ದಾವಣಗೆರೆ : ಪ್ರೀತಿ ಆರೈಕೆ ಟ್ರಸ್ಟ್ ನಿಂದ ಮಾಯಕೊಂಡದಲ್ಲಿ ಅರೋಗ್ಯ ಶಿಬಿರ ಯಶಸ್ವಿ
ಮಾಯಕೊಂಡ: ಡಾ. ಟಿ.ಜಿ.ರವಿಕುಮಾರ್ ನೇತೃತ್ವದಲ್ಲಿ ಪ್ರೀತಿ ಆರೈಕೆ ಟ್ರಸ್ಟ್ ಮತ್ತು ಆರೈಕೆ ಸೂಒತ್ ಸ್ಪೆಷಾಲಿಟಿ ಆಸ್ಪತ್ರೆ ವತಿಯಿಂದ ನಡೆಯುವ ಆರೋಗ್ಯ ತಪಾಸಣೆ ಉಚಿತ ಶಿಬಿರವು ಮಾಯಕೊಂಡದಲ್ಲಿ ಯಶಸ್ವಿಯಾಗಿ ನೆರವೇರಿತು.
ಮುಂಜಾನೆ 9.30ರಿಂದ ಆರಂಭವಾಗಿರುವ ಆರೋಗ್ಯ ಶಿಬಿರದಲ್ಲಿ ಮಾಯಕೊಂಡ ಸೇರಿದಂತೆ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ಪಾಲ್ಗೊಂಡಿದ್ದರು. ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶಿವಮ್ಮ ಮಾತನಾಡಿ, ದಾವಣಗೆರೆಯಂಥ ದೊಡ್ಡ ಪಟ್ಟಣಗಳಿಗೆ ಗ್ರಾಮೀಣ ಭಾಗದ ಬಡವರು, ಕೃಷಿಕರು ಬಂದು ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ಕಷ್ಟ ಸಾಧ್ಯ. ಆದರೆ, ಡಾ. ರವಿಕುಮಾರ್ ಅವರ ತಂಡವು ನಾವು ಇದ್ದಲ್ಲಿಗೇ ಬಂದು ಉಚಿತವಾಗಿ ಆರೋಗ್ಯ ತಪಾಣೆ ಮಾಡುತ್ತಿದ್ದಾರೆ. ಇವರಿಗೆ ಗ್ರಾಮದ ಸಮಸ್ಥರ ಪರವಾಗಿ ಹೃದಯ ತುಂಬಿದ ಧನ್ಯವಾದ ಮತ್ತು ಕೃತಜ್ಞತೆಗಳು ಎಂದು ಹೇಳಿದರು.
ಆರೋಗ್ಯ ದಾಸೋಹ ನೀಡುತ್ತೇವೆ ಎಂಬ ಮಾತು ಕೇಳಿ ಅತ್ಯಂತ ಹೆಮ್ಮೆ ಎನಿಸಿತು. ವೈದ್ಯಕೀಯ ಕ್ಷೇತ್ರದವರು ಬರೀ ಹಣ ಗಳಿಕೆಯ ಉದ್ದೇಶ ಹೊಂದಿರುತ್ತಾರೆ ಎಂಬ ಮಾತು ಅಸತ್ಯ ಎನಿಸುತ್ತಿದ್ದು, ಮುಂದಿನ ದಿನಗಳಲ್ಲಿ ಪ್ರೀತಿ ಆರೈಕೆ ಟ್ರಸ್ಟ್ನಿಂದ ಹೆಚ್ಚೆಚ್ಚು ಆರೋಗ್ಯ ಉಚಿತ ಶಿಬಿರಗಳು ನೆರವೇರಲಿ ಎಂದು ಆಶಿಸುತ್ತೇನೆ ಎಂದರು.
