ಕೋಳಿಮೊಟ್ಟೆಯಿಂದ ಏನೆಲ್ಲಾ ಉಪಯೋಗ ಇದೆ ಗೊತ್ತಾ.
ಕೋಳಿ ಮೊಟ್ಟೆ ಸಸ್ಯಹಾರವೋ ಅಥವಾ ಮಾಂಸಹಾರವೋ ಎಂಬ ಚರ್ಚೆ ಈಗಲೂ ನಡೆಯುತ್ತಿದೆ. ಆದರೆ ಯಾವುದಾದರೂ ಆಗಿರಲಿ ನಮಗೆ ಸಿಗುವ ಪ್ರಮಾಣದಲ್ಲಿ ಪ್ರೋಟಿನ್ ಅಂತೂ ಇದರಿಂದ ಸಿಗುತ್ತದೆ.ಕೋಳಿ ಮೊಟ್ಟೆ ತನ್ನಲ್ಲಿ ಅಪಾರವಾದ ಕಾಲೋರಿಗಳು ಮತ್ತು ಕೊಲೆಸ್ಟ್ರಾಲ್ ಹೊಂದಿರು ವುದರಿಂದ ದೇಹದ ತೂಕ ಸಹಜ ವಾಗಿ ಹೆಚ್ಚಾಗುತ್ತದೆ. ತೂಕ ಕಡಿಮೆ ಇರುವವರಿಗೆ ಮತ್ತು ನೋಡಲು ಸಣ್ಣ ಇರುವವರಿಗೆ ಇದು ತುಂಬಾ ಒಳ್ಳೆಯದು. ಕೆಲವರು ಕೋಳಿ ಮೊಟ್ಟೆಯ ಬಿಳಿ ಭಾಗವನ್ನು ಮಾತ್ರ ಸೇವಿಸುತ್ತಾರೆ. ಕೋಳಿ ಮೊಟ್ಟೆಯ ಹಳದಿ ಭಾಗದಲ್ಲಿ ಕೊಲೆಸ್ಟ್ರಾಲ್ ಮತ್ತು ಕೊಬ್ಬಿನಂಶ ಜಾಸ್ತಿ ಇದೆ ಎನ್ನುವ ಕಾರಣಕ್ಕೆ. ತಜ್ಞರ ಪ್ರಕಾರ, ದಿನಕ್ಕೆ ಒಂದು ಅಥವಾ ಎರಡು ಮೊಟ್ಟೆ ಒಳ್ಳೆಯದಂತೆ…
ಹೆಚ್ಚಿನ ಕೊಲೆಸ್ಟ್ರಾಲ್ ಇರುವ ಕೋಳಿ ಮೊಟ್ಟೆಯನ್ನು ಒಂದು ದಿನಕ್ಕೆ ಒಂದು ಅಥವಾ ಎರಡು ಸೇವಿಸಿದರೆ ಪರವಾಗಿಲ್ಲ. ಆದರೆ ಇದಕ್ಕಿಂ ತಲೂ ಹೆಚ್ಚಿನ ಪ್ರಮಾಣದಲ್ಲಿ ಸೇವಿಸಲು ಹೋದರೆ ಅದರಲ್ಲೂ ಬೆಳಗಿನ ಸಮಯದಲ್ಲಿ ತಿಂಡಿ ತಿನ್ನುವ ಸಂದರ್ಭ ದಲ್ಲಿ ಸೇವಿಸಿದರೆ ಹೃದಯಕ್ಕೆ ಖಂಡಿತ ತೊಂದರೆ ಉಂಟಾ ಗುತ್ತದೆ.
ಹೀಗಾಗಿ ಒಂದು ದಿನಕ್ಕೆ ಎರಡು ಕೋಳಿ ಮೊಟ್ಟೆ ಸೇವಿಸಿದರೆ ಉತ್ತಮ. ಹೆಚ್ಚು ಕೊಲೆಸ್ಟ್ರಾಲ್ ಈಗಾಗಲೇ ಇರುವವರು ಮೊಟ್ಟೆಯ ಬಿಳಿ ಭಾಗವನ್ನು ಮಾತ್ರ ಸೇವಿಸುವುದು ಒಳ್ಳೆಯದು. ಇದರಲ್ಲೂ ಸಹ ಹಲವು ಬಗೆಯ ಪೌಷ್ಟಿಕಾಂಶಗಳು ಸಿಗುತ್ತವೆ. ಏಕೆಂದರೆ ಇದರಲ್ಲಿ ಪ್ರೋಟೀನ್ ಮತ್ತು ನಾರಿನ ಅಂಶ ಇರುವು ದರಿಂದ ನಿಮ್ಮ ದೇಹದಲ್ಲಿ ಜೀರ್ಣವಾಗಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ.
