ಮಕ್ಕಳ ಬೆಳವಣಿಗೆಗೆ ಕುಂಠಿತವಾಗಿರುವ ಆಂಡ್ರಾಯ್ಡ್ ಮೊಬೈಲ್
ಎಲ್ಲಾ ಪೋಷಕರಿಗು ಮನೆಗಳಲ್ಲಿ ಕಾಡುತ್ತಿರುವ ಸಮಸ್ಯೆ ಎಂದ್ರೆ ಮಕ್ಕಳ ಮೊಬೈಲ್ ಚಟ. ಊಟ ಮಾಡುವಾಗ ತಿಂಡಿ ತಿನ್ನುವಾಗ ಟೈಮ್ ಸಿಕ್ಕಾಗ ಮಕ್ಕಳ ಕೈಯಲ್ಲಿ ಮೊಬೈಲ್ ಇರುತ್ತದೆ.ಮೊಬೈಲ್ ಟಿವಿ ಇಲ್ಲ ಎಂದ್ರೆ ಊಟ ತಿಂಡಿಯನ್ನು ಮಾಡದಂತಹ ಸ್ಥಿತಿ ಇದೆ. ಮಕ್ಕಳ ಮೊಬೈಲ್ ಗೀಳು ಬಿಡಿಸಲು ಪೋಷಕರು ಕೆಲವೊಂದು ಅನಿವಾರ್ಯ ಕ್ರಮಗಳನ್ನು ಕೈಗೊಳ್ಳಲೇಬೇಕಿದೆ.
ಹೆಚ್ಚುತ್ತಿರುವ ಟಿವಿ ಮತ್ತು ಮೊಬೈಲ್ ಕ್ರೇಜ್ ವಯಸ್ಕರನ್ನು ಮಾತ್ರವಲ್ಲದೆ ಮಕ್ಕಳನ್ನೂ ಬಲಿಪಶುಗಳನ್ನಾಗಿ ಮಾಡಿದೆ. ಸ್ಮಾರ್ಟ್ ಫೋನ್ ಗಳು (Smartphones) ಮಗುವಿನ ಮೆದುಳಿನ ಬೆಳವಣಿಗೆಯನ್ನು ಕುಂಠಿತಗೊಳಿಸುವ ಮೂಲಕ ಮೆದುಳಿನ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತವೆ.
ದಿನವಿಡೀ ಮೊಬೈಲ್ (Mobile) ಮತ್ತು ಟಿವಿಯಲ್ಲಿ (TV) ಆಟವಾಡುವುದರಿಂದ ಮಗುವಿನ ಹೊರಾಂಗಣ ಚಟುವಟಿಕೆಯಲ್ಲಿ ಇಳಿಕೆ ಕಂಡುಬರುತ್ತದೆ, ನಂತರ ಮಕ್ಕಳಲ್ಲಿ ಬೊಜ್ಜು ಉಂಟಾಗಿ ಇತರೆ ಸಮಸ್ಯೆಗಳು ಕಾಡುತ್ತಿವೆ. ಸ್ಮಾರ್ಟ್ ಫೋನ್‌ನಲ್ಲಿ ಗಂಟೆಗಟ್ಟಲೆ ಕಳೆಯುವುದರಿಂದ ಮಗುವಿನ ಸಾಮಾಜಿಕ ಕೌಶಲ್ಯಗಳು ವಿಳಂಬವಾಗುತ್ತದೆ.
ಮಕ್ಕಳ ಫೋನ್ ಚಟವನ್ನು ಬಿಡಿಸಲು ಪೋಷಕರು ಕೆಲವು ಸಲಹೆಗಳನ್ನು ಪಾಲಿಸಲೇಬೇಕಿದೆ
ನಿಮ್ಮ ಮಗು ಮೊಬೈಲ್ ಫೋನ್ ನಿಂದ ದೂರವಿರಬೇಕೆಂದು ನೀವು ಬಯಸಿದರೆ, ಮೊದಲು ನಿಮ್ಮನ್ನು ಸುಧಾರಿಸಿಕೊಳ್ಳಿ. ಇದಕ್ಕಾಗಿ ನಿಮ್ಮ ಮಗುವಿನ ಮುಂದೆ ಮೊಬೈಲ್ ಫೋನ್ ಬಳಸಬೇಡಿ.
ನಿಮ್ಮ ಮಗು ಮೊಬೈಲ್ ಫೋನ್‌ಗಾಗಿ ಒತ್ತಾಯಿಸಿದರೆ, ಅವರನ್ನು ಬೇರೆ ಯಾವುದಾದರೂ ಕೆಲಸದಲ್ಲಿ ನಿರತರನ್ನಾಗಿ ಮಾಡಿ,
ಇನ್ನು ಟಿವಿ ವಿಚಾರಕ್ಕೆ ಬಂದರೆ ನಿಮ್ಮ ಮಗುವಿಗೆ ವೀಡಿಯೊ ಸಿಡಿಗಳನ್ನು ಖರೀದಿಸುವ ಬದಲು ಯಾವಾಗಲೂ ಆಡಿಯೊ ಸಿಡಿಗಳನ್ನು ಖರೀದಿಸಿ. ಇದನ್ನು ಮಾಡುವುದರಿಂದ ನಿಮ್ಮ ಮಗು ಗಾಢವಾದ ಬಣ್ಣಗಳಿಂದ ವಿಚಲಿತರಾಗುವುದಿಲ್ಲ ಮತ್ತು ಆಡಿಯೊ ರೈಮ್‌ಗಳನ್ನು ಪೂರ್ಣವಾಗಿ ಆನಂದಿಸಲು ಸಾಧ್ಯವಾಗುತ್ತದೆ
ಮಗುವಿನ ಮೊಬೈಲ್ ಚಟದಿಂದ ಮುಕ್ತಿ ಹೊಂದಬೇಕೆಂದರೆ ಅದಕ್ಕಾಗಿ ಸ್ವಲ್ಪ ಸಮಯ ತೆಗೆದುಕೊಳ್ಳಿ, ಆ ಸಮಯದಲ್ಲಿ ಮಗುವಿನೊಂದಿಗೆ ಆಟವಾಡಿ, ಮಾತನಾಡಿ, ಸಂಜೆ ಅವರನ್ನು ವಾಕಿಂಗ್‌ಗೆ ಕರದೊಯಿರಿ. ಇದನ್ನು ಮಾಡುವುದರಿಂದ, ಮಗುವು ನಡವಳಿಕೆಯನ್ನು ಕಲಿಯುತ್ತದೆ ಮತ್ತು ನಿಮ್ಮೊಂದಿಗೆ ರೂಪುಗೊಳ್ಳುವ ವಿಶೇಷ ಬಂಧವನ್ನು ಸಹ ಅನುಭವಿಸುತ್ತದೆ.