ದಾವಣಗೆರೆ : ದಾಳಿಂಬೆ ಹಣ್ಣು ಅದರಲ್ಲೂ ದಾಳಿಂಬೆ ಹಣ್ಣಿನ ಜ್ಯೂಸ್ ಅಂದ್ರೆ ಯಾರಿಗೆ ತಾನೆ ಇಷ್ಟ ಹೇಳಿ? ಕೆಂಪು ಬಣ್ಣದ ದಾಳಿಂಬೆ ಹಣ್ಣು ಅಥವಾ ಜ್ಯೂಸ್ ನೋಡಿದರೆ ಬಾಯಲ್ಲಿ ನೀರೂರದೇ ಇರದು. ಹಾಗೆಯೇ ದಾಳಿಂಬೆ ಹಣ್ಣಿನ ಸೇವನೆ ಆರೋಗ್ಯಕ್ಕೆ ಒಳ್ಳೆಯದನ್ನೂ ಮಾಡುತ್ತದೆ. ದಾಳಿಂಬೆ ಹಣ್ಣಿನಲ್ಲಿ ಪೌಷ್ಠಿಕಾಂಶಗಳು ಹೆಚ್ಚಿರುವುದರಿಂದ, ದೇಹಕ್ಕೆ ವಿಟಮಿನ್ ಸಿ, ವಿಟಮಿನ್ ಕೆ, ಮತ್ತು ಫೋಲಿಕ್ ಆಮ್ಲ ದೊರೆಯುತ್ತದೆ. ಇದು ಆರೋಗ್ಯಕರ ಮಗುವಿನ ಬೆಳವಣಿಗೆಯಲ್ಲಿ ಸಹಾಯ ಮಾಡುತ್ತದೆ ಎನ್ನುತ್ತದೆ ಸಂಶೋಧನೆ.ಮಹಿಳೆಯರು ಪ್ರತಿದಿನ ಒಂದರಿಂದ ಎರಡು ಕಪ್ ದಾಳಿಂಬೆ ಬೀಜಗಳನ್ನು ತಿನ್ನಬಹುದು ಅಥವಾ ಒಂದು ಕಪ್ ರುಚಿಯಾದ ದಾಳಿಂಬೆ ಹಣ್ಣಿನ ಜ್ಯೂಸ್ ಕೂಡ ಸೇವನೆ ಮಾಡಬಹುದು. ಇದೆಲ್ಲಾ ಮಹಿಳೆಯರಿಗೆ ಆಗುವ ಪ್ರಯೋಜನವಾದರೆ, ಪುರುಷರಿಗೂ ದಾಳಿಂಬೆ ಹಣ್ಣು ಅಥವಾ ಜ್ಯೂಸ್ ಸೇವನೆಯಿಂದ ಹಲವು ರೀತಿಯ ಪ್ರಯೋಜನವಾಗುತ್ತದೆ.
ದಾಳಿಂಬೆ ಹಣ್ಣು ಅಥವಾ ರಸ ಸೇವೆನೆಯಿಂದ ದೇಹದ ಎಲ್ಲಾ ಭಾಗದಲ್ಲಿ ಉತ್ತಮ ರಕ್ತ ಸಂಚಾರ ಉಂಟಾಗುತ್ತದೆ. ಪುರುಷರಲ್ಲಿ ಮತ್ತು ಮಹಿಳೆಯರಲ್ಲಿ ಟೆಸ್ಟೋಸ್ಟಿರೋನ್ ಹಾರ್ಮೋನ್ ಬಿಡುಗಡೆಯಾಗುತ್ತದೆ. ಇದರಿಂದ ಲೈಂಗಿಕ ಜೀವನ ಸುಖಮಯವಾಗಿರುತ್ತದೆ. ಒಟ್ಟಿನಲ್ಲಿ ದಾಳಿಂಬೆ ಹಣ್ಣು ಮತ್ತು ಜ್ಯೂಸ್ ಸೇವನೆಯಿಂದ ಪುರುಷರು ಮತ್ತು ಮಹಿಳೆಯರಿಗೆ ಹಲವು ರೀತಿಯ ಪ್ರಯೋಜನಗಳಿದ್ದು, ಪ್ರಮುಖವಾಗಿ ಲೈಂಗಿಕ ಸಮಸ್ಯೆಗಳಿಂದ ನೀವು ದೂರವಾಗಬಹುದಾಗಿದೆ. ಹಾಗಾದರೆ ಮತ್ತಷ್ಟು ತಡ ಮಾಡದೇ ನಿಮ್ಮ ದೈನಂದಿನ ಆಹಾರ ಪದ್ದತಿಯಲ್ಲಿ ದಾಳಿಂಬೆ ಹಣ್ಣಿಗೆ ಮಹತ್ವ ಕೊಡುವುದನ್ನು ಇಂದಿನಿಂದಲೇ ಆರಂಭಿಸಿ.
ದಾಳಿಂಬೆ ಹಣ್ಣುಗಳು ಎಷ್ಟು ರುಚಿಯೋ ಅಷ್ಟೇ ಆರೋಗ್ಯಕರವೂ ಹೌದು. ಕೆಂಪನೆಯ ಬೀಜಗಳಿಂದ ತುಂಬಿರುವ ದಾಳಿಂಬೆ ಹಣ್ಣು ಕಡಿಮೆ ಕ್ಯಾಲೋರಿಗಳು ಮತ್ತು ಕೊಬ್ಬನ್ನು ಹೊಂದಿರುತ್ತದೆ. ಆದರೆ ಇದರಲ್ಲಿ ಫೈಬರ್, ಜೀವಸತ್ವಗಳು ಮತ್ತು ಖನಿಜಗಳು ಹೆಚ್ಚಾಗಿರುತ್ತದೆ. ಅದರಲ್ಲೂ ಮಹಿಳೆಯರಿಗೆ ಈ ದಾಳಿಂಬೆ ಹಣ್ಣುಗಳಿಂದ ಸಾಕಷ್ಟು ಪ್ರಯೋಜನಗಳಿವೆ.ದಾಳಿಂಬೆ ಹಣ್ಣು ಆರೋಗ್ಯಕರ ಚರ್ಮವನ್ನು ನೀಡುತ್ತದೆ. ದಾಳಿಂಬೆ ನಿಮ್ಮ ಚರ್ಮವನ್ನು ಒಳಗಿನಿಂದ ಹೈಡ್ರೇಟ್ ಮಾಡುತ್ತದೆ. ಇದು ಒಣ ಚರ್ಮ ಮತ್ತು ತುರಿಕೆಯನ್ನು ತಡೆಯುತ್ತದೆ, ಮೊಡವೆಗಳನ್ನು ತಡೆಯುತ್ತದೆ. ನಿಮ್ಮ ಚರ್ಮವನ್ನು ಹೊಳೆಯುವಂತೆ ಮಾಡುತ್ತದೆ. ದಾಳಿಂಬೆ ಹಣ್ಣು ಚರ್ಮದ ಸುಕ್ಕುಗಳನ್ನು ತಡೆಯುತ್ತದೆ. ಕಪ್ಪು ಕಲೆಗಳನ್ನು ಕಡಿಮೆ ಮಾಡುತ್ತದೆ.ದಾಳಿಂಬೆ ಕೂದಲಿನ ಬೇರುಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ.