ಉತ್ತಮ ಆರೋಗ್ಯಕ್ಕೆ ಯೋಗ ಅತ್ಯುತ್ತಮ ಮಾರ್ಗ

1 Min Read

ದಾವಣಗೆರೆ : ಮನುಷ್ಯ ಮತ್ತು ಪ್ರಕೃತಿಯ ನಡುವಿನ ಬಾಂಧವ್ಯವೇ(Yoga)ಯೋಗ. ಆರೋಗ್ಯ (Health) ಮತ್ತು ಸರ್ವತೋಮುಖ ಬೆಳವಣಿಗೆಗೆ ಯೋಗ ಉತ್ತಮ ಸಾಧನ. ಯೋಗ ಕೇವಲ ವ್ಯಾಯಾಮವಲ್ಲ, ಇದು ವಿಶ್ವ ಮತ್ತು ಪ್ರಕೃತಿಯೊಂದಿಗೆ ನಮ್ಮತನವನ್ನು ಒಂದಾಗಿಸುವ ವಿದ್ಯೆಯಾಗಿದೆ. ಯೋಗದ ಗುರಿಯು ಕೇವಲ ದೇಹವನ್ನು ಸರಿಪಡಿಸುವುದು ಮಾತ್ರವಲ್ಲ. ಮನಸ್ಸು, ದೇಹ ಮತ್ತು ಆತ್ಮ ಸೇರಿದ ಎಲ್ಲ ಮೂರು ಅಂಶಗಳನ್ನು ಶುದ್ದೀಕರಿಸಲು ನೆರವಾಗುತ್ತದೆ. ನಾವು ಹಲವಾರು ಆಸನಗಳು ಮತ್ತು ಭಂಗಿಗಳನ್ನು ಅಭ್ಯಾಸ ಮಾಡುವಾಗ, ಅದು ನಮ್ಮ ದೇಹವನ್ನು ಬಲಪಡಿಸುತ್ತದೆ ಮತ್ತು ನಮಗೆ ಯೋಗಕ್ಷೇಮ ಮತ್ತು ಆರೋಗ್ಯದ ಭಾವನೆಯನ್ನು ನೀಡುತ್ತದೆ.

ಮಾನಸಿಕ ಒತ್ತಡ, ಮಧುಮೇಹ, ಹೃದಯ ಮತ್ತು ಶಾಸ್ವಕೋಶ ಕಾಯಿಲೆಗಳಿಂದ ಮುಕ್ತವಾಗಲು ಯೋಗ, ಪ್ರಾಣಾಯಾಮ ಅವಶ್ಯಕತೆಯಿದೆ. ನಿತ್ಯವೂ ಯೋಗ, ಧ್ಯಾನದಲ್ಲಿ ತೊಡಗಬೇಕು. ನಿಮ್ಮ ವಯಸ್ಸು ಏನೇ ಇರಲಿ ಅಥವಾ ನೀವು ಯಾವುದೇ ಧರ್ಮವನ್ನು ಅನುಸರಿಸಿದರೂ ಯಾರಾದರೂ ಯೋಗವನ್ನು ಅಭ್ಯಾಸ ಮಾಡಬಹುದು. ಯೋಗವು ಮಾನವಕುಲಕ್ಕೆ ಒಂದು ದೊಡ್ಡ ಕೊಡುಗೆಯಾಗಿದೆ . ನೀವು ಯೋಗವನ್ನು ಅಭ್ಯಾಸ ಮಾಡುವಾಗ ಹೆಚ್ಚಿನ ತಾಳ್ಮೆ ಮಟ್ಟವನ್ನು ಸಹ ಬೆಳೆಸಿಕೊಳ್ಳುತ್ತೀರಿ ಮತ್ತು ಇದು ನಕಾರಾತ್ಮಕ ಆಲೋಚನೆಗಳನ್ನು ದೂರವಿಡಲು ಸಹಾಯ ಮಾಡುತ್ತದೆ. ಉತ್ತಮವಾಗಿ ನಿದ್ರೆ ಮಾಡಲು ಯೋಗವು ನಿಮಗೆ ವಿಶ್ರಾಂತಿ ನೀಡುತ್ತದೆ. ಯೋಗವು ಹೃದಯದ ಆರೋಗ್ಯ ಕಾಪಾಡುತ್ತದೆ. ಉತ್ತಮ ಆರೋಗ್ಯವನ್ನು ಕಾಪಾಡಿಕೊಂಡು ಬರಲು ಸಾಧ್ಯವಾಗುತ್ತದೆ. ಕಾಯಿಲೆಗಳನ್ನು ತಡೆಗಟ್ಟಲು, ರೋಗ ನಿರೋಧಕ ಶಕ್ತಿಯನ್ನು ಪಡೆಯಲು ಸಾಧ್ಯವಾಗುತ್ತದೆ.

ಯೋಗದ ಜತೆ ಪೌಷ್ಟಿಕ ಆಹಾರ  ನಾನಾ ಖಾಯಿಲೆಗಳಿಂದ ಬಳಲುತ್ತಿರುವವರು ಯೋಗಾಸನ ತರಬೇತಿ ಪಡೆದ ನಂತರ ಉತ್ತಮ ರೀತಿಯ ಫಲಿತಾಂಶ ಹೊಂದಿದ್ದಾರೆ. ಪ್ರತಿಯೊಬ್ಬರೂ ಒಳ್ಳೆಯ ಹವ್ಯಾಸಗಳನ್ನು ರೂಢಿಸಿಕೊಂಡು ಪೌಷ್ಟಿಕಾಂಶ ಆಹಾರ ಸೇವನೆ ಮಾಡಿ ದೈಹಿಕವಾಗಿ ಉತ್ತಮವಾಗಿರಲು ಮುಂದಾಗಬೇಕು. ಯೋಗ ಮಾಡುವುದರಿಂದ ಏಕಾಗ್ರತೆ ಹಾಗೂ ಜ್ಞಾಪಕ ಶಕ್ತಿ ಹೆಚ್ಚಾಗುವುದಲ್ಲದೆ ಮಾನಸಿಕವಾಗಿ, ದೈಹಿಕವಾಗಿ ಸದೃಢರಾಗಲು ಸಹಾಯಕವಾಗುತ್ತದೆ .

 

Share this Article
Leave a comment

Leave a Reply

Your email address will not be published. Required fields are marked *