ದಾವಣಗೆರೆ : ಮೂತ್ರಪಿಂಡದಲ್ಲಿ ಕಲ್ಲು(Kidney stone )ಗಳು ಇವೆ ಎಂಬುದನ್ನು ತಿಳಿದುಕೊಳ್ಳುವುದು ಹೇಗೆ : ಮೂತ್ರವು ಅನೇಕ ಕರಗಿದ ಖನಿಜಗಳು ಮತ್ತು ಲವಣಗಳನ್ನು ಹೊಂದಿರುತ್ತದೆ. ಈ ಖನಿಜಗಳು ಮತ್ತು ಲವಣಗಳ ಅಂಶವು ಅಧಿಕವಾದಾಗ, ಅವು ಮೂತ್ರಪಿಂಡದಲ್ಲಿ ಕಲ್ಲುಗಳನ್ನು ರೂಪಿಸುತ್ತವೆ. ಕೆಲವು ಕಲ್ಲುಗಳು ಮೂತ್ರಪಿಂಡದಲ್ಲಿ ಉಳಿಯುತ್ತವೆ ಮತ್ತು ಯಾವುದೇ ರೋಗಲಕ್ಷಣಗಳನ್ನು ಉಂಟುಮಾಡುವುದಿಲ್ಲ, ಆದರೆ ಇತರವು ಮೂತ್ರನಾಳದ ಮೂಲಕ (ಮೂತ್ರಪಿಂಡ ಮತ್ತು ಮೂತ್ರಕೋಶದ ನಡುವಿನ ಕೊಳವೆ), ಮೂತ್ರಕೋಶವನ್ನು ತಲುಪುತ್ತವೆ ಮತ್ತು ಮೂತ್ರದ ಮೂಲಕ ದೇಹದಿಂದ ಹೊರಬರುತ್ತವೆ. ಮೂತ್ರದಲ್ಲಿ ಕ್ಯಾಲ್ಸಿಯಂ, ಆಕ್ಸಲೇಟ್ ಮತ್ತು ರಂಜಕದಂತಹ ಖನಿಜಗಳ ಮಟ್ಟ ಹೆಚ್ಚಾದಾಗ ಕಿಡ್ನಿ ಕಲ್ಲುಗಳು ಉಂಟಾಗುತ್ತವೆ. ಕಿಡ್ನಿಯಲ್ಲಿ ಕಲ್ಲುಗಳು ಇರುವುದು ಲಕ್ಷಾಂತರ ಜನರ ಮೇಲೆ ಪರಿಣಾಮ ಬೀರುವ ಸಾಮಾನ್ಯ ಕಾಯಿಲೆಯಾಗಿದೆ.
ಮೂತ್ರಪಿಂಡದ ಕಲ್ಲುಗಳು ಮೂತ್ರಪಿಂಡದಲ್ಲಿ ಚಲಿಸುವವರೆಗೆ ಅಥವಾ ಮೂತ್ರಪಿಂಡವನ್ನು ಮೂತ್ರಕೋಶಕ್ಕೆ ಸಂಪರ್ಕಿಸುವ ಮೂತ್ರನಾಳಕ್ಕೆ ಹಾದುಹೋಗುವವರೆಗೆ ಯಾವುದೇ ಲಕ್ಷಣಗಳು ಕಂಡುಬರುವುದಿಲ್ಲ. ನಿಮ್ಮ ಹೊಟ್ಟೆಯಲ್ಲಿ, ಕೊಬ್ಬೊಟ್ಟೆಯಲ್ಲಿ ಅಥವಾ ನಿಮ್ಮ ಬೆನ್ನಿನ ಒಂದು ಬದಿಯಲ್ಲಿ ಇದ್ದಕ್ಕಿದ್ದಂತೆ ತೀವ್ರವಾದ ನೋವು ಕಂಡುಬರುವುದು ಕಿಡ್ನಿ ಸ್ಟೋನ್ನ ಪ್ರಮುಖ ಲಕ್ಷಣವಾಗಿದೆ.
ಅನಾರೋಗ್ಯಕರ ಜೀವನಶೈಲಿಯಿಂದಾಗಿ ಇತ್ತೀಚಿನ ದಿನಗಳಲ್ಲಿ ಅನೇಕರು ಕಿಡ್ನಿ ಸ್ಟೋನ್ (ಮೂತ್ರಪಿಂಡ/ಕಿಡ್ನಿಯಲ್ಲಿ ಕಲ್ಲು) ಸಮಸ್ಯೆಗೆ ಒಳಗಾಗುತ್ತಿದ್ದಾರೆ.ಇದು ಕೆಲವು ಆರೋಗ್ಯ ಪರಿಸ್ಥಿತಿಗಳಿಂದಾಗಿರಬಹುದು ಅಥವಾ ಕಡಿಮೆ ನೀರಿನ ಸೇವನೆಯೊಂದಿಗೆ ಹೆಚ್ಚು ಉಪ್ಪುವುಳ್ಳ ಆಹಾರದ ಸೇವನೆಯಿಂದಾಗಬಹುದು. ಮೂತ್ರಪಿಂಡದ ಕಲ್ಲುಗಳು ತುಂಬಾ ಚಿಕ್ಕದಾಗಿದ್ದು, ಜನರು ಅವುಗಳನ್ನು ಗಮನಿಸುವುದಿಲ್ಲ ಮತ್ತು ಅವುಗಳು ಮೂತ್ರದ ಮೂಲದ ತಾವಾಗಿಯೇ ಉದುರಿ ಹೋಗುತ್ತವೆ. ಆದರೆ ದೊಡ್ಡ ಕಲ್ಲುಗಳು ಸಮಸ್ಯೆಗಳನ್ನು ಸೃಷ್ಟಿಸುತ್ತವೆ. ರೋಗಲಕ್ಷಣಗಳು ಎಂದರೆ ಉರಿ ಮೂತ್ರ, ಪದೇ ಪದೇ ಮೂತ್ರ ಬಂದಾಂತಾಗುವುದು, ಅಸಹಜ ಮೂತ್ರದ ಬಣ್ಣ, ನಿಮ್ಮ ಮೂತ್ರದಲ್ಲಿ ರಕ್ತ, ನಿಮಗೆ ಜ್ವರ, ಶೀತ, ವಾಕರಿಕೆ ಮತ್ತು ವಾಂತಿಯನ್ನು ಒಳಗೊಂಡಿರುತ್ತದೆ. ಇದಕ್ಕೆ ಬೇಗನೇ ಚಿಕಿತ್ಸೆ ನೀಡದಿದ್ದರೆ, ಇದು ದೀರ್ಘಕಾಲದ ಮೂತ್ರಪಿಂಡದ ಹಾನಿಯನ್ನು ಉಂಟುಮಾಡಬಹುದು . ಮೂತ್ರಪಿಂಡದ ಕಲ್ಲುಗಳು ಹೆಚ್ಚಾಗಿ ವಯಸ್ಕರ ಮೇಲೆ ಪರಿಣಾಮ ಬೀರುತ್ತವೆ. ಆದರೆ ಮಕ್ಕಳು ಮತ್ತು ಹದಿಹರೆಯದವರೂ ಕಿಡ್ನಿ ಸ್ಟೋನ್ ಸಮಸ್ಯೆಗಳಿಗೆ ಒಳಗಾಗುತ್ತಾರೆ.
ಕಿಡ್ನಿ ಸ್ಟೋನ್ ತಡೆಯುವ ವಿಧಾನ , ಸಾಕಷ್ಟು ನೀರನ್ನು ಕುಡಿಯದಿರುವುದು ಪ್ರಮುಖ ಕಾರಣವಾದ ಅಂಶವಾಗಿದೆ, ಆದರೆ ಆಹಾರ ಪದ್ಧತಿ, ಸ್ಥೂಲಕಾಯತೆ ಮತ್ತು ಜಡ ಜೀವನಶೈಲಿಯು ಕೂಡ ಕಿಡ್ನಿ ಸ್ಟೋನ್ಗೆ ಕಾರಣವಾಗಬಹುದು. ಹೀಗಾಗಿ ಸಾಕಷ್ಟು ನೀರು ಕುಡಿಯುವುದು, ಎಳನೀರು ಕುಡಿಯುವುದು, ತುಳಸಿ, ಸೆಲರಿ, ಸೇಬುಗಳು, ದ್ರಾಕ್ಷಿಯನ್ನು ಹೆಚ್ಚು ಸೇವಿಸುವುದರಿಂದ ಮೂತ್ರಪಿಂಡದ ಸಮಸ್ಯೆಯನ್ನು ತಡೆಯಬಹುದಾಗಿದೆ, ಸಂಸ್ಕರಿಸಿದ ಆಹಾರಗಳಿಗೆ ಕಡಿವಾಣ ಹಾಕಿ ಪ್ಯಾಕ್ ಮಾಡಿದ ಆಹಾರಗಳು, ಕರಿದ ಆಹಾರಗಳನ್ನು ಕಡಿಮೆ ಮಾಡಿ. ಇದು ಬಹಳಷ್ಟು ಸೋಡಿಯಂ ಅಂಶವನ್ನು ಹೊಂದಿರುತ್ತದೆ. ಇದು ಮೂತ್ರಪಿಂಡದ ಕಲ್ಲುಗಳಲ್ಲಿ ಸೋಡಿಯಂ ಮಟ್ಟವನ್ನು ಹೆಚ್ಚಿಸುತ್ತದೆ.