ದಾವಣಗೆರೆ :(ಅ-17) ಮೂಳೆಗಳು ಸ್ಟ್ರಾಂಗ್ ಆಗಲು ಬೇಕು ಸಬ್ಬಸ್ಸಿಗೆ ಸೊಪ್ಪು : ದೇಹದ ಮೂಳೆಗಳು ಬಲವಾಗಿರವುದು ನಾವು ಮಾಡುವ ದೈಹಿಕ ಚಟುವಟಿಕೆ ಹಾಗೂ ಮುಖ್ಯವಾಗಿ, ನಾವು ಪ್ರತಿದಿನ ಸೇವಿಸುವ ಆಹಾರ ಪದಾರ್ಥಗಳಿಂದ.ಸಬ್ಬಸಿಗೆ ಸೊಪ್ಪಿನಲ್ಲಿ ಕ್ಯಾಲ್ಸಿಯಂ ಅಪಾರ ಪ್ರಮಾಣದಲ್ಲಿ ಕಂಡು ಬರುತ್ತದೆ .
ಹೀಗಾಗಿ ದೇಹದ ಮೂಳೆಗಳು ಸದೃಢವಾಗಿರಬೇಕು ಎಂದರೆ ಕ್ಯಾಲ್ಸಿಯಂ ಅಂಶ ಹೆಚ್ಚಿರುವ ಆಹಾರಗಳನ್ನು ಹೆಚ್ಚಾಗಿ ಸೇವನೆ ಮಾಡಬೇಕು. ಹಾಲು ಹಾಗೂ ಹಾಲಿನ ಉಪ ಉತ್ಪನ್ನಗಳಲ್ಲಿ, ಕ್ಯಾಲ್ಸಿ ಯಂ ಅಂಶಗಳು ಅಧಿಕ ಪ್ರಮಾಣದಲ್ಲಿ ಕಂಡು ಬರು ತ್ತದೆ. ಹೀಗಾಗಿ ಪ್ರತಿದಿನ ಒಂದು ಲೋಟ ಹಾಲು ಕುಡಿಯು ವುದರಿಂದ, ದೇಹದ ಮೂಳೆಗಳು ಬಲಗೊಳ್ಳುತ್ತವೆ.
ಬೇಯಿಸಿದ ಮೊಟ್ಟೆಯಲ್ಲಿಯೂ, ಕೂಡ ಕ್ಯಾಲ್ಸಿಯಂ ಸಮೃದ್ಧ ಪ್ರಮಾಣದಲ್ಲಿ ಕಂಡು ಬರುತ್ತದೆ. ಹೀಗಾಗಿ ದಿನಕ್ಕೊಂದು ಮೊಟ್ಟೆಯ ಸೇವನೆ ಮಾಡಿದರೂ ಒಳ್ಳೆಯದು.ವಯಸ್ಸಾಗುತ್ತಾ ಬರುತ್ತಿದ್ದಂತೆ, ಮೂಳೆಗಳು ತಮ್ಮ ಬಲ ಕಳೆದುಕೊಳ್ಳುತ್ತವೆ ಎಂದು ಹೇಳಲಾ ಗುತ್ತದೆ. ಆದರೆ ಇಂದಿನ ಯುವ ಜನತೆಯರಲ್ಲಿ ಈಗಾಗಲೇ ಮಂಡಿ ನೋವು, ಕೀಲು ನೋವು, ಮೂಳೆಗಳ ಬಾಧೆ, ಮೈಕೈ ನೋವು ಇತ್ಯಾದಿ ಸಮಸ್ಯೆಗಳು ಸಣ್ಣ ವಯಸ್ಸಿನಲ್ಲಿಯೇ ಕಂಡು ಬರುತ್ತಿದೆ.
