು ಎಂದರು . ಮುಂದಿನ ದಿನಗಳಲ್ಲಿ ಇನ್ನಷ್ಟು ಸಮಾಜಮುಖಿ ಸೇವೆಗಳನ್ನು ಮಾಡಲು ನಮಗೆ ಸ್ಪೂರ್ತಿ ದೊರಕಿದೆ ಎಂದು ಆರೈಕೆ ಆಸ್ಪತ್ರೆಯ ಮುಖ್ಯಸ್ಥರು ಮತ್ತು ಪ್ರೀತಿ ಆರೈಕೆ ಟ್ರಸ್ಟ್ ಕಾರ್ಯದರ್ಶಿ ಡಾ. ರವಿಕುಮಾರ್ ಟಿ.ಜಿ. ತಿಳಿಸಿದ್ದಾರೆ.