ಈ ವೇಳೆ ಮಾತನಾಡಿದ ಡಾ.ರವಿಕುಮಾರ್, ಅತಿ ಕಡಿಮೆ ಅವಧಿಯಲ್ಲೇ 29ನೇ ಆರೋಗ್ಯ ಶಿಬಿರದ ಸಾರ್ಥಕತೆಗೆ ಬಂದು ತಲುಪಿದ್ದೇವೆ. ಕಳೆದ ಏಪ್ರಿಲ್ ಅಂತ್ಯದಲ್ಲಿ ದಿವಂಗತ ಶ್ರೀಮತಿ ಪ್ರೀತಿ ರವಿಕುಮಾರ್ ಅವರ ಸ್ಮರಣೆಗಾಗಿ ಟ್ರಸ್ಟ್ ಪ್ರಾರಂಭ ಮಾಡಲಾಯಿತು. ಅಂದಿನಿಂದಲೂ ಹಲವು ಸಮಾಜ ಹಿತವಾದ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲಾಗಿದೆ. ಮುಖ್ಯವಾಗಿ ಆರೋಗ್ಯ ಉಚಿತ ತಪಾಸಣೆ ಶಿಬಿರಗಳಿಗೆ ದಾವಣಗೆರೆ ಜಿಲ್ಲೆಯಾದ್ಯಂತ ಹೆಚ್ಚಿನ ಮನ್ನಣೆ, ಮೆಚ್ಚುಗೆ ದೊರೆತಿದೆ, ಇದಕ್ಕೆ ನಾನು ಅಭಾರಿ ಎಂದು ಹೇಳಿದರು.
ಪ್ರತಿಯೊಬ್ಬರೂ ಆರೋಗ್ಯವಂತರಾಗಿ ಇದ್ದಾಗಲೇ ದೇಶದ ಪ್ರಗತಿಗೆ ಕೊಡುಗೆ ನೀಡಲು ಸಾಧ್ಯ. ಭಾರತವನ್ನು ವಿಶ್ವದ ಸರ್ವಶ್ರೇಷ್ಠ ದೇಶ ಮಾಡಲು ನಾವೆಲ್ಲರೂ ಮಾನಸಿಕ ಮತ್ತು ದೈಹಿಕವಾಗಿ ಆರೋಗ್ಯವಂತರಾಗಿ ಇರುವ ಮೂಲಕ ನಮ್ಮ ಯೋಗದಾನ ನೀಡೋಣ ಎಂದು ಕಿವಿಮಾತು ಹೇಳಿದರು.
ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಬಸಪ್ಪ, ದಾವಣಗೆರೆ ಜಿಲ್ಲಾ ಎನ್ಆರ್‌ಇಜಿ ಕೂಲಿ ಕಾರ್ಮಿಕರ ಸಂಖದ ಅಧ್ಯಕ್ಷರು, ಸದಸ್ಯರು ಸೇರಿದಂತೆ ಟ್ರಸ್ಟ್ ಸಿಬ್ಬಂದಿಗಳಾದ ರವಿ,ವಿಜಯ್, ನುಂಕೇಶ್, ಎಚ್.ಡಿ.ಕುಮಾರ್,ಸುದೀಪ್ ಇದ್ದರು.
ಕಳೆದ ಮೂರು ತಿಂಗಳಲ್ಲಿ ಪ್ರೀತಿ ಆರೈಕೆ ಟ್ರಸ್ಟ್ 29ನೇ ಆರೋಗ್ಯ ಉಚಿತ ತಪಾಸಣೆ ಶಿಬಿರವನ್ನು ಏರ್ಪಡಿಸುವ ಮೂಲಕ ಹೊಸ ಮೈಲಿಗಲ್ಲು ಸ್ಥಾಪಿಸಿದೆ. ಸರಿಸುಮಾರು 8 ಸಾವಿರಕ್ಕೂ ಹೆಚ್ಚಿನ ಜನರಿಗೆ ಆರೋಗ್ಯ ಉಚಿತ ತಪಾಸಣೆ ಮಾಡಿರುವುದು ಸಣ್ಣ ಸಾಧನೆಯಲ್ಲ. ಜನರ ಮನೆಬಾಗಿಲಿಗೇ ಬಂದು ಉಚಿತವಾಗಿ ಆರೋಗ್ಯ ತಪಾಸಣೆ ಮಾಡುವಂತಹ ಸಮಾಜ ಪರವಾದ, ಜೀವ ಪರವಾದ ಕರ್ತವ್ಯ ಮಾಡುತ್ತಿರುವ ಡಾ. ಟಿ.ಜಿ. ರವಿಕುಮಾರ್ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ನಾಗರಾಜ್, ಪಿ.ಡಿ.ಒ.