ಇದಕ್ಕೆ ಪ್ರಮುಖ ಕಾರಣ ಇಂದಿನ ಆಧುನಿಕ ಜೀವನ ಶೈಲಿ ಆಹಾರ ಪದ್ಧತಿ ಹಾಗೂ ಕೆಲವರಿಗೆ ಅನುವಂಶೀಯವಾಗಿ ಕೂಡ, ಈ ಸಮಸ್ಯೆ ಕಂಡು ಬರುತ್ತಿದೆ. ಆದರೆ ತಜ್ಞರು ಹೇಳುವ ಪ್ರಕಾರ, ಹೆಚ್ಚಿನವರು ಸರಿಯಾದ ರೀತಿಯಲ್ಲಿ ಆಹಾರಕ್ರಮ, ಜಡ ಜೀವನಶೈಲಿ ಅನುಸರಿಸದೆ ಇರುವುದರಿಂದ ಕೂಡ ಸಣ್ಣ ವಯಸ್ಸಿಗೆ, ಈ ಸಮಸ್ಯೆಗೆ ಗುರಿಯಾಗುತ್ತಾರೆ ಎಂದು ಅಭಿಪ್ರಾಯ ಪಡುತ್ತಾರೆ.
ಕೊತ್ತಂಬರಿ ಸೊಪ್ಪು ಹಾಗೂ ಸಬ್ಬಸಿಗೆ ಸೊಪ್ಪು, ಅಣ್ಣ-ತಮ್ಮ ಇದ್ದಂತೆ ಎಂದು ನಮ್ಮ ಹಿರಿಯರು ಹೇಳುತ್ತಾರೆ. ಇದಕ್ಕೆ ಪ್ರಮುಖ ಕಾರಣ ಏನೆಂದರೆ, ಕೊತ್ತಂಬರಿ ಸೊಪ್ಪಿನ ಜೊತೆಗೆ ಸಬ್ಬಸಿಗೆ ಸೊಪ್ಪನ್ನು ಕೂಡ ಒಟ್ಟಿಗೆ ಅಡುಗೆಗೆ ಸೇರಿಸಿದರೆ, ಸಾಕಷ್ಟು ಆರೋಗ್ಯ ಸಮಸ್ಯೆಗಳು ನಮ್ಮಿಂದ ದೂರವಾಗು ತ್ತದೆಯಂತೆ.
ಸಬ್ಬಸಿಗೆ ಸೊಪ್ಪಿನಲ್ಲಿ ವಿಟಮಿನ್ ಸಿ, ವಿಟಮಿನ್ ಬಿ ಕಾಂಪ್ಲೆಕ್ಸ್, ಫ್ಲೇವನಾಯ್ಡ್ ಎಂಬ ಆಂಟಿ ಆಕ್ಸಿಡೆಂಟ್ ಅಂಶಗಳು ಹಾಗೂ ಕ್ಯಾಲ್ಸಿಯಂ ಅಂಶ ಹೆಚ್ಚಾಗಿ ಕಂಡು ಬರುತ್ತದೆ. ಈಗಾಗಲೇ ಹೇಳಿದ ಹಾಗೆ ಸಬ್ಬಸಿಗೆ ಸೊಪ್ಪಿನಲ್ಲಿ ವಿಟ ಮಿನ್ ಸಿ, ವಿಟಮಿನ್ ಎ, ಕಬ್ಬಿಣಾಂಶ, ಕ್ಯಾಲ್ಸಿಯಂ ಹಾಗೂ ಮ್ಯಾಂಗನೀಸ್ ನ ಪ್ರಮಾಣ ಅಧಿಕ ಪ್ರಮಾಣ ದಲ್ಲಿ ಕಂಡು ಬರುತ್ತದೆ.
ಸಬ್ಬಸಿಗೆ ಸೊಪ್ಪಿನಲ್ಲಿ ಕ್ಯಾಲ್ಸಿಯಂ ಅಪಾರ ಪ್ರಮಾಣದಲ್ಲಿ ಕಂಡು ಬರುತ್ತದೆ .ಇನ್ನು ನಾನ್ ವೆಜ್ ತಿನ್ನುವವರು, ಸಾಲ್ಮನ್ ಮೀನು ಸೇವನೆ ಮಾಡಿದರೆ ಒಳ್ಳೆಯದು. ಇದರಲ್ಲಿ ವಿಟಮಿನ್ ಡಿ ಅಂಶವು, ಅಧಿಕ ಪ್ರಮಾಣದಲ್ಲಿ ಕಂಡು ಬರುವುದರಿಂದ, ಮೂಳೆಗಳು ಬಲಗೊಳಿಸಲು ನೆರವಾಗುತ್ತದೆ.