ದಾವಣಗೆರೆ : ಸೆಪ್ಟಂಬರ್ 29. ಎಸ್ ಎಸ್ ಹೈಟೆಕ್ ನಾರಾಯಣ ಹೃದ್ರೋಗ ಆಸ್ಪತ್ರೆಯಲ್ಲಿ ಅಂತರರಾಷ್ಟ್ರೀಯ ಹೃದಯ ದಿನಾಚರಣೆ ಕಾರ್ಯಕ್ರಮವನ್ನು ಆಚರಿಸಲಾಯಿತು. ಸೆಪ್ಟೆಂಬರ್ 29 ಹೃದಯ ದಿನಾಚರಣೆ ಯನ್ನು ವಿಶ್ವದಾದ್ಯಂತ ಆಚರಿಸಲಾಗುತ್ತದೆ. ಹೃದಯವನ್ನು ಆರೋಗ್ಯವಂತವಾಗಿಡಲು ನೀವು ಏನ್ ಮಾಡಬೇಕು ಎಂಬ ಕಾಳಜಿ ಬಗ್ಗೆ ಹೃದಯ ದಿನಾಚರಣೆ ಧ್ಯೇಯವಾಕ್ಯವಾಗಿದೆ.ಹೃದಯ ದಿನಾಚರಣೆ ಅಂಗವಾಗಿ ಹಿರಿಯ ವೈದ್ಯರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಹಿರಿಯ ವೈದ್ಯ ಡಾ ಶಿವಲಿಂಗಪ್ಪ ತಮ್ಮ ವೃತ್ತಿ ಜೀವನದ ಅನುಭವ ಹಂಚಿಕೊಂಡರು.ಇಂತಹದೊಂದು ಕಾರ್ಯಕ್ರಮ ಮಾಡುತ್ತಿರುವುದಕ್ಕೆ ಎಸ್ ಎಸ್ ಹೈಟೆಕ್ ಮತ್ತು ನಾರಾಯಣ ಹೃದಯಾಲಯಕ್ಕೆ ಅಭಿನಂದನೆ ಸಲ್ಲಿಸಿದರು.ಇಲ್ಲಿರುವ ಸೌಲಭ್ಯಗಳ ಬಗ್ಗೆ ಮಾತನಾಡಿ ಇಂಗ್ಲೆಂಡ್ ಮತ್ತು ಅಮೇರಿಕಾದಲ್ಲಿರುವ ಸೌಲಭ್ಯಗಳು ಈಗ ದಾವಣಗೆರೆಯಲ್ಲಿ ದೊರಕುತ್ತಿವೆ.
ನಾನು ಇಂಗ್ಲೆಂಡಿನ ಬೆಲ್ ಪಾಸ್ಟ್ ನಲ್ಲಿ ನಾನು 4 ವರ್ಷಗಳ ಕಾಲ ಕೆಲಸ ಮಾಡಿದೆ. ಮಾಡತಿನಿ. ಕಾರ್ಡಿಯಾಕ್ ಸ್ಪೆಶಲಿಸ್ಟ್ ಆಗಬೇಕು ಅಂತಾ.ಬಹಳ ಆಸೆಯಾಗಿತ್ತು.ನಾನು ಇಂಗ್ಲೆಂಡ್ ಗೆ ಹೋಗಿದ್ದು ಎರಡು ಪೌಂಡ್ ನಲ್ಲಿ.. ಇಂಗ್ಲೆಂಡ್ ನಲ್ಲಿ ನನಗೆ ಯಾರು ಗೊತ್ತಿಲ್ಲ..ಅಂತಹ ಕಷ್ಟದ ದಿನಗಳನ್ನು ಅನುಭವಿಸಿ 1972 ರಲ್ಲಿ ದಾವಣಗೆರೆ ಗೆ ಬಂದು ಇಷ್ಟು ವರ್ಷಗಳ ಕಾಲ ಸೇವೆ ಸಲ್ಲಿಸಿದೆ.