ಆದರೆ ವ್ಯಾಯಾಮ ಮಾಡುವವರು ಸಂಪೂರ್ಣ ಕೋಳಿ ಮೊಟ್ಟೆ ಯನ್ನು ಸೇವಿಸಬಹುದು. ಇದರಿಂದ ಅವರ ದೇಹದ ಮಾಂಸ ಖಂಡಗಳಿಗೆ ಸಾಕಷ್ಟು ಅನುಕೂಲವಾಗುತ್ತದೆ. ಆದರೆ ವ್ಯಾಯಾಮ ಮಾಡುವವರು ಸಂಪೂರ್ಣ ಕೋಳಿ ಮೊಟ್ಟೆ ಯನ್ನು ಸೇವಿಸಬಹುದು. ಇದರಿಂದ ಅವರ ದೇಹದ ಮಾಂಸ ಖಂಡಗಳಿಗೆ ಸಾಕಷ್ಟು ಅನುಕೂಲವಾಗುತ್ತದೆ. ಮೊಟ್ಟೆ ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು.ಇದಲ್ಲದೆ ಆಮ್ಲೆಟ್, ಸ್ಕ್ರಾಂಬಲ್, ಬೇಕ್, ಫ್ರೈ, ಬೋಂಡಾ, ಹಾಫ್ ಬಾಯಿಲ್ ಹೀಗೆ ಯಾವ ರೂಪದಲ್ಲಿ ತಿಂದರೂ ಮೊಟ್ಟೆಯ ಪೋಷಕಾಂಶಗಳಲ್ಲಿ ಯಾವುದೇ ವ್ಯತ್ಯಾಸವಾಗುವುಲ್ಲ. ಆದ್ದರಿಂದ ನೀವು ಇಷ್ಟಪಡುವ ರೀತಿಯಲ್ಲಿ ಮೊಟ್ಟೆಗಳನ್ನು ತಿನ್ನಿರಿ.
ಇದರಲ್ಲಿ ವಿಟಮಿನ್ ‘A’ ಅಂಶ ಹೆಚ್ಚಾಗಿದ್ದು, ಕಣ್ಣಿನ ಆರೋಗ್ಯಕ್ಕೆ ಸಹಕಾರಿಯಾಗಿದೆ. ಮೊಟ್ಟೆಯ ಹಳದಿ ಭಾಗದಲ್ಲಿ ಯಥೇಚ್ಛವಾಗಿ ಕಣ್ಣಿನ ಆರೋಗ್ಯಕ್ಕೆ ಬೇಕಾಗಿರುವ ಲ್ಯೂಟೀನ್ ಮತ್ತು ಝೆಕ್ಸನ್ಥಿನ್ ಎಂಬ ಆಂಟಿ-ಆಕ್ಸಿಡೆಂಟ್ ಅಂಶಗಳನ್ನು ಹೊಂದಿದೆ. ಆದರೆ, ಚಿಕನ್ ಮತ್ತು ಮಟನ್‌ನಿಂದ ಸಿಗದ ಪೋಷಕಾಂಶಗಳು ನಿಮಗೆ ಮೊಟ್ಟೆಯಲ್ಲಿ ಸಿಗುತ್ತದೆ. ರೆಡಿಮೇಡ್ ತಿಂಡಿಗಳಲ್ಲಿ ಸಕ್ಕರೆ ಇರುತ್ತದೆ. ಆದ್ದರಿಂದ ಅವುಗಳನ್ನು ಸೇವಿಸುವುದರಿಂದ ಸಕ್ಕರೆ ಮಟ್ಟ ಹೆಚ್ಚಬಹುದು. ಅಂತಹ ಸಂದರ್ಭಗಳಲ್ಲಿ ಮೊಟ್ಟೆ ತಿನ್ನುವುದು ಉತ್ತಮ.