ನಂಜಪ್ಪ ಆಸ್ಪತ್ರೆ ಯಿಂದ ಅಪರೂಪದ ಸಂಕೀರ್ಣವಾದ ಕ್ಯಾನ್ಸರ್ ಶಸ್ತ್ರ ಚಿಕಿತ್ಸೆ
ದಾವಣಗೆರೆ ಆಗಸ್ಟ್ 24 ಅಪರೂಪದ ಹಾಗೂ ಅತ್ಯಂತ ಸಂಕೀರ್ಣವಾದ ಕಾನ್ಸರ್ ಶಸ್ತ್ರ ಚಿಕಿತ್ಸೆ ಯನ್ನು ದಾವಣಗೆರೆಯ ನಂಜಪ್ಪ ಆಸ್ಪತ್ರೆಯಲ್ಲಿ ನಡೆಸಲಾಗಿದೆ. ಶಿವಮೊಗ್ಗದಲ್ಲಿ ಕಳೆದ 35 ವರ್ಷಗಳ ಸುದೀರ್ಘ ಪರಂಪರೆಯನ್ನು ಹೊಂದಿರುವ ವಿಶ್ವಾಸಾರ್ಹ ಆರೋಗ್ಯ ಸಂಸ್ಥೆ ಎನಿಸಿದ ಈ ನಂಜಪ್ಪ ಆಸ್ಪತ್ರೆಯು ತನ್ನ ಉತ್ಕೃಷ್ಟ ವೈದ್ಯಕೀಯ ಆರೈಕೆಯನ್ನು ದಾವಣಗೆರೆ ಜನರಿಗೂ ವಿಸ್ತರಿಸಿದೆ. ಆಸ್ಪತ್ರೆಯ ಸಮರ್ಪಿತ ವೈದ್ಯರು ಮತ್ತು ವೈದ್ಯಕೀಯ ವೃತ್ತಿಪರರ ತಂಡವು ಈಗಾಗಲೇ ಅತ್ಯಂತ ಕ್ಲಿಷ್ಟಕರ ಶಸ್ತ್ರಚಿಕಿತ್ಸೆಗಳನ್ನು ಯಶಸ್ವಿಯಾಗಿ ನಿರ್ವಹಿಸುವ ಮೂಲಕ ತನ್ನ ಪರಿಣತಿಯನ್ನು ಸಾಬೀತುಪಡಿಸಿದೆ.
ದಾವಣಗೆರೆಗೆ ನಗರದಲ್ಲಿ ಆಸ್ಪತ್ರೆಯನ್ನು ಆರಂಭಿಸಿ ಚಿಕಿತ್ಸೆ ನೀಡುತ್ತಿರುವುದು ನಂಜಪ್ಪ ಆಸ್ಪತ್ರೆ ಪಾಲಿಗೆ ಮಹತ್ವದ ಮೈಲುಗಲ್ಲು. ದಾವಣಗೆರೆ ಜನತೆಗೆ ಆರೋಗ್ಯ ಕ್ಷೇತ್ರದಲ್ಲಿ ಸಕಾರಾತ್ಮಕ ಗುಣಮಟ್ಟದ ಚಿಕಿತ್ಸೆ ನೀಡುವಲ್ಲಿ ನಂಜಪ್ಪ ಆಸ್ಪತ್ರೆ ಯಶಸ್ವಿಯಾಗುತ್ತದೆ. ಅತ್ಯಾಧುನಿಕ ಸೌಲಭ್ಯಗಳೊಂದಿಗೆ ರೋಗಿಗಳಿಗೆ ಕ್ರಿಯಾತ್ಮಕ ಚಿಕಿತ್ಸೆ ನೀಡುವಲ್ಲಿ ಉನ್ನತ ದರ್ಜೆಯ ವೈದ್ಯಕೀಯ ಸೇವೆಗಳನ್ನು ಒದಗಿಸಲು ನಂಜಪ್ಪ ಆಸ್ಪತ್ರೆ ಸಜ್ಜಾಗಿದೆ. ಕಳೆದ 35 ವರ್ಷಗಳಿಂದ ಶಿವಮೊಗ್ಗದಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿದಂತೆಯೇ ದಾವಣಗೆರೆಯ ಜನ ಸಮುದಾಯಕ್ಕೆ ಸೇವೆ ಸಲ್ಲಿಸಲು ಹಾಗೂ ಇಲ್ಲಿನ ನಿವಾಸಿಗಳ ಯೋಗಕ್ಷೇಮಕ್ಕೆ ಕೊಡುಗೆ ನೀಡಲು ಹೊಸ ಶಾಖೆಯು ಉತ್ಸುಕವಾಗಿದೆ.
ರೆಟ್ರೋ ಪೆರಿಟೋನಿಯಲ್ ಪ್ಯಾರಾಗ್ಲಿಯೋಮಾ ಸಿಂಡ್ರೋಮ್ ಜೊತೆ ಬೈಲ್ಯಾಟರಲ್ ಮೆಟಾನೆಪ್ರಿನ್ – ಸೆಕ್ರೆಟಿಂಗ್ ಫಿಯೋಕ್ರೊಮೂಸೈಟೋಮಾ .
ಚಿತ್ರದುರ್ಗದ 45 ವರ್ಷದ ಮಹಿಳೆಯೊಬ್ಬರು ಕಳೆದ ಮೂರು ವರ್ಷಗಳಿಂದ ನಿರಂತರ ತಲೆನೋವು ಮತ್ತು ಅತಿವೇಗದ ಹೃದಯ ಬಡಿತವನ್ನು ಅನುಭವಿಸುತ್ತಿದ್ದರು. ‘ಡಯಾಬಿಟಿಸ್ ಮೆಲ್ಲಿಟಸ್ (ಡಿಎಂ), ಅಧಿಕ ರಕ್ತದೊತ್ತಡ (ಎಚ್‌ಟಿಎನ್) ಹಾಗೂ ಸಣ್ಣ ವಾರ್ಶ್ವವಾಯುವಿನ ಸಮಸ್ಯೆಯನ್ನು ಹೊಂದಿದ್ದರು. ಆ ಮಹಿಳೆ ಅಧಿಕ ರಕ್ತದೊತ್ತಡ ಮತ್ತು ಮಧುಮೇಹ ನಿಯಂತ್ರಣಕ್ಕಾಗಿ ದಿನಕ್ಕೆ 14 ಮಾತ್ರಗಳನ್ನು ತೆಗೆದುಕೊಳ್ಳುವ ಮೂಲಕ ತಮ್ಮ ಆರೋಗ್ಯ ಸ್ಥಿತಿಯನ್ನು ನಿಭಾಯಿಸುತ್ತಿದ್ದರು.
ಖ್ಯಾತ ಎಂಡೋಕ್ರಿನೊಲಜಿ ತಜ್ಞರಾದ (ಅಂತಃಸ್ರಾವಶಾಸ್ತ್ರಜ್ನ) ಡಾ.ಬ್ರಿಜೇಶ್ ಅವರು ರೋಗಿಯ ಬೈಲ್ಯಾಟರಲ್ ಮಟಾನೆಪ್ರಿನ್ (ಹಾರ್ಮೋನ್) ‘ಫಿಯೋಕ್ರೊಮೊಸೈಟೋಮಾ ಸ್ರವಿಸುತ್ತಿರುವುದನ್ನು ಮತ್ತು ಆಕೆಯು ‘ರೆಟ್ರೊಪರಿಟೋನಿಯಲ್ ಪ್ಯಾರಾಗ್ಲಿಯೋಮಾ ಸಿಂಡ್ರೋಮ್ ‘ ಎಂಬ ಸಮಸ್ಯೆ ಹೊಂದಿರುವುದನ್ನು ನಿಖರವಾಗಿ ಪತ್ತೆ ಹಚ್ಚಿದರು. ಅವರ ಆಧಿಕ ರಕ್ತದೊತ್ತಡ ಮತ್ತು ಮಧುಮೇಹವನ್ನು ಯಶಸ್ವಿಯಾಗಿ ಸ್ಥಿರಗೊಳಿಸಿದ ನಂತರ, ನಂಜಪ್ಪ ಆಸ್ಪತ್ರೆಯು ಸಂಕೀರ್ಣ ಶಸ್ತ್ರಚಿಕಿತ್ಸೆ ನಿರ್ವಹಣೆಯನ್ನು ಕೈಗೆತ್ತಿಕೊಂಡಿತು. ನುರಿತ ಕ್ಯಾನ್ಸರ್ ಶಸ್ತ್ರ ಚಿಕಿತ್ಸಕರಾದ ಡಾ. ನಿಶ್ಚಲ್ ಎನ್, ಅರವಳಿಕೆ ಮತ್ತು ಐಸಿಯು ವಿಭಾಗದ ಡಾ. ವಿಜಯ್ ಚಂದ್ರಪ್ಪ ಹಾಗೂ ಕ್ಯಾನ್ಸರ್ ರೋಗನಿರ್ಣಯ ವಿಭಾಗದ (ಆಂಕೋಪಾಥಾಲಜಿ) ಡಾ. ವೆಂಕಟೇಶ್ವರುಲು ಅವರ ತಂಡವು ಅಪರೂಪದ ಹಾಗೂ ಅತ್ಯಂತ ಸಂಕೀರ್ಣವಾದ ಶಸ್ತ್ರಚಿಕಿತ್ಸೆಯನ್ನು ನಡೆಸಿತು.
ಇದರ ಪರಿಣಾಮವಾಗಿ ಎಲ್ಲಾ 3 ಗೆಡ್ಡೆಗಳನ್ನು ಯಶಸ್ವಿಯಾಗಿ ತೆಗೆದುಹಾಕಲಾಯಿತು. ಚಿಕಿತ್ಸೆ ನಂತರ ರೋಗಿಗೆ ಈಗ ರಕ್ತದೊತ್ತಡ ಮತ್ತು ಮಧುಮೇಹಕ್ಕೆ ಮಾತ್ರೆಗಳ ಅಗತ್ಯವೇ ತಗ್ಗಿದೆ. ಜೊತೆಗೆ ಅವರು ತಮ್ಮ ತಲೆನೋವಿನ ಸಮಸ್ಯೆಯಿಂದ ಅತ್ಯುತ್ತಮ ಪರಿಹಾರವನ್ನು ಪಡೆದಿದ್ದು ಉತ್ತಮ ಆರೋಗ್ಯದತ್ತ ಮರಳಿದ್ದಾರೆ. ಇದೆಲ್ಲವು ಸಾಧ್ಯವಾಗಿದ್ದು ನಮ್ಮ ನುರಿತ ತಜ್ನ ವೈದ್ಯರಿಂದ. ನಂಜಪ್ಪ ಆಸ್ಪತ್ರೆಯು ಸಂಕೀರ್ಣ ವೈದ್ಯಕೀಯ ಪ್ರಕರಣಗಳನ್ನು ನಿರ್ವಹಿಸುವಲ್ಲಿ ಅತ್ಯುತ್ತಮ ಪರಿಣತಿ ತೋರುವುದರ ಜೊತೆಗೆ ರೋಗಿಗಳತ್ತ ಸಹಾನುಭೂತಿಯೊಂದಿಗೆ ಆರೈಕೆಯನ್ನು ಒದಗಿಸಿದೆ..