ನಾನು ವೈದ್ಯನಾಗಿ ಕಾರ್ಡಿಯಾಕ್ ಅಂಬುಲೆನ್ಸ್ ನ್ನು ಇಂಗ್ಲೆಂಡ್ ನಲ್ಲಿ ಚಲಾಯಿಸಿದ್ದು ಅದಕ್ಕೆ ತುಂಬಾ ಗೌರವ ಸಿಕ್ಕಿತು. 1972 ರಲ್ಲಿ ನಾನು ದಾವಣಗೆರೆ ಗೆ ಬಂದು 2 ಬೆಡ್ ಹೃಯದ ಸಂಬಂಧಿ ಕಾಯಿಲೆ ಯುನಿಟ್ ಮಾಡಿದೆ. ಬಾಪೂಜಿ ಆಸ್ಪತ್ರೆ ನಂತರ ಚಿಗಟೇರಿಯಲ್ಲಿ ಕಾರ್ಡಿಯಾಕ್ ಯುನಿಟ್ ಮಾಡಿದ್ದೆ. ಎಲ್ಲರ ಹೃದಯ ಚೆನ್ನಾಗಿರಬೇಕು ..ಚಿಕ್ಕವಯಸ್ಸಿನಲ್ಲಿ ಹೃದಯದ ಕಾಯಿಲೆ ಬರುತ್ತಿದೆ.ಮುಖಕ್ಕೆ ಎಷ್ಟು ಮುಖ್ಯವೋ ಹೃದಯಕ್ಕೆ ಅಷ್ಟು ಮುಖ್ಯ ಕೊಡಿ. ಹೃದಯಕ್ಕೆ ಜಾಸ್ತಿ ಒತ್ತಡ ಕೊಡಬೇಡಿ. ಜೀವನ ಶೈಲಿ ಬದಲಾಗಬೇಕು.ಆಲ್ಕೋಹಾಲ್ ಡೈಯಾಬಿಟಿಕ್ ಕೇರ್ ತೆಗೆದುಕೊಳ್ಳಬೇಕು. ಹೃದಯ ರೋಗ ಬಂದ್ರೆ ಸಮಾಜ ಮಕ್ಕಳು ಕುಟುಂಬಕ್ಕೆ ತೊಂದರೆ.ಕಾರ್ಡಿಯಾಕ್ ಅಂಬುಲೆನ್ಸ್ ಮಾಡಿ ಅದಕ್ಕೊಬ್ಬ ಡಾಕ್ಟರ್ ನ್ನು ನೇಮಿಸಿ ರೋಗಿಗಳಿಗೆ ಗೋಲ್ಡನ್ ಅವರ್ ನಲ್ಲಿ ಜೀವ ಉಳಿಸಿಬೇಕು ಎಂದು ವೈದ್ಯರಿಗೆ ಸಲಹೆ ನೀಡಿದರು. ನನಗೆ 87 ವರ್ಷ ದಿನಾ ಒಂದು ಗಂಟೆ ಯೋಗ ಮಾಡತಿನಿ.ಆವತ್ತಿನಿಂದ ಇವತ್ತಿನಿಂದ ಇಲ್ಲಿವರೆಗು ಊಟ ತಿಂಡಿ ಜೀವನಶೈಲಿಯಲ್ಲಿ ಶಿಸ್ತು ಕಾಪಾಡಿಕೊಂಡಿದ್ದೇನೆ.
ಈ ಸಂದರ್ಭದಲ್ಲಿ ಮಕ್ಕಳ ಹೃದಯ ತಜ್ನ ಡಾ ಸುರೇಶ್ ಬಾಬು , ನಾರಾಯಣ ಹೃದ್ರೋಗ ಸ್ಪೆಶಲಿಸ್ಟ್ ವೈದ್ಯ ಡಾ ಮಲ್ಲೇಶ್ ಸೇರಿದಂತೆ ಇತರರು ತಮ್ಮ ಅನಿಸಿಕೆ ಅಭಿಪ್ರಾಯ ಹಂಚಿಕೊಂಡರು.