ಮಕ್ಕಳೊಂದಿಗೆ ಸಮಯ ಕಳೆಯಲು ಹೆತ್ತವರಿಗಿಲ್ಲ ಸಮಯ :ಕೆಲಸ ಮಾಡುವ ಪೋಷಕರಿಗೆ ಈ ಸಮಸ್ಯೆ ಹೆಚ್ಚು ಮಕ್ಕಳ ಮಾತುಗಳಿಗೆ ಸಮಯ ಕೊಡದೆ ಅವರನ್ನು ಹಾಗೆಯೇ ಬಿಡುವುದು ತಪ್ಪು. ಆದರೆ ಈ ಸಮಸ್ಯೆಗೆ ಪರಿಹಾರ ಏನು ಎಂಬುದು ಪೋಷಕರಿಗೆ ತಿಳಿಯುವುದಿಲ್ಲ.ಕೆಲವು ಪೋಷಕರು ಯಾವಾಗಲೂ ತಮ್ಮ ಕೆಲಸದಲ್ಲಿ ನಿರತರಾಗಿರುತ್ತಾರೆ. ಆದ್ದರಿಂದ, ತಮ್ಮ ಹೆತ್ತವರೊಂದಿಗೆ ಮಾತನಾಡಲು ಇದು ಸರಿಯಾದ ಸಮಯ ಎಂದು ಮಕ್ಕಳು ಭಾವಿಸುವುದಿಲ್ಲ. ಒಂದು ವೇಳೆ ಮಾತನಾಡುವ ಪ್ರಯತ್ನ ಮಾಡಿದರೂ, ಹೆತ್ತವರು ಅವರಿಗೆ ಗದರಿಸುವ ಸಂಭವ ಜಾಸ್ತಿ.ಮೊದಲು ಮಕ್ಕಳು ಹೇಳುವುದನ್ನು ಆಲಿಸಿ. ಅದರ ನಂತರ ನಿಮಗೆ ಸಾಧ್ಯವಾದಷ್ಟು ಅವರನ್ನು ತೃಪ್ತಿಪಡಿಸಲು ಪ್ರಯತ್ನಿಸಿ. ಮಕ್ಕಳೆದುರು ಪೋಷಕರು ಜಗಳವಾಡಬಾರದು. ಇದು ಮಕ್ಕಳ ಮನಸಿನ ಮೇಲೆ ಪ್ರಭಾವ ಬೀರುತ್ತದೆ. ಅವರು ನಿಮ್ಮನ್ನು ಅರ್ಥಮಾಡಿಕೊಳ್ಳಲು ಆಗುವುದಿಲ್ಲ. ಹೀಗಾಗಿ ನೀವು ಅವರನ್ನು ಅರ್ಥಮಾಡಿಕೊಳ್ಳಬೇಕು ಮತ್ತು ಅವರು ಏನು ಹೇಳುತ್ತಾರೆಂದು ಕೇಳಬೇಕು.
ಮಕ್ಕಳು ಪೋಷಕರ ಮಾತು ಕೇಳದೇ ಇರುವುದು ಇತ್ತೀಚೆಗೆ ಸಾಮಾನ್ಯ. ಹಲವು ಮನೆಗಳಲ್ಲಿ ಮಕ್ಕಳು ಮಾತು ಕೇಳುತ್ತಿಲ್ಲ ಎಂದು ದೂರುವ ಪೋಷಕರನ್ನು ನೋಡಿದ್ದೇವೆ. ಹಟವಾದಿ ಮಕ್ಕಳನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಅವರೊಂದಿಗೆ ಆರೋಗ್ಯಕರ ಗಡಿ ಹೊಂದಿಸಲು ಪ್ರಯತ್ನಿಸಬೇಕು. ಇದರಿಂದ ಅವರು ಅರ್ಥ ಮಾಡಿಕೊಳ್ಳಬಹುದು. ಮಗು ಪೋಷಕರನ್ನು ವಿರೋಧಿಸಲು ಆರಂಭಿಸಿದರೆ, ನಾವೇ ಒಂದು ಹೆಜ್ಜೆ ಹಿಂದೆ ಸರಿಯಬೇಕು. ಸಂಬಂಧದಲ್ಲಿ ಮೇಲುಗೈ ಸಾಧಿಸಲು ಪ್ರಯತ್ನಿಸುವ ಬದಲು ಅವರ ದೃಷ್ಟಿಕೋನವನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಬೇಕು.
ಮಕ್ಕಳ ಪಾಲನೆ ಮಾಡುವುದು ಹೇಗೆ ಎಂಬುದು ಮುಖ್ಯವಲ್ಲ, ಮಕ್ಕಳ ಭಾವನೆಗಳನ್ನು ಮತ್ತು ಅವರು ಏನು ಯೋಚಿಸುತ್ತಾರೆ ಎಂಬುದನ್ನು ಆಲಿಸುವುದು ಮತ್ತು ಅರ್ಥಮಾಡಿಕೊಳ್ಳುವುದು ತುಂಬಾ ಮುಖ್ಯ.ಕೆಲವೊಮ್ಮೆ ಮಕ್ಕಳು ತಮ್ಮ ಭಾವನೆಗಳನ್ನು ಹಂಚಿಕೊಳ್ಳಲು ಎದುರು ನೋಡುತ್ತಾರೆ. ಆ ಸಮಯದಲ್ಲಿ ತಪ್ಪದೆ ಅವರ ಮಾತುಗಳನ್ನು ಕೇಳಲು ಪ್ರಯತ್ನಿಸಿ.
ಕೋಪದಿಂದ ಎಂದಿಗೂ ನಿರ್ಧಾರಗಳನ್ನು ತೆಗೆದುಕೊಳ್ಳಲಿ ಪ್ರಯತ್ನಿಸಬೇಡಿ. ಇದರಿಂದ ಎಂದಿಗೂ ಒಳಿತಾಗುವುದಿಲ್ಲ. ಮಗುವಿನೊಂದಿಗೆ ಶಾಂತ ಮನೋಭಾವದಿಂದ ಕುಳಿತು ಮಾತನಾಡಿ. ಮಾತನಾಡಿದ ಬಳಿಕ ಶಾಂತ ಮನಸ್ಸಿನಿಂದ, ತಿಳುವಳಿಕೆ ನಿರ್ಧಾರ ತೆಗೆದುಕೊಳ್ಳಿ.ಮಕ್ಕಳು ಮಾತು ಕೇಳುತ್ತಿಲ್ಲ, ಅವರದ್ದೇ ನಡೆಯಬೇಕು ಎನ್ನುವ ಹಟ, ಇದು ನಿಜಕ್ಕೂ ಬೇಸರ ತರಿಸುತ್ತಿದೆʼ ಇದು ಇಂದಿನ ಬಹುತೇಕ ಪೋಷಕರ ಅಳಲು.ಯಾವುದೇ ವಿಷಯಗಳನ್ನು ಅನುಸರಿಸಲು ಮಗುವನ್ನು ಒತ್ತಾಯಿಸಬೇಡಿ. ನಿಮ್ಮ ಅಭ್ಯಾಸಗಳನ್ನು ಮಕ್ಕಳು ಅನುಸರಿಸಬೇಕೆಂದು ಬಯಸಬೇಡಿ. ಅವರಿಗಿಷ್ಟವಾದ ಹವ್ಯಾಸ ಏನಿದೆಯೋ ಅದನ್ನೇ ಅನುಸರಿಸಲಿ. ಪೋಷಕರು ತಮ್ಮ ಅಭಿಪ್ರಾಯವನ್ನು ಮಕ್ಕಳ ಮೇಲೆ ಹೇರುವುದನ್ನು ಮಾಡಬಾರದು.ಮಕ್ಕಳಿಗೆ ಎಲ್ಲವನ್ನೂ ಪದೇ ಪದೇ ಹೇಳುವ ಬದಲು ಟಿವಿ ಅಥವಾ ಫೋನ್ ಸ್ವಿಚ್ ಆಫ್ ಮಾಡಿ ಮತ್ತು ನೀವೇ ಓದಲು ಕುಳಿತುಕೊಳ್ಳಿ. ಮಕ್ಕಳು ಇದನ್ನೇ ಅನುಸರಿಸುತ್ತಾರೆ. ಇವತ್ತಿನ ಮಕ್ಕಳನ್ನು ನೀವು ನೋಡಿರಬಹುದು. ವಿಪರೀತ ಹಠ. ಹೇಳಿದ ಮಾತು ಒಂದನ್ನೂ ಕೇಳುವುದಿಲ್ಲ. ಶಿಸ್ತು (Discipline) ಅಂತೂ ಇಲ್ಲವೇ ಇಲ್ಲ.