ವೈದ್ಯರ ನಿರ್ಲಕ್ಷ್ಯದಿಂದ ಮಗು ಸಾವು ಆರೋಪ.
ದಾವಣಗೆರೆ. ಆ. 24 ವೈದ್ಯರ ನಿರ್ಲಕ್ಷ್ಯದಿಂದಾಗಿ ಮಗು ತೀರಿಕೊಂಡಿದೆ ಈ ಬಗ್ಗೆ ಬಡಾವಣೆ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ ಎಂದು ಭೀಮ್ ಆರ್ಮಿ ಜಿಲ್ಲಾಧ್ಯಕ್ಷ ನಿಂಗಪ್ಪ ಬನ್ನಿಹಟ್ಟಿ ಹೇಳಿದರು. ದಾವಣಗೆರೆ ವರದಿಗಾರರ ಕೂಟದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ನನ್ನ ಪತ್ನಿ ನೇತ್ರಾವತಿ ಎಂ.ಬಿ ಅವರನ್ನು ಆ.10 ರಂದು ಬೆಳಗ್ಗೆ 7.25 ಕ್ಕೆ ದಾವಣಗೆರೆ ಚಿಗಟೇರಿ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಬಳಿಕ ಸಿಜೇರಿಯನ್ ಮೂಲಕ ಅವಳಿ ಮಕ್ಕಳು ಜನಿಸಿದರು. ಮೊದಲ ಮಗುವಿನ ತೂಕ 1 ಕೆಜಿ 790 ಗ್ರಾಂ ಇತ್ತು.ಇನ್ನೊಂದು ಮಗುವಿನ ತೂಕ 2 ಕೆಜಿ ಗಿಂತ ಕಡಿಮೆ ಇತ್ತು.
ಗಂಡುಮಗುವಿನ ಆರೋಗ್ಯದಲ್ಲಿ ಏರುಪೇರಾಗಿದ್ದು ಜಿಲ್ಲಾಸ್ಪತ್ರೆಯಲ್ಲಿರುವ ವೈದ್ಯರು ಹಾಗೂ ಅಲ್ಲಿನ ಸಿಬ್ಬಂದಿ ಚಿಕಿತ್ಸೆ ನೀಡಿದರು. ಆ.12 ರಂದು ಬೆಳಗ್ಗೆ 8 ಗಂಟೆ ವೇಳೆಗೆ ಮಗು ತುಂಬಾ ಚಿಂತಾಜನಕ ಪರಿಸ್ಥಿತಿಯಲ್ಲಿತ್ತು ನಂತರ ಮಗು ಸಾವನ್ನಪ್ಪಿತು. ವೈದ್ಯರು ಸಮರ್ಪಕ ಚಿಕಿತ್ಸೆ ನೀಡದೆ ನನ್ನ ಮಗುವಿನ ಸಾವಿಗೆ ಕಾರಣರಾಗಿದ್ದಾರೆ. ವೈದ್ಯರ ನಿರ್ಲಕ್ಷ್ಯವೇ ಮಗುವಿಗೆ ಕಾರಣ ಎಂದು ಆರೋಪಿಸಿ ಬಡಾವಣೆ ಪೊಲೀಸ್ ಠಾಣೆಯಲ್ಲಿ ಭೀಮ್ ಆರ್ಮಿ ಜಿಲ್ಲಾಧ್ಯಕ್ಷ ನಿಂಗಪ್ಪ ದೂರು ನೀಡಿದ್ದಾರೆ. ಪೊಲೀಸರು ಈ ಬಗ್ಗೆ ಪರಿಶೀಲನೆ ನಡೆಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಆಗಸ್ಟ್ 27 ರ ನಂತರ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದರು. ಸುದ್ದಿಗೋಷ್ಠಿಯಲ್ಲಿ ಬಸವರಾಜ್, ಚಂದ್ರಪ್ಪ ಹಾಗೂ ಪ್ರಮೋದ್ ಪೂಜಾರ್ ಉಪಸ್ಥಿತರಿದ್ದರು.