ಸ್ವಚ್ಛ ಭಾರತಕ್ಕಾಗಿ ಪ್ರೀತಿ ಆರೈಕೆಯಿಂದ ಅಭಿಯಾನ

ArogyaVijaya Kannada
1 Min Read

ದಾವಣಗೆರೆ :ಶ್ರಮಾದಾನ: ಸ್ವಚ್ಛ ಭಾರತಕ್ಕಾಗಿ ಪ್ರೀತಿ ಆರೈಕೆ ( Love Care Trustee )ಯಿಂದ ಅಭಿಯಾನ

ರಾಷ್ಟ್ರಪಿತ ಮಹಾತ್ಮ ಗಾಂಧೀಜಿ, ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮದಿನದ ಅಂಗವಾಗಿ ಡಾ. ರವಿಕುಮಾರ್ ಟಿ.ಜಿ ಅವರ ನೇತೃತ್ವದಲ್ಲಿ ಸೋಮವಾರ ಮುಂಜಾನೆ ಸ್ವಚ್ಛತಾ ಅಭಿಯಾನ ನೆರವೇರಿತು.

ಪ್ರೀತಿ ಆರೈಕೆ ಟ್ರಸ್ಟಿನ ಸದಸ್ಯರು, ಸ್ವಯಂ ಪ್ರೇರಿತರು ಮತ್ತು ಆರೈಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಸಿಬ್ಬಂದಿಗಳಿಂದ ಹದಡಿ ರಸ್ತೆ ಮತ್ತು ಆರೈಕೆ ಆಸ್ಪತ್ರೆಯ ಸುತ್ತಮುತ್ತಲಿನ ಪ್ರದೇಶದಲ್ಲಿ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಯಿತು.

ಆರೈಕೆ ಆಸ್ಪತ್ರೆಯ ಮುಖ್ಯಸ್ಥರಾದ ಡಾ. ರವಿಕುಮಾರ್ ಟಿ.ಜಿ ಅವರು ಸ್ವಚ್ಛತಾ ಕಾರ್ಯದ ನೇತೃತ್ವ ವಹಿಸಿ ಮಾತನಾಡಿ, ಬಸವಾದಿ ಶರಣರು ಅಂತರಂಗ ಮತ್ತು ಬಹಿರಂಗದ ಶುದ್ಧತೆಯನ್ನು ಪ್ರತಿಪಾದಿಸಿ ನಮ್ಮೊಳಗೆ ಅರಿವು ಮತ್ತು ಜ್ಞಾನ ಜ್ಯೋತಿಯನ್ನು ಬೆಳಗಿದರು. ಇದೇ ನಿಟ್ಟಿನಲ್ಲಿ ಅಹಿಂಸಾ ಚೇತನರಾದ ಮಹಾತ್ಮ ಗಾಂಧಿಜಿ ಯವರು ಮತ್ತು ಕಾಯಕ ಚೇತನರಾಗಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ ಯವರು ಸ್ವಚ್ಛ ಪರಿಸರದ ಮೂಲಕ ಸ್ವಾಸ್ಥ್ಯ ಭಾರತ ನಿರ್ಮಾಣಕ್ಕೆ ನಮಗೆಲ್ಲರಿಗೂ ಕರೆ ಕೊಟ್ಟಿದ್ದಾರೆ‌.

ಭಾರತದ ಜವಾಬ್ದಾರಿಯುತ ನಾಗರೀಕರಾಗಿ ನಾವೆಲ್ಲರೂ ಸ್ವಚ್ಛ ಪರಿಸರಕ್ಕಾಗಿ ನಮ್ಮೆಲ್ಲರ ಶ್ರಮಾದಾನ ನೀಡುವ ಮೂಲಕ ತಾಯಿ ಭಾರತಿಗೆ ನಮ್ಮ ಕೃತಜ್ಞತೆ-ಭಕ್ತಿ ಸಮರ್ಪಿಸೋಣ ಎಂದು ಕರೆ ನೀಡಿದರು.

ಸ್ವಚ್ಛತಾ ಕಾರ್ಯದಲ್ಲಿ ಮೂವತ್ತಕ್ಕೂ ಹೆಚ್ಚಿನ ಸ್ವಯಂ ಪ್ರೇರಿತರು ಭಾಗವಹಿಸಿ ,ಅಭಿಯಾನದ ಯಶಸ್ವಿಗೆ ಕಾರಣರಾದರು .

Share this Article
Leave a comment

Leave a Reply

Your email address will not be published. Required fields are